HOME » NEWS » Entertainment » PAKISTANI FILM FANS WATCHED KANNADA INDIA VS ENGLAND MOVIE AND LIKED IT HG

ಪಾಕಿಸ್ತಾನದವರಿಗೂ ಇಷ್ಟವಾಯ್ತು ಕನ್ನಡದ ಈ ಸಿನಿಮಾ!

ಥಿಯೇಟರ್​ನಲ್ಲಿ ಹೆಚ್ಚು ಸದ್ದು ಮಾಡದ ಸಾಕಷ್ಟು ಸಿನಿಮಾಗಳು ಓಟಿಟಿ ಪ್ಲಾಟ್​ ಫಾರ್ಮ್​ನಲ್ಲಿ ಜನರ ಮನಗೆದ್ದಿವೆ. ದೇಶದ ನಾನಾ ಭಾಗದ ಜನರು ಆನ್​ಲೈನ್​ ಮೂಲಕ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದಂರಂತೆ ಇತ್ತೀಚೆಗೆ ನಾಗತಿ ಹಳ್ಳಿ ಚಂದ್ರಶೇಖರ್​ ನಿರ್ದೆಶನದ ‘ಇಂಡಿಯಾ ವರ್ಸಸ್​ ಇಂಗ್ಲೆಂಡ್‘ ಸಿನಿಮಾ ಆನ್​ಲೈನ್​ನಲ್ಲಿ ಹೆಚ್ಚು ಜನಪ್ರಿಯ ಕಂಡಿದೆ.

news18-kannada
Updated:April 13, 2020, 3:28 PM IST
ಪಾಕಿಸ್ತಾನದವರಿಗೂ ಇಷ್ಟವಾಯ್ತು ಕನ್ನಡದ ಈ ಸಿನಿಮಾ!
ಇಂಡಿಯಾ ವರ್ಸಸ್​ ಇಂಗ್ಲೆಂಡ್
  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರು ಮನರಂಜನಾ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಟಿ.ವಿ ಧಾರವಾಹಿ, ಸಿನಿಮಾಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದಾರೆ. ಓಟಿಟಿ ಫ್ಲಾಟ್​ ಫಾರ್ಮ್​ಗಳು ಕೂಡ ಜನರ ನೆಚ್ಚಿನ ತಾಣವಾಗಿದ್ದು, ಸಿನಿಮಾಗಳನ್ನು ನೋಡುತ್ತಾ ದಿನ ಕಳೆಯುತ್ತಿದ್ದಾರೆ.

ಥಿಯೇಟರ್​ನಲ್ಲಿ ಹೆಚ್ಚು ಸದ್ದು ಮಾಡದ ಸಾಕಷ್ಟು ಸಿನಿಮಾಗಳು ಓಟಿಟಿ ಪ್ಲಾಟ್​ ಫಾರ್ಮ್​ನಲ್ಲಿ ಜನರ ಮನಗೆದ್ದಿವೆ. ದೇಶದ ನಾನಾ ಭಾಗದ ಜನರು ಆನ್​ಲೈನ್​ ಮೂಲಕ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಇತ್ತೀಚೆಗೆ ನಾಗತಿಹಳ್ಳಿ ಚಂದ್ರಶೇಖರ್​ ನಿರ್ದೆಶನದ ‘ಇಂಡಿಯಾ ವರ್ಸಸ್​ ಇಂಗ್ಲೆಂಡ್‘ ಸಿನಿಮಾ ಅಮೆಜಾನ್​​ ಪ್ರೈಂನಲ್ಲಿ ಹೆಚ್ಚು ಜನಪ್ರಿಯ ಕಂಡಿದೆ. ಅನೇಕ ಜನರು ಈ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯರು ಮಾತ್ರವಲ್ಲದೆ ಪಾಕಿಸ್ತಾನಿಯರು ಕೂಡ ​ ‘ಇಂಡಿಯಾ ವರ್ಸಸ್​ ಇಂಗ್ಲೆಂಡ್‘ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಇಂಡಿಯಾ ವರ್ಸಸ್​ ಇಂಗ್ಲೆಂಡ್‘ ಸಿನಿಮಾ ಇನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಹಿಂದಿ ಭಾಷೆಯ ಜೊತೆಗೆ ಇತರ ಭಾಷೆಗಳಿಗೆ ಡಬ್​ ಮಾಡಿ ಮಾಡಲಿ ನಿರ್ದೇಶಕರು ಯೋಜನರ ಹಾಕಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ನಾಯಕನಾಗಿ ಕಾಣಿಸಿಕೊಂಡರೆ, ಮಾನ್ವಿತಾ ಹರೀಶ್​​ ನಾಯಕಿಯಾಗಿ ಮಿಂಚಿದ್ದಾರೆ. ಇವರ ಜೊತೆಗೆ ಹಿರಿಯ ನಟ ಅನಂತ್​ ನಾಗ್​​ ಸೇರಿ ಅನೇಕ ತಾರಾ ಬಳಗವನ್ನು ಈ ಸಿನಿಮಾ ಹೊಂದಿದೆ.

ಈ ಹಿಂದೆ ಥಿಯೇಟರ್​ನಲ್ಲಿ ಹೆಚ್ಚು ಓಡದ ದಿಯಾ, ಲವ್​ ಮಾಕ್ಟೇಲ್​ ಸಿನಿಮಾ ಕೂಡ ಓಟಿಟಿ ಫ್ಲಾಟ್​ ಫಾರ್ಮ್​ ಮೂಲಕ ಜನರ ಮನಗೆದ್ದಿತ್ತು.

ಇದನ್ನೂ ಓದಿ: ಕ್ವಾರಂಟೈನ್​ ಮುಗಿದಂತೆ ನೀನಾಸಂ ಸತೀಶ್​ ಇದನ್ನು ಮೊದಲು ಮಾಡುತ್ತಾರಂತೆ!

ಇದನ್ನೂ ಓದಿ: 2017ರಿಂದ ಈವರೆಗೆ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​​ಮನ್​ಗಳಿವರು!; ಭಾರತೀಯ ಆಟಗಾರರಿದ್ದಾರಾ?
First published: April 13, 2020, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading