• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Parineeti Chopra: ನಟಿ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಪ್ರೀತಿಗೆ ಮನೆಯವರು ಕೊಟ್ರು ಗ್ರೀನ್ ಸಿಗ್ನಲ್! ಎಂಗೇಜ್​ಮೆಂಟ್ ಯಾವಾಗ?

Parineeti Chopra: ನಟಿ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಪ್ರೀತಿಗೆ ಮನೆಯವರು ಕೊಟ್ರು ಗ್ರೀನ್ ಸಿಗ್ನಲ್! ಎಂಗೇಜ್​ಮೆಂಟ್ ಯಾವಾಗ?

ಪರಿಣಿತಿ ಚೋಪ್ರಾ ನಿಶ್ಚಿತಾರ್ಥ ಯಾವಾಗ?

ಪರಿಣಿತಿ ಚೋಪ್ರಾ ನಿಶ್ಚಿತಾರ್ಥ ಯಾವಾಗ?

ರಾಘವ್ ಮತ್ತು ಪರಿಣಿತಿ ಚೋಪ್ರಾ ಇಬ್ಬರೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದ್ದಾರೆ. ಹಾಗೆಯೇ ಇಬ್ಬರೂ ಅನೇಕ ಕಾಮನ್‌ ಫ್ರೆಂಡ್ಸ್‌ ಹೊಂದಿದ್ದಾರೆ. ಮನೆಯವರು ಕೂಡ ಇವರ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

 • Trending Desk
 • 2-MIN READ
 • Last Updated :
 • Karnataka, India
 • Share this:

ಬಾಲಿವುಡ್‌ ಬ್ಯೂಟಿ ಪರಿಣಿತಿ ಚೋಪ್ರಾ (Parineeti Chopra) ಸದ್ಯ ಸಖತ್​ ಸುದ್ದಿಯಲ್ಲಿದ್ದಾರೆ. ಪರಿಣಿತಿ ಹಾಗೂ ಎಎಪಿ ಸಂಸದ ರಾಘವ್ ಚಡ್ಡಾ (Raghav Chadha) ನಡುವಿನ ಡೇಟಿಂಗ್‌ (Dating) ರೂಮರ್ಸ್‌ ಇದಕ್ಕೆ ಕಾರಣ. ಅವರಿಬ್ಬರೂ ಪ್ರೀತಿಸುತ್ತಿದ್ದಾರಾ? ಯಾವಾಗ ಮದುವೆಯಾಗುತ್ತಾರಂತೆ? ಇಬ್ಬರೂ ಎಷ್ಟು ಕಾಲದಿಂದ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬೆಲ್ಲಾ ವಿಷಯಗಳ ಕುರಿತಾಗಿ ಅಭಿಮಾನಿಗಳು (Fan) ತಲೆಕೆಡಿಸಿಕೊಳ್ಳುತ್ತಿದ್ದಾರೆ.


ಇತ್ತೀಚೆಗೆ ಮುಂಬೈನ ರೆಸ್ಟೋರೆಂಟ್‌ ಒಂದರಲ್ಲಿ ಪರಿಣಿತಿ ಹಾಗೂ ರಾಘವ್‌ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದು ಈ ರೂಮರ್ಸ್‌ ಹರಡಲು ಕಾರಣವಾಗಿವೆ. ಹೊಟೇಲ್‌ ಭೇಟಿಯ ವೇಳೆ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಆದರೆ ರಾಘವ್ ಅವರು ‘ರಾಜಕಾರಣದ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ' ಎಂದು ಹೇಳಿದರೆ ಇಬ್ಬರ ನಡುವೆ ಏನೋ ಇದೆ ಅನ್ನೋದಾಗಿ ಗುಸುಗುಸು ಜೋರಾಗಿದೆ.


ರೋಕಾ ಸಮಾರಂಭಕ್ಕೆ ಸಿದ್ಧತೆ?


ಇನ್ನು ರಾಘವ್‌ ಹಾಗೂ ಪರಿಣಿತಿ ವಿವಾಹ ಸದ್ಯದಲ್ಲೇ ನಡೆಲಿದೆಯೇ ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಆದರೆ ವರದಿಗಳ ಪ್ರಕಾರ, ಕುಟುಂಬಗಳು ಈಗಾಗಲೇ ರೋಕಾ ಸಮಾರಂಭಕ್ಕೆ ಸಿದ್ಧತೆಗಳನ್ನು ನಡೆಸುತ್ತಿವೆ. ಅಂದಹಾಗೆ ರೋಕಾ ಎನ್ನುವುದು ಪಂಜಾಬಿ ವಿವಾಹದ ಮೊದಲು ನಡೆಯುವ ಅತ್ಯಂತ ಮಹತ್ವದ ಸಮಾರಂಭಗಳಲ್ಲಿ ಒಂದಾಗಿದೆ.


Parineeti Chopra Raghav
ಪರಿಣಿತಿ ಚೋಪ್ರಾ ನಿಶ್ಚಿತಾರ್ಥ ಯಾವಾಗ?


ಲಂಡನ್‌ನಲ್ಲಿ ಒಟ್ಟಿಗೇ ಓದಿರುವ ಪರಿಣಿತಿ – ರಾಘವ್‌


ಅಂದಹಾಗೆ ರಾಘವ್ ಮತ್ತು ಪರಿಣಿತಿ ಚೋಪ್ರಾ ಇಬ್ಬರೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದ್ದಾರೆ. ಹಾಗೆಯೇ ಇಬ್ಬರೂ ಅನೇಕ ಕಾಮನ್‌ ಫ್ರೆಂಡ್ಸ್‌ ಹೊಂದಿದ್ದಾರೆ ಎಂಬ ಅಂಶವನ್ನು ಹೊರತುಪಡಿಸಿ, ತಮ್ಮ ಸಂಬಂಧದ ಸ್ಥಿತಿಯ ಬಗ್ಗೆ ಯಾರಿಗೂ ಗುಟ್ಟು ಬಿಟ್ಟುಕೊಟ್ಟಿಲ್ಲ.


ಶೀಘ್ರದಲ್ಲೇ ಅಧಿಕೃತ ಘೋಷಣೆ!


ಆದಾಗ್ಯೂ, ಮೂಲಗಳ ಪ್ರಕಾರ ಇಬ್ಬರ ಕುಟುಂಬಗಳು ಮದುವೆಯ ಬಗ್ಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ರಾಘವ್ ಮತ್ತು ಪರಿಣಿತಿ ಚೋಪ್ರಾ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ.


ಸಾಮಾನ್ಯ ಆಸಕ್ತಿಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಈ ಬಗ್ಗೆ ಈಗಾಗಲೇ ಕುಟುಂಬಗಳು ಮಾತುಕತೆ ನಡೆಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಔಪಚಾರಿಕ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.


"ಇನ್ನೂ ಯಾವುದೇ ಔಪಚಾರಿಕ ಸಮಾರಂಭ ನಡೆದಿಲ್ಲ, ಆದರೆ ಕುಟುಂಬಗಳು ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಶೀಘ್ರದಲ್ಲೇ ಕೆಲವು ಸಮಾರಂಭ ನಡೆಯಲಿದೆ. ಪರಿಣಿತಿ ಹಾಗೂ ರಾಘವ್‌ ಬಗ್ಗೆ ಎರಡೂ ಕುಟುಂಬ ಸದಸ್ಯರಲ್ಲಿ ಖುಷಿಯಿದೆ.


ಇಬ್ಬರೂ ತಮ್ಮ ಶೇಡ್ಯೂಲ್‌ನಲ್ಲಿ ಬ್ಯುಸಿ ಇರುವ ಕಾರಣ ಯಾವುದೇ ಸಮಾರಂಭಕ್ಕೆ ದಿನಾಂಕವನ್ನು ನಿಗದಿಪಡಿಸುವುದು ಕಷ್ಟ. ಆದರೆ ಸಮಾರಂಭವು ನಿಕಟ ಕುಟುಂಬ ಸದಸ್ಯರೊಂದಿಗೆ ನಡೆಯುತ್ತದೆ" ಎಂಬುದಾಗಿ ಮೂಲಗಳು ತಿಳಿಸಿವೆ.


ರಾಘವ್‌ – ಪರಿಣಿತಿ ಡೇಟಿಂಗ್‌?


ನಟಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಅವರು ಡಿನ್ನರ್ ಮತ್ತು ಲಂಚ್ ಮೀಟ್‌ಗಳಿಗೆ ಹೊರಗೆ ಹೋಗುತ್ತಿರುವುದು ವೈರಲ್‌ ಆದ ಬಳಿಕ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.


ಆದರೆ ವಾಸ್ತವವಾಗಿ, ಇಬ್ಬರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ್ದಾರೆ. ಅನೇಕ ಸಾಮಾನ್ಯ ಸ್ನೇಹಿತರನ್ನು ಹೊಂದಿದ್ದಾರೆ.


ಪರಿಣಿತಿ ಮತ್ತು ರಾಘವ್ ಇಬ್ಬರೂ ಪ್ರಯಾಣವನ್ನು ಇಷ್ಟಪಡುತ್ತಾರೆ. ಕೆಲವಷ್ಟು ಅಂತರರಾಷ್ಟ್ರೀಯ ಪ್ರಯಾಣದ ಸ್ಥಳಗಳನ್ನು ಬಗ್ಗೆಯೂ ಚರ್ಚೆ ನಡೆಸುತ್ತಾರೆ ಎಂಬುದಾಗಿಯೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕುಟುಂಬದವರ ಅಧಿಕೃತ ಘೋಷಣೆಯ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ.


top videos  ಅಂದಹಾಗೆ ಲೇಡೀಸ್ ವರ್ಸಸ್ ರಿಕಿ ಬಹ್ಲ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಪರಿಣಿತಿ ಕೊನೆಯದಾಗಿ ಕಾಣಿಸಿಕೊಂಡಿದ್ದು, ಬೋಮನ್ ಇರಾನಿ, ಅಮಿತಾಭ್ ಬಚ್ಚನ್, ಡ್ಯಾನಿ ಡೆನ್ಜಾಂಗ್ಪಾ, ಅನುಪಮ್ ಖೇರ್ ಮತ್ತು ಸಾರಿಕಾ ಅವರೊಂದಿಗೆ ಸೂರಜ್ ಬರ್ಜಾತ್ಯಾ ಅವರ ಬಹುತಾರಾಗಣದ ಚಲನಚಿತ್ರ ಉಂಚಾಯಿನಲ್ಲಿ. ಸದ್ಯ ಅವರು ಚಮ್ಕಿಲಾಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರವನ್ನು ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದು ದಿಲ್ಜಿತ್ ದೋಸಾಂಜ್ ಕೂಡ ನಟಿಸುತ್ತಿದ್ದಾರೆ.

  First published: