• Home
 • »
 • News
 • »
 • entertainment
 • »
 • Pathaan Trailer: ಕೊನೆಗೂ ರಿಲೀಸ್ ಆಯ್ತು ಪಠಾಣ್ ಟ್ರೇಲರ್​! ಆ್ಯಕ್ಷನ್​ ಸೀನ್​ನಲ್ಲಿ ಶಾರುಖ್ ಮಿಂಚಿಂಗ್

Pathaan Trailer: ಕೊನೆಗೂ ರಿಲೀಸ್ ಆಯ್ತು ಪಠಾಣ್ ಟ್ರೇಲರ್​! ಆ್ಯಕ್ಷನ್​ ಸೀನ್​ನಲ್ಲಿ ಶಾರುಖ್ ಮಿಂಚಿಂಗ್

ಪಠಾಣ್ ಟ್ರೇಲರ್ ರಿಲೀಸ್​

ಪಠಾಣ್ ಟ್ರೇಲರ್ ರಿಲೀಸ್​

ಕೊನೆಗೂ ಪಠಾಣ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಶಾರುಖ್​ಗೆ ಜೋಡಿಯಾಗಿ ನಟಿಸಿರುವ ನಟಿ ದೀಪಿಕಾ ಪಡುಕೋಣೆ, ಪಠಾಣ್ ಸಿನಿಮಾದಲ್ಲಿ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಕೂಡ ಅನೇಕ ಸ್ಟಂಟ್ ಮಾಡಿದ್ದಾರೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಬಾಲಿವುಡ್ (Bollywood) ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಬಹುನಿರೀಕ್ಷಿತ ಸಿನಿಮಾ ಪಠಾಣ್​ ಸಿನಿಮಾ ಟ್ರೇಲರ್​ ಕೊನೆಗೂ ರಿಲೀಸ್​ ಆಗಿದೆ. ಹಲವು ವಿವಾದಗಳಿಂದಲೇ ಸುದ್ದಿಯಾಗಿದ್ದ ಪಠಾಣ್ ಸಿನಿಮಾ ಟ್ರೇಲರ್​ ನೋಡಿದ ಶಾರುಖ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾದಲ್ಲಿ ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ. ಟ್ರೇಲರ್ ನಲ್ಲಿ ಆ್ಯಕ್ಷನ್​ ಸೀನ್​ ನನ್ನೇ ಹೈಲೈಟ್ ಮಾಡಲಾಗಿದೆ. ಟ್ರೇಲರ್ ನೋಡಿದ ಪ್ರೇಕ್ಷಕರು ತೆರೆ ಮೇಲೆ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ (Deepika Padukone) ಜೋಡಿ ನೋಡಲು ಕಾಯ್ತಿದ್ದಾರೆ.


ಟ್ರೇಲರ್ ತುಂಬಾ ಆ್ಯಕ್ಷನ್​ ಸೀನ್​ಗಳೇ ಹೆಚ್ಚು!


ಪಠಾಣ್​ ಸಿನಿಮಾಕ್ಕೆ ನಿರ್ದೇಶಕ ಸಿದ್ದಾರ್ಥ್ ಆನಂದ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ. 'ಬ್ಯಾಂಗ್ ಬ್ಯಾಂಗ್', 'ವಾರ್' ಸಿನಿಮಾಗಳಂತೆಯೇ ಸಿದ್ಧಾರ್ಥ್​ ಅವರು ಇಲ್ಲಿಯೂ ಸಾಕಷ್ಟು ಆ್ಯಕ್ಷನ್​ ಸೀನ್​ಗಳನ್ನು ಹೆಚ್ಚಾಗಿ ತೋರಿಸಿದ್ದಾರೆ. ಪಠಾಣ್ ಸಿನಿಮಾ ಟ್ರೇಲರ್ ನೋಡಿದ ವಿಮರ್ಶಕರು ಈ ಸಿನಿಮಾ ಶಾರುಕ್ ಖಾನ್ ಅಭಿಮಾನಿಗಳಿಗೆ ಇಷ್ಟವಾಗುತ್ತೆ ಎನ್ನುತ್ತಿದ್ದಾರೆ.
ರಾ ಏಜೆಂಟ್ ಆಗಿ ಕಾಣಿಸಿಕೊಂಡ ನಟಿ ದೀಪಿಕಾ


ಶಾರುಖ್​ಗೆ ಜೋಡಿಯಾಗಿ ನಟಿಸಿರುವ ನಟಿ ದೀಪಿಕಾ ಪಡುಕೋಣೆ, ಪಠಾಣ್ ಸಿನಿಮಾದಲ್ಲಿ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಕೂಡ ಅನೇಕ ಸ್ಟಂಟ್ ಮಾಡಿದ್ದಾರೆ. ಮೈನವಿರೇಳಿಸುವಂತಹ ಸಾಕಷ್ಟು ಆಕ್ಷನ್ ಸೀನ್‌ಗಳು ಈ ಸಿನಿಮಾದಲ್ಲಿದ್ದು, ಮಾಸ್​ ಸಿನಿಮಾ ಪ್ರೇಕ್ಷಕನಿಗೆ ಪಠಾಣ್ ಇಷ್ಟವಾಗುತ್ತದೆ.


ಗಂಟೆಯಲ್ಲಿ 25 ಲಕ್ಷ ಮಂದಿ ವೀಕ್ಷಣೆ


ಸಿನಿಮಾದ ಟ್ರೇಲರ್ ಅದ್ದೂರಿಯಾಗಿ ಮೂಡಿಬಂದಿದೆ. ರಿಲೀಸ್ ಆದ ಕೆಲವೇ ನಿಮಿಷಕ್ಕೆ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡು ದಾಖಲೆ ಮಾಡಿದೆ. 'ಪಠಾಣ್' ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದೆ.  ಈ ಟ್ರೇಲರ್ ಬಿಡುಗಡೆಯಾದ  ಒಂದೇ ಗಂಟೆಯಲ್ಲಿ 25 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ.  5 ಲಕ್ಷಕ್ಕೂ ಅದಿಕ ಮಂದಿ ಲೈಕ್ಸ್​ ಮಾಡಿದ್ದಾರೆ. ಇದರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರುತ್ತಲೇ ಇದೆ. ಇದು  ಫ್ಯಾನ್ಸ್​ಗಳು (Fans) ಚಿತ್ರದ ಮೇಲಿಟ್ಟಿರುವ  ನಿರೀಕ್ಷೆ ತೋರಿಸುತ್ತದೆ.


ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ (Salman Khan) ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಷ್ಯಾದ ಸೈನ್ಯದಿಂದ ನಾಯಕ ಶಾರುಖ್​ ಖಾನ್​ ಅವರನ್ನು ರಕ್ಷಿಸಲು ಸಲ್ಮಾನ್ ಖಾನ್​ ವೀರೋಚಿತವಾಗಿ ಆಗಮಿಸುವ ಪಾತ್ರ ಈ ಚಿತ್ರದಲ್ಲಿದೆ. ಅಶುತೋಷ್ ರಾಣಾ, ಗೌತಮ್ ರೊಡೆ, ಡಿಂಪಲ್ ಕಪಾಡಿಯಾ, ಸಿದ್ದಾರ್ಥ್ ಘೆಗ್ದಾಮಾಲ್‌, ಶಾಜಿ ಚೌಧರಿ ಮುಂತಾದವರು ನಟಿಸಿದ್ದಾರೆ.


4 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಶಾರುಖ್​


ಶಾರುಖ್ ಖಾನ್ ಅವರು 2018ರಲ್ಲಿ ತೆರೆಗೆ ಬಂದ ‘ಜೀರೋ’ ಚಿತ್ರದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು.  ಕೆಲ ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ 4 ವರ್ಷಗಳ ಬಳಿಕ ಮತ್ತೆ ಪಠಾಣ್​ ಸಿನಿಮಾ ಮೂಲಕ ಶಾರುಖ್ ತೆರೆ ಮೇಲೆ ಬರ್ತಿದ್ದಾರೆ. ಬೇಷರಂ ಸಾಂಗ್ ರಿಲೀಸ್​ ಆದಾಗಿನಿಂದಲೂ ವಿವಾದ ಬೆನ್ನು ಬಿಡದೆ ಕಾಡ್ತಿದೆ.


ಪಠಾಣ್​ ಚಿತ್ರಕ್ಕೆ ಬಾಯ್ಕಾಟ್​ ಬಿಸಿ


ಪಠಾಣ್​ ಚಿತ್ರಕ್ಕೆ ಬಾಯ್ಕಾಟ್​ ಬಿಸಿ ತಟ್ಟಿದೆ. ಹಲವೆಡೆ ಸಿನಿಮಾ ಬ್ಯಾನ್ ಮಾಡುವಂತೆ ಕೂಗು ಕೇಳಿ ಬರ್ತಿದೆ. ಈ ನಡುವೆ ಟ್ರೇಲರ್ ರಿಲೀಸ್ ಮಾಡಿದ್ದು, ಜನವರಿ 25ರಂದು ‘ಪಠಾಣ್​ ಸಿನಿಮಾ ತೆರೆ ಮೇಲೆ ಬರಲಿದೆ. ಪಠಾಣ್​ ಚಿತ್ರ ಬಾಯ್ಕಾಟ್​ಗೆ ಬಲಿಯಾಗುತ್ತಾ? ಹಲವು ವರ್ಷ ಬಳಿಕ ತೆರೆ ಮೇಲೆ ಶಾರುಖ್ ಮಿಂಚ್ತಾರಾ? ಸಿನಿಮಾ ನೋಡಿದ ಪ್ರೇಕ್ಷಕರು ಏನ್ ಹೇಳ್ತಾರೆ ಎನ್ನುವುದನ್ನು ಕಾದು ನೋಡ್ಬೇಕಿದೆ.

Published by:ಪಾವನ ಎಚ್ ಎಸ್
First published: