ಬಾಲಿವುಡ್ (Bollywood) ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಅವರು ಝಿರೋ (Zero) ಸಿನಿಮಾ ನಂತರ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ ಪಠಾನ್. ನಟಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ಶಾರುಖ್ ಖಾನ್ ನಟಿಸುತ್ತಿರುವ ಈ ಸಿನಿಮಾದ (Cinema) ಹಾಡು ಈಗಾಗಲೇ ರಿಲೀಸ್ ಆಗಿ ದೊಡ್ಡಮಟ್ಟದಲ್ಲಿ ರಿಲೀಸ್ ಆಗಿದೆ. ನಟಿ ದೀಪಿಕಾ ಪಡುಕೋಣೆ ಹಿಂದೆಂದಿಗಿಂತಲೂ ಸಖತ್ ಬೋಲ್ಡ್ ಆಗಿರುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಕಿನಿ ಧರಿಸಿ ಕಾಣಿಸಿಕೊಂಡ ದೀಪಿಕಾ ಈ ಹಾಡಿನಲ್ಲಿ ಮಾತ್ರ ಮಿನಿಮಮ್ ಬಟ್ಟೆ ಧರಿಸಿದ್ದು ಬಹಳಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೇಷರಂ ರಂಗ್ (Besharam Rang) ಎನ್ನುವ ಹಾಡಿನಲ್ಲಿ ದೀಪಿಕಾ ಅವರು ಹಾಗೂ ಶಾರುಖ್ ರೊಮ್ಯಾನ್ಸ್ (Romance) ಮಾಡಿದ್ದಾರೆ.
ಈ ಹಾಡು ಈಗಾಗಲೇ ವಿವಾದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಈಗ ಮತ್ತೊಂದು ಹೊಸ ತಲೆನೋವು ಶುರುವಾಗಿದೆ. ಈ ಸಾಂಗ್ ಮೂಲ ಹಾಡು ಪಾಕಿಸ್ತಾನದ್ದು ಎನ್ನಲಾಗಿದೆ. ಪಾಕಿಸ್ತಾನದ ಗಾಯಕರೊಬ್ಬರು ಈ ಸಂಬಂಧ ವಿಡಿಯೋವನ್ನು ಮಾಡಿ ಶೇರ್ ಮಾಡಿದ್ದಾರೆ.
ಬೇಷರಂ ರಂಗ್ ಪಾಕಿಸ್ತಾನದ ಹಾಡಾ?
ಮಧ್ಯಪ್ರದೇಶದ ಸಚಿವರು ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿಯನ್ನು ಬೊಟ್ಟು ಮಾಡಿ ಸೂಚಿಸಿದ ನಂತರ ಈ ಹಾಡು ಚರ್ಚೆಯ ವಿಷಯವಾಯಿತು. ಪಠಾನ್ನ ಬೇಷರಂ ರಂಗ್ ಮತ್ತು ಜೂಮ್ ಜೋ ಪಠಾನ್ ಹಾಡುಗಳನ್ನು ಬೇರೆ ಬೇರೆ ಟ್ರ್ಯಾಕ್ಗಳಿಂದ ಕಾಪಿ ಮಾಡಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಚಿತ್ರತಂಡದ ಮೇಲೆ ಕೃತಿಚೌರ್ಯದ ಆರೋಪ ಮಾಡಲಾಗುತ್ತಿದೆ.
ಪಾಕಿಸ್ತಾನದ ಗಾಯಕ ಸಜ್ಜದ್ ಅಲಿ Instagram ನಲ್ಲಿ ರಹಸ್ಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅವರು ವೀಡಿಯೊಗೆ ಶೀರ್ಷಿಕೆ ನೀಡಿ, “ಹೊಸ ಸಿನಿಮಾ ಹಾಡನ್ನು ಕೇಳಿದ ನಂತರ, ಇದು 26 ವರ್ಷಗಳ ಹಿಂದೆ ನಾನು ಬಿಡುಗಡೆ ಮಾಡಿದ ನನ್ನ ಹಾಡು ಅಬ್ ಕೆ ಹಮ್ ಬಿಚಾರೆಯನ್ನು ನೆನಪಿಸಿತು. ಆನಂದಿಸಿ ಎಂದು ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ:Pathaan-Shah Rukh Khan: ದೀಪಿಕಾ ಕೇಸರಿ ಡ್ರೆಸ್, ಶಾರುಖ್ನನ್ನು ಜೀವಂತ ಸುಡ್ತೀವಿ ಎಂದ ಅಯೋಧ್ಯೆ ಶ್ರೀ
ವೆಬ್ನಲ್ಲಿ ಅವರ ವೀಡಿಯೊ ಕಾಣಿಸಿದಾಗ ಇದು ನಿಜಕ್ಕೂ ಕಾಪಿ ಎಂದಿದ್ದಾರೆ. ನೆಟ್ಟಿಗರು. ಭಾರತ ಯಾವಾಗಲೂ ಪಾಕ್ ಗಾಯಕರ ಹಾಡು ಕಾಪಿ ಮಾಡಿ ಕ್ರೆಡಿಟ್ ಕೂಡಾ ಕೊಡುವುದಿಲ್ಲ ಎಂದಿದ್ದಾರೆ.
View this post on Instagram
ಹಾಡನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ ಕೂಡಲೇ ಜೈನ್ರಿಂದ 'ಮಕೆಬಾ' ನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಬೇಷರಂ ರಂಗ್ ಹಾಡಿನ ಹಿನ್ನೆಲೆ ಜೈನ್ ಅವರ ಮೇಕೆಬಾ ಹಾಡಿನ ಸಂಪೂರ್ಣ ನಕಲು ಎಂದಿದ್ದಾರೆ.
ಕಾಂತಾರದ ಹಾಡಿಗೂ ಟ್ಯೂನ್ ಕಾಪಿ ಆರೋಪ
ಕಾಂತಾರ ಸಿನಿಮಾದ ಟ್ಯೂನ್ ಕಾಪಿ ಆರೋಪದ ಬಿಸಿ ತಟ್ಟಿತ್ತು. ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ವರಾಹ ರೂಪಂ ಹಾಡನ್ನು ಮಲಯಾಳಂನ ತೈಕ್ಕುಡಂ ಬ್ರಿಡ್ಜ್ ಆಲ್ಬಂನಿಂದ ಕಾಪಿ ಮಾಡಲಾಗಿದೆ ಎಂದು ಹೇಳಲಾಗಿದೆ. ನವರಸಂ ಎನ್ನುವ ಮಲಯಾಳಂ ಆಲ್ಬಂ ಹಾಡಿನ ಟ್ಯೂನ್ ಕಾಪಿ ಎಂದು ಆರೋಪಿಸಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈಗ ಬೇಷರಂ ಸಿನಿಮಾದ ಹಾಡಿಗೂ ಇದೇ ರೀತಿ ಸಮಸ್ಯೆ ಎದುರಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ