ಕಾಂತಾರ ಹೀರೋ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಅಷ್ಟಾಗಿ ಆ್ಯಕ್ಟಿವ್ ಆಗಿಲ್ಲ. ಹೊರಗೆಯೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ನಟ ಕಾಂತಾರ 2 ಸಿನಿಮಾದ ಕಥೆ ಬರೆಯುವ (Story Writing) ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಟ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪಂಜುರ್ಲಿ ದೈವ (Panjurli Daiva) ಕೋಲದ ಒಂದು ವಿಡಿಯೋ ಕ್ಲಿಪ್ ನೋಡಬಹುದು.
ವಿಡಿಯೋದಲ್ಲಿ ದೈವ ಕಾಂತಾರ ನಟನ ಕೈ ಹಿಡಿದಿರುವುದನ್ನು ಕಾಣಬಹುದು. ನಟ ರಿಷಬ್ ಶೆಟ್ಟಿ ಮೆರೂನ್ ಶರ್ಟ್ ಹಾಗೂ ವೈಟ್ ಪಂಚೆ ಧರಿಸಿದ್ದರು. ಇನ್ನು ನಟ ಗಡ್ಡ, ಮೀಸೆ ಬಿಟ್ಟು ವೈಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆ ಬರೆಯೋದ್ರಲ್ಲಿ ಶೆಟ್ರು ಫುಲ್ ಬ್ಯುಸಿಯಾಗಿದ್ದಾರೆ ಎನ್ನುವುದಂತೂ ಸತ್ಯ.
ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಪಟ್ಟಿದ್ದೇಕೆ?
ವಿಡಿಯೋ ನೋಡಿದ ನೆಟ್ಟಿಗರೆಲ್ಲ ಅಚ್ಚರಿಪಟ್ಟಿದ್ದಾರೆ. ಕಾರಣ ಬೇರೇನಲ್ಲ. ಪಂಜುರ್ಲಿ ದೈವದ ವೇಷ ಹಾಕಿದ್ದ ಪಾತ್ರಧಾರಿಯೂ ಥೇಟ್ ರಿಷಬ್ ಶೆಟ್ಟಿಯಂತೆಯೇ ಕಾಣಿಸಿದ್ದಾರೆ. ಹಾಗಾಗಿ ಈ ವಿಚಾರ ಹೈಲೈಟ್ ಆಗಿದೆ. ಕೋಲ ನೋಡುವ ಬದಲು ನೆಟ್ಟಿಗರು ರಿಷಬ್ ಶೆಟ್ಟಿಯಂತೆಯೇ ಹೋಲುವ ಪಾತ್ರಧಾರಿಯ ಮುಖವನ್ನು ಗಮನವಿಟ್ಟು ನೋಡಿದ್ದಾರೆ.
View this post on Instagram
ಏನ್ಮಾಡ್ತಿದ್ದಾರೆ ರಿಷಬ್ ಶೆಟ್ಟಿ?
ಕಾಂತಾರ-2 ಸಿನಿಮಾದ ಕಥೆಯನ್ನ ಶೆಟ್ರು ಬರೆದು ಮುಗಿಸಿದ್ರಾ? ಅನ್ನುವ ಒಂದು ಪ್ರಶ್ನೆ ಇದೆ. ಆ ಪ್ರಶ್ನೆಗೆ ಉತ್ತರ ಸಿಕ್ತಾ? ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಒಂದಷ್ಟು ಮಾಹಿತಿ ಸಿಕ್ಕಿದೆ. ಆ ಮಾಹಿತಿ ನಿಮ್ಮನ್ನ ಕಾಡಿಗೆ ಕರೆದುಕೊಡು ಹೋಗುತ್ತದೆ.
ನಿಜ, ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ರು ಇದೀಗ ಕಥೆ ಬರೆಯೋಕೆ ರೆಡಿ ಆಗಿದ್ದಾರೆ. ಸಿನಿಮಾಗೆ ಬೇಕಾಗೋ ಎಲ್ಲ ಸಂಶೋಧನೆಗಳು ಜೊತೆ ಜೊತೆಯಲ್ಲಿ ನಡೆಯುತ್ತಿದ್ದವು. ಇದಕ್ಕಾಗಿ ಒಂದು ಟೀಮ್ ರಿಸರ್ಚ್ ಮಾಡ್ತಾನೇ ಇದೆ.
ಇದನ್ನೂ ಓದಿ: Amala Paul: ಬೆತ್ತಲೆಯಾಗಿ ನಟಿಸಿದ್ದೇನೆ, ಲಿಪ್ಲಾಕ್ ಏನು ಮಹಾ? ಅಮಲಾ ಪೌಲ್ ಬೋಲ್ಡ್ ಹೇಳಿಕೆ
ಇತ್ತ ರಿಷಬ್ ಶೆಟ್ಟಿ ಕೂಡ ರಿಸರ್ಚ್ ಮಾಡುತ್ತಲೇ ಇದ್ದರು. ಊರಿನ ಎಲ್ಲ ಕೆಲಸವನ್ನ ಮುಗಿಸಿಕೊಂಡು ಕಾಂತಾರದ ಶಿವ ಇದೀಗ ಅದ್ಯಾವುದೋ ಕಾಡಿಗೆ ಹೊರಟು ಹೋಗಿದ್ದಾರಂತೆ. ಅಲ್ಲಿ ಕುಳಿತು ತನ್ಮಯತೆಯಿಂದಲೇ ಕಥೆ ಬರೆಯೋಕೆ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ.
ಮುಂದಿನ ಮೂರು ತಿಂಗಳು ರಿಷಬ್ ಶೆಟ್ರು ಯಾರಿಗೂ ಸಿಗೋದಿಲ್ಲ ಬಿಡಿ. ಫೋನ್ ಮತ್ತು ಇತರ ಕಾಂಟ್ಯಾಕ್ಟ್‌ಗಳೆಲ್ಲವನ್ನೂ ತೊರೆದು ರಿಷಬ್ ಶೆಟ್ರು, ಕಾಂತಾರದ ಶಿವನ ಕಥೆ ಬರೆಯೋವಲ್ಲಿ ಮಗ್ನರಾಗಿದ್ದಾರೆ. ಆದರೆ ಯಾವ ಕಾಡು? ಯಾರೆಲ್ಲ ಹೋಗಿದ್ದಾರೆ? ಇದುವೇ ಈಗಿನ ಕುತೂಹಲ. ಆದರೂ ಪ್ರೇಕ್ಷಕರು ಮಾತ್ರ ಕಾಂತಾರ 2 ಸಿನಿಮಾ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಸಿನಿಮಾದ ಕುರಿತು ನಿರೀಕ್ಷೆ ಕೂಡಾ ಹೆಚ್ಚಾಗಿದ್ದು ಈ ಸಲ ರಿಷಬ್ ಶೆಟ್ಟಿ ಅವರ ಮೇಲೆ ಹೆಚ್ಚೇ ನಿರೀಕ್ಷೆ ಇರುವುದರಿಂದ ಇದು ಅವರಿಗೆ ಸವಾಲಿನ ಕೆಲಸ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ