• Home
 • »
 • News
 • »
 • entertainment
 • »
 • Pathaan Movie: ಪಠಾಣ್‌ ಚಿತ್ರಕ್ಕೆ ಸೆನ್ಸಾರ್‌ ಸಂಕಷ್ಟ! ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕಲು ಸೂಚನೆ

Pathaan Movie: ಪಠಾಣ್‌ ಚಿತ್ರಕ್ಕೆ ಸೆನ್ಸಾರ್‌ ಸಂಕಷ್ಟ! ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕಲು ಸೂಚನೆ

ಪಠಾಣ್ ಸಿನಿಮಾ ಪೋಸ್ಟರ್

ಪಠಾಣ್ ಸಿನಿಮಾ ಪೋಸ್ಟರ್

ಪಠಾಣ್ ಚಿತ್ರದ ಸುತ್ತ ಎದ್ದಿರುವ ವಿವಾದ ಸೆನ್ಸಾರ್​ ಬೋರ್ಡ್​ ತಲುಪಿತ್ತು. ವಿವಾದಿತ ಹಾಡು ಹಾಗೂ ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.

 • Trending Desk
 • 3-MIN READ
 • Last Updated :
 • Karnataka, India
 • Share this:

ನಟಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ಶಾರುಖ್‌ ಖಾನ್‌ (Shah Rukh Khan) ನಟಿಸಿರುವ ಪಠಾಣ್‌ ಚಿತ್ರದ (Pathaan Movie) ಕೆಲ ದೃಶ್ಯಗಳು ಹಾಗೂ ಹಾಡಿಗೆ ಬದಲಾವಣೆ ತರುವಂತೆ ಕೇಂದ್ರ ಚಲನಚಿತ್ರ  ಸೆನ್ಸಾರ್‌ ಬೋರ್ಡ್‌ (Censor Board) ಸೂಚನೆ ನೀಡಿದೆ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಪಠಾಣ್‌ ಚಿತ್ರದ ಬೇಷರಮ್‌ ರಂಗ್‌ ಹಾಡು ಈಗಾಗಲೇ ಭಾರೀ ವಿವಾದ ಎಬ್ಬಿಸಿತ್ತು. ಇದೀಗ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಚಲನಚಿತ್ರದ ತಯಾರಕರಿಗೆ ಕೆಲವು ಬದಲಾವಣೆಗಳನ್ನು ಮಾಡುವಂತೆ ಸೂಚನೆ ನೀಡಿದೆ.


ಪಠಾಣ್‌ ಚಿತ್ರದಲ್ಲಿ ಕೆಲ ಬದಲಾವಣೆಗೆ ಸೂಚನೆ


"ಪಠಾಣ್ ಚಿತ್ರದ ಸುತ್ತ ಎದ್ದಿರುವ ಎಲ್ಲಾ ವಿವಾದಗಳ ಮಧ್ಯೆ ಚಿತ್ರವು ಪ್ರಮಾಣೀಕರಣಕ್ಕಾಗಿ CBFC ಪರೀಕ್ಷಾ ಸಮಿತಿಯನ್ನು ತಲುಪಿದೆ. ಚಲನಚಿತ್ರದಲ್ಲಿ ಹಾಡುಗಳನ್ನು ಒಳಗೊಂಡಂತೆ ಚಿತ್ರದಲ್ಲಿ ಸೂಚಿಸಲಾದ ಬದಲಾವಣೆಗಳನ್ನು ಕಾರ್ಯಗತಗೊಳಿಸಲು CBFC ಸಮಿತಿಯು ಚಲನಚಿತ್ರ ನಿರ್ಮಾಪಕರಿಗೆ ಮಾರ್ಗದರ್ಶನ ನೀಡಿದೆ" ಎಂದು ಎಂದು CBFC ಅಧ್ಯಕ್ಷ ಪ್ರಸೂನ್ ಜೋಶಿ ಹೇಳಿದ್ದಾರೆ.


Boycott Pathaan trend start Netties rage over saffron bikini Sharukh Khan film


“ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ”


ಮಾರ್ಗಸೂಚಿಯನ್ವಯ ಪೂರ್ಣ ಪ್ರಮಾಣದ ಪರಿಶೀಲನಾ ಪ್ರಕ್ರಿಯೆಗೆ ಒಳಗಾಗಿದೆ. ಚಲನಚಿತ್ರ ಬಿಡುಗಡೆಗೂ ಮುನ್ನ ಹಾಡುಗಳೂ ಸೇರಿದಂತೆ ದೃಶ್ಯಗಳಿಗೆ ಸೂಚಿಸಲಾಗಿರುವ ಬದಲಾವಣೆಗಳೊಂದಿಗೆ ಪರಿಷ್ಕೃತ ಆವೃತ್ತಿಯನ್ನು ಪರಿಶೀಲನೆಗೆ ಸಲ್ಲಿಸುವಂತೆ ಸೂಚಿಸಲಾಗಿದೆ.


ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಲನಚಿತ್ರ ನಿರ್ಮಾಪಕರ ಸೃಜನಶೀಲ ಅಭಿವ್ಯಕ್ತಿ ಮತ್ತು ಪ್ರೇಕ್ಷಕರ ಸಂವೇದನೆಗಳ ನಡುವೆ ಸರಿಯಾದ ಸಮತೋಲನವನ್ನು ಕಂಡುಕೊಳ್ಳಲು ಬಯಸುತ್ತದೆ.


ನಮ್ಮ ಸಂಸ್ಕೃತಿ ಮತ್ತು ನಂಬಿಕೆಯು ಸಂಕೀರ್ಣ ಮತ್ತು ಸೂಕ್ಷ್ಮ ವ್ಯತ್ಯಾಸಗಳಿಂದ ಕೂಡಿದೆ. ಇದು ಕ್ಷುಲ್ಲಕತೆಯಿಂದ ವ್ಯಾಖ್ಯಾನಿಸುವುದಿಲ್ಲ. ಈ ಬಗ್ಗೆ ನಾವು ಜಾಗರೂಕರಾಗಿರಬೇಕು. ಅಲ್ಲದೇ ಫಿಲ್ಮ್‌ ಮೇಕರ್ಸ್‌ ಮತ್ತು ಪ್ರೇಕ್ಷಕರ ನಡುವಿನ ನಂಬಿಕೆಯನ್ನು ಕಾಪಾಡುವುದು ಮುಖ್ಯ ಎಂದು ಜೋಶಿ ವಿವರಿಸಿದರು.


ವಿವಾದ ಎಬ್ಬಿಸಿದ್ದ ಬೇಷರಮ್‌ ರಂಗ್‌ ಹಾಡು


ಪಠಾಣ್‌ ಚಿತ್ರದ 'ಬೇಷರಮ್‌ ರಂಗ್‌' ಹಾಡು ಈಗಾಗಲೇ ದೊಡ್ಡ ವಿವಾದದ ಅಲೆಯನ್ನೇ ಎಬ್ಬಿಸಿದೆ. ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ಹಾಗೂ ನೃತ್ಯದ ಹಾವ ಭಾವಗಳಿಂದಾಗಿ ದೊಡ್ಡ ಮಟ್ಟದ ಟೀಕೆಗೆ ಒಳಗಾಗಿತ್ತು.


ಇನ್ನೂ ಅನೇಕರು ಈ ಹಾಡನ್ನು ಅಶ್ಲೀಲ ಎಂದೂ ಟೀಕಿಸಿದ್ದಾರೆ. ಈ ಮಧ್ಯೆ ಹಾಡಿನಲ್ಲಿ ನಟ ಶಾರುಖ್‌ ಖಾನ್‌ ಧರಿಸಿದ್ದ ಹಸಿರು ಬಣ್ಣದ ಶರ್ಟ್‌ ಕೂಡ ಅನೇಕರನ್ನು ಕೆರಳಿಸಿತ್ತು.


ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮತ್ತು ರಾಜ್ಯ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ ಅವರಂತಹ ರಾಜಕಾರಣಿಗಳು ಈ ಹಾಡನ್ನು ತೀವ್ರವಾಗಿ ವಿರೋಧಿಸಿದ್ದರು. ಆಕ್ಷೇಪಾರ್ಹ ದೃಶ್ಯಗಳ ಮರುಚಿತ್ರೀಕರಣಕ್ಕೆ ಆಗ್ರಹ ಮಾಡಿದ್ದರು.


ಆದ್ರೆ ಈ ಹಾಡಿನಲ್ಲಿ ದೀಪಿಕಾ ಬೇರೆ ಬೇರೆ ಬಣ್ಣದ ನಾಲ್ಕು ವಿಭಿನ್ನ ಕಾಸ್ಟ್ಯೂಮ್‌ ಧರಿಸಿದ್ದರು. ಹಾಗೂ ಕೇಸರಿ ಬಿಕಿನಿಯನ್ನು 20 ಸೆಕೆಂಡುಗಳ ಕಾಲ ತೋರಿಸಲಾಗಿದೆ ಎಂಬುದು ಹಲವರ ವಾದ. ಆದ್ರೆ ಶಾರುಖ್‌ ನೀಡಿದ್ದ ಹಳೆಯ ಹೇಳಿಕೆಯಿಂದ ಚಿತ್ರ ಈಗಾಗಲೇ ಬಹಿಷ್ಕಾರದ ಆತಂಕ ಎದುರಿಸುತ್ತಿದೆ.


ಇದನ್ನೂ ಓದಿ: Pathaan Movie: ಶಾರುಖ್ ಫೋಟೋ ಅಂಟಿಸಿದ್ದ ಮಡಿಕೆ ಒಡೆದು ಅಂತಿಮ ವಿಧಿವಿಧಾನ ಮಾಡಿದ ಅಯೋಧ್ಯೆ ಸ್ವಾಮೀಜಿ!


ಅಂದಹಾಗೆ ಐದು ವರ್ಷಗಳ ನಂತರ ನಟ ಶಾರುಖ್‌ ಖಾನ್‌ ಪಠಾಣ್‌ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪಠಾಣ್‌ ಚಿತ್ರ ಜನವರಿ 25 ರಂದು ಬಿಡುಗಡೆಯಾಗಲಿದೆ.


ಒಟ್ಟಾರೆ, ಚಿತ್ರೀಕರಣ ಮಾಡುವಾಗಲೇ ಇಂಥ ಸೂಕ್ಷ್ಮ ವಿಷಯಗಳನ್ನು ಗಮನದಲ್ಲಿಟ್ಟುಕೊಂಡಿದ್ದರೆ ಇವೆಲ್ಲಾ ರಗಳೇಗಳೇ ಇರುತ್ತಿರಲಿಲ್ಲ. ಆದ್ರೆ ಇದೀಗ ಸೆನ್ಸಾರ್‌ ಮಂಡಳಿ ಹೇಳಿದ ಬದಲಾವಣೆಗಳನ್ನು ಮಾಡಿದ ಮೇಲೆ ಪಠಾಣ್‌ ಗೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನು ಕಾಡು ನೋಡಬೇಕಷ್ಟೆ.

Published by:ಪಾವನ ಎಚ್ ಎಸ್
First published: