ಬಾಲಿವುಡ್ ಸುಂದರಿ ಪರಿಣೀತಿ ಚೋಪ್ರಾ. ಬಿಟೌನ್‍ಗೆ ಎಂಟ್ರಿ ಕೊಟ್ಟಾಗ ಅದಾಗಲೇ ಮುಂಬೈನಲ್ಲಿ ಸೆಟಲ್ ಆಗಿದ್ದ ಪ್ರಿಯಾಂಕಾ ಚೋಪ್ರಾರ ತಂಗಿ ಎಂದು ಅವರ ನೆರಳಿನಲ್ಲಿಯೇ ಕರಿಯರ್ ಪ್ರಾರಂಭಿಸಿದರು. ಆದರೆ ಈಗ ಅತ್ತ ಪ್ರಿಯಾಂಕಾ ನಿಕ್ ಜೋನಸ್ ಮದುವೆಯಾಗಿ ಹಾಲಿವುಡ್‍ನತ್ತ ಮುಖ ಮಾಡಿದರೆ, ಇತ್ತ ಪರಿಣೀತಿ ಬಾಲಿವುಡ್‍ನಲ್ಲಿ ಬಿಂದಾಸ್ ಆಗಿ ಮಿಂಚುತ್ತಿದ್ದಾರೆ. ಎರಡು ತಿಂಗಳಲ್ಲಿ ಮೂರು ಸಿನಿಮಾಗಳು ರಿಲೀಸ್ ಆಗುತ್ತಿರುವುದೇ ಅದಕ್ಕೆ ಸಾಕ್ಷಿ. ಹೌದು, ಬಿ-ಟೌನ್ ಬ್ಯೂಟಿ ಪರಿಣೀತಿ ಚೋಪ್ರಾ ಸದ್ಯ ಸಿನಿಮಾಗಳ ಪ್ರಚಾರದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಕಳೆದ ಫೆಬ್ರವರಿ 26ರಂದು ಅವರು ನಟಿಸಿದ್ದ ದಿ ಗರ್ಲ್ ಆನ್ ದಿ ಟ್ರೈನ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಅದರ ಬೆನ್ನಲ್ಲೇ ಇನ್ನೂ ಎರಡು ಚಿತ್ರಗಳು ಸದ್ಯ ತೆರೆಗೆ ಅಪ್ಪಳಿಸಲು ರೆಡಿಯಾಗಿವೆ. ಒಂದು ಮುಂದಿನ ಶುಭ ಶುಕ್ರವಾರ ರಿಲೀಸ್ ಆದರೆ, ಮತ್ತೊಂದು ಮಾರ್ಚ್ ಅಂತ್ಯಕ್ಕೆ ಥಿಯೇಟರ್ಗೆ ಎಂಟ್ರಿ ಕೊಡಲಿದೆ.
ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಡಾರ್ಕ್ ಕಾಮಿಡಿ ಸಿನಿಮಾ ಸಂದೀಪ್ ಔರ್ ಪಿಂಕಿ ಫರಾರ್ ಇದೇ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಅರ್ಜುನ್ ಕಪೂರ್ ಹಾಗೂ ಪರಿಣೀತಿ ಚೋಪ್ರಾ ನಾಯಕ, ನಾಯಕಿಯಾಗಿದ್ದು, ಪಂಕಜ್ ತ್ರಿಪಾಠಿ, ಜೈದೀಪ್ ಅಹ್ಲಾವತ್, ರಘುಬೀರ್ ಯಾದವ್, ನೀನಾ ಗುಪ್ತಾ, ಸಂಜಯ್ ಮಿಶ್ರಾ ಆಗೂ ಅರ್ಚನಾ ಪೂರಣ್ ಸಿಂಗ್ ಪ್ರಮುಖ ತಾರಾಗಣದಲ್ಲಿದ್ದಾರೆ.
ವಿಶೇಷ ಅಂದರೆ ಈ ಚಿತ್ರದಲ್ಲಿ ಪರಿಣೀತಿ ಚೋಪ್ರಾ ಹರಿಯಾಣ ಮೂಲದ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಸಂದೀಪ್ ಔರ್ ಫಿಂಕಿ ಪರಾರ್ ಶೂಟಿಂಗ್ 2017ರ ನವೆಂಬರ್ನಲ್ಲೇ ಪ್ರಾರಂಭವಾಗಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿ ಕಳೆದ ವರ್ಷ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಆದರೆ ಕಳೆದ ವರ್ಷ ಕೊರೊನಾ ಲಾಕ್‍ಡೌನ್‍ನಿಂದಾಗಿ ಮತ್ತೆ ತಡವಾಗಿತ್ತು. ಹೀಗೆ ಎರಡು ಬಾರಿ ರಿಲೀಸ್‍ಅನ್ನು ಮುಂದೂಡಿದ್ದ ಚಿತ್ರತಂಡ ಈಗ ಇದೇ ಮಾರ್ಚ್ 19ರಂದು ಅಂತೂ ತೆರೆಗೆ ಬರಲು ರೆಡಿಯಾಗಿದೆ.
View this post on Instagram
ಇದನ್ನೂ ಓದಿ: Prem-Rakshitha: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪ್ರೇಮ್-ರಕ್ಷಿತಾ..!
ಅಮೋಲ್ ಗುಪ್ತೆ ನಿರ್ದೇಶನದಲ್ಲಿ ಶ್ರದ್ಧಾ ಕಪೂರ್ ಸೈನಾ ನೆಹ್ವಾಲ್ ಪಾತ್ರದಲ್ಲಿ ನಟಿಸಬೇಕಿತ್ತು. ಅದರಂತೆ ಶೂಟಿಂಗ್ ಕೂಡ ಪ್ರಾರಂಭವಾಯಿತು. ಆದರೆ ಹಠಾತ್ ಆಗಿ ಬೇರೆ ಚಿತ್ರದ ಶೂಟಿಂಗ್‍ಗೆ ಡೇಟ್ಸ್ ಸಮಸ್ಯೆಯಾಗುತ್ತಿದೆ ಎಂದು ಶ್ರದ್ಧಾ ಕಪೂರ್ ಸೈನಾ ಬಯೋಪಿಕ್‍ನಿಂದ ಹೊರನಡೆದರು. ನಂತರ 2019ರ ಮಾರ್ಚ್‍ನಲ್ಲಿ ಚಿತ್ರತಂಡ ಪರಿಣೀತಿ ಚೋಪ್ರಾರನ್ನು ಆಯ್ಕೆ ಮಾಡಿಕೊಂಡಿತು. ಅದರಂತೆ ಹಲವು ದಿನಗಳ ಕಾಲ ಪರಿಣೀತಿ ಕೂಡ ಬ್ಯಾಡ್ಮಿಂಟನ್ ತರಬೇತಿ ಪಡೆದರು. ಈಗ ಇದೇ ಮಾರ್ಚ್ 26ರಂದು ಸೈನಾ ತೆರೆಗೆ ಬರಲು ರೆಡಿಯಾಗಿದೆ. ಹೀಗೆ ಪರಿಣೀತಿ ಚೋಪ್ರಾ ನಟಿಸಿರುವ ಎರಡು ಸಿನಿಮಾಗಳು ಎರಡು ವಾರಗಳಲ್ಲಿ ರಿಲೀಸ್ ಆಗಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ