ನಟಿ ಪಮೇಲಾ ಆ್ಯಂಡ್ರೆಸನ್ ಇತ್ತೀಚೆಗೆ ಸಖತ್ ಟ್ರೆಂಡಿಂಗ್ನಲ್ಲಿದ್ದರು. ಆಂಡರ್ಸನ್ ಯಾರಿಗೆ ತಾನೇ ಗೊತ್ತಿಲ್ಲ? ಈ ಚೆಲುವೆಯ ಬದುಕು ವಿಚಿತ್ರ ಮತ್ತು ವರ್ಣರಂಜಿತ. ಒಂದಾದ ಮೇಲೊಂದರಂತೆ ಐದಾರು ಮದುವೆ, ನೋವಿನಿಂದ ಕೂಡಿದ ವಿಚ್ಛೇದನಗಳು, ಮುಕ್ತ ಲೈಂಗಿಕತೆ, ಹತ್ತಾರು ಬಾಯ್ ಫ್ರೆಂಡ್ಗಳು, ಮೈ ಮರೆಸುವ ಶೋಗಳು ಮತ್ತು ಸಂಗೀತ ಹೀಗೆ ಇಂತಹ ವರ್ಣರಂಚಿತ ಬದುಕು ಕಟ್ಟಿಕೊಂಡಿರುವ ಪಮೇಲಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಪಮೇಲಾ ಬೇವಾಚ್ ಎಂಬ ಟಿವಿ ಶೋ ಮೂಲಕ ಪ್ರಸಿದ್ಧರಾದವರು. ಮುಕ್ತ ಲೈಂಗಿಕತೆಯ ಜೀವನವನ್ನು ಜೀವಿಸುವ ಈಕೆಯ ವಯಸ್ಸು ಕೇಳಿದರೆ ನಿಮಗೆ ನಂಬೋಕೆ ಕಷ್ಟ. ಹೌದು, 53 ವರ್ಷದ ಪಮೇಲಾ ಅಮೆರಿಕದ ಮುಕ್ತ ಲೈಂಗಿಕತೆಯ ಪ್ರತಿನಿಧಿಯೇ ಆಗಿದ್ದಾರೆ ಎನ್ನಬಹುದು. ಒಂದಲ್ಲ ಎರಡಲ್ಲ 6 ಸಲ ಮದುವೆಯಾಗಿದ್ದಾರೆ. ಐದು ಮಂದಿಗೆ ವಿಚ್ಛೇದನ ನೀಡಿರುವ ಪಮೇಲಾ ಈಗ 6ನೇ ಮದುವೆಯಾಗಿದ್ದಾರೆ.
ಅಮೆರಿಕದಂತಹ ಸಂಸ್ಕೃತಿಯಲ್ಲಿ ಹೀಗೆ ಮದುವೆ ಆಗುವುದು ಹಾಗೂ ಡೈವೋರ್ಸ್ ನೀಡುವುದು ಸರ್ವೇಸಾಮಾನ್ಯ. ಟಿವಿ ನಟಿಯರಿಗೆ ಇದೊಂದು ಸಾಮಾನ್ಯ ಸಂಗತಿ. ಆದರೆ ವಿಷಯ ಅದಲ್ಲ. ಇದೀಗ ಪಮೇಲಾ ತನ್ನ ಆರನೇ ಗಂಡನೊಂದಿಗೆ ಮತ್ತೊಮ್ಮೆ ಟ್ವಿಟ್ಟರ್ನಲ್ಲಿ ಸದ್ದು ಮಾಡುತ್ತಿದ್ದಾರೆ.
ಕಳೆದ ವರ್ಷದ ಕ್ರಿಸ್ಮಸ್ ಹಬ್ಬದಂದು ಪಮೇಲಾ ತನ್ನ ಬಾಡಿಗಾರ್ಡ್ ಆದ ಡ್ಯಾನ್ ಹೇಹರ್ಸ್ಟ್ ಅವರನ್ನು ಮದುವೆ ಆಗಿದ್ದರು. ಕೋವಿಡ್ ಕಾರಣದಿಂದ ಸರಳವಾಗಿ ಈ ಮದುವೆ ಸಮಾರಂಭ ನಡೆದಿತ್ತು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆವತ್ತು ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಶುಭ ಹಾರೈಸಿದ್ದರು.
ಇದನ್ನೂ ಓದಿ: Aadhya Anand: ಬಾಂಬೆ ಬೇಗಮ್ಸ್ ವೆಬ್ ಸರಣಿಯಲ್ಲಿ ನಟಿಸಿದ್ದಾರೆ ಕನ್ನಡತಿ ಆಧ್ಯಾ ಆನಂದ್..!
ಇಲ್ಲೊಂದು ವಿಶೇಷ ಏನು ಗೊತ್ತೆ? ಕೇವಲ 25 ವರ್ಷಗಳ ಅಂತರದಲ್ಲಿ 6 ಬಾರಿ ಮದುವೆ ಆಗಿರುವ ಪಮೆಲಾ ಆಂಡರ್ಸನ್ಗೆ ಸೇರುತ್ತದೆ. ಹೀಗೆ 6ನೇ ಮದುವೆಯಾಗಿ ಇತ್ತೀಚೆಗೆ ಸುಖದ ಸುಪತ್ತಿಗೆಯಲ್ಲಿ ತೇಲುತ್ತಿರುವ ಪಮೇಲಾ ಮದುವೆ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇಲ್ಲಿಯ ತನಕವೂ ಈ ದಂಪತಿ ಮನೆ ಬಿಟ್ಟು ಎಲ್ಲಿಯೂ ಹೊರಗೆ ಹೋಗಿಲ್ಲವಂತೆ. ಆದರೆ ಇದೇ ಮೊದಲ ಬಾರಿಗೆ ತನ್ನ 6ನೇ ಗಂಡನೊಂದಿಗೆ ಪಮೇಲಾ ಸಂದರ್ಶನ ನೀಡಿದ್ದಾರೆ.
View this post on Instagram
View this post on Instagram
ಇದನ್ನೂ ಓದಿ:ಮಡದಿ ಜೊತೆ ಪ್ರೇಮಿಗಳ ದಿನ ಆಚರಿಸಿದ ವಿವೇಕ್ ಒಬೆರಾಯ್:ವಿಡಿಯೋ ಅಪ್ಲೋಡ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟ
ಮನೆಯಲ್ಲಿಯೇ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದೇವೆ ಎಂದು ಈ ದಂಪತಿ ಹೇಳಿಕೊಂಡಿದ್ದಾರೆ. ಈಗಿರುವ ಬೆಲೆಬಾಳುವ ಮನೆಯನ್ನು ತುಂಬಾ ಪ್ರೀತಿಸುವ ಪಮೇಲಾ ಅದರ ನವೀಕರಣವನ್ನೂ ಮಾಡಿಸುತ್ತಿದ್ದಾರಂತೆ. ಅಲ್ಲದೇ ಇದೇ ಮನೆಯಲ್ಲಿ ತನ್ನ 6ನೇ ಗಂಡ ಡ್ಯಾನ್ ಅವರ ಮಕ್ಕಳೂ ಇದ್ದಾರಂತೆ. ಇನ್ನು 53 ವರ್ಷದ ಪಮೇಲಾಗೆ 24 ವರ್ಷದ ಮಗನೂ ಇದ್ದಾನೆ ಎಂಬುವುದನ್ನು ನೀವು ನಂಬಲೇಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ