Rakshit Shetty: ಪ್ರೇಮ ಕಾವ್ಯದ ರೂವಾರಿ ರಕ್ಷಿತ್ ಶೆಟ್ಟಿ; ಹೊಸ ಚಿತ್ರದ ಹೆಸರು ‘ಇಬ್ಬನಿ ತಬ್ಬಿದ ಇಳೆಯಲಿ’

ಪರಂವಃ ಸ್ಟುಡಿಯೋಸ್​ನಡಿ ರಕ್ಷಿತ್​ ಶೆಟ್ಟಿ ನಿರ್ಮಿಸುತ್ತಿರುವ ಹೊಸ ಚಿತ್ರವು ಕಳೆದ ತಿಂಗಳಷ್ಟೇ ಘೋಷಣೆಯಾಗಿತ್ತು. ವಿಹಾನ್​ ಗೌಡ ಮತ್ತು ಅಂಕಿತಾ ಅಮರ್​ ಅಭಿನಯದ ಈ ಚಿತ್ರದ ಹೆಸರನ್ನು ಚಿತ್ರತಂಡ ಹೇಳಿರಲಿಲ್ಲ. ಆಗಸ್ಟ್​ 10 ಶನಿವಾರ ಸಂಜೆ ಚಿತ್ರದ ಹೆಸರು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಪೋಸ್ಟರ್​

ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಪೋಸ್ಟರ್​

  • Share this:
777 ಚಾರ್ಲಿ ಸಕ್ಸಸ್​ ಬಳಿಕ ರಕ್ಷಿತ್​ ಶೆಟ್ಟಿ (Rakshit Shetty) ಸಾಲು ಸಾಲು ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಪರಂವಃ ಸ್ಟುಡಿಯೋಸ್​ನಡಿ (Paramvah StudiosParamvah Studios) ರಕ್ಷಿತ್​ ಶೆಟ್ಟಿ ನಿರ್ಮಿಸುತ್ತಿರುವ ಹೊಸ ಚಿತ್ರವು ಕಳೆದ ತಿಂಗಳಷ್ಟೇ ಘೋಷಣೆಯಾಗಿತ್ತು. ವಿಹಾನ್​ ಗೌಡ (Vihan Gowda) ಮತ್ತು ಅಂಕಿತಾ ಅಮರ್​ ಅಭಿನಯದ ಈ ಚಿತ್ರದ ಹೆಸರನ್ನು ಚಿತ್ರತಂಡ ಹೇಳಿರಲಿಲ್ಲ. ಆಗಸ್ಟ್​ 10 ಶನಿವಾರ ಸಂಜೆ ಚಿತ್ರದ ಹೆಸರು ಅಧಿಕೃತವಾಗಿ ಘೋಷಣೆಯಾಗಿದ್ದು, ಚಿತ್ರಕ್ಕೆ 'ಇಬ್ಬನಿ ತಬ್ಬಿದ ಇಳೆಯಲಿ' (Ibbani Tabbida Ileya) ಎಂಬ ಹೆಸರನ್ನು ಇಡಲಾಗಿದೆ. ಪ್ರೀತಿ ಎಂದರೆ ಏನು? ಹಳೆಯ ನೆನಪುಗಳಾ? ನಾಳೆ ಜತೆಯಾಗಿರಬೇಕಾದ ಕನಸುಗಳಾ? ದೂರವಾದ ನಂತರದ ಚಡಪಡಿಕೆಯಾ? ಇದೆಲ್ಲದರ ಸಂಗಮವೇ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರ ಎಂದು ಹೇಳಲಾಗಿದೆ.

ಇದೊಂದು ಕಾವ್ಯಾತ್ಮಕ ಪ್ರೇಮಕಥೆ

ಇದೊಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಬೇಷರತ್ತಾಗಿ ಪ್ರೀತಿಸುವುದನ್ನು ಸಂಭ್ರಮಿಸುವ ಸಿನಿಮಾ ಆಗಿದೆ. ನಿನ್ನೆ, ಇಂದು ಮತ್ತು ನಾಳೆಯ ಪ್ರೀತಿಯನ್ನು ತೋರಿಸುವ ಚಿತ್ರ. ಪ್ರೇಕ್ಷಕರು ಚಿತ್ರವನ್ನು ನೋಡುತ್ತಾ, ಹಾಡುತ್ತಾ, ನಲಿಯುತ್ತಾ, ತಮ್ಮನ್ನೇ ತಾವು ಮರೆಯುವಂತಹ ಚಿತ್ರವಾಗಿದೆ. ಕಾಲೇಜಿನಿಂದ ಪ್ರಾರಂಭವಾಗುವ ಈ ಕಥೆಯು ಪ್ರೌಡಾವಸ್ಥೆಯವಸ್ಥೆಯಲ್ಲಿ ಅಂತ್ಯವಾಗುತ್ತದೆ.

ಚಿತ್ರದಲ್ಲಿದೆ ವಿಭಿನ್ನ ಪ್ರಯತ್ನಗಳು

ಹೀಗೆ ಒಂದು ದಶಕದ ವಿವಿಧ ಕಾಲಘಟ್ಟವನ್ನು ಈ ಚಿತ್ರವು ಸೂಕ್ಷ್ಮವಾಗಿ ತೋರಿಸಲಿದ್ದು, ಇಲ್ಲಿ ಹಸಿರು ಎಷ್ಟು ಮುಖ್ಯವೋ, ಆಧುನಿಕ ನಗರದೃಶ್ಯಗಳು ಸಹ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲ, ಬೇಸಿಗೆಯ ಘಮ, ಚಳಿಗಾಲದ ಹಿತ ಮತ್ತು ಮಳೆಗಾಲದ ಮಾಧುರ್ಯವೂ ಈ ಚಿತ್ರದಲ್ಲಿರಲಿದೆ ಎಂದು ಚಿತ್ರತಂಡ ತಿಳಿಸಿದೆ.ನಾಯಕ ವಿಹಾನ್​, ನಾಯಕಿ ಅಂಕಿತಾ

ಈ ಹಿಂದೆ ರಕ್ಷಿತ್​ ಶೆಟ್ಟಿ ಅವರ ಸೆವೆನ್​ ಆಡ್ಸ್​ ಚಿತ್ರಕಥಾ ವಿಭಾಗದಲ್ಲಿ ಸಕ್ರಿಯವಾಗಿ 'ಕಿರಿಕ್​ ಪಾರ್ಟಿ' ಮತ್ತು 'ಅವನೇ ಶ್ರೀಮನ್ನಾರಾಯಣ' ಚಿತ್ರಗಳ ಚಿತ್ರಕಥೆಯಲ್ಲಿ ಬರೆದಿದ್ದ ಮತ್ತು 'ಕಥಾಸಂಗಮ' ಚಿತ್ರದ 'ರೇನ್​ಬೋ ಲ್ಯಾಂಡ್​' ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್​ ಬೆಳ್ಳಿಯಪ್ಪ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರದ ಕಥೆ ಹೊಸತನ ಕೇಳುವುದರಿಂದ, ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ನಾಯಕ-ನಾಯಕಿಯಾಗಿ ವಿಹಾನ್​ ಮತ್ತು ಅಂಕಿತಾ ಅಮರ್​ ಆಯ್ಕೆಯಾಗಿದ್ದು, ಸದ್ಯದಲ್ಲೇ ಎರಡನೆಯ ನಾಯಕಿಯ ಆಯ್ಕೆ ಬಳಿಕ ಅಧಿಕೃತ ಘೋಷಣೆಯಾಗಲಿದೆ.

ಸಂಗೀತಮಯ ಪ್ರೇಮಕಥೆಗೆ ಗಗನ್​ ಬದೇರಿಯಾ ಮ್ಯುಸಿಕ್​

ಇದೊಂದು ಸಂಗೀತಮಯ ಪ್ರೇಮಕಥೆಯಾಗಿದ್ದು, ಗಗನ್​ ಬದೇರಿಯಾ ಸಂಗೀತ ಸಂಯೋಜಿಸುತ್ತಿದ್ದಾರೆ. ನ್ಯೂಯಾರ್ಕ್​ ಫಿಲಂ ಅಕಾಡೆಮಿಯಲ್ಲಿ ಕಲಿತು ಬಂದಿರುವ ಶ್ರೀವತ್ಸನ್​ ಸೆಲ್ವರಾಜನ್​, ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ 'ಕಥಾಸಂಗಮ' ಚಿತ್ರದ 'ಗಿರ್​ಗಿಟ್ಲೆ' ಕಥೆಯನ್ನು ನಿರ್ದೇಶಿಸದ್ದ ಶಶಿಕುಮಾರ್​, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Kiccha Sudeep: ಕಿಚ್ಚಂಗೂ ಶೆಟ್ರಿಗೂ ಕೋಲ್ಡ್​ ವಾರ್​? ಇಬ್ಬರ ಕಾಂಬಿನೇಷನ್​ ಸಿನಿಮಾ ನೋಡೋದು ಯಾವಾಗ?

2023ಕ್ಕೆ ಸಿನಿಮಾ ಬಿಡುಗಡೆ

ಹೊಸಬರನ್ನು ಹಾಕಿಕೊಂಡು ರಕ್ಷಿತ್​ ಸಿನಿಮಾ ಮಾಡುತ್ತಿದ್ದಾರೆ. 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಚಿತ್ರೀಕರಣ ಸೆಪ್ಟೆಂಬರ್​ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, 2023ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.

ಮಿಥ್ಯ ಚಿತ್ರವನ್ನು ನಿರ್ಮಿಸುತ್ತಿರುವ ರಕ್ಷಿತ್​

ರಕ್ಷಿತ್​ ಶೆಟ್ಟಿ  ‘ಮಿಥ್ಯ’ ಎಂಬಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 11 ವರ್ಷದ ಬಾಲಕನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ‘ಮಿಥ್ಯ’ ರಕ್ಷಿತ್​ ಶೆಟ್ಟಿ ನಿರ್ಮಾಣದ ಹೊಸ ಚಿತ್ರ. ಸುಮಂತ್ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡೋ ಪ್ರತಿಭಾನ್ವಿತರಿಗೆ ರಕ್ಷಿತ್ ಚಾನ್ಸ್​ ಕೊಡ್ತಿರೋದು ನಿಜಕ್ಕೂ ಚಿತ್ರರಂಗ ಮೆಚ್ಚುವ ಕೆಲಸವಾಗಿದೆ.
Published by:Pavana HS
First published: