Pamela Anderson: 5ನೇ ಪತಿಗೂ ವಿಚ್ಛೇದನ ನೀಡಿದ Hollywood ಹಾಟ್‌ ನಟಿ ಪಮೇಲಾ ಆ್ಯಂಡರ್ಸನ್‌!

ಈಗಾಗಲೇ ನಾಲ್ಕು ಪತಿಯರಿಗೆ ಸೋಡಾ ಚೀಟಿ ನೀಡಿದ್ದ ಹಾಲಿವುಡ್‌ ನಟಿ ಪಮೇಲಾ ಆ್ಯಂಡರ್ಸನ್‌ ಈಗ ಐದನೇ ಪತಿಯಿಂದ ಬೇರೆಯಾಗಲು ವಿಚ್ಛೇದನ ಸಲ್ಲಿಸಿದ್ದಾರೆ

Pamela Anderson

Pamela Anderson

  • Share this:
ಹಾಲಿವುಡ್(Hollywood) ಚಿತ್ರಗಳನ್ನು ನೋಡಿದವರಿಗೆ ನಟಿ ಪಮೇಲಾ ಆ್ಯಂಡರ್ಸನ್‌ (Pamela Anderson) ಬಗ್ಗೆ ಗೊತ್ತಿರುತ್ತದೆ. ಆಕೆ ತನ್ನ ಚಲನಚಿತ್ರಗಳಿಂದಷ್ಟೇ ಅಲ್ಲದೆ ಇತರೆ ಕಾರಣಗಳಿಗೂ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಪಮೇಲಾ ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿರುವುದು. ಸೆಲೆಬ್ರಿಟಿಗಳ(Celebrity) ವಿಚ್ಛೇದನ, ಬ್ರೇಕಪ್‌ ಇದೆಲ್ಲ ಸಾಮಾನ್ಯವಾಗಿಬಿಟ್ಟಿದೆ ಅಂತೀರಾ..? ಆದರೂ, ಇದರಲ್ಲೊಂದು ವಿಶೇಷತೆ ಇದೆ. ಅದು ಏನಂದರೆ, ಆಕೆ ಬೇರೆಯಾಗುತ್ತಿರುವುದು (Separated) ಇದೇ ಮೊದಲನೇ ಬಾರಿಯಲ್ಲ. ಬದಲಾಗಿ.. ಐದನೇ ಬಾರಿ.

ಬಾಡಿಗಾರ್ಡ್‌ ವರಿಸಿದ ನಟಿ
ಹೌದು, ಈಗಾಗಲೇ ನಾಲ್ಕು ಪತಿಯರಿಗೆ ಸೋಡಾ ಚೀಟಿ ನೀಡಿದ್ದ ಹಾಲಿವುಡ್‌ ನಟಿ ಪಮೇಲಾ ಆ್ಯಂಡರ್ಸನ್‌ ಈಗ ಐದನೇ ಪತಿಯಿಂದ ಬೇರೆಯಾಗಲು ವಿಚ್ಛೇದನ ಸಲ್ಲಿಸಿದ್ದಾರೆ. 2020 ರಲ್ಲಿ ಕ್ರಿಸ್‌ಮಸ್ ಈವ್‌ ವೇಳೆಯಷ್ಟೇ ನಟಿ ತನ್ನ ಬಾಡಿಗಾರ್ಡ್‌ ಹಾಗೂ ಕಾಂಟ್ರ್ಯಾಕ್ಟರ್‌ ಆಗಿದ್ದ ಡ್ಯಾನ್ ಹೇಹರ್ಸ್ಟ್‌ನನ್ನು ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಈಗ ವರ್ಷ ತುಂಬಿ ಕೆಲ ದಿನಗಳಾಗುತ್ತಿದ್ದಂತೆ ಮತ್ತೆ ಆತನಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಪಮೇಲಾ. ಮದುವೆಯಾದ ಬಳಿಕ ಬೇವಾಚ್‌ ಖ್ಯಾತಿಯ ಪಮೇಲಾ ಆ್ಯಂಡರ್ಸನ್‌ ಕೆನಡಾದಲ್ಲಿ ವಾಸಿಸುತ್ತಿದ್ದರು.

ವಿಚ್ಛೇದನಕ್ಕೆ ಕಾರಣ..?
ಈ ವಿಚ್ಛೇದನದ ಸುದ್ದಿಯನ್ನು ಮೊದಲು ಬ್ರೇಕ್‌ ಮಾಡಿದ ರೋಲಿಂಗ್‌ ಸ್ಟೋನ್‌ ‘’ಪಮೇಲಾ ಅವರು ಅಧಿಕೃತವಾಗಿ ಜೀವಿಸುವ ಹಾಗೇ ಪ್ರೀತಿಸುತ್ತಾರೆ’’ ಎಂದು ಹೇಳಿದ್ದು, ಮೂಲವನ್ನು ಉಲ್ಲೇಖಿಸಿ ಅವರ ಮದುವೆ ಮತ್ತೆ ಮುರಿದುಬಿದ್ದ ಸುದ್ದಿಯನ್ನು ವರದಿ ಮಾಡಿದೆ. ಮತ್ತು ಪೇಜ್‌ ಸಿಕ್ಸ್ ಸಹ ಈ ಸುದ್ದಿಯನ್ನು ದೃಢಪಡಿಸಿದ್ದು ಮತ್ತು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅವರಿಬ್ಬರ ಸಂಬಂಧಗಳು ಕೆಟ್ಟದ್ದಕ್ಕೆ ತಿರುವು ಪಡೆದುಕೊಂಡವು ಎಂದು ವಿಚ್ಛೇದನವಾಗುತ್ತಿರುವ ಸುದ್ದಿಯನ್ನು ವರದಿ ಮಾಡಿ ಮೂಲವನ್ನು ಉಲ್ಲೇಖಿಸಿದೆ.

ಇದನ್ನೂ ಓದಿ: 21 ವರ್ಷಗಳಿಂದ ಪ್ರತ್ಯೇಕವಾಗಿರುವ ಗಂಡ-ಹೆಂಡತಿ Divorceಗೆ ಅರ್ಹರು ಎಂದ High Court

ಡ್ಯಾನ್ ಹೇಹರ್ಸ್ಟ್‌ ನಿರ್ದಯರಾಗಿದ್ದರು ಮತ್ತು ಸಪೋರ್ಟೀವ್‌ ಆಗಿರಲಿಲ್ಲ. ನೀವು ಪ್ರತಿ ಸೆಕೆಂಡುಗಳ ಕಾಲ ಯಾರೊಂದಿಗಾದರೂ 2 ವರ್ಷಗಳನ್ನು ಕಳೆದ ನಂತರ, ನೀವು ಅವರನ್ನು ಚೆನ್ನಾಗಿ ತಿಳಿದುಕೊಳ್ಳುತ್ತೀರಿ. ಅದೇ ರೀತಿ, ಅವರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಂಡರು, ಮತ್ತು ಹಾಗೆ ಮಾಡುವುದರಿಂದ, ಡ್ಯಾನ್ ವಾಸ್ತವವಾಗಿ ತನ್ನೊಂದಿಗೆ ಜೀವಿಸಲು ಅರ್ಹರಲ್ಲ ಎಂದು ಪಮೇಲಾ ಅರಿತುಕೊಂಡರು, ಎಂದು ಮೂಲವು ಹೇಳಿದೆ.

ಈ ಸಮಯದಲ್ಲಿ ಅವರ ನಡುವೆ ವಿಷಯಗಳು ಸೌಹಾರ್ದಯುತವಾಗಿಲ್ಲ, ಏಕೆಂದರೆ ಅವರಿಬ್ಬರ ನಡುವೆ ಏನೂ ಇಲ್ಲ ಎಂದು ಅವರು ನಿರ್ಧರಿಸಿದರು. ಸಾಮಾನ್ಯವಾಗಿ, ಪಮೇಲಾ ತನ್ನನ್ನು ನೋಡಿಕೊಳ್ಳಬೇಕೆಂದು ಭಾವಿಸಿದ ರೀತಿಯಲ್ಲಿ ಡ್ಯಾನ್‌ ಆಕೆಯನ್ನು ನಡೆಸಿಕೊಳ್ಳಲಿಲ್ಲ’’ ಎಂದೂ  ವರದಿಯಾಗಿದೆ.

ಪಮೇಲಾ ಮಾಜಿ ಪತಿಯರ ವಿವರ ಇಲ್ಲಿದೆ..
ಹಾಲಿವುಡ್‌ ನಟಿ ಪಮೇಲಾ ಆ್ಯಂಡರ್ಸನ್‌ ಅವರ ಮೊದಲ ಪತಿ ಮೋಟ್ಲಿ ಕ್ರೂ ಡ್ರಮ್ಮರ್ ಟಾಮಿ ಲೀ. ಅವರು 1995ರಲ್ಲಿ ವಿವಾಹವಾಗಿದ್ದು, 1998 ರವರೆಗೆ ಒಟ್ಟಿಗೆ ಬಾಳ್ವೆ ನಡೆಸಿದ್ದರು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ನಂತರ ಪಮೇಲಾ 2006 ರಿಂದ 2007 ರವರೆಗೆ ಕಿಡ್ ರಾಕ್ ಜತೆ ಎರಡನೇ ಮದುವೆಯಾಗಿದ್ದರು. ಬಳಿಕ, ಆಕೆ ಎರಡು ಬಾರಿ ರಿಕ್ ಸಾಲೋಮನ್ ಅವರನ್ನು ವಿವಾಹವಾದರು, ಮತ್ತು 2007 ರಿಂದ 2008 ರವರೆಗೆ ಒಟ್ಟಿಗಿದ್ದರು. ನಂತರ 2014 ರಿಂದ 2015 ರವರೆಗೆ 12 ದಿನಗಳ ಕಾಲ ಜಾನ್ ಪೀಟರ್ಸ್ ಜತೆಗಿದ್ದರು. ಬಳಿಕ ಈ ವಿವಾಹವೂ ಮುರಿದುಬಿದ್ದಿತ್ತು.

ಇದನ್ನೂ ಓದಿ: Divorce:12 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರಂತೆ ಮಹಾಭಾರತ ಖ್ಯಾತಿಯ Nitish Bharadwaj..!

ವೆಬ್‌ ಸೀರೀಸ್‌ನಲ್ಲಿ ಪಮೇಲಾ ಲವ್‌ ಲೈಫ್‌..!
ನಟಿ ಪಮೇಲಾ ಆ್ಯಂಡರ್ಸನ್‌ ಮತ್ತು ಟಾಮಿ ಲೀ ಅವರ ಪ್ರಯಾಸಕರ ಪ್ರಣಯವು ಮುಂಬರುವ ವೆಬ್‌ ಸೀರಿಸ್‌ ಪಾಮ್ ಮತ್ತು ಟಾಮಿ ಎಂಬ ಹೆಸರಲ್ಲಿ ಪ್ರಸಾರವಾಗಲಿದೆ. ಇದರಲ್ಲಿ ಲಿಲಿ ಜೇಮ್ಸ್ ಮತ್ತು ಸೆಬಾಸ್ಟಿಯನ್ ಸ್ಟಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿ ಭಾರತದ ವೀಕ್ಷಕರಿಗೂ ಲಭ್ಯವಿದ್ದು, ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.
Published by:vanithasanjevani vanithasanjevani
First published: