ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ಬಾಲಿವುಡ್ನಲ್ಲಿ ಸೆಟ್ಟೇರಲಿದೆ ಎಂಬುದು ಹೊಸ ವಿಷಯವನೇನಲ್ಲ. ಈ ಮೊದಲು ಸೈನಾ ನೆಹ್ವಾಲ್ ಪಾತ್ರಕ್ಕೆ ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದರು. ಪರಿಣಿತಿ ಚೋಪ್ರಾ ಅವರನ್ನು ಭೇಟಿಯಾಗಿದ್ದ ಶ್ರದ್ಧಾ ಕಪೂರ್ ಕೆಲವು ಸಲಹೆಗಳನ್ನೂ ಕೇಳಿದ್ದರು. ಸೈನಾ ನೆಹ್ವಾಲ್ ಪಾತ್ರದ ಶ್ರದ್ಧಾ ಕಪೂರ್ ಫೋಟೋ ಕೂಡ ಮೆಚ್ಚುಗೆ ಗಳಿಸಿತ್ತು.
ಆದರೆ, ಡೇಟ್ ಸಮಸ್ಯೆಯಿಂದಾಗಿ ಶ್ರದ್ಧಾ ಕಪೂರ್ ಈ ಸಿನಿಮಾದಿಂದ ಹೊರನಡೆದ ಬಳಿಕ ಪರಿಣಿತಿ ಚೋಪ್ರಾ ಅವರನ್ನು ಸೈನಾ ನೆಹ್ವಾಲ್ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಈ ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಬ್ಯಾಡ್ಮಿಂಟನ್ ಮೈದಾನದಲ್ಲಿ ಬೆವರಿಳಿಸುತ್ತಿರುವ ಪರಿಣಿತಿ ಚೋಪ್ರಾ ಫೋಟೋವೊಂದು ಇದೀಗ ವೈರಲ್ ಆಗಿದೆ.
ಕ್ರೀಡಾಪಟುವೊಬ್ಬರ ಜೀವನವನ್ನು ಆಧರಿಸಿದ ಸಿನಿಮಾದಲ್ಲಿ ನಟಿಸುವುದೆಂದರೆ ತಮಾಷೆಯ ಮಾತಲ್ಲ. ಅದಕ್ಕಾಗಿ ಕಠಿಣ ಪರಿಶ್ರಮವೂ ಬೇಕಾಗುತ್ತದೆ, ಸಿದ್ಧತೆಗಳೂ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪರಿಣಿತಿ ಚೋಪ್ರಾ ಖುದ್ದು ಸೈನಾ ನೆಹ್ವಾಲ್ ಅವರಿಂದಲೇ ಶಹಬ್ಬಾಸ್ಗಿರಿ ಪಡೆದಿದ್ದಾರೆ. ಹೌದು, ಸೈನಾ ನೆಹ್ವಾಲ್ ಪಾತ್ರದ ತಮ್ಮ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪರಿಣಿತಿ ಚೋಪ್ರಾ 'ನನ್ನ ಸದ್ಯದ ದಿನಚರಿ' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ