Nidhi Subbaiah: ತೂಕ ಇಳಿಸಿದ ನಿಧಿ ಸುಬ್ಬಯ್ಯ - ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡ್ತಾರಾ ಪಂಚರಂಗಿ ಬೆಡಗಿ?

ಸಣ್ಣ ಆಗಿರುವ ಖುಷಿಯಲ್ಲಿ ನಿಧಿ ಸುಬ್ಬಯ್ಯ ಅವರು ವೆಸ್ಟರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಕುರಿತು ನಿಧಿ ಸುಬ್ಬಯ್ಯ ಅವರು ಮಾಹಿತಿ ನೀಡಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಿಗ್ ಬಾಸ್ 8 ರ ಸ್ಪರ್ಧಿ ಪಂಚರಂಗಿ ಬೆಡಗಿ ನಿಧಿ‌ ಸುಬ್ಬಯ್ಯ (Nidhi Subbaiah) ಅವರು ತಮ್ಮ ಸಣ್ಣಗಾಗಿರುವ ಫೋಟೋಗಳನ್ನು ಸೋಶಿಯಲ್ ಮಿಡಿಯಾ(Social media)ದಲ್ಲಿ ಅಪ್ಲೋಡ್ ಮಾಡುವ ಮೂಲಕ ಮತ್ತೆ ಸಿನಿಮಾದಲ್ಲಿ ನಟಿಸುವ ಸೂಚನೆಗಳನ್ನು ಈ‌ ಮುಖಾಂತರ ನೀಡುತ್ತಿದ್ದಾರೆ. ಸಣ್ಣ ಆಗಿರುವ ಖುಷಿಯಲ್ಲಿ ನಿಧಿ ಸುಬ್ಬಯ್ಯ ಅವರು ವೆಸ್ಟರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ (Photoshoot) ಮಾಡಿಸಿಕೊಂಡಿದ್ದಾರೆ. ಈ ಕುರಿತು ನಿಧಿ ಸುಬ್ಬಯ್ಯ ಅವರು ಮಾಹಿತಿ ನೀಡಿದ್ದಾರೆ. ಬಿಗ್ ಬಾಸ್ (Big Boss)  ಕನ್ನಡ ಸೀಸನ್ 8 ಶೋನಲ್ಲಿ ನಿಧಿ ಸುಬ್ಬಯ್ಯ ಭಾಗವಹಿಸಿದ್ದರು. ಅದರಲ್ಲಿ ನಿಧಿ ಸ್ವಲ್ಪ ದಪ್ಪಗಾಗಿದ್ದರು. ಆದರೆ ಅವರು ಕೆಲ ತಿಂಗಳುಗಳಿಂದ ಡಯೆಟ್, ವರ್ಕೌಟ್ (Workout) ಮಾಡಿ ತೂಕ ಕಳೆದುಕೊಂಡಿದ್ದಾರೆ. 

  ಮಾಡರ್ನ್ ಡ್ರೆಸ್ ಫೋಟೊ ಶೂಟ್ ನಲ್ಲಿ ‌ಮಿಂಚುತ್ತಿರುವ ನಟಿ ನಿಧಿ ಸುಬ್ಬಯ್ಯ

  ಪಂಚರಂಗಿ ಖ್ಯಾತಿಯ  ಸುಂದರಿ ನಿಧಿ ಸುಬ್ಬಯ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ. ಈಗ ಮತ್ತೆ ಪಂಚರಂಗಿ‌‌ ಸಿನಿಮಾದಲ್ಲಿದ್ದ ನಿಧಿಯಂತೆ ಕಾಣಿಸುತ್ತಿದ್ದಾರೆ.  2010ರಲ್ಲಿ ತೆರೆ ಕಂಡಿದ್ದ 'ಪಂಚರಂಗಿ' ಸಿನಿಮಾದಲ್ಲಿ ನಿಧಿ ಅವರು ಅಂಬಿಕಾ ಪಾತ್ರ ಮಾಡಿದ್ದರು. ನಿಧಿ ಜೊತೆ ದಿಗಂತ್ ಅವರು ಲೀಡ್ ಆಗಿ ಕಾಣಿಸಿಕೊಂಡಿದ್ದರು.  ಮಾಡೆಲಿಂಗ್ ಮಾಡುತ್ತ ಟಿವಿ ಜಾಹೀರಾತುಗಳಲ್ಲಿ ಅಭಿನಯಿಸುತ್ತಿದ್ದ ಇವರು 2009 ರಲ್ಲಿ ತೆರೆಕಂಡ `ಅಭಿಮಾನಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. `ಪಂಚರಂಗಿ' ಚಿತ್ರದ ಮೂಲಕ ಮುನ್ನಲೆಗೆ ಬಂದ ನಿಧಿ ನಂತರ `ಅಣ್ಣಾ ಬಾಂಡ' ಚಿತ್ರದಲ್ಲಿ ನಟಿಸಿದರು. 2012 ರಲ್ಲಿ ತೆರೆಕಂಡ `ಓ ಮೈ ಗಾಡ್' ಚಿತ್ರದಿಂದ ಹಿಂದಿ ಚಿತ್ರರಂಗದಲ್ಲೂ ಕೂಡ ಅಭಿನಯಿಸಲು ಪ್ರಾರಂಭಿಸಿದರು.

  ಸ್ಯಾಂಡಲ್‌ವುಡ್‌ನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿಗೆ ಬೆರಳೆಣಿಕೆಯಷ್ಟು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಸ್ಯಾಂಡಲ್‌ವುಡ್‌ಗೆ ಹಿಂತಿರುಗಿ, ನಿಧಿ ಶಿವರಾಜಕುಮಾರ್-ನಟನೆಯ ಆಯುಷ್ಮಾನ್ ಭವ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.

  ಇದನ್ನೂ ಓದಿ: Kannadathi: ಮೇ 6 ರಂದು ಬೆಳ್ಳಿತೆರೆ ಮೇಲೆ 'ಟಕ್ಕರ್' ಕೊಡಲು ಸಜ್ಜಾದ ನಟಿ ರಂಜನಿ ರಾಘವನ್

  ಬಿಗ್ ಬಾಸ್ ಕನ್ನಡ ಸೀಸನ್ 8 ಶೋನಲ್ಲಿ ನಿಧಿ ಸುಬ್ಬಯ್ಯ ಭಾಗವಹಿಸಿದ್ದರು

  ಬಿಗ್ ಬಾಸ್ ಕನ್ನಡ ಸೀಸನ್ 8 ಶೋನಲ್ಲಿ ನಿಧಿ ಸುಬ್ಬಯ್ಯ ಭಾಗವಹಿಸಿದ್ದರು. ಅದರಲ್ಲಿ ನಿಧಿ ಸ್ವಲ್ಪ ದಪ್ಪಗಾಗಿದ್ದರು. ಆದರೆ ಅವರು ಕೆಲ ತಿಂಗಳುಗಳಿಂದ ಡಯೆಟ್, ವರ್ಕೌಟ್ ಮಾಡಿ ತೂಕ ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ನಿಧಿ 13 ಕೆಜಿ ಸಣ್ಣ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಿಧಿ ಸುಬ್ಬಯ್ಯ ಅವರು ಉತ್ತಮವಾಗಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಿಚ್ಚ ಸುದೀಪ್ ಅವರು ಕೂಡ ನಿಧಿ ಗಾಯನಕ್ಕೆ ಫಿದಾ ಆಗಿದ್ದರು.

  ಕೊಡಗಿನ ಬೆಡಗಿ‌ ನಿಧಿ ಸುಬ್ಬಯ್ಯ

  ನಿಧಿ ಸುಬ್ಬಯ್ಯ ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. 1987 ರಲ್ಲಿ ಕೊಡಗಿನಲ್ಲಿ ಜನಿಸಿದರು. ತಂದೆ ಬೊಲ್ಲಚಂದ ಸುಭಾಷ್ ಸುಬ್ಬಯ್ಯ, ತಾಯಿ ಜಾನ್ಸಿ ಸುಬ್ಬಯ್ಯ. ನಿಧಿ ಜನನದ ನಂತರ ಕುಟುಂಬ ಮೈಸೂರಿಗೆ ವಲಸೆ ಬಂದಿದ್ದರಿಂದ ಇವರ ಬಾಲ್ಯ ವಿಧ್ಯಾಭ್ಯಾಸ ಎಲ್ಲ ಮೈಸೂರಿನಲ್ಲಿ ಕಳೆಯಿತು.

  ತಾವು ಪಿಯುಸಿಯಲ್ಲಿದ್ದಾಗ ಸೇಲಿಂಗ್ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ನಂತರ ಒಂದೇ ವರ್ಷದಲ್ಲಿ ಸೇಲಿಂಗ್ ನಲ್ಲಿ ಮೂರು ಚಿನ್ನದ ಪದಕ ಪಡೆದಿರುವ ಇತಿಹಾಸ ಹೊಂದಿದ್ದಾರೆ. ಶ್ರೀ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುವಾಗ ಮಾಡೆಲಿಂಗ್ ಗೊಸ್ಕರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು.

  ಇದನ್ನೂ ಓದಿ: Kruttika Ravindra: ಎಲ್ಲಿ ಹೋದ್ರೂ ರಾಧಾಕಲ್ಯಾಣ ಖ್ಯಾತಿಯ ಕೃತಿಕಾ ರವೀಂದ್ರ; ಏನು ಮಾಡುತ್ತಿದ್ದಾರೆ ಈಗ?

  ಉತ್ತಮ ಕತೆ ಬಂದರೆ ಮತ್ತೆ ಸಿನಿಮಾ

  ಕನ್ನಡದಲ್ಲಿ ಮತ್ತೆ ಕಂಬ್ಯಾಕ್​ ಮಾಡಲು ಸಜ್ಜಾಗಿರುವ ನಿಧಿ ಸುಬ್ಬಯ್ಯ ಉತ್ತಮ ಕತೆ ಬಂದರೆ ಮತ್ತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಬಿಗ್ ಬಾಸ್ ನಂತರ ಯಾವುದೇ ಸಿನಿಮಾಗಳ ಬಗ್ಗೆ ಅವರು ಹಂಚಿಕೊಳ್ಳಲ್ಲಿಲ್ಲಾ ಆದರೆ ಈಗ ಸಣ್ಣ ಆಗಿರುವುದು ಕಂಡಾಗ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಂತಸ‌ ನೀಡುವುದು ದೂರವಿಲ್ಲ ಎಂದು ಅನಿಸುತ್ತಿದೆ.
  Published by:Swathi Nayak
  First published: