Kannada Bigg Boss 8: ಕನ್ನಡ ಬಿಗ್ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್ ಆರಂಭ​: ಅಧಿಕೃತವಾಗಿ ಪ್ರಕಟಿಸಿದ ಪರಮೇಶ್ವರ ಗುಂಡ್ಕಲ್​

Kichcha Sudeep: ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಬಿಗ್​ ಬಾಸ್​ 8 ಕಾರ್ಯಕ್ರಮ ಕೊರೋನಾ ಕಾರಣದಿಂದ ರದ್ದಾಗಿತ್ತು. ಈಗ ಇದೇ ಕಾರ್ಯಕ್ರಮವನ್ನು 12 ಮಂದಿ ಸ್ಪರ್ಧಿಗಳೊಂದಿಗೆ ಮತ್ತೆ ಮುಂದುವರೆಸುವ ನಿರ್ಧಾರಕ್ಕೆ ಬಂದಿದೆ ಕಲರ್ಸ್​ ಕನ್ನಡ ವಾಹಿನಿ

ಬಿಗ್ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್​ ಆರಂಭ

ಬಿಗ್ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್​ ಆರಂಭ

  • Share this:
ಕೊರೋನಾ ಎರಡನೇ ಅಲೆಯಿಂದ ಕನ್ನಡದ ಕಿರುತೆರೆಯಲ್ಲಿ ಎಂದೂ ನಡೆಯದ ಕೆಲವು ಘಟನೆಗಳು ಈಗ ನಡೆಯುತ್ತಿವೆ. ಹೌದು, ಬಿಗ್ ಬಾಸ್​ ರಿಯಾಲಿಟಿ ಶೋ ಇತಿಹಾಸದಲ್ಲೇ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿರಲಿಲ್ಲ. ಆದರೆ ಈ ಸಲ ಅದು ಆಗಿತ್ತು. ಆದರೆ ಈಗ ಇದೇ ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್​ ಆರಂಭವಾಗಲಿದೆ. ಹೌದು ಅರ್ಧಕ್ಕೆ ನಿಂತಿದ್ದ ಕನ್ನಡ ಬಿಗ್​ ಬಾಸ್​ ಸೀಸನ್​ 8 ಇನ್ನೇನು ಆರಂಭವಾಗಲಿದೆ. ಮತ್ತೆ ಕಿಚ್ಚ ಸುದೀಪ್​ ಅವರನ್ನು ಕಿರುತೆರೆ ಮೇಲೆ ನೋಡಬಹುದಾಗಿದೆ. ಕಳೆದ ಕೆಲವು ದಿನಗಳಿಂದ ಬಿಗ್​ ಬಾಸ್ ಮರು ಆರಂಭದ ಬಗ್ಗೆ ಸುದ್ದಿಯೊಂದು ಕಿರುತೆರೆ ವಲಯದಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಈ ಸುದ್ದಿ ನಿಜವಾಗಿದೆ. ಹೌದು, ಕನ್ನಡ ಬಿಗ್​ ಬಾಸ್​ ವೀಕ್ಷಿಸುವ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದನ್ನು ಕೊಟ್ಟಿರುವುದು ಮತ್ತಾರೂ ಅಲ್ಲ ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು. 

ಕನ್ನಡದ ಕಿರುತೆಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​​ 8 ಕೊನೆಗೊಳ್ಳಲು 29 ದಿನಗಳು ಬಾಕಿ ಇತ್ತು. ಆಗಲೇ ಕಾರ್ಯಕ್ರಮ ಅರ್ಧಕ್ಕೆ ಕೊನೆಗೊಳ್ಳಲಿದೆ ಅನ್ನೋ ಸುದ್ದಿ ಹೊರ ಬಿದ್ದಿತ್ತು. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಕಾರ್ಯಕ್ರಮ ಕೊರೋನಾ ಕಾರಣದಿಂದ ರದ್ದಾಗಿತ್ತು. ಈಗ ಇದೇ ಕಾರ್ಯಕ್ರಮವನ್ನು 12 ಮಂದಿ ಸ್ಪರ್ಧಿಗಳೊಂದಿಗೆ ಮತ್ತೆ ಮುಂದುವರೆಸುವ ನಿರ್ಧಾರಕ್ಕೆ ಬಂದಿದೆ ಕಲರ್ಸ್​ ಕನ್ನಡ ವಾಹಿನಿ.

Bigg Boss kannada 8, One Politician Bigg Kannada Season 8 , politicians in Bigg Boss kannada 8, Bigg Boss kannada 8 Press meet, ಬಿಗ್ ಬಾಸ್ ಕನ್ನಡ 8, ಸುದೀಪ್ ಬಿಗ್ ಬಾಸ್, ಬಿಗ್ ಬಾಸ್ ಸುದ್ದಿಗೋಷ್ಠಿBigg Boss season 8, Bigg Boss, ಕಿಚ್ಚ ಸುದೀಪ್​, ನೆನಪಿರಲಿ ಪ್ರೇಮ್​, ತಾರಾ, ತಾರಾನೂರಾಧ, ಬಿಗ್​ ಬಾಸ್​ ಸೀಸನ್​ 8, Bigg Boss Kannada, Bigg Boss Sudeep, Colors Kannada, Kannada Serial, Bigg Boss Kannada Start, Tara, Nenapirali Prem, Kichcha Sudeep, For the first time politician is going to participate in Bigg Boss Kannada Season 8 ae
ಬಿಗ್ ಬಾಸ್​ ಸೀಸನ್​ 8 ಮತ್ತೆ ಆರಂಭ


ಪರಮೇಶ್ವರ ಗುಂಡ್ಕಲ್​ ಅವರು ಕೆಲವೇ ನಿಮಿಷಗಳ ಹಿಂದೆಯಷ್ಟೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಬಿಗ್​ ಬಾಸ್​ 8 ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್​ ಆರಂಭವಾಗಲಿದೆ ಅಂತ ಸ್ಪಷ್ಟಪಡಿಸಿದ್ದಾರೆ.
ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ. ಇದೊಂಥರಾ ಎರಡನೇ ಇನ್ನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲ ಗೊತ್ತಿದೆ. ಮೊದಲನೇ ಇನ್ನಿಂಗ್ಸ್​ ಸ್ಕೋರ್​ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುವುದು ಎಂದು ಪರಮೇಶ್ವರ ಗುಂಡ್ಕಲ್​ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sai Pallavi: ಮದುವೆ ಸ್ಕ್ವಾಡ್​ ಜತೆ ಸಹಜ ಸುಂದರಿ ಸಾಯಿ ಪಲ್ಲವಿ..!

ಎರಡನೇ ಇನ್ನಿಂಗ್ಸ್​ನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ ಬಾಸ್ ಶೋದಲ್ಲೂ ಎರಡನೇ ಇನ್ನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟ್​ಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ ಎಂದು ವಿವರಿಸಿದ್ದಾರೆ.

ಜೂನ್ ತಿಂಗಳು. ಹೊರಗಡೆ ಮಳೆ... ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯ ಅಂತ ಖುಷಿಯಿಂದ ತಮ್ಮ ಕಮ್​ಬ್ಯಾಕ್​ ಬಗ್ಗೆ ಪರಮೇಶ್ವರ್​ ಗುಂಡ್ಕಲ್​ ಅವರು ಪೋಸ್ಟ್​ ಮಾಡಿದ್ದಾರೆ.

ಬಿಗ್​ ಬಾಸ್​ 8 ಅರ್ಧಕ್ಕೆ ನಿಂತ ವಿಚಾರ ವೀಕ್ಷಕರಿಗೆ ತುಂಬಾ ನಿರಾಸೆ ಮೂಡಿಸಿತ್ತು. ಕೊರೋನಾ ಆರ್ಭದ ನಡುವೆಯೂ ಬಿಗ್​ ಬಾಸ್​ ಸೀಸನ್​ 8 ಪ್ರಸಾರವಾಗುತ್ತಿತ್ತು. ಯಾವುದೇ ಅಡ್ಡಿ ಆತಂಕ ಇಲ್ಲದೆ ಕಾರ್ಯಕ್ರಮವನ್ನು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಡೆಸಿಕೊಂಡು ಹೋಗಲಾಗುತ್ತಿತ್ತು. ಆದರೆ ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಈ ಕಾರಣದಿಂದ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್​ಡೌನ್​ ಜಾರಿಗೆ ತರಲಾಯಿತು. ಈ ವೇಳೆ ಶೂಟಿಂಗ್​ ಮಾಡಲು ನಿಷೇಧ ಹೇರಿದ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗಿತ್ತು.

ಒಟ್ಟು ನೂರು ದಿನಗಳು ನಡೆಯುವ ಕಾರ್ಯಕ್ರಮ 72 ದಿನಕ್ಕೆ ಅಂತ್ಯಗೊಂಡಿತ್ತು. ಈಗ ಈ ಕಾರ್ಯಕ್ರಮವನ್ನು ಹೊಸದಾಗಿ ಆರಂಭಿಸಲು ಕಲರ್ಸ್​ ವಾಹಿನಿ ಸಿದ್ಧತೆ ಮಾಡಿಕೊಂಡಿದೆ. ಜೂನ್​ 20ರಿಂದ ಮತ್ತೆ ಬಿಗ್​ ಬಾಸ್ ಸೀಸನ್​ 8 ಮತ್ತೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕಲರ್ಸ್​ ವಾಹಿನಿ ಕಡೆಯಿಂದ ಈ ಶೋ ಆರಂಭವಾಗಲಿರುವ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮತ್ತೆ ಆರಂಭವಾಗಲಿರುವ ಶೋನಲ್ಲಿ ಸಾಕಷ್ಟು ಹೊಸತನ ಹಾಗೂ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: Varun Dhawan: ಅಪ್ಪನಾದ ಖುಷಿಯಲ್ಲಿ ವರುಣ್​ ಧವನ್: ಮಗನಿಗೆ ಹೆಸರಿಡಲು ಸಹಾಯ ಮಾಡಿ ಎಂದ ನಟ..!

ಇನ್ನೂ ಸ್ಪರ್ಧಿಗಳಾದ ನಿಧಿ ಸುಬ್ಬಯ್ಯ, ಕೆ.ಪಿ. ಅರವಿಂದ್​, ದಿವ್ಯಾ ಸುರೇಶ್​, ಶಮಂತ್​ ಗೌಡ, ರಘು ಗೌಡ, ವೈಷ್ಣವಿ ಗೌಡ, ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ, ಮಂಜು ಪಾವಗಡ, ಶುಭಾ ಪೂಂಜಾ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಮತ್ತೆ ಬಿಗ್​ ಬಾಸ್​ ಮನೆಗೆ ಮರಳಿದ್ದಾರೆ. ಇನ್ನು ಅರ್ವಿಯಾ ಅಂದರೆ ಅರವಿಂದ್​ ಹಾಗೂ ದಿವ್ಯಾ ಉರುಡುಗ ಅವರು ಮತ್ತೆ ನೋಡಲು ಒಟ್ಟಿಗೆ ಸಿಗುತ್ತಾರಾ ಅನ್ನೋ ಕಾತರ ಪ್ರೇಕ್ಷಕರಲ್ಲಿ ಮನೆ ಮಾಡಿದೆ.ದಿವ್ಯಾ ಉರುಡುಗ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮ ಕೊನೆಗೊಳ್ಳುವ ಕೆಲ ದಿನಗಳು ಮಂಚಿತವಾಗಿಯೇ ಬಿಗ್​ ಬಾಸ್​ ಮನೆಯಿಂದ ಹೊರ ನಡೆದಿದ್ದರು. ಈಗ ಮತ್ತೆ ಕಾರ್ಯಕ್ರಮ ಆರಂಭವಾದರೆ ದಿವ್ಯಾ ಉರುಡುಗ ಇರುತ್ತಾರೋ ಅಥವಾ ಇಲ್ಲವೋ ಎಂಬೆಲ್ಲ ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿವೆ.

ಕಾರ್ಯಕ್ರಮ ಜೂನ್​ ತಿಂಗಳಿನಲ್ಲೇ ಆರಂಭವಾಗಲಿದ್ದು, ದಿನಾಂಕ ನಿಗದಿಯಾಗಿಲ್ಲ.  ಈಗಾಗಲೇ ಹೊರ ಬಂದಿರುವ ಸ್ಪರ್ಧಿಗಳು ವ್ಯಾಕ್ಸಿನ್​ನ ಮೊದಲ ಡೋಸ್​ ತೆಗೆದುಕೊಂಡಿದ್ದಾರೆ. ಇನ್ನು ಕಾರ್ಯಕ್ರಮ ಆರಂಭವಾಗುವ ಮೊದಲು ಮತ್ತೆ ಎಲ್ಲರನ್ನೂ ಕ್ವಾರಂಟೈನ್​ ಮಾಡಲಾಗುತ್ತದೆ.

ಇದನ್ನೂ ಓದಿ: Aravind-Divya Uruduga: ದಿವ್ಯಾ ಉರುಡುಗ ಬಟ್ಟೆ ತೊಳೆದುಕೊಟ್ಟ ಅರವಿಂದ್​: ಮಾತು ಬಾರದಂತಾದ ನಟಿ..!

ಬಿಗ್​ ಬಾಸ್​ ಕೊನೆಗೊಳ್ಳುವ ಮುಂಚಿನ ಸಂಚಿಕೆಗಳಿಗೆ ಸುದೀಪ್​ ಸಹ ಗೈರಾಗಿದ್ದರು. ಅನಾರೋಗ್ಯದ ಕಾರಣದಿಂದ ಅವರು ಮತ್ತೆ ಬಿಗ್ ಬಾಸ್​ ವೇದಿಕೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಸುದೀಪ್​ ಅವರನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೂ ನಿರಾಸೆಯಾಗಿತ್ತು. ನಂತರ ಒಂದು ಹೊಸ ಪ್ರೋಮೋ ಪೋಸ್ಟ್​ ಮಾಡಿದ್ದ ಬಿಗ್​ ಬಾಸ್​ ತಂಡ, ಇದರಲ್ಲಿ ಬಿಗ್ ಬಾಸ್ ಸೀಸನ್​ 8ರ ಫಿನಾಲೆ ಎಪಿಸೋಡ್​ಗಳ ಪ್ರಸಾರ ಯಾವಾಗ ಎಂದು ತಿಳಿಸಿತ್ತು. ಅದರಂತೆಯೇ ಕೊನೆಯ ಎಪಿಸೋಡ್​ಗಳು ಪ್ರಸಾರವಾಗಿತ್ತು.ಇನ್ನು ಸೀಸನ್​ 8ರ ಬಿಗ್​ ಬಾಸ್​ ಮನೆಗೆ 16 ಸ್ಪರ್ಧಿಗಳು ಒಳಗೆ ಹೋಗಿದ್ದರು. ಅದರಲ್ಲಿ ಚಂದ್ರಕಲಾ, ಧನುಶ್ರೀ, ಗೀತಾ, ನಿರ್ಮಲಾ, ರಾಜೀವ್​, ಶಂಕರ್​ ಅಶ್ವಥ್​, ವಿಶ್ವನಾಥ್​ ಹಾವೇರಿ ಎಲಿಮಿನೇಟ್​ ಆಗಿ ಹೊರಬಂದಿದ್ದರು. ಆ ಬಳಿಕ ವೈಷ್ಣವಿ, ರಘು, ಅರವಿಂದ್​, ಮಂಜು ಪಾವಗಡ, ಶುಭಾ ಪೂಂಜಾ, ದಿವ್ಯಾ ಸುರೇಶ್​, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ, ಶಮಂತ್​ ಮನೆಯೊಳಕ್ಕಿದ್ದರು. ನಂತರ ಪ್ರಿಯಾಂಕಾ ಮತ್ತು ಚಕ್ರವರ್ತಿ ಚಂದ್ರಚೂಡ್​ ವೈಲ್ಡ್​ ಕಾರ್ಡ್​ ಮೂಲಕ ಉಳಿದ ಸ್ಪರ್ಧಿಗಳ ಜೊತೆಗೆ ಸೇರಿದ್ದರು.
Published by:Anitha E
First published: