ಬೆತ್ತಲೆಯಾಗಿ ಸುಟ್ಟ ರೀತಿಯಲ್ಲಿ ನಟಿ ಶವ ಪತ್ತೆ!

ಪಾಕಿಸ್ತಾನ ಮಾಧ್ಯಮಗಳು ಹಂಚಿಕೊಂಡ ವಿಧಿ ವಿಜ್ನಾನ ವರದಿಯ ಪ್ರಕಾರ, 29 ವರ್ಷದ ನದೀಮ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಆದರೆ ಆಕೆಯ ದೇಹ ಬೆತ್ತಲಾಗಿ ಕಂಡುಬಂದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಪಾಕಿಸ್ತಾನ ಮೂಲದ ನಟಿ, ಮಾಡೆಲ್ ನಯಾಬ್ ನದೀಮ್ ಅನುಮಾನಾಸ್ಪದವಾಗಿ ಸಾವನನ್ನಪ್ಪಿದ್ದಾರೆ. 28 ವರ್ಷದ ಅವರು ಮೃತದೇಹ ಲಾಹೋರ್ ಹೊರವಲಯದ ಡಿಫೆನ್ಸ್ ಅಕಾಡೆಮಿಯ ಅಪಾರ್ಟ್ಮೆಂಟ್​ನಲ್ಲಿ ಬೆತ್ತಲಾಗಿ, ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ.

  ಪಾಕಿಸ್ತಾನ ಮಾಧ್ಯಮಗಳು ಹಂಚಿಕೊಂಡ ವಿಧಿ ವಿಜ್ನಾನ ವರದಿಯ ಪ್ರಕಾರ, 29 ವರ್ಷದ ನದೀಮ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಆದರೆ ಆಕೆಯ ದೇಹ ಬೆತ್ತಲಾಗಿ ಕಂಡುಬಂದಿದೆ.

  ಪೊಲೀಸರು ನಯಾಬ್ ನದೀಮ್ ತಾಯಿ ಮತ್ತು ಸಹೋದದರು ನೀಡಿದ ದೂರಿನ ಅನ್ವಯ ಕೇಸ್ ದಾಖಲಿಸಿದ್ದಾರೆ. ಡಿಫೇನ್ಸ್ ಬಿ ಪೊಲೀಸ್ ಠಾಣೆಯ ಎಸ್​​ಹೆಚ್​ಒ ನಯ್ಯರ್ ನಿಸಾರ್, ಆಕೆಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ.

  ನಟಿಯ ಮಲತಾಯಿ ಅಲಿ ನಿಸ್ಸಾರ್ ಹೇಳಿಕೆ ನೀಡಿದ್ದು, ಆಕೆಯನ್ನು ಮಾತನಾಡಿಸಲು ತೆರಳಿದಾಗ ಶವವಾಗಿ ಪತ್ತೆಯಾಗಿದ್ದಾರೆ. ನಾನು ನೋಡುವಾಗ ಮೈಮೇಲೆ ಬಟ್ಟೆ ಇರಲಿಲ್ಲ ಎಂದು ತಿಳಿಸಿದ್ದಾರೆ.

  ನಯಾಬ್ ನದೀಮ್ ಮೊಬೈಲ್ ಫೋನ್ ಸಹ ಕಾಣಿಯಾಗಿದ್ದು, ಆದರೆ ಆಕೆ ಇದ್ದ ಮನೆಯಲ್ಲಿ ಯಾವುದೇ ದರೋಡೆಗಳು ನಡೆದಿಲ್ಲ ಎಂದು ತಿಳಿದುಬಂದಿದೆ. ಆಕೆಯ ಮೃತ ದೇಹವನ್ನು ಮರೋತ್ತರ ಪರೀಕ್ಷೆಗೆ ನೀಡಲಾಗಿದೆ.

  ನಯಾಬ್ ನದೀಮ್ ಮದುವೆಯಾದಗೆ ಒಬ್ಬಳೇ ವಾಸಿಸುತ್ತಿದ್ದಳು. ಆದರೀಗ ಆಕೆಯ ಸಾವು ಪೋಷಕರಿಗೆ ತುಂಬಲಾರದ ನಷ್ಟವನ್ನು ತಂದಿದೆ.
  Published by:Harshith AS
  First published: