Puneeth Rajkumar : ಅಪ್ಪು ಆತ್ಮದ ಜೊತೆ ಮಾತನಾಡಿದ ಸ್ಟೀವ್​ ಹಫ್​? `ಐ ಲವ್ ದೆಮ್​’ ಅಂದಿದ್ದು ನಿಜನಾ?

Puneeth Rajkumar : ಅಭಿಮಾನಿಗಳಿಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಅವರು ‘ಐ ಲವ್​ ದೆಮ್​’ ಎಂದು ಹೇಳುವುದು ಕೇಳಿಸುತ್ತದೆ. ಅದೇ ರೀತಿ ಮತ್ತಷ್ಟು ಪ್ರಶ್ನೆಗಳನ್ನು ಸ್ಟೀವ್ ಹಫ್​ಕೇಳಿದ್ದಾರೆ. ಆದರೆ ಅದಕ್ಕೆ ಯಾವುದೇ ಸ್ಟಷ್ಟ ಉತ್ತರ ಸಿಕ್ಕಿಲ್ಲ. ಸಂಭಾಷಣೆ ಮಧ್ಯೆ ಹಾರ್ಟ್ ಫೇಲ್​, ಡಾಕ್ಟರ್​ ಡಾಕ್ಟರ್​ ಎನ್ನುವ ಮಾತುಗಳು ಈ ವಿಡಿಯೋದಲ್ಲಿ ಕೇಳಿಸುತ್ತೆ.

ಡಾ.ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​

ಡಾ.ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​

  • Share this:
ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​(Power Star Puneeth Rajkumar) ಎಲ್ಲರನ್ನೂ ಅಗಲಿ ಇಂದಿಗೆ 11 ದಿನವಾಗಿದೆ. ಆದರೆ ಎಲ್ಲರ ಮನದಲ್ಲಿರುವ ನೋವು(Pain) ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಅಭಿಮಾನಿಗಳ ಆರಾಧ್ಯದೈವ ಅಪ್ಪು(Appu)ನನ್ನು ನೆನೆದು ಫ್ಯಾನ್ಸ್​​ ಕಣ್ಣೀರಿಡುತ್ತಿದ್ದಾರೆ. ಇಂದು ಪುನೀತ್​ ರಾಜ್​ಕುಮಾರ್​ ಕುಟುಂಬಸ್ಥರು(Puneeth Rajkumar Family) ಕಂಠೀರವ ಸ್ಟುಡಿಯೋ(Kanteerva Studio)ಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇಂದು ಅಪ್ಪು ಪುಣ್ಯ ಸ್ಮರಣೆ ಹಿನ್ನೆಲೆ ಅಪ್ಪು ಮನೆಯಲ್ಲಿ ಪೂಜೆ ನೆರವೇರಿಸಿ, ಬಳಿಕ ಅಪ್ಪು ಸಮಾಧಿಗೆ ಪೂಜೆ ಮಾಡಲಾಗಿದೆ. ಇದರ ನಡುವೆ ಅಪ್ಪು ಆತ್ಮ(Appu Soul)ದ ಜೊತೆ ಸ್ಟೀವ್​ ಹಫ್(Steve Huff)​ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ಹಿಂದೆ ಸ್ಟೀವ್​ ಹಫ್​ ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜ್​ಪೂತ್(Sushant sing Rajput)​ ಆತ್ಮದ ಜೊತೆ ಮಾತನಾಡಿದ್ದ ಎಂದು ಹೇಳಲಾಗುವ ವಿಡಿಯೋ ಸಖತ್​ ವೈರಲ್​ ಆಗಿತ್ತು. ಇದೀಗ ಅಪ್ಪು ಆತ್ಮದ ಜೊತೆ ಮಾತನಾಡಿರುವುದಾಗಿ ಆತ ಹೇಳಿದ್ದು, ಅದರ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಸ್ಟೀವ್​ ಹಫ್ ಅಪ್​ಲೋಡ್​ ಮಾಡಿದ್ದಾರೆ.

ಅಪ್ಪು ಆತ್ಮದ ಜೊತೆ ಮಾತನಾಡಿದ್ದು ನಿಜನಾ? 

ಹೌದು, ಆತ್ಮಗಳ ಜೊತೆ ಮಾತನಾಡುವ ವಿಡಿಯೋಗಳಿಂದಲೇ ಸ್ಟೀವ್​ ಹಫ್​  ಸಖತ್​ ಫೇಮಸ್​ ಆದವರು. ಈ ವಿಡಿಯೋದಲ್ಲಿ ಅಪ್ಪು ಜೊತೆ ಮಾತನಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಪುನೀತ್​ ಅವರ ಆತ್ಮದ ಜೊತೆ ಕೆಲವೊಂದು ಪ್ರಶ್ನೆಗಳನ್ನು ಸ್ವೀವ್​ ಕೇಳಿದ್ದಾರೆ. ನೀವು ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಅವರು ‘ಐ ಲವ್​ ದೆಮ್​’ ಎಂದು ಹೇಳುವುದು ಕೇಳಿಸುತ್ತದೆ. ಅದೇ ರೀತಿ ಮತ್ತಷ್ಟು ಪ್ರಶ್ನೆಗಳನ್ನು ಸ್ಟೀವ್ ಹಫ್​ಕೇಳಿದ್ದಾರೆ. ಆದರೆ ಅದಕ್ಕೆ ಯಾವುದೇ ಸ್ಟಷ್ಟ ಉತ್ತರ ಸಿಕ್ಕಿಲ್ಲ. ಸಂಭಾಷಣೆ ಮಧ್ಯೆ ಹಾರ್ಟ್ ಫೇಲ್​, ಡಾಕ್ಟರ್..​ ಡಾಕ್ಟರ್..​ ಎನ್ನುವ ಮಾತುಗಳು ಈ ವಿಡಿಯೋದಲ್ಲಿ ಕೇಳಿಸುತ್ತೆ. ಇವೆಲ್ಲವನ್ನು ಪುನೀತ್​ ರಾಜ್​ಕುಮಾರ್​ ಅವರೇ ಮಾತನಾಡಿರುವುದಾಗಿ ಸ್ಟೀವ್​ ಹೇಳಿದ್ದಾರೆ.


ಇದನ್ನು ಓದಿ : Puneeth Rajkumar 11ನೇ ದಿನ ಪುಣ್ಯಸ್ಮರಣೆ ಕಾರ್ಯ ನೆರವೇರಿಸಿದ ಕುಟುಂಬ: ಅಪ್ಪು ಅಮರಶ್ರೀ ಅಂದ್ರು ಶಿವಣ್ಣ

ಇವರಿಬ್ಬರ ಮಧ್ಯೆ ಕೇಳಿ ಬಂತು ಮತ್ತೊಂದು ಧ್ವನಿ!
ವಿಡಿಯೋ ಆರಂಭದಿಂದಲೂ ಸ್ವೀವ್​ ಹಫ್​ ತುಂಬಾ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ  ಅಪ್ಪು ಆತ್ಮ ಎನ್ನಲಾದ ಧ್ವನಿ ಯಾವುದಕ್ಕೆ ಸರಿಯಾಗಿ ಉತ್ತರಿಸುವುದಿಲ್ಲ. ಕೇವಲ ಒಂದೆರೆಡು ಬಾರಿ ಮಾತ್ರ ಆ ಧ್ವನಿ ಕೇಳಿ ಬರುತ್ತೆ. ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಾ ಎಂದು ಕೇಳಿದಾಗ ಮಾತ್ರ, ಐ ಲವ್​ ದೆಮ್​ ಎಂಬ ಧ್ವನಿ ಸ್ಪಷ್ಟವಾಗಿದೆ. ಇದಾದ ಬಳಿಕ ವಿಡಿಯೋದ ಕೊನೆಯ ಸೆಕೆಂಡ್​ಗಳಲ್ಲಿ ಮತ್ತೊಬ್ಬರ ಧ್ವನಿ ಕೇಳಿಬಂದಿದೆ. ‘ಹಿ ಇಸ್​ ಫೈನ್​’ ಎಂದು ಜೋರಾಗಿ ಹೇಳುವ ಧ್ವನಿ ರೆಕಾರ್ಡ್ ಆಗಿದೆ. ಇದು ಮತ್ತೊಂದು ಆತ್ಮದ ಧ್ವನಿ ಎಂದು ಸ್ಟೀವ್​ ಹಫ್​ ಹೇಳಿದ್ದಾರೆ.

ಸುಶಾಂತ್​ ಆತ್ಮದ ಜೊತೆ ಮಾತನಾಡಿದ್ದ ಸ್ಟೀವ್​ ಹಫ್? 

ಈ ಹಿಂದೆ ಸುಶಾಂತ್​ ನಿಧನದ ನಂತರ ಸ್ಟೀವ್​ ಹಫ್​ ತಾವೇ ತಯಾರಸಿರುವ ಗೋಸ್ಟ್​ ಬಾಕ್ಸ್​ ಮೂಲಕ ಸುಶಾಂತ್​ ಸಿಂಗ್​ ಅವರ ಆತ್ಮದ ಜೊತೆ ಮಾತುಕತೆ ನಡೆಸಿದ್ದಾಗಿ ಹೇಳಿದ್ದರು.  ಸ್ಟೀವ್ ಆ ಆತ್ಮವನ್ನು 'ಸಾಯುವ ಹಿಂದಿನ ದಿನದ ರಾತ್ರಿ ಏನಾಗಿತ್ತು ಹೇಳಿ' ಎಂದು ಕೇಳಿದಾಗ ಸುಶಾಂತ್ ಆತ್ಮ 'ಗಂಡಸರ ಜೊತೆ ದೊಡ್ಡ ಜಗಳ ನಡೆಯಿತು ಎಂದು ಉತ್ತರ ಬಂದಿದೆ. 'ನಿಮ್ಮನ್ನು ಯಾರಾದ್ರೂ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾರಾ? ಎಂದು ಸ್ಟೀವ್ ಕೇಳಿದಾಗ 'ಅವರು ಮೊಳೆ ತೆಗೆದುಕೊಂಡು ಬಂದಿದ್ದರು' ಎಂದು ಆತ್ಮ ಉತ್ತರಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: `ಪರಮಾತ್ಮ‘ನ ಪುಣ್ಯಸ್ಮರಣೆ, ನೋವಿನಲ್ಲೂ ಪರೀಕ್ಷೆ ಬರೆಯಲಿರೋ ಅಪ್ಪು ಪುತ್ರಿ ವಂದಿತಾ!

ಚಿರಂಜೀವಿ ಸರ್ಜಾ ಆತ್ಮದ ಜೊತೆಯೂ ಮಾತನಾಡಿದ್ದ ಸೀವ್​ ಹಫ್​

ಸುಶಾಂತ್​ ಸಿಂಗ್​ ರಜಪೂತ್​ ಬಳಿಕ ಸ್ಟೀವ್​ ಹಫ್​ ಕನ್ನಡ ನಟ ಚಿರಂಜೀವಿ ಸರ್ಜಾ ಅವರ ಆತ್ಮದ ಜೊತೆ ಮಾತನಾಡಿರುವುದಾಗಿ ಹೇಳಿಕೊಂಡಿದ್ದರು. ಆ ವಿಡಿಯೋವನ್ನು ಸಹ ಅಪ್​ಲೋಡ್​ ಮಾಡಿದ್ದರು. ಈಗ ಅಪ್ಪು ಆತ್ಮದ ಜೊತೆ ಮಾತನಾಡಲಾದ ಎಂಬ ವಿಡಿಯೋವನ್ನು ಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.
Published by:Vasudeva M
First published: