ಸುಷ್ಮಾ ಸ್ವರಾಜ್​ ನಿಧನ: ಟ್ವಿಟರ್​ನಲ್ಲಿ ವಿಕೃತಿ ಮೆರೆದ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್​..!

ಈ ಹಿಂದೆ ಸಾಕಷ್ಟು ಸಲ ವೀಣಾ ಮಲ್ಲಿಕ್​ ಭಾರತೀಯ ಸೇನೆ, ದೇಶದ ಪ್ರಧಾನಿ ಕುರಿತು ಅಸಭ್ಯವಾಗಿ ಟ್ವೀಟ್​ ಮಾಡಿದ್ದಾರೆ. ನಮ್ಮ ದೇಶದ ಗಾಳಿ, ನೀರು ಸೇವಿಸಿ, ಇಲ್ಲೇ ಬದುಕು ಕಂಡುಕೊಂಡ ಈ ನಟಿ ಈಗ ಮತ್ತೊಮ್ಮೆ ಟ್ವಿಟರ್​ನಲ್ಲಿ ವಿಕೃತಿ ಮೆರೆದಿದ್ದಾರೆ.

Anitha E | news18
Updated:August 8, 2019, 2:42 PM IST
ಸುಷ್ಮಾ ಸ್ವರಾಜ್​ ನಿಧನ: ಟ್ವಿಟರ್​ನಲ್ಲಿ ವಿಕೃತಿ ಮೆರೆದ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್​..!
ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್
  • News18
  • Last Updated: August 8, 2019, 2:42 PM IST
  • Share this:
ಎಷ್ಟು ಮಂದಿ ಪಾಕಿಸ್ತಾನದ ಕಲಾವಿದರು ತಮ್ಮ ಜೀವನಕ್ಕೆ ದಾರಿ ಕಂಡುಕೊಳ್ಳಲು ಭಾರತಕ್ಕೆ ಬಂದು, ಇಲ್ಲಿನ ನೀರು ಕುಡಿದು, ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಹೀಗೆ ಬಂದವರಲ್ಲಿ ನಟಿ ವೀಣಾ ಮಲ್ಲಿಕ್​ ಸಹ ಒಬ್ಬರು. ಬಿ-ಗ್ರೇಡ್​ ಸಿನಿಮಾಗಳಲ್ಲಿ ಅಭಿನಯಿಸಿರುವ ಈ ನಟಿ ಬಿಗ್​ ಬಾಸ್​ ಕಾರ್ಯಕ್ರಮದ ಮೂಲಕ ಬಿ-ಟೌನ್​ಗೆ ಎಂಟ್ರಿ ಪಡೆದುಕೊಂಡವರು.

ಹಿಂದಿ ಸೇರಿದಂತೆ ಕನ್ನಡದಲ್ಲೂ ಅಭಿನಯಿಸಿರುವ ಈ ನಟಿ ಒಂದು ರೀತಿಯಲ್ಲಿ ವಿವಾದಿತಕ್ಕೆ ಹೆಸರಾದವರು. ಭಾರತದ ಗಡಿ, ಸೇನೆಯ ವಿಷಯ ಬಂದ ಕೂಡಲೇ ವಿವಾದಾತ್ಮಕ ಹೇಳಿಕೆ ಹಾಗೂ ಟ್ವೀಟ್​ಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ.

Actress Veena Mallik
ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್​


ಈ ಹಿಂದೆ ಸಾಕಷ್ಟು ಸಲ ಅವರು ಭಾರತೀಯ ಸೇನೆ, ದೇಶದ ಪ್ರಧಾನಿ ಕುರಿತು ಅಸಭ್ಯವಾಗಿ ಟ್ವೀಟ್​ ಮಾಡಿದ್ದಾರೆ. ನಮ್ಮ ದೇಶದ ಗಾಳಿ, ನೀರು ಸೇವಿಸಿ, ಇಲ್ಲೇ ಬದುಕು ಕಂಡುಕೊಂಡ ಈ ನಟಿ ಈಗ ಮತ್ತೊಮ್ಮೆ ಟ್ವಿಟರ್​ನಲ್ಲಿ ವಿಕೃತಿ ಮೆರೆದಿದ್ದಾರೆ.

ಇದನ್ನೂ ಓದಿ: Kurukshetra: ಮಧ್ಯರಾತ್ರಿಯಿಂದಲೇ ಆರಂಭವಾಗಲಿದೆ ಕುರುಕ್ಷೇತ್ರದ ದುರ್ಯೋಧನನ ಅಬ್ಬರ..!

ಸುಷ್ಮಾ ಸ್ವರಾಜ್​ ಅವರು ನಿಧನ ಹೊಂದಿದ ವಿಷಯ ತಿಳಿಯುತ್ತಿದ್ದಂತೆಯೇ ವೀಣಾ ತಮ್ಮ ಟ್ವಿಟರ್​ನಲ್ಲಿ RIH ಎಂದು ಹೆಸರನ್ನು ಉಲ್ಲೇಖಿಸದೆ ಟ್ವೀಟ್​ ಮಾಡಿದ್ದಾರೆ. ಅಂದರೆ ನರಕಕ್ಕೆ ಹೋಗಲಿ ಎಂದು ಬರೆದು ಬೆಂಕಿ ಹೊತ್ತಿ ಉರಿಯುತ್ತಿರುವ ಇಮೋಜಿ ಹಾಕಿದ್ದಾರೆ.

R.I.H🔥


ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಟ್ವೀಟಿಗರು ವೀಣಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

ಇತ್ತೀಚೆಗಷ್ಟೆ ವಿಧಿ 370ರ ರದ್ಧತಿ ಕುರಿತಂತೆಯೂ ವೀಣಾ ಕೆಟ್ಟದಾಗಿ ಟ್ವೀಟ್​ ಮಾಡಿ ಸಾಕಷ್ಟು ಟಿಕೆಗೆ ಗುರಿಯಾಗಿದ್ದರು.Amy Jackson: ಅರೆನಗ್ನವಾಗಿ ಕ್ಯಾಮೆರಾಗೆ ಪೋಸ್​ ಕೊಟ್ಟ ಕಿಚ್ಚನ ನಾಯಕಿ..!

First published: August 8, 2019, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading