• Home
  • »
  • News
  • »
  • entertainment
  • »
  • Pathaan Teaser: ಬೂಂ.. ಮಾಸ್ ಲುಕ್​ನಲ್ಲಿ ಶಾರುಖ್! ಪಠಾನ್ ಟೀಸರ್ ರಿಲೀಸ್

Pathaan Teaser: ಬೂಂ.. ಮಾಸ್ ಲುಕ್​ನಲ್ಲಿ ಶಾರುಖ್! ಪಠಾನ್ ಟೀಸರ್ ರಿಲೀಸ್

ಪಠಾನ್ ಟೀಸರ್ ರಿಲೀಸ್ ಆಗಿದ್ದು ಕಿಂಗ್ ಖಾನ್ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಆತನಿಗೆ ಭಾರೀ ಚಿತ್ರಹಿಂಸೆ ನೀಡಲಾಗಿತ್ತು, ಪಠಾನ್ ಬದುಕಿದ್ದಾನಾ ಎಂಬ ಹಿನ್ನೆಲೆ ಧ್ವನಿಗೆ ಶಾರೂಖ್ 'ಬದುಕಿದ್ದಾನೆ' ಎಂದು ಉತ್ತರಿಸೋ ಮೂಲಕ ಮಾಸ್ ಲುಕ್ ರಿವೀಲ್ ಆಗುತ್ತದೆ.

ಪಠಾನ್ ಟೀಸರ್ ರಿಲೀಸ್ ಆಗಿದ್ದು ಕಿಂಗ್ ಖಾನ್ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಆತನಿಗೆ ಭಾರೀ ಚಿತ್ರಹಿಂಸೆ ನೀಡಲಾಗಿತ್ತು, ಪಠಾನ್ ಬದುಕಿದ್ದಾನಾ ಎಂಬ ಹಿನ್ನೆಲೆ ಧ್ವನಿಗೆ ಶಾರೂಖ್ 'ಬದುಕಿದ್ದಾನೆ' ಎಂದು ಉತ್ತರಿಸೋ ಮೂಲಕ ಮಾಸ್ ಲುಕ್ ರಿವೀಲ್ ಆಗುತ್ತದೆ.

ಪಠಾನ್ ಟೀಸರ್ ರಿಲೀಸ್ ಆಗಿದ್ದು ಕಿಂಗ್ ಖಾನ್ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಆತನಿಗೆ ಭಾರೀ ಚಿತ್ರಹಿಂಸೆ ನೀಡಲಾಗಿತ್ತು, ಪಠಾನ್ ಬದುಕಿದ್ದಾನಾ ಎಂಬ ಹಿನ್ನೆಲೆ ಧ್ವನಿಗೆ ಶಾರೂಖ್ 'ಬದುಕಿದ್ದಾನೆ' ಎಂದು ಉತ್ತರಿಸೋ ಮೂಲಕ ಮಾಸ್ ಲುಕ್ ರಿವೀಲ್ ಆಗುತ್ತದೆ.

  • News18 Kannada
  • Last Updated :
  • Bangalore, India
  • Share this:

ಝಿರೋ ಸಿನಿಮಾ ಮಾಡಿದ ನಂತರ ಶಾರುಖ್ ಖಾನ್ (Shah Rukh Khan) ಅವರನ್ನು ತೆರೆಯ ಮೇಲೆ ನೋಡಲಾಗಲಿಲ್ಲ. ಅನುಷ್ಕಾ ಶರ್ಮಾ (Anushka Sharma) ಜೊತೆ ಮಾಡಿದ್ದ ಝೀರೋ (Zero) ಸಿನಿಮಾ ಫ್ಲಾಪ್ ಆಯಿತು. ನಂತರದಲ್ಲಿ ಕಿಂಗ್ ಖಾನ್ ಅಭಿಮಾನಿಗಳ ಅವರ ಸಿನಿಮಾಗೋಸ್ಕರ ಕಾಯುತ್ತಿದ್ದರು. ಹಾಗಿರುವಾಗ ಅವರ ಪಠಾನ್ (Pathaan) ಸಿನಿಮಾ ಅನೌನ್ಸ್ ಆಯಿತು. ಇದಕ್ಕಾಗಿ ವಿಶೇಷ ಹೇರ್​ಸ್ಟೈಲ್ ಕೂಡಾ ಮಾಡಿದ್ದಾರೆ ಶಾರುಖ್. ಈಗ ಪಠಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ದೀಪಿಕಾ ಪಡುಕೋಣೆ (Deepika Padukone), ಶಾರುಖ್ ಖಾನ್, ಜಾನ್ ಅಬ್ರಹಾಂ ಅವರನ್ನು ವಿಭಿನ್ನವಾದ ಲುಕ್​ನಲ್ಲಿ ಕಾಣಬಹುದು. ಯಶ್ ರಾಜ್  ಫಿಲ್ಮ್ಸ್ (YRF) ಟೀಸರ್ (Teaser) ಹಂಚಿಕೊಂಡಿದ್ದು ಕಂಪ್ಲೀಟ್ ಟೀಸರ್ ಮಾಸ್ ಆಗಿ  ಮೂಡಿ ಬಂದಿದೆ.


ಪಠಾಣ್‌ನ ಮೊದಲ ಟೀಸರ್ ಅನ್ನು ಶಾರುಖ್ ಖಾನ್ ಮತ್ತು ಯಶ್ ರಾಜ್ ಫಿಲ್ಮ್ಸ್ ಬುಧವಾರ ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಕೆಲವು ಡೆಡ್ಲಿ ಪಂಚ್‌ಗಳನ್ನು ನಟ ತೋರಿಸಿದ್ದು ಮಾಸ್ ಆಗಿ ಮೂಡಿ ಬಂದಿದೆ.  ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಇದನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ.


ಪಠಾನ್ ಸೆರೆಯಲ್ಲಿ


ಟೀಸರ್ ಡಿಂಪಲ್ ಕಪಾಡಿಯಾ ಅವರಂತೆ ಧ್ವನಿಸುವ ಮಹಿಳೆಯೊಬ್ಬರ ಧ್ವನಿ ಯೊಂದಿಗೆ ಪ್ರಾರಂಭವಾಗುತ್ತದೆ. ಪಠಾಣ್ ಶತ್ರುಗಳ ಸೆರೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನ ಕೊನೆಯ ಕಾರ್ಯಾಚರಣೆಯಲ್ಲಿ ಅವನನ್ನು ಹಿಂಸಿಸಲಾಗಿದೆ ಎಂದು ವಾಯ್ಸ್‌ಓವರ್‌ನಲ್ಲಿ ಕೇಳಬಹುದು.


shah rukh khan shared pathaan new look as he completed 30 years in bollywood
ಪಠಾಣ್ ಪೋಸ್ಟರ್


ಮಾಸ್ ಫೈಟಿಂಗ್ ಸೀನ್ಸ್


ಆದರೆ ಪಠಾಣ್ ಅಷ್ಟು ಸುಲಭವಾಗಿ ಕೊಲ್ಲಲ್ಪಡುವುದಿಲ್ಲ. ಪವರ್​​ಫುಲ್ ಫೈಟ್ ದೃಶ್ಯದ ನಂತರ ಅವನು ತನ್ನ ಸೆಲ್​​ನಿಂದ ಹೊರಬರುತ್ತಾನೆ. ಸ್ಫೋಟಗಳು, ಫೈಟ್ ಪವರ್​​ಫುಲ್ಗ ಆಗಿ ಕಾಣುತ್ತದೆ. ನಂತರ ದೀಪಿಕಾ ಪಡುಕೋಣೆ ಅವರನ್ನು ಪರಿಚಯಿಸಲಾಗುತ್ತದೆ.
ಜಾನ್ ಅಬ್ರಹಾಂ ಅವರು ಟ್ರಕ್‌ಗಳು, ಸ್ನೋ ಮೊಬೈಲ್‌ಗಳು, ಫೈಟರ್ ಪ್ಲೇನ್‌ಗಳು, ಟ್ಯಾಂಕ್‌ಗಳು, ಬೈಕ್‌ಗಳು ಮತ್ತು ಇತರ ಸಾರಿಗೆಗಳಲ್ಲಿ ಫೈಟ್ ಮಾಡುವಾಗ ಪಠಾಣ್‌ನ ಶತ್ರುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.


ಇದನ್ನೂ ಓದಿ: Kantara-Piyush Goyal: ಕಾಂತಾರ ಹೊಗಳಿದ ಕೇಂದ್ರ ಸಚಿವ ಪಿಯೂಷ್ ಗೋಯಲ್


ಬರ್ತ್​ಡೇ ಪ್ರಯುಕ್ತ ಫ್ಯಾನ್ಸ್​​ಗೆ ಟೀಸರ್ ಗಿಫ್ಟ್


ಶಾರುಖ್ ಖಾನ್ ತಮ್ಮ 57 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಟ್ರೇಲರ್-ಟೀಸರ್ ಅನ್ನು ಬುಧವಾರ ಬಿಡುಗಡೆ ಮಾಡಿದರು. ಈ ಹಿಂದೆ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರೊಂದಿಗೆ ವಾರ್ ಸಿನಿಮಾ ಮಾಡಿದ ಸಿದ್ಧಾರ್ಥ್ ಆನಂದ್ ಅವರೊಂದಿಗಿನ ಶಾರುಖ್ ಅವರ ಮೊದಲ ಚಿತ್ರ ಇದಾಗಿದೆ. ಶಾರುಖ್ ಅವರ ಕೊನೆಯ ಚಿತ್ರ 2018 ರಲ್ಲಿ ಆನಂದ್ ಎಲ್ ರೈ ಅವರೊಂದಿಗೆ ಜೀರೋ ಆಗಿತ್ತು.


ಇದನ್ನೂ ಓದಿ: Janhvi Kapoor: ಪ್ರಿಂಟೆಡ್ ಲೆಹಂಗಾದಲ್ಲಿ ಜಾನ್ವಿ ಕಪೂರ್! ಸಮ್ಮೋಹಕ ನೋಟ ಎಂದ ಫ್ಯಾನ್ಸ್


ಪಠಾಣ್ ಜೊತೆಗೆ, ಅವರು ರಾಜ್‌ಕುಮಾರ್ ಹಿರಾನಿ ನಿರ್ದೇಶನದ ತಾಪ್ಸಿ ಪನ್ನು ಅವರೊಂದಿಗೆ ಡುಂಕಿ ಮತ್ತು ನಯನತಾರಾ ಸಹ-ನಟಿಯಾದ ಅಟ್ಲೀ ಅವರ ಜವಾನ್ ಸಿನಿಮಾ ಕೂಡಾ ಮಾಡುತ್ತಿದ್ದಾರೆ.


ದೀಪಿಕಾ ಪಡುಕೋಣೆ ಈ ಹಿಂದೆ ಶಾರುಖ್ ಅವರೊಂದಿಗೆ ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ಮತ್ತು ಚೆನ್ನೈ ಎಕ್ಸ್‌ಪ್ರೆಸ್‌ನಂತಹ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿತ್ತು. ಈ ಜೋಡಿ ಮತ್ತೆ ಒಂದಾಗಿದ್ದು ಈ ಸಿನಿಮಾ ಕೂಡಾ ಸಕ್ಸಸ್ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

Published by:Divya D
First published: