Pavan wadeyar: ನಿರ್ದೇಶಕ ಪವನ್ ​ಒಡೆಯರ್​-ಅಪೇಕ್ಷಾ ಪುರೋಹಿತ್ ಮಗನ ಹೆಸರು ಬಹಿರಂಗ: ಇಲ್ಲಿದೆ ವಿಡಿಯೋ..!

Shourya Wadeyar: ಮಗನಿಗೆ ಹೆಸರಿಟ್ಟಿರುವುದನ್ನು ಒಂದು ಪುಟ್ಟ ವಿಡಿಯೋ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೆ ಮಗನ ನಾಮಕರಣದ ಒಂದು ಫೋಟೋ ಹಾಗೂ ಮಗುವಿನ ಕೆಲವು ಕ್ಯೂಟ್​ ಚಿತ್ರಗಳನ್ನು ಈ ವಿಡಿಯೋಗೆ ಸೇರಿಸಲಾಗಿದೆ.

ಮಗನೊಂದಿಗೆ ಅಪೇಕ್ಷಾ ಪುರೋಹಿತ್​

ಮಗನೊಂದಿಗೆ ಅಪೇಕ್ಷಾ ಪುರೋಹಿತ್​

  • Share this:
ಯುವ ನಿರ್ದೇಶಕ ಪವನ್​ ಒಡೆಯರ್​ ಹುಟ್ಟುಹಬ್ಬವನ್ನು ಅವರು ಎಂದೂ ಮರೆಯಲಾರರು. ಕಾರಣ ಅವರ ಹುಟ್ಟುಹಬ್ಬಕ್ಕೆ ಸಖತ್ ಉಡುಗೊರೆ ಸಿಕ್ಕಿದೆ. ಹೌದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಪವನ್​ ಹಾಗೂ ಅಪೇಕ್ಷಾ ಅವರಿಗೆ ಗಂಡು ಮಗು ಆಗಿದ್ದು ಗೊತ್ತೇ ಇದೆ. ಅದೂ ಸಹ ಪವನ್​ ಅವರ ಹುಟ್ಟುಹಬ್ಬದಂದೇ ಮಗುವಿನ ಜನನವಾಗಿದ್ದು, ಅವರಿಗೆ ಹೇಳಲಾರದಷ್ಟು ಸಂತಸ ತಂದಿದೆ. ಕಾರಣ ಅವರಿಗೆ ಅಂತಹದೊಂದು ಅಮೂಲ್ಯವಾದ ಉಡುಗೊರೆ ಸಿಕ್ಕಿದೆ. ಪವನ್​ ಹಾಗೂ ಅಪೇಕ್ಷಾ ಮಗು ಹುಟ್ಟಿದ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದರು. ನಂತರ ಅಂದು ಸಂಜೆಯೇ ಮಗುವಿನ ಮೊದಲ ಚಿತ್ರವನ್ನೂ ಪವನ್​ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಈ ಜೋಡಿ ತಮ್ಮ ಮುದ್ದಿನ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. 

ಪವನ್​ ಒಡೆಯರ್ ಹಾಗೂ ನಟಿ ಅಪೇಕ್ಷಾ ತಮ್ಮ ಮಗನ ಹೆಸರನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗನಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ ಈ ಜೋಡಿ.




ಮಗನಿಗೆ ಹೆಸರಿಟ್ಟಿರುವುದನ್ನು ಒಂದು ಪುಟ್ಟ ವಿಡಿಯೋ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೆ ಮಗನ ನಾಮಕರಣದ ಒಂದು ಫೋಟೋ ಹಾಗೂ ಮಗುವಿನ ಕೆಲವು ಕ್ಯೂಟ್​ ಚಿತ್ರಗಳನ್ನು ಈ ವಿಡಿಯೋಗೆ ಸೇರಿಸಲಾಗಿದೆ.




ಪವನ್​ ಒಡೆಯರ್​ ಮಗು ಹುಟ್ಟಿದ ದಿನ ಬೆಳಗಿನ ಜಾವವೇ ಟ್ವೀಟ್​ ಮಾಡಿದ್ದರು. ತನ್ನ ಹುಟ್ಟುಹಬ್ಬದ ಉಡುಗೊರೆ ಎಂದು ಪವನ್​ ಒಡೆಯರ್​ ಮಗುವಿನ ಕೈ ಕಾಣುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ನಂತರ ತಮ್ಮ ಮಗನ ಮುದ್ದಾದ ಚಿತ್ರವೊಂದನ್ನು ಪೋಸ್ಟ್​ ಮಾಡಿದ್ದರು.






ಮಗುವಾದ ವಿಷಯವನ್ನು ಪವನ್​ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದ ನಿರ್ದೇಶಕ ಪವನ್​ ಒಡೆಯರ್,​ ತನ್ನ ಹುಟ್ಟುಹಬ್ಬದ ದಿನದ ಕೊನೆಯ ಉಡುಗೊರೆ ಎಂದು ಮಗನ ಮೊದಲ ಫೋಟೋ ಪೋಸ್ಟ್​ ಮಾಡಿದ್ದರು. ಮಗುವಿಗೆ ಒಂದು ಬಿಳಿ ಬಣ್ಣದ ಟೀ-ಶರ್ಟ್​ ತೊಡಿಸಿದ್ದು, ಅದರ ಮೇಲೆ ಹ್ಯಾಪಿ ಬರ್ತ್​ ಡೇ ಡ್ಯಾಡಿ ಎಂದು ಬರೆಯಲಾಗಿತ್ತು. ಜೊತೆಗೆ ಐ ಆ್ಯಮ್​ ದ ಬೆಸ್ಟ್​ ಗಿಫ್ಟ್​ ಎವರ್​ ಎಂದು ಪ್ರಿಂಟ್​ ಮಾಡಲಾಗಿತ್ತು.






ನಿರ್ದೇಶಕರಾಗಿದ್ದ ಪವನ್ ಈಗ ನಿರ್ಮಾಪಕರಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಾಗರ್​ ಪುರಾಣಿಕ್​ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
Published by:Anitha E
First published: