Pailwaan: ಮುಂಬೈನಲ್ಲಿ ಪೈಲ್ವಾನ್​ ಅಬ್ಬರ: ಕಿಚ್ಚನನ್ನು ಕೊಂಡಾಡಿದ ಪಾರುಲ್​ ಯಾದವ್​..!

Pailwaan Poster:ಪೈಲ್ವಾನ್​ ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ಉತ್ತರ ಭಾರತದಲ್ಲೂ ಕಿಚ್ಚನ ಸ್ವಾಗತಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬೈನ ಬೀದಿ ಬೀದಿಗಳಲ್ಲೂ ಕನ್ನಡದ ಪೈಲ್ವಾನ್​ನ ಪೋಸ್ಟರ್​ಗಳು ರಾರಾಜಿಸುತ್ತಿವೆ. 

Anitha E | news18-kannada
Updated:September 4, 2019, 11:22 AM IST
Pailwaan: ಮುಂಬೈನಲ್ಲಿ ಪೈಲ್ವಾನ್​ ಅಬ್ಬರ: ಕಿಚ್ಚನನ್ನು ಕೊಂಡಾಡಿದ ಪಾರುಲ್​ ಯಾದವ್​..!
ಪಾರುಲ್​ ಹಾಗೂ ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಪೈಲ್ವಾನ್​'. ​ಈ ಸಿನಿಮಾ ಬಿಡುಗಡೆಗೆ ಇನ್ನೇನು ದಿನ ಗಣನೆ ಆರಂಭವಾಗಿದೆ. ಇದೇ ತಿಂಗಳ 12ಕ್ಕೆ 'ಪೈಲ್ವಾನ್​' ಕನ್ನಡ ಸೇರಿದಂತೆ ಐದೂ ಭಾಷೆಗಳಲ್ಲಿ ವಿಶ್ವದಾದ್ಯಂತ ಅಬ್ಬರಿಸಲಿದ್ದಾನೆ.

ಎಲ್ಲೆಡೆ ಈ ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ಉತ್ತರ ಭಾರತದಲ್ಲೂ ಕಿಚ್ಚನ ಸ್ವಾಗತಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬೈನ ಬೀದಿ ಬೀದಿಗಳಲ್ಲೂ ಕನ್ನಡದ 'ಪೈಲ್ವಾನ್​'ನ ಪೋಸ್ಟರ್​ಗಳು ರಾರಾಜಿಸುತ್ತಿವೆ.

Pailwaan poster in mumbai
ಮುಂಬೈನಲ್ಲಿ 'ಪೈಲ್ವಾನ್​' ಪೋಸ್ಟರ್​


ಮುಂಬೈನ ರಸ್ತೆಯಲ್ಲಿ 'ಪೈಲ್ವಾನ್​' ಚಿತ್ರದ ಪೋಸ್ಟರ್​ ಕಂಡ ನಟಿ ಪಾರುಲ್​ ಯಾದವ್​ ಖುಷಿಯಿಂದ ಟ್ವೀಟ್​ ಮಾಡಿದ್ದಾರೆ.


'ಎಲ್ಲೆಡೆ ಚಕ್ರವರ್ತಿ ಇದ್ದಾನೆ. ಮುಂಬೈನಲ್ಲಿ 'ಪೈಲ್ವಾನ್​' ಪೋಸ್ಟರ್​ ನೋಡಿ ತುಂಬಾ ಖುಷಿಯಾಯಿತು. ಕನ್ನಡ ಸಿನಿಮಾವನ್ನು ಜಗತ್ತಿನಾದ್ಯಂತ ತಲುಪಿಸಲು ಶ್ರಮಿಸುತ್ತಿರುವ ಕಿಚ್ಚ ಸುದೀಪ್​ ಅವರಿಗೆ ಧನ್ಯವಾದ' ಎಂದು ಬರೆದುಕೊಂಡಿದ್ದಾರೆ.

ಕೃಷ್ಣ ನಿರ್ದೇಶನದ ಈ ಚಿತ್ರವನ್ನು ಸ್ವಪ್ನಾ ಕೃಷ್ಣ ನಿರ್ಮಿಸಿದ್ದಾರೆ. ಆಕಾಂಕ್ಷಾ ಸಿಂಗ್​ ಈ ಸಿನಿಮಾದಲ್ಲಿ ಕಿಚ್ಚನಿಗೆ ನಾಯಕಿಯಾಗಿದ್ದರೆ, ಸುನೀಲ್​ ಶೆಟ್ಟಿ ಕಿಚ್ಚನ ಗುರುವಿನ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಈ ಗಾಗಲೇ ಟೀಸರ್​, ಟ್ರೈಲರ್​ ಹಾಗೂ ಹಾಡುಗಳ ಮೂಲಕ ಜನರ ಮನ ಗೆದ್ದಿರುವ 'ಪೈಲ್ವಾನ್',​ ಬಿಡುಗಡೆಯಾದ ನಂತರ ಬಾಕ್ಸಾಫಿಸ್​ನಲ್ಲಿ ಯಾವ ರೀತಿ ಕಮಾಲ್​ ಮಾಡಲಿದ್ದಾರೆ ಎಂದು ಕಾದುನೋಡಬೇಕಷ್ಟೆ.

Regina Cassandra: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಎವರು ಸಿನಿಮಾ ಖ್ಯಾತಿಯ ಹಾಟ್​ ನಟಿ ರೆಜಿನಾ..!


First published: September 4, 2019, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading