• Home
  • »
  • News
  • »
  • entertainment
  • »
  • KGF Chapter 2 ಚಿತ್ರಕ್ಕೆ ಸಿಕ್ತು ಕೋಟಿ ಕೋಟಿ ಆಫರ್​: ಒಟಿಟಿಯಲ್ಲಿ ರಿಲೀಸ್​ ಆಗಲಿದೆಯಾ ಈ ಸಿನಿಮಾ..?

KGF Chapter 2 ಚಿತ್ರಕ್ಕೆ ಸಿಕ್ತು ಕೋಟಿ ಕೋಟಿ ಆಫರ್​: ಒಟಿಟಿಯಲ್ಲಿ ರಿಲೀಸ್​ ಆಗಲಿದೆಯಾ ಈ ಸಿನಿಮಾ..?

​ ಕೆಜಿಎಫ್​ ಚಾಪ್ಟರ್ 2 ಸಿನಿಮಾ-ಯಶ್ ಹಾಗೂ ಪ್ರಶಾಂತ್​ ನೀಲ್

​ ಕೆಜಿಎಫ್​ ಚಾಪ್ಟರ್ 2 ಸಿನಿಮಾ-ಯಶ್ ಹಾಗೂ ಪ್ರಶಾಂತ್​ ನೀಲ್

ಈಗ ಒಟಿಟಿ ವೇದಿಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹಿಂದೆ ಬಿದ್ದಿದೆಯಂತೆ. ಈಗಾಗಲೇ ಚಿತ್ರತಂಡದೊಂದಿಗೆ ಮಾತುಕತೆ ನಡೆಸಿದ್ದು, ಒಟಿಟಿ ವೇದಿಕೆ ಮೂಲಕ ಸಿನಿಮಾವನ್ನು ರಿಲೀಸ್​ ಮಾಡಲು ಆಫರ್​ ಸಹ ಕೊಟ್ಟಿದೆಯಂತೆ. ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ 255 ಕೋಟಿ ಆಫರ್ ಸಿಕ್ಕಿದೆಯಂತೆ.

ಮುಂದೆ ಓದಿ ...
  • Share this:

ಕೊರೋನಾ ಮೊದಲ ಅಲೆ ಆರಂಭವಾದಾಗ ಮಾಡಿದ್ದ ಲಾಕ್​ಡೌನ್​ನಿಂದಾಗಿ ಚಿತ್ರಮಂದಿರಗಳಯ ಬಾಗಿಲು ಮುಚ್ಚಿದ್ದವು. ಆಗಲೇ ಮನರಂಜನೆಗಾಗಿ ಜನರು ಒಟಿಟಿ ವೇದಿಕೆಗಳ ಮೊರೆ ಹೋದರು. ಆಗೊಂದು ಈಗೊಂದು ಸಿನಿಮಾಗಳನ್ನು ಖರೀದಿಸುತ್ತಿದ್ದ ಆ್ಯಪ್​ಗಳು ನಂತರದಲ್ಲಿ ಸಾಲು ಸಾಲು ಹೊಸ ಸಿನಿಮಾಗಳನ್ನು ಖರೀದಿಸಿ ರಿಲೀಸ್​ ಮಾಡಲು ಆರಂಭಿಸಿದ್ದರು. ಇನ್ನು ಕಡಿಮೆ ಬೆಲೆ ಹಾಗೂ ಕೊರೋನಾ ಆತಂಕವಿಲ್ಲದೆ ಮನೆಯಲ್ಲೇ ಸಿನಿಮಾ ನೋಡಲು ಸಿನಿಪ್ರಿಯರಲ್ಲಿ ಬಹುತೇಕರು ಖುಷಿ ಪಡಲಾರಂಭಿಸಿದ್ದರು. ಅಲ್ಲಿಂದ ಒಟಿಟಿ ಸಿಕ್ಕಾಪಟ್ಟೆ ಸ್ಟ್ರಾಂಗ್​ ಆಯಿತು. ಇನ್ನು ನಟ ಸಲ್ಮಾನ್​ ಖಾನ್​ ಅವರೇ ತಮ್ಮ ರಾಧೆ: ಮೋಸ್ಟ್​ ವಾಂಟೆಡ್​ ಭಾಯ್​ ಚಿತ್ರವನ್ನೂ ಒಟಿಟಿ ಮೂಲಕ ರಿಲೀಸ್ ಮಾಡಿದ್ದರು. ಸಿನಿಮಾ ಅಂದುಕೊಂಡಷ್ಟು ಸದ್ದು ಮಾಡಲಿಲ್ಲವಾದರೂ, ಅದು ಬೇರೆ ಮಾತು. ಆದರೆ ಸ್ಟಾರ್ ನಟರ ಸಿನಿಮಾಗಳು ನೇರವಾಗಿ ಒಟಿಟಿ ಮೂಲಕ ಸಿನಿಪ್ರಿಯರ ಕೈ ಬೆರಳ ತುದಿ ಬಂದು ನಿಂತವು. ಇದರಿಂದಾಗಿಯೇ ಒಟಿಟಿ ವೇದಿಕೆ ಈಗ ಸ್ಟಾರ್ ನಟರ ಸಿನಿಮಾಗಳಿಗೆ ಕೋಟಿ ಕೋಟಿ ಆಫರ್ ನೀಡಲು ಮುಂದಾಗುತ್ತಿವೆ. ಅದರಲ್ಲೂ ಇಡೀ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇದೆ.


ಇನ್ನು ಕೊರೋನಾ ಎರಡನೇ ಅಲೆಯಿಂದಾಗಿ ಮತ್ತೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಇದರಿಂದಾಗಿ ಸಿನಿರಂಗ ಹಾಗೂ ಚಿತ್ರಮಂದಿರಗಳನ್ನು ನಂಬಿಕೊಂಡಿದ್ದವರು ಮತ್ತೆ ಸಂಕಷ್ಟಕ್ಕೆ ಸಿಲಿಕಿದ್ದರು. ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ  ಚಿತ್ರಮಂದಿರಗಳನ್ನು ಮತ್ತೆ ತೆರೆಯಲಾಗಿದೆ. ಆದರೆ, ಶೇ. 50ರಷ್ಟು ಆಸನ ಭರ್ತಿಗೆ ಅನುಮತಿ ನೀಡಲಾಗಿದೆ. ಈ ಕಾರಣದಿಂದಲೇ ದೊಡ್ಡ ಬಜೆಟ್ ಹಾಗೂ ಸ್ಟಾರ್​ ನಟರ ಸಿನಿಮಾಗಳು ರಿಲೀಸ್ ದಿನಾಂಕ ಪ್ರಕಟಿಸದೆ ಆಲೋಚನೆಯಲ್ಲಿ ಮುಳುಗಿವೆ, ಇದಕ್ಕೆ ಕನ್ನಡದ ಸಿನಿಮಾ ಕೆಜಿಎಫ್​ ಚಾಪ್ಟರ್​ 2 ಸಹ ಹೊರತಾಗಿಲ್ಲ.ಈಗ ಒಟಿಟಿ ವೇದಿಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹಿಂದೆ ಬಿದ್ದಿದೆಯಂತೆ. ಈಗಾಗಲೇ ಚಿತ್ರತಂಡದೊಂದಿಗೆ ಮಾತುಕತೆ ನಡೆಸಿದ್ದು, ಒಟಿಟಿ ವೇದಿಕೆ ಮೂಲಕ ಸಿನಿಮಾವನ್ನು ರಿಲೀಸ್​ ಮಾಡಲು ಆಫರ್​ ಸಹ ಕೊಟ್ಟಿದೆಯಂತೆ. ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ 255 ಕೋಟಿ ಆಫರ್ ಸಿಕ್ಕಿದೆಯಂತೆ.


ಇದನ್ನೂ ಓದಿ: Nishvika: ತಮ್ಮ ಲೆಟೆಸ್ಟ್​ ಫೋಟೋಗಳ ಜತೆ ಪುಟ್ಟದಾದ ಕತೆ ಹೇಳಿದ ನಟಿ ನಿಶ್ವಿಕಾ..!


ಇನ್ನು ಈಗಾಗಲೇ ಬಾಲಿವುಡ್​ನಲ್ಲಿ ಓಡುವ ಕುದುರೆ ಅಕ್ಷಯ್​ ಕುಮಾರ್ ಅವರ ಸಿನಿಮಾಗಳು ಒಟಿಟಿ ಮೂಲಕ ರಿಲೀಸ್ ಆಗಿದ್ದು, ಮತ್ತಷ್ಟು ಬಿಡುಗಡೆ ಹಂತದಲ್ಲಿವೆ. ಹೀಗಾಗಿಯೇ ಕನ್ನಡದವರು ನಿರ್ಮಿಸಿರುವ ಪ್ಯಾನ್​ ಇಂಡಿಯಾ ಸಿನಿಮಾ ಕೆಜಿಎಫ್​ ಚಾಪ್ಟರ್ 2 ಅನ್ನು ಸಹ ಒಟಿಟಿ ಪ್ರೇಕ್ಷಕರಿಗೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಸಿನಿಪ್ರಿಯರು ಮಾತ್ರ ಒಟಿಟಿಯಲ್ಲಿ ರಿಲೀಸ್ ಮಾಡಬೇಡಿ ಎನ್ನುತ್ತಿದ್ದಾರೆ.ಇನ್ನು ಒಟಿಟಿ ವೇದಿಕೆಯಲ್ಲಿ ಕೆಜಿಎಫ್ 2 ಸಿನಿಮಾ ನೋಡಲು ತುಂಬಾ ಜನರು ಕಾತರರಾಗಿದ್ದಾರೆ. ಆದರೆ, ಯಶ್​ ಅಭಿಮಾನಿಗಳು ಮಾತ್ರ ಒಟಿಟಿಗೆ ಕೊಡುವುದು ಬೇಡ ಎನ್ನುತ್ತಿದ್ದಾರಂತೆ. ಇನ್ನು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಐದೂ ಭಾಷೆಗಳಲ್ಲಿ ತೆರೆ ಕಂಡರೆ ಗಳಿಸುವ ಗಳಿಕೆ 250 ಕೋಟಿಗೂ ಹೆಚ್ಚಾಗುತ್ತದೆಯಂತೆ. ಹೀಗಾಗಿ ಚಿತ್ರತಂಡ ಒಟಿಟಿ ಆಫರ್​ ಒಪ್ಪಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಇದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: Amrutha Ramamoorthy: ಅದ್ಧೂರಿಯಾಗಿ ನಡೆಯಿತು ನಟಿ ಅಮೃತಾರ ಸೀಮಂತ ಕಾರ್ಯಕ್ರಮ: ಇಲ್ಲಿವೆ ಫೋಟೋಗಳು..!


ಎಲ್ಲ ಸರಿ ಇದ್ದರೆ ಈಗಾಗಲೇ ಸಿನಿಮಾ ರಿಲೀಸ್ ಆಗಿ ಹೊಸ ದಾಖಲೆ ಬರೆಯುತ್ತಿತ್ತೇನೋ. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಕಳೆದ ಜುಲೈನಲ್ಲಿ ಸಿನಿಮಾ ರಿಲೀಸ್​ಗೆ ದಿನಾಂಕ ಫಿಕ್ಸ್​ ಮಾಡಲಾಗಿತ್ತು. ಆದರೆ ಅದೂ ಸಹ ಈಗ ಮುಂದೂಲಾಗಿದೆ. ಆದರೆ ಚಿತ್ರತಂಡ ಇನ್ನೂ ಹೊಸ ದಿನಾಂಕ ಪ್ರಕಟಿಸಿಲ್ಲ.

Published by:Anitha E
First published: