ಬಹುನಿರೀಕ್ಷಿತ ಸಿನಿಮಾ ಮೇನ್ ಅಟಲ್ ಹೂನ್ (Mein Atal Hoon) ಚಿತ್ರದ ಫಸ್ಟ್ ಲುಕ್ (First Look) ಬಿಡುಗಡೆಯಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ನಟ ಪಂಕಜ್ ತ್ರಿಪಾಠಿ (Pankaj Tripathi) ಅವರ ಫಸ್ಟ್ ಲುಕ್ (First Look) ಅನ್ನು ಕ್ರಿಸ್ಮಸ್ (Christmas) ದಿನವೇ ಅವರ ಹುಟ್ಟಿದ ಹಬ್ಬದ ದಿನ ರಿವೀಲ್ ಮಾಡಲಾಗಿದೆ. ಇದನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ರವಿ ಜಾಧವ್ ನಿರ್ದೇಶಿಸಿದ್ದಾರೆ. ಮುಂದಿನ ವರ್ಷ ಡಿಸೆಂಬರ್ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಪಂಕಜ್ ಧೋತಿ-ಕುರ್ತಾ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೋಲುವ ಪ್ರಾಸ್ಥೆಟಿಕ್ಸ್ ಹೊಂದಿರುವ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಚಿತ್ರದ ಫಸ್ಟ್ ಲುಕ್ ಫೋಟೋಗಳನ್ನು ಹಂಚಿಕೊಂಡಿರುವ ಪಂಕಜ್ ತ್ರಿಪಾಠಿ ಹಿಂದಿಯಲ್ಲಿ ಪೋಸ್ಟ್ಗೆ ಕ್ಯಾಪ್ಶನ್ ಬರೆದಿದ್ದಾರೆ.
"ಅಟಲ್ ಜಿ ಅವರ ವ್ಯಕ್ತಿತ್ವವನ್ನು ತೆರೆಯ ಮೇಲೆ ನಿಜವಾಗಿ ತೋರಿಸಲು ನನ್ನ ವ್ಯಕ್ತಿತ್ವದ ಮೇಲೆ ಬಹಳಷ್ಟು ಸಂಯಮದಿಂದ ಕೆಲಸ ಮಾಡುವುದು ಅತೀ ಅವಶ್ಯಕವಾಗಿದೆ ಎಂದು ನನಗೆ ಗೊತ್ತು. ನನಗೆ ದೃಢತೆ ಇದೆ. ಉತ್ಸಾಹ ಮತ್ತು ನೈತಿಕತೆಯಿಂದ ನನ್ನ ಈ ಹೊಸ ಪಾತ್ರಕ್ಕೆ ನಾನು ನ್ಯಾಯ ಸಲ್ಲಿಸಲು ನನಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದಿ ಬರೆದಿದ್ದಾರೆ.
ಚಿತ್ರದ ಕುರಿತು ಕೆಲವು ಮಾಹಿತಿ
ಮೇ ಅಟಲ್ ಹೂನ್ ಅನ್ನು ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಮತ್ತು ಲೆಜೆಂಡ್ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದ್ದಾರೆ. ಇದನ್ನು ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್, ಸ್ಯಾಮ್ ಖಾನ್ ಮತ್ತು ಕಮಲೇಶ್ ಭಾನುಶಾಲಿ ನಿರ್ಮಿಸಿದ್ದಾರೆ.
View this post on Instagram
ಪಂಕಜ್ ಅವರು ಅನುರಾಗ್ ಬಸು ಚಿತ್ರದ ಮೆಟ್ರೋ ಇನ್ ಡಿನೋದಲ್ಲಿ ಸದ್ಯ ಕೆಲಸ ಮಾಡುತ್ತಿದ್ದಾರೆ. ಇದು ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಅನುಪಮ್ ಖೇರ್, ನೀನಾ ಗುಪ್ತಾ, ಕೊಂಕಣ ಸೇನ್ ಶರ್ಮಾ, ಅಲಿ ಫಜಲ್ ಮತ್ತು ಫಾತಿಮಾ ಸನಾ ಶೇಖ್ ಅವರನ್ನೂ ಒಳಗೊಂಡಿರುವ ಸಿನಿಮಾ. ಟಿ-ಸೀರೀಸ್ ಮತ್ತು ಅನುರಾಗ್ ಬಸು ಪ್ರೊಡಕ್ಷನ್ಸ್ ನಿರ್ಮಿಸಿದ ಮೆಟ್ರೋ ಇನ್ ಡಿನೋ ಸಮಕಾಲೀನ ಕಾಲದಲ್ಲಿ ಮಾನವ ಸಂಬಂಧಗಳ ಕಥೆಗಳನ್ನು ಬಿಚ್ಚಿಡುತ್ತದೆ. ಸದ್ಯ ಕೋಲ್ಕತ್ತಾದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ಇದನ್ನೂ ಓದಿ: Kamal Haasan: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸಾಥ್ ಕೊಟ್ಟ ಕಮಲ್ ಹಾಸನ್
ಪಂಕಜ್ ತ್ರಿಪಾಠಿ ಅವರು ಸಂಜನಾ ಸಂಘಿ ಮತ್ತು ಪಾರ್ವತಿ ತಿರುವೋತ್ತು ಅವರೊಂದಿಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸುತ್ತಿದ್ದಾರೆ. ಅವರು ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದರು. ನಂತರ ಕೋಲ್ಕತ್ತಾದಲ್ಲಿ ಚಿತ್ರೀಕರಣ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ