Deepika Padukone: ಡಿಫರೆಂಟ್​ ಅವತಾರದಲ್ಲಿ ದೀಪಿಕಾ ಪಡುಕೋಣೆ, ಪಠಾಣ್ ಸಿನಿಮಾದ ಮೋಷನ್ ಪೋಸ್ಟರ್‌ ರಿಲೀಸ್​

Pathaan Film: ಪಠಾಣ್​ ಸಿನಿಮಾದಲ್ಲಿ ಅವರು ನಟಿಸುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಈ ಸಿನಿಮಾದಲ್ಲಿ ಅವರ ಲುಕ್ ಬಹಳ ವಿಭಿನ್ನವಾಗಿರಲಿದೆ. ಇದುವರೆಗೂ ಮಾಡಿರದ ಪಾತ್ರ ಅದು. ಆಕ್ಷನ್​ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ ಎಂದಿದ್ದಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

  • Share this:
ಯಶ್ ರಾಜ್ ಫಿಲ್ಮ್ಸ್ (Yash Raj films) ಸೋಮವಾರ ಮೋಷನ್ ಪೋಸ್ಟರ್‌ (Motion Poster)  ಒಂದನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಪಠಾಣ್ (Pathaan) ​ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪಾತ್ರವನ್ನು ಪರಿಚಯ ಮಾಡಿಕೊಟ್ಟಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಕೂಡ ನಟಿಸುತ್ತಿದ್ದಾರೆ. ಈ ವಿಡಿಯೋದಲ್ಲಿ, ದೀಪಿಕಾ ಗನ್ ಹಿಡಿದು ಶೂಟ್ ಮಾಡುತ್ತಿದ್ದು. ನಾವು ಹಿಂದೆಂದೂ ನೋಡಿರದ ಅವತಾರದಲ್ಲಿ ದೀಪಿಕಾಳನ್ನು ಈ ಸಿನಿಮಾದಲ್ಲಿ ನೋಡಬಹುದು ಎನ್ನಲಾಗುತ್ತಿದೆ.

ವಿಭಿನ್ನ ಲುಕ್​ನಲ್ಲಿ ದೀಪಿಕಾ

ಅವಳು ಶೂಟ್ ಮಾಡಲು ಸಿದ್ಧ! @deepikapadukonein #Pathaan ಅನ್ನು #YRF50 #ಪಠಾಣ್ ಅನ್ನು 25 ಜನವರಿ, 2023 ರಂದು ನಿಮ್ಮ ಹತ್ತಿರದ ಥಿಯೇಟರ್​ನಲ್ಲಿ ನೋಡಿ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಮೋಷನ್ ಪೋಸ್ಟರ್​ಗೆ ಕ್ಯಾಪ್ಷನ್​ ನೀಡಲಾಗಿದೆ.  ಪಠಾಣ್‌ನಲ್ಲಿ ದೀಪಿಕಾ ಪಡುಕೋಣೆ ಪಾತ್ರದ ಬಗ್ಗೆ ಮಾತನಾಡಿದ, ನಿರ್ದೇಶಕ ಸಿದ್ಧಾರ್ಥ್ ಆನಂದ್, “ದೀಪಿಕಾ ಪಡುಕೋಣೆ ಒಬ್ಬ ದೊಡ್ಡ ಸ್ಟಾರ್, ನಾನು ಅದನ್ನು ಎರಡು ಬಾರಿ ಹೇಳಬೇಕು. ಪಠಾಣ್​ ಸಿನಿಮಾದಲ್ಲಿ ಅವರು ನಟಿಸುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಪಠಾಣ್‌ ಸಿನಿಮಾದಲ್ಲಿ ಅವರ ಲುಕ್ ಬಹಳ ವಿಭಿನ್ನವಾಗಿರಲಿದೆ. ಇದುವರೆಗೂ ಮಾಡಿರದ ಪಾತ್ರ ಅದು. ಆಕ್ಷನ್​ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ ಎಂದಿದ್ದಾರೆ.ಸರಿಸುಮಾರು ನಾಲ್ಕು ವರ್ಷಗಳ ಬಳಿಕ ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್ ಮತ್ತೆ ಸಿನಿಮಾ ಮಾಡುತ್ತಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.  ಓಂ ಶಾಂತಿ ಓಂ, ಚೆನ್ನೈ ಎಕ್ಸ್ ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ನಂತರ ಪಠಾಣ್ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಶಾರುಖ್ ಅವರೊಂದಿಗೆ ನಟಿಸುತ್ತಿರುವ ನಾಲ್ಕನೇ ಚಿತ್ರವಾಗಿದೆ.ಇದನ್ನೂ ಓದಿ: ಲಂಕಾಸುರ ಸಿನಿಮಾದ ಟೈಟಲ್​ ಟ್ರ್ಯಾಕ್​ ರಿಲೀಸ್​, ಹೊಸ ಅವತಾರದಲ್ಲಿ ಮರಿ ಟೈಗರ್

4 ವರ್ಷದ ಬಳಿಕ ತೆರೆ ಮೇಲೆ ಶಾರುಖ್ ಖಾನ್​

ಇನ್ನು, ದೀಪಿಕಾ ಕೊನೆಯ ಬಾರಿಗೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಗೆಹರಾಯಿಯಾಂ ಚಿತ್ರದಲ್ಲಿ ಸಖತ್​ ಹಾಟ್ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದ್ದು, ಅದೇ ರೀತಿ ಸಲ್ಮಾನ್ ಅಭಿನಯದ ಟೈಗರ್ 3 ಚಿತ್ರದಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳೂ ಇವೆ.ಶಾರುಖ್ ಅವರು ಈ ನಾಲ್ಕು ವರ್ಷಗಳಲ್ಲಿ ಯಾವುದೇ ಚಿತ್ರದಲ್ಲಿ ನಟಿಸದೇ ಇದ್ದರೂ ಸಹ, 2020 ರಲ್ಲಿ ಅವರು ತಮ್ಮ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಾಮ್ಯಬ್ ಮತ್ತು ಕ್ಲಾಸ್ ಆಫ್ 83 ಅನ್ನು ನಿರ್ಮಿಸಿದರು.

ಇದನ್ನೂ ಓದಿ: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಪ್ರೇಮಕಥೆ ಹೇಳಿದ ಸೀತಾ ರಾಮಂ, ಹೇಗಿದೆ ಸಿನಿಮಾದ ಟ್ರೈಲರ್?

ಅಲ್ಲದೇ, 2021ರಲ್ಲಿ ಬಾಬ್ ಬಿಸ್ವಾಸ್ ಚಿತ್ರವನ್ನು ನಿರ್ಮಿಸಿದ್ದರು. ಇದು 2012 ರಲ್ಲಿ ಇದ್ದ ಒಬ್ಬ ಗುತ್ತಿಗೆ ಕೊಲೆಗಾರನ ಮೂಲ ಕಥೆಯಾಗಿದ್ದು, ಇದರಲ್ಲಿ ನಟ ಅಭಿಷೇಕ್ ಬಚ್ಚನ್ ಅಭಿನಯಿಸಿದ್ದರು.
Published by:Sandhya M
First published: