ಸಾಮಾನ್ಯವಾಗಿ ಚಿತ್ರರಂಗದಲ್ಲಿರುವ ನಟಿಯರು ತುಂಡು ಬಟ್ಟೆಗಳನ್ನ ಹಾಕ್ಕೊಂಡ್ರೆ ನೆಟ್ಟಿಗರು ಅವರನ್ನು ಟ್ರೋಲ್ (Troll) ಮಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಇಲ್ಲಿ ಭಾರತೀಯ ವಧುವಿನ ರೀತಿಯಲ್ಲಿ ಬಟ್ಟೆ ಧರಿಸಿದ್ದಕ್ಕೆ ಪಾಕಿಸ್ತಾನಿ ನಟಿಯನ್ನ ಟ್ರೋಲ್ ಮಾಡಿದ್ದಾರೆ ನೋಡಿ. ಹೌದು, ಪಾಕಿಸ್ತಾನಿ ನಟಿ ಉಷ್ನಾ ಶಾ ಇತ್ತೀಚೆಗೆ ಗಾಲ್ಫ್ ಆಟಗಾರ ಹಮ್ಜಾ ಅಮೀನ್ ಅವರನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ನವವಿವಾಹಿತರ ಮದುವೆ ಸಮಾರಂಭದಲ್ಲಿ ಕ್ಲಿಕ್ಕಿಸಿಕೊಂಡ ಕೆಲವು ಫೋಟೋಗಳು ಮತ್ತು ವೀಡಿಯೋಗಳು ಈಗ ಅಂತರ್ಜಾಲದಲ್ಲಿ (Internet) ಸಿಕ್ಕಾಪಟ್ಟೆ ವೈರಲ್ (Viral) ಆಗುತ್ತಿವೆ. ಮದುವೆ ಸಮಾರಂಭಕ್ಕಾಗಿ, ನಟಿ ಪಾಕಿಸ್ತಾನಿ ಬ್ರ್ಯಾಂಡ್ ವಾರ್ದಾ ಸಲೀಮ್ ವಿನ್ಯಾಸಗೊಳಿಸಿದ ಸುಂದರವಾದ ಕೆಂಪು ವಧುವಿನ ಲೆಹೆಂಗಾವನ್ನು ಆರಿಸಿಕೊಂಡರು ಮತ್ತು ವರ ಐವರಿ ಬಣ್ಣದ ಶೆರ್ವಾನಿಯನ್ನು ಆರಿಸಿಕೊಂಡರು.
ಇಬ್ಬರು ದಂಪತಿಗಳು ತುಂಬಾನೇ ಕ್ಯೂಟ್ ಆಗಿ ಕಾಣುತ್ತಿದ್ದರು, ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ನಟಿಯನ್ನು 'ಭಾರತೀಯ ವಧುವಿನಂತೆ ಉಡುಪು ಧರಿಸಿದ್ದಕ್ಕಾಗಿ' ಟ್ರೋಲ್ ಮಾಡಿದ್ದಾರೆ.
ಟ್ರೋಲ್ ಮಾಡಿದ್ದಕ್ಕೆ ತಕ್ಕ ಉತ್ತರ ನೀಡಿದ ನಟಿ ಶಾ..
ತನ್ನ ಮದುವೆಯ ಉಡುಪನ್ನು ಟೀಕಿಸಿದ ದ್ವೇಷಿಗಳಿಗೆ ನಟಿ ಶಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಭಾನುವಾರ, ನಟಿ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ತನ್ನ ಮೆಹೆಂದಿ ಮತ್ತು ಅವಳ ಕೆಂಪು ವಿವಾಹ ಉಡುಪನ್ನು ಹೊಂದಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಯುವತಿಯ ಎಡವಟ್ಟು, ಕಥೆ ಕೇಳಿ ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು!
ತಮ್ಮ ಉಡುಗೆಗೆ ಟೀಕಿಸಿದವರೊಬ್ಬರಿಗೆ ಉತ್ತರ ನೀಡುತ್ತಾ ನಟಿ "ಶ್ರೀಮತಿ ಅಮೀನ್, ನಮ್ಮ ಉಡುಗೆಯ ಬಗ್ಗೆ ಸಮಸ್ಯೆ ಇರುವವರಿಗೆ ಮದುವೆಗೆ ಆಹ್ವಾನಿಸಲಾಗಿಲ್ಲ ಅಥವಾ ತಮ್ಮ ಕೆಂಪು ಉಡುಪಿಗೆ ಬೇರೆಯವರು ಹಣ ನೀಡಿಲ್ಲ. ನನ್ನ ಆಭರಣ, ನನ್ನ ಜೋರಾ (ಮದುವೆಯ ಉಡುಗೆ) ಸಂಪೂರ್ಣವಾಗಿ ಪಾಕಿಸ್ತಾನಿ ಆಗಿವೆ. ದೇವರು ನಮ್ಮನ್ನು ಸಂತೋಷವಾಗಿರಿಸಲಿ. ನಮ್ಮ ಮದುವೆಗೆ ಬಂದ ಆಹ್ವಾನಿಸದ ಛಾಯಾಗ್ರಾಹಕರಿಗೆ ನನ್ನ ಶುಭಾಶಯಗಳು” ಎಂದು ಬರೆದಿದ್ದಾರೆ.
ವಿಡಿಯೋ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಏನಂದ್ರು?
ತನ್ನ ಮದುವೆಯ ದಿನದಂದು ಶಾ ಅವರು ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ವೀಡಿಯೋಗೆ ಕಾಮೆಂಟ್ ಮಾಡಿದ ಬಳಕೆದಾರರು "ಪಾಕಿಸ್ತಾನಿಗಳು ತಮ್ಮದೇ ಆದ ಸಂಸ್ಕೃತಿ ಮತ್ತು ಧರ್ಮವನ್ನು ಹೊಂದಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳಲು ಪ್ರಯತ್ನಿಸುವುದನ್ನು ನಿಲ್ಲಿಸಿ.
ನಾವು ಮುಸ್ಲಿಮರು ಮತ್ತು ನಮ್ಮ ಧರ್ಮವು ಈ ರೀತಿಯ ಉಡುಪನ್ನು ಧರಿಸಲು ನಮಗೆ ಅನುಮತಿಸುವುದಿಲ್ಲ. ಈ ರೀತಿಯ ನಕಾರಾತ್ಮಕತೆಯನ್ನು ಹರಡುವುದನ್ನು ನಿಲ್ಲಿಸಿ” ಅಂತ ಹೇಳಿದ್ದಾರೆ.
ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿ "ಪಾಕಿಸ್ತಾನಿ ವಧುಗಳು ಏಕೆ ಅಂತಹ ಭಾರತೀಯ ಶೈಲಿಯಲ್ಲಿ ಉಡುಪು ಧರಿಸಲು ಪ್ರಾರಂಭಿಸಿದ್ದಾರೆ? ಇದು ನಮ್ಮ ಸಂಸ್ಕೃತಿಯಲ್ಲ” ಎಂದು ಬರೆದಿದ್ದಾರೆ.
"ಅವರು ಪಾಕಿಸ್ತಾನದ ಸಂಸ್ಕೃತಿಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಇದು ನಮ್ಮ ಸ್ವಂತ ಸಂಸ್ಕೃತಿ, ಸಾಂಪ್ರದಾಯಿಕ ಮೌಲ್ಯಗಳು ಮತ್ತು ಧಾರ್ಮಿಕ ಮೌಲ್ಯಗಳನ್ನು ಹಾಳು ಮಾಡುವುದರಿಂದ ನಾವು ಅದನ್ನು ಸಹಿಸಬಾರದು” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಕರೆಯದೆ ಮದುವೆಗೆ ಬಂದ ಅತಿಥಿಯ ಕೈವಾಡ ಇದು
ಶಾ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಮತ್ತೊಂದು ಸಂದೇಶವನ್ನು ಹಂಚಿಕೊಂಡಿದ್ದಾರೆ ಮತ್ತು ಆಹ್ವಾನ ಪತ್ರದಲ್ಲಿ ತಿಳಿಸಲಾದ ನಿಯಮಗಳನ್ನು ಅನುಸರಿಸದ ಅತಿಥಿಗಳನ್ನು ಅವಮಾನಿಸಿದ್ದಾರೆ.
"ನಾನು ಹೇಳಿದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ಮೂವಿಶೂವಿಯ ಎ.ಬಿ.ಲಖಾನಿ ಅವರನ್ನು ನಾನು ವರ್ಷಗಳಿಂದ ಬಲ್ಲೆ ಮತ್ತು ನಾವು ಆಮಂತ್ರಣಗಳನ್ನು ವಿನ್ಯಾಸಗೊಳಿಸುತ್ತಿದ್ದ ಕಚೇರಿಯಲ್ಲಿ ಅವರು ಇದ್ದುದರಿಂದ ಅವರನ್ನು ಆಹ್ವಾನಿಸಲಾಯಿತು.
ಅವರ ಆಮಂತ್ರಣದಲ್ಲಿ ಯಾವುದೇ ರೀತಿಯ ಇನ್ನೊಬ್ಬ ವ್ಯಕ್ತಿಯನ್ನು ಮದುವೆಗೆ ಕರೆದುಕೊಂಡು ಬರುವಂತಿಲ್ಲ" ಎಂದು ಸ್ಪಷ್ಟವಾಗಿ ಬರೆದಿತ್ತು.
"ವೈಯಕ್ತಿಕ ಕ್ಷಣಗಳನ್ನು, ವಿಶೇಷವಾಗಿ ಮದುವೆ ಸಮಾರಂಭವನ್ನು ರೆಕಾರ್ಡ್ ಮಾಡದಂತೆ ಇತರ ಅತಿಥಿಗಳೊಂದಿಗೆ ಅವರಿಗೂ ಸಹ ಹೇಳಲಾಯಿತು. ಆದರೂ ಸಹ ಅವರ ಜೊತೆ ಅನುಮತಿಯಿಲ್ಲದೆ ಛಾಯಾಗ್ರಾಹಕನನ್ನು ಕರೆ ತಂದಿದ್ದಾರೆ ಮತ್ತು ನಾನು ಇದನ್ನು ಅನುಮತಿಸಿದ್ದೇನೆ ಎಂದು ನನ್ನ ಕುಟುಂಬಕ್ಕೆ ಸುಳ್ಳು ಹೇಳಿದ್ದಾರೆ. ನಂತರ ಆ ಛಾಯಾಗ್ರಾಹಕ ವಿವಿಧ ಮಾಧ್ಯಮ ಪೋರ್ಟಲ್ ಗಳಿಗೆ ಈ ವಿಶೇಷ ಸಂದರ್ಭದಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಕಳುಹಿಸಿದ್ದಾರೆ" ಎಂದು ನಟಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ