ಟಾಲಿವುಡ್‌ನ ನಾಯಕ ನಟ ಡಾರ್ಲಿಂಗ್ ಪ್ರಭಾಸ್ (Adipurush Movie Updates) ಮತ್ತು ಬಾಲಿವುಡ್‌ನ ನಟಿ ಕೃತಿ ಸನೋನ್ ಅಭಿನಯದ ಆದಿಪುರುಷ ಸಿನಿಮಾದ ಹೊಸ ಅಪ್‌ಡೇಟ್ಸ್ ಹೊರ ಬಿದ್ದಿದೆ. ಸಿನಿಮಾದ ನಿರೀಕ್ಷೆಯಲ್ಲಿರೋ (Lyrical Motion Poster Release) ಪ್ರೇಕ್ಷಕರಿಗೆ ಸಿನಿಮಾ ತಂಡ ಈಗೊಂದು ಹೊಸ ನ್ಯೂಸ್ ಕೊಟ್ಟಿದೆ. ಚಿತ್ರದ ಮೊದಲ ಪೋಸ್ಟರ್ ಬಂದು ಭಾರೀ ವಿವಾದವನ್ನೆ ಮೈ ಮೇಲೆ ಎಳೆದುಕೊಂಡಿತ್ತು. ಅದರಿಂದ ಅತಿ (Pan India Adipurush Movie) ಹೆಚ್ಚು ಪ್ರಚಾರವನ್ನೂ ಪಡೆದ ಆದಿಪುರುಷ ಚಿತ್ರ, ಇದೀಗ ಬೇರೆ ರೀತಿಯಲ್ಲಿ ಗಮನ ಸೆಳೆಯುತ್ತಿದೆ. ಸಿನಿಮಾ ಪ್ರೇಮಿಗಳಿಗೆ ಇಷ್ಟ ಆಗೋ ರೀತಿಯಲ್ಲಿ ಈಗೊಂದು ಲಿರಿಕಲ್ ಪೋಸ್ಟರ್ ಹೊರ ಬಂದಿದೆ. ರಾಮನ ಭಕ್ತರಿಗಂತೂ ಈ ಗೀತೆ ಬಹುವಾಗಿಯೆ ಇಷ್ಟವಾಗೋ ರೀತಿಯಲ್ಲಿದೆ. ಆದಿಪುರುಷ ಚಿತ್ರ ಪೋಸ್ಟರ್ ಇಲೀಸ್ ಆಗಿದೆ.
ಹೌದು, ಆದಿಪುರುಷ ಸಿನಿಮಾದ ಸದ್ದು ಗದ್ದಲ ಗೊತ್ತೇ ಇದೆ. ರಾವಣ ಪಾತ್ರ, ರಾಮನ ಪಾತ್ರ, ಆಂಜನೇಯನ ಪಾತ್ರಗಳನ್ನ ಸೃಷ್ಟಿಸುವಲ್ಲಿ ಸಿನಿಮಾ ಡೈರೆಕ್ಟರ್ ಸೋತು ಹೋಗಿದ್ದರು. ಸಿನಿಮಾ ಪ್ರೇಮಿಗಳು ಸೇರಿದಂತೆ ಸ್ವತಃ ಡಾರ್ಲಿಂಗ್ ಪ್ರಭಾಸ್ ಕೂಡ ಬೇಸರ ವ್ಯಕ್ತಪಡಿಸಿದ್ದರು.
ಬಹುಕೋಟಿ ಆದಿಪುರುಷನಿಗೆ ಹೊಸ ಸ್ಪರ್ಶ-ಲಿರಿಕಲ್ ವಿಡಿಯೋ ಸೂಪರ್
ಆದರೆ ಇದೀಗ ಸ್ವತಃ ಡಾರ್ಲಿಂಗ್ ಪ್ರಭಾಸ್ ಕೂಡ ಇಷ್ಟಪಡೋ ರೀತಿಯ ಒಂದು ಪೋಸ್ಟರ್ ಹೊರ ಬಿದ್ದಿದೆ. ಅದಕ್ಕೆ ಸೂಕ್ತ ಅನಿಸೋ ಒಂದು ಗೀತೆ ಕೂಡ ಇದೆ. ನಿಜ, ಆದಿಪುರುಷ ಚಿತ್ರದ ಲಿರಿಕಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ವೀರಾವೇಷದಿಂದಲೇ ಆದಿಪುರುಷನಾಗಿ ಡಾರ್ಲಿಂಗ್ ಪ್ರಭಾಸ್ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರದಲ್ಲಿ 7 ಸಾವಿರ ವರ್ಷದ ಹಿಂದಿನ ಕಥೆ ಇದೆ. ಹೌದು, ವಾಲ್ಮೀಕಿ ಬರೆದ ರಾಮಾಯಣವನ್ನೆ ಇಲ್ಲಿ ಡೈರೆಕ್ಟರ್ ಓಂ ರಾವತ್ ಸಿನಿಮಾ ಮಾಡಿದ್ದಾರೆ. ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಿದಾಗ ಒಳ್ಳೆ ಅಭಿಪ್ರಾಯ ಏನೂ ಬಂದಿರಲಿಲ್ಲ. ಆದರೆ ಇದೀಗ ಹೊರ ಬಂದ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹೆಚ್ಚು ಗಮನಸೆಳೆದಿದೆ.
ಆದಿಪುರುಷನ ಅದ್ಭುತ ಲಿರಿಕಲ್ ಮೋಷನ್ ಪೋಸ್ಟರ್
ಸೈರಾಟ್ ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕರಾದ ಅಜಯ್-ಅತುಲ್ ಸಂಗೀತದಲ್ಲಿ ಈ ಹಾಡು ಮೂಡಿ ಬಂದಿದೆ. ರಾಮನ ಗುಣಗಾನ ಮಾಡೋ ಈ ಗೀತೆಯನ್ನ ಮನೋಜ್ ಮುಂತಶೀರ್ ಶುಕ್ಲಾ ಬರೆದಿದ್ದಾರೆ. ರಾಮನ ಭಕ್ತರಿಗೆ ಈ ಗೀತೆ ತುಂಬಾ ಇಷ್ಟ ಆಗೋ ರೀತಿಯಲ್ಲಿ ಇದೆ.
ಆದಿಪುರುಷ ಸಿನಿಮಾ ಬಹು ಕೋಟಿ ಸಿನಿಮಾ ಆಗಿದೆ. ಬಹು ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಸಿನಿಮಾ ರಿಲೀಸ್ ಆಗುತ್ತಿದೆ. 550 ಕೊಟಿ ಬಜೆಟ್‌ನ ಈ ಚಿತ್ರವನ್ನ ಟಿ. ಸಿರೀಸ್ ಸಂಸ್ಥೆ ನಿರ್ಮಿಸುತ್ತಿದೆ.
ಬಹು ಕೋಟಿ ಆದಿಪುರುಷ ಜೂನ್-16 ರಂದು ರಿಲೀಸ್
ಇದೇ ವರ್ಷ ಜೂನ್-16 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದಕ್ಕೂ ಮೊದಲೇ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಚಿತ್ರವನ್ನ ಜೂನ್-13 ರಂದು ಪ್ರಿಮಿಯರ್ ಕೂಡ ಮಾಡಲಾಗುತ್ತಿದೆ. ಇನ್ನು ಚಿತ್ರದ ಸ್ಟಾರ್ ಕಾಸ್ಟ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.
ಅದನ್ನ ಇಲ್ಲಿ ಮತ್ತೊಮ್ಮೆ ರಿಕಾಲ್ ಮಾಡಿಕೊಳ್ಳುವದಾದ್ರೆ, ರಾಮನ ಪಾತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಅಭಿನಯಿಸುತ್ತಿದ್ದಾರೆ. ಸೀತೆಯ ರೋಲ್‌ನಲ್ಲಿ ಕೃತಿ ಸನೋನ್ ನಟಿಸಿದ್ದಾರೆ.
ಇದನ್ನೂ ಓದಿ: Meghana Goanker: ಖಡಕ್ ಪೊಲೀಸ್ ಪಾತ್ರದಲ್ಲಿ ಮೇಘನಾ ಗಾಂವ್ಕರ್
ಸೈಫ್ ಅಲಿ ಖಾನ್ ಇಲ್ಲಿ ರಾವಣನ ರೋಲ್ ಮಾಡಿದ್ದಾರೆ. ದೇವದತ್ತ ನಾಗೆ ಆಂಜನೇಯನ ರೋಲ್ ಮಾಡಿದ್ದಾರೆ. ಇವರೆಲ್ಲರ ಈ ಚಿತ್ರ ಬಹು ಕೋಟಿಯ ಬಹು ನಿರೀಕ್ಷಿತ ಸಿನಿಮಾನೇ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ