RSS Movie: ರಾಜಮೌಳಿ ತಂದೆ RSS ಚಿತ್ರ ಹೈಜಾಕ್ ಮಾಡ್ತಿದ್ದಾರಾ?

ರಾಜಮೌಳಿ ಒಪ್ಪಿದರೆ RSS ಚಿತ್ರಕ್ಕೆ ನಾಳೇನೆ ಮುಹೂರ್ತ!

ರಾಜಮೌಳಿ ಒಪ್ಪಿದರೆ RSS ಚಿತ್ರಕ್ಕೆ ನಾಳೇನೆ ಮುಹೂರ್ತ!

ನಮ್ಮ ಕಥೆಯನ್ನ ನಾವೇ ಸಿನಿಮಾ ಮಾಡುತ್ತೇವೆ. ಒಳ್ಳೆ ನಿರ್ದೇಶಕರ ಹುಡುಕಾಟದಲ್ಲಿ ಇದ್ದೇವೆ. ಒಂದು ವೇಳೆ ರಾಜಮೌಳಿ ನಮ್ಮ ಚಿತ್ರವನ್ನ ಡೈರೆಕ್ಟ್ ಮಾಡೋಕೆ ಒಪ್ಪಿದರೆ, ನಾಳೇನೆ ಚಿತ್ರದ ಮುಹೂರ್ತ ಮಾಡುತ್ತೇವೆ ಎಂದು ಲಹರಿ ವೇಲು, ನ್ಯೂಸ್​-18 ಕನ್ನಡ ಡಿಜಿಟಲ್​ಗೆ ವಿಶೇಷವಾಗಿ ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬಾಹುಬಲಿ ಡೈರೆಕ್ಟರ್ ರಾಜಮೌಳಿ ತಂದೆ (Movie On RSS) ವಿಜಯೇಂದ್ರ​ ಪ್ರಸಾದ್ ಒಂದು ಕಥೆ ಮಾಡಿಕೊಂಡಿದ್ದಾರೆ. ಈ ಕಥೆ RSS ಕುರಿತಾಗಿ ಇದೆ. ಇದನ್ನ ಓದಿ ಡೈರೆಕ್ಟರ್ ರಾಜಮೌಳಿ (Director S. S. Rajamouli) ತುಂಬಾ ಖುಷಿಪಟ್ಟಿದ್ದಾರೆ. RSS ಬಗ್ಗೆ ಈ ಕಥೆಯಲ್ಲಿ ಭಾವನಾತ್ಮಕ ಅಂಶಗಳೂ ಇವೆ. ಇದನ್ನ ಓದುತ್ತಲೇ (RSS CINEMA) ಹೋದ ಡೈರೆಕ್ಟರ್ ರಾಜಮೌಳಿ, ಕಣ್ಣೀರಾಗಿದ್ದಾರೆ. ಈ ಒಂದು ಕಥೆ ತುಂಬಾ ಚೆನ್ನಾಗಿದೆ. ನಮ್ಮ ತಂದೆ ಈ ಕಥೆಯನ್ನ ಬೇರೆ (Vijayendra Prasad) ನಿರ್ದೇಶಕರಿಗೋ ಇಲ್ಲವೇ ಬೇರೆ ನಿರ್ಮಾಪಕರಿಗೆ ಮಾಡಿರಬಹುದು. ಆದರೆ ನಾನು ಈ ಕಥೆಯನ್ನ ಮಾಡ್ತಿನೋ ಇಲ್ವೋ ಗೊತ್ತೇ ಇಲ್ಲ ಅಂತಲೂ ಈ ಹಿಂದೆ ಹೇಳಿಕೊಂಡಿದ್ದಾರೆ.


ಬಾಹುಬಲಿ ನಿರ್ದೇಶಕ ರಾಜಮೌಳಿ ತಮ್ಮ ತಂದೆ ವಿಜಯೇಂದ್ರ​​ ಪ್ರಸಾದ್ ಬರೆದ ಕಥೆಯನ್ನ ಕೇಳುತ್ತಲೇ ಬಂದಿದ್ದಾರೆ. ಅಪ್ಪ ಹೇಳಿರೋ ಕಥೆಯನ್ನ ಇಟ್ಟುಕೊಂಡೇ ಈಗ ಸಿನಿಮಾ ಮಾಡಿರೋದು ಇದೆ. ರಾಜಮೌಳಿ ಚಿತ್ರಕ್ಕೆ ವಿಜಯೇಂದ್ರ​ ಪ್ರಸಾದ್ ಅವರೇ ಕಥೆ ಮಾಡಿಕೊಂಡಿದ್ದಾರೆ.


Pan India RSS Movie Project got Controversy
ಒಳ್ಳೆ ಡೈರೆಕ್ಟರ್ ಸಿಕ್ಕರೇ RSS ಸಿನಿಮಾ ಗ್ಯಾರಂಟಿ ಶುರು


ಅಪ್ಪ ಬರೆದ ಭಾವನಾತ್ಮಕ ಕಥೆ ಓದಿ ಕಣ್ಣೀರಾಕಿದ ರಾಜಮೌಳಿ
ಹಾಗೆ ಅಪ್ಪ ಬರೆದ ಕಥೆಯನ್ನ ರಾಜಮೌಳಿ ಆಗಾಗ ಓದುತ್ತಲೂ ಇರುತ್ತಾರೆ. ಅದೇ ರೀತಿ ರಾಜಮೌಳಿ ಅವರು RSS ಕುರಿತು ಒಂದು ಕಥೆ ಮಾಡಿಕೊಂಡಿದ್ದಾರೆ. ಈ ಕಥೆಗೆ ಭಾವನಾತ್ಮಕ ಸ್ಪರ್ಶ ಕೂಡ ಇದೆ.




ಇದನ್ನ ಯಾರೇ ಓದಿದ್ರೂ ಹೃದಯಕ್ಕೆ ಟಚ್ ಆಗುತ್ತದೆ. ಅಂತಹ ಈ ಕಥೆಯನ್ನ ಓದಿದ ಬಾಹುಬಲಿ ಡೈರೆಕ್ಟರ್ ರಾಜಮೌಳಿ ಕಣ್ಣೀರಾಗಿದ್ದಾರೆ. ಹಾಗೇನೆ ಈ ಕಥೆಯನ್ನ ಅಪ್ಪ ಯಾರಿಗಾಗಿ ಮಾಡಿದ್ದಾರೋ ಯಾವ ನಿರ್ಮಾಪಕರಿಗಾಗಿ ಮಾಡಿದ್ದಾರೋ ಗೊತ್ತಿಲ್ಲ.


RSS ಕಥೆ ಓದಿ ಕಳೆದು ಹೋದ ಡೈರೆಕ್ಟರ್ ರಾಜಮೌಳಿ
ಈ ಒಂದು ಚಿತ್ರವನ್ನ ನಾನು ಡೈರೆಕ್ಟ್ ಮಾಡ್ತಿನೋ ಇಲ್ವೋ ಅದು ಗೊತ್ತಿಲ್ಲ. ಒಂದು ಕಥೆಯ ವಿಷಯದಲ್ಲಿ ಮೊದಲ ಬಾರಿಗೆ ನನಗೆ ಅಸ್ಪಷ್ಟತೆ ಇದೆ ಅಂತಲೂ ಹೇಳಿಕೊಂಡಿದ್ದಾರೆ.


ಆದರೆ ಅಸಲಿಗೆ ಈ ಕಥೆ ಯಾವ ಸಂಸ್ಥೆಗಾಗಿ ಮಾಡಿರೋದು ಗೊತ್ತೇ? ಹೌದು, ನಾಲ್ಕು ವರ್ಷದ ಹಿಂದೆ ಲಹರಿ ಸಂಸ್ಥೆ RSS ಚಿತ್ರವನ್ನ ಅನೌನ್ಸ್ ಮಾಡಿದೆ. ಎಲ್ಲ ಭಾಷೆಯಲ್ಲೂ ಇದೇ ಟೈಟಲ್ ರಿಜಿಸ್ಟರ್ ಕೂಡ ಆಗಿದೆ, ಹೀಗೆ ಲಹರಿ ಸಂಸ್ಥೆಯ ವೇಲು ಅವರು ಮಾತು ಶುರು ಮಾಡಿದರು.


RSS ಮೇಲೆ ಚಿತ್ರ ಮಾಡುವ ಐಡಿಯಾ ನನ್ನದೇ-ಲಹರಿ ವೇಲು
RSS ಮೇಲೆ ಒಂದು ಸಿನಿಮಾ ಮಾಡಬೇಕು ಅನ್ನೋ ಐಡಿಯಾ ನನಗೆ ಬಂದಿತ್ತು. ಅದನ್ನ ವಿಜಯೇಂದ್ರ​ ಪ್ರಸಾದ್ ಅವರಿಗೆ ಹೇಳಿ ಕಥೆ ಮಾಡಿಸಿದ್ದೇವೆ. ಹೆಚ್ಚು ಕಡಿಮೆ 14 ರಿಂದ 15 ಜನ ಈ ಒಂದು ಕಥೆ ಮೇಲೆ ಕೆಲಸ ಮಾಡಿದ್ದಾರೆ.


ಒಂದ್ ಒಳ್ಳೆ ಕಥೆ ಮೇಲೆ ಲಕ್ಷ ಲಕ್ಷ ದುಡ್ಡು ಕೂಡ ಖರ್ಚು ಮಾಡಿದ್ದು, ವಿಜಯೇಂದ್ರ ಪ್ರಸಾದ್ ಅವರು ಈ ಕಥೆಯನ್ನ ಮಾಡಿಕೊಟ್ಟಿದ್ದಾರೆ. ಆದರೆ ವಿಜಯೇಂದ್ರ ಪ್ರಸಾದ್ ಆಗಲಿ, ರಾಜಮೌಳಿ ಆಗಲಿ ಇವರಾರೂ ನಮ್ಮ ಬಗ್ಗೆ ಎಲ್ಲೂ ಹೇಳಲೇ ಇಲ್ಲ.


ರಾಜಮೌಳಿ ಒಪ್ಪಿದರೆ RSS ಚಿತ್ರಕ್ಕೆ ನಾಳೇನೆ ಮುಹೂರ್ತ!
ನಮ್ಮ ಸಂಸ್ಥೆ ಕುರಿತು ಎಲ್ಲೂ ಪ್ರಸ್ತಾಪಿಸಿಲ್ಲ ನೋಡಿ. ಇದು ನಿಜಕ್ಕೂ ಬೇಸರ ತಂದಿದೆ. RS ಕಥೆಯ ಐಡಿಯಾ ನಮ್ಮದೆ, ಇದಕ್ಕೆ ದುಡ್ಡು ಹಾಕಿರೋದು ನಾವೇನೆ. ಆದರೆ ಎಲ್ಲೂ ನಮ್ಮ ವಿಷಯವೇ ಬರ್ತಾಯಿಲ್ಲ ಅನ್ನೋದೇ ನೋವಿನ ಸಂಗತಿ ಆಗಿದೆ.


ನಮ್ಮ ಕಥೆಯನ್ನ ನಾವೇ ಸಿನಿಮಾ ಮಾಡುತ್ತೇವೆ. ಒಳ್ಳೆ ನಿರ್ದೇಶಕರ ಹುಡುಕಾಟದಲ್ಲಿ ಇದ್ದೇವೆ. ಒಂದು ವೇಳೆ ರಾಜಮೌಳಿ ನಮ್ಮ ಚಿತ್ರವನ್ನ ಡೈರೆಕ್ಟ್ ಮಾಡೋಕೆ ಒಪ್ಪಿದರೆ, ನಾಳೇನೆ ಚಿತ್ರದ ಮುಹೂರ್ತ ಮಾಡುತ್ತೇವೆ ಎಂದು ಲಹರಿ ವೇಲು, ನ್ಯೂಸ್​-18 ಕನ್ನಡ ಡಿಜಿಟಲ್​ಗೆ ವಿಶೇಷವಾಗಿ ತಿಳಿಸಿದ್ದಾರೆ.


ಒಳ್ಳೆ ಡೈರೆಕ್ಟರ್ ಸಿಕ್ಕರೇ RSS ಸಿನಿಮಾ ಗ್ಯಾರಂಟಿ ಶುರು
ಹಾಗೆ ತಮ್ಮ ಚಿತ್ರದ ಬಗ್ಗೆ ಹೇಳುವ ಲಹರಿ ವೇಲು ಅವರು RSS ಸಿನಿಮಾ ಮಾಡೋಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಒಳ್ಳೆ ನಿರ್ದೇಶಕರ ಹುಡುಕಾಟದಲ್ಲೂ ಇದ್ದಾರೆ.
ರಾಜಮೌಳಿ ಅವರು ಒಪ್ಪಿದರೆ ಚಿತ್ರವನ್ನ ಈ ಕೂಡಲೇ ಮಾಡೋಕೂ ರೆಡಿ ಇದ್ದಾರೆ. ಆದರೆ ರಾಜಮೌಳಿ ಅವರು ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸ್ಪೈ ಚಿತ್ರ ಮಾಡೋದರಲ್ಲಿ ಬ್ಯುಸಿ ಆಗಿದ್ದಾರೆ.


Pan India RSS Movie Project got Controversy
ರಾಜಮೌಳಿ ತಂದೆ ನಡೆಗೆ ಲಹರಿ ವೇಲು ಬೇಸರ


ರಾಜಮೌಳಿ ತಂದೆ ನಡೆಗೆ ಲಹರಿ ವೇಲು ಬೇಸರ
ಹಾಗಾಗಿಯೇ ಪ್ರ್ಯಾಕ್ಟಿಕಲಿ ಇದು ಸಾಧ್ಯವೇ ಅನ್ನುವ ಪ್ರಶ್ನೆ ಕೂಡ ಇದೆ. ಹಾಗಿರೋವಾಗ ಲಹರಿ ವೇಲು ಅವರು ತಮ್ಮ RSS ಕಥೆಯನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತೆರೆಗೆ ತರಬೇಕು ಅನ್ನುವ ಇರಾದೆಯಲ್ಲಿ ಇದ್ದರೂ, ರಾಜಮೌಳಿ ಅವರಾಗಲಿ, ಅವರ ತಂದೆಯವರಾಗಲಿ ಎಲ್ಲೂ ತಮ್ಮ ಸಂಸ್ಥೆ ಹೆಸರೂ ಹೇಳಲಿಲ್ಲ ಅಂತಲೇ ಬೇಸರದಲ್ಲೂ ಇದ್ದಾರೆ.


ಇದನ್ನೂ ಓದಿ: Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್-ನಭಾ ನಟೇಶ್ ಈಗ ಹೇಗಿದ್ದಾರೆ ನೋಡಿ


ಅದರ ಬೆನ್ನಲ್ಲಿಯೇ ನಮಗೆ ಈ ದಿಗ್ಗಜರ ಬಗ್ಗೆ ಗೌರವ ಇದೆ. ಆದರೆ RSS ಕುರಿತು ಯೋಚಿಸಿ ಕಥೆ ಮಾಡಿಸಿದ್ದು ನಾವೇ? ಆ ಸತ್ಯವನ್ನ ಎಲ್ಲರಿಗೂ ಹೇಳದೇ ಇದ್ದರೇ ಹೇಗೆ ಅನ್ನೋದೇ ಲಹರಿ ವೇಲು ಅವರ ಒಟ್ಟು ಮಾತಿನ ತಾತ್ಪರ್ಯ ಆಗಿದೆ.

First published: