ಟಾಲಿವುಡ್‌ನ ಯುವ ನಟ ನಿಖಿಲ್ ಸಿದ್ಧಾರ್ಥ್ (Spy Movie Teaser Release) ಮತ್ತೊಂದು ಸಿನಿಮಾದ ಮೂಲಕ ಈಗ ಸದ್ದು ಮಾಡುತ್ತಿದ್ದಾರೆ. ಈ ಹಿಂದಿನ ಕಾರ್ತಿಕೇಯ ಸರಣಿ ಸಿನಿಮಾದಲ್ಲಿ ನಿಖಿಲ್ ಭಾರಿ ಹವಾ ಕ್ರಿಯೇಟ್ (Tollywood Spy Movie) ಮಾಡಿದ್ದಾರೆ. ಕಾರ್ತಿಕೇಯ-2 ಸಿನಿಮಾ ಆದ್ಮೇಲೆ ನಿಖಿಲ್ ಈಗ ಸುಭಾಷ್ ಚಂದ್ರಬೋಸ್ ಅವರ ಸಾವಿನ ರಹಸ್ಯದ ಒಂದು ಸಿನಮಾ ಮಾಡಿದ್ದಾರೆ. ಅದಕ್ಕೆ ಸ್ಪೈ ಅನ್ನೋ ಹೆಸರು ಕೂಡ (Pan India Spy Film Updates) ಇದೆ. ಈ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ದೆಹಲಿಯ ರಾಜ್‌ಪಥ್‌ನಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಟೀಸರ್ ಮೂಲಕ ಬಹು ನಿರೀಕ್ಷೆ ಹುಟ್ಟುಹಾಕಿರೊ ಈ (Movie Teaser Release) ಚಿತ್ರದ ಒಂದಷ್ಟು ವಿಶೇಷ ಮಾಹಿತಿ ಇಲ್ಲಿದೆ ಓದಿ.
ನೇತಾಜಿ ಸಾವಿನ ರಹಸ್ಯ ಬಿಚ್ಚಿಡಲಿದೆ ಸ್ಪೈ ಸಿನಿಮಾ
ನೇತಾಜಿ ಸುಭಾಷ್ ಚಂದ್ರಬೋಸ್ ಸಾವಿನ ಬಗ್ಗೆ ಇನ್ನಿಲ್ಲದಂತಹ ರಹಸ್ಯಗಳು ಇನ್ನು ಹಾಗೆ ಇವೆ. ಅದರ ಸುತ್ತ ಕಥೆ ಹೆಣೆದಿರೋದು ಇಲ್ಲಿ ತುಂಬಾ ಸ್ಪೆಷಲ್ ಆಗಿಯೇ ಕಾಣುತ್ತಿದೆ. ಸುಭಾಷ್ ಚಂದ್ರಬೋಸ್ ಅವರ ಸಾವಿನ ಹಿಂದಿನ ರಹಸ್ಯ ಭೇದಿಸೋದೆ ಒಟ್ಟು ಕಥೆ ಆಗಿದೆ.
ಸ್ಪೈ ಸಿನಿಮಾ ಡೈರೆಕ್ಟರ್ ಯಾರು ಗೊತ್ತೆ?
ಡೈರೆಕ್ಟರ್ ಗ್ಯಾರಿ ಬಿ.ಎಸ್ ತಮ್ಮ ಈ ಚಿತ್ರಕ್ಕೆ ಸ್ಪೈ ಅಂತ ಹೆಸರಿಟ್ಟಿದ್ದಾರೆ. ಇಡೀ ಚಿತ್ರ ಸುಭಾಷ್ ಚಂದ್ರಬೋಸ್ ಸಾವಿನ ರಹಸ್ಯವನ್ನ ಎಳೆ ಎಳೆಯಾಗಿಯೇ ಬಿಚ್ಚಿಡುವಂತೇನೆ ಕಾಣಿಸುತ್ತಿದೆ. ಈ ಸತ್ಯವನ್ನ ಸಿನಿಮಾದ ಟೀಸರ್ ಈಗ ಸಾರಿ ಸಾರಿ ಹೇಳುತ್ತಿದೆ.
ಕಾರ್ತಿಕೇಯ ಖ್ಯಾತಿಯ ನಟನ ಹೊಸ ಸಿನಿಮಾ
ಕಾರ್ತಿಕೇಯ ಸಿನಿಮಾ ಮೂಲಕ ಸಿನಿ ಪ್ರೇಮಿಗಳಲ್ಲಿ ಹೊಸ ಕಿಚ್ಚು ಹಚ್ಚಿದ ನಟ ನಿಖಿಲ್ ಸಿದ್ಧಾರ್ಥ್ ಇಲ್ಲಿ ಗೂಢಚಾರಿಯಾಗಿ ಅಭಿನಯಿಸಿದ್ದಾರೆ. ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಸಾವು ಹೇಗೆ ಆಗಿದೆ ಅನ್ನೋದನ್ನ ಇಲ್ಲಿ ಪತ್ತೆ ಹಚ್ಚುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಪೈ ಚಿತ್ರದ ಸ್ಪೆಷಲ್ ವಿಷಯ ಏನು ಗೊತ್ತೆ?
ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಬಗ್ಗೆ ಇನ್ನೂ ಸಾಕಷ್ಟು ರಹಸ್ಯಗಳಿವೆ. ಅವುಗಳನ್ನ ಡೈರೆಕ್ಟರ್ ಗ್ಯಾರಿ ಬಿ.ಎಚ್. ಇಲ್ಲಿ ಯಾವ ರೀತಿ ತೋರಿಸುತ್ತಾರೆ ಅನ್ನುವ ಕುತೂಹಲ ಕೂಡ ಇದೆ.
ಸ್ಪೈ ಚಿತ್ರದ ನಿರ್ಮಾಪಕರೇ ಸಿನಿಮಾದ ಸ್ಟೋರಿ ರೈಟರ್
ಚಿತ್ರದ ನಿರ್ಮಾಪಕ ರಾಜಶೇಖರ್ ರೆಡ್ಡಿ ಚಿತ್ರಕ್ಕೆ ಕಥೆ ಕೂಡ ಬರೆದಿದ್ದಾರೆ. ಈ ಕಥೆಯನ್ನ ಆಧರಿಸಿಯೇ ಡೈರೆಕ್ಟರ್ ಗ್ಯಾರಿ ಬಿ.ಎಸ್. ಈ ಸಿನಿಮಾ ಮಾಡಿದ್ದಾರೆ.
ಕಾರ್ತಿಕೇಯ ಸಿನಿಮಾ ಖ್ಯಾತಯ ನಟ ನಿಖಿಲ್ ಸ್ಪೈ ಚಿತ್ರ
ನಿಖಿಲ್ ಸಿದ್ಧಾರ್ಥ್ ಜೊತೆಗೆ ಇಲ್ಲಿ ನಾಯಕಿಯಾಗಿ ಐಶ್ವರ್ಯ ಮೆನನ್ ನಟಿಸಿದ್ದಾರೆ. ಜೂನಿಯನ್ ಅಮರು ಸೂರಿಸೆಟ್ಟಿ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡಿದ್ದಾರೆ. ಶ್ರೀಚರಣ್ ಪಕಳ ಸಂಗೀತ ಕೊಟ್ಟಿದ್ದಾರೆ.
ಟಾಲಿವುಡ್‌ನಲ್ಲಿ ಸುಭಾಷ್ ಚಂದ್ರಬೋಸ್ ಸಿನಿಮಾ
ಬಹು ಭಾಷೆಯಲ್ಲಿ ಬರ್ತಿರೋ ಈ ಚಿತ್ರದಲ್ಲಿ ನಿಖಿಲ್ ಸಿದ್ದಾರ್ಥ್ ವಿಭಿನ್ನ ಗೆಟಪ್ ಅಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಜೂನ್-29 ರಂದು ಸಿನಿಮಾ ರಿಲೀಸ್ ಪ್ಲಾನ್ ಆಗಿದೆ. ಅದಕ್ಕೂ ಮೊದಲೇ ಚಿತ್ರದ ಟೀಸರ್ ಬಹು ಭಾಷೆಯಲ್ಲಿ ರಿಲೀಸ್ ಆಗಿದೆ.
ಇದನ್ನೂ ಓದಿ: Pooja Hegde: ಈ ಫೋಟೋದಲ್ಲಿರುವ ಮಗು ಈಗ ಯುವಕರ ಡ್ರೀಮ್ ಗರ್ಲ್! ಯಾರು ಹೇಳಿ?
ರಾಜ್‌ಪಥ್‌ನಲ್ಲಿ ಬಹು ಭಾಷೆ ಟೀಸರ್ ರಿಲೀಸ್
ತೆಲುಗು, ತಮಿಳು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿ ಬರ್ತಿರೋ ಈ ಚಿತ್ರದ ಟೀಸರ್ ಅನ್ನ ದೆಹಲಿಯ ರಾಜಪಥ್‌ನಲ್ಲಿ ಈಗಾಗಲೇ ರಿಲೀಸ್ ಮಾಡಲಾಗಿದೆ. ಸಿನಿಮಾ ತಂಡ ಈ ಇದರಲ್ಲಿ ಭಾಗಿಯಾಗಿ ಖುಷಿಪಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ