Viral Video: ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಗೆ ಎಸೆದ ಪಾಕಿಸ್ತಾನಿ ನಟಿ, ಸಿಟ್ಟಿಗೆದ್ದ ನೆಟ್ಟಿಗರು

ಪಾಕಿಸ್ತಾನಿ ನಟಿ ರೇಶಮ್ ಸಮಾಜಕ್ಕೆ ಮಾದರಿಯಾಗುವುದರ ಬದಲಿಗೆ ತಮ್ಮ ಅಭಿಮಾನಿಗಳ ಮುಂದೆಯೇ ತಲೆತಗ್ಗಿಸುವಂತಹ ಕಾರ್ಯವನ್ನು ನಡೆಸಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈ ನಟಿ ಮಾಡಿದ್ದಾದರೂ ಏನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಪಾಕಿಸ್ತಾನಿ ನಟಿ ರೇಶಮ್‌

ಪಾಕಿಸ್ತಾನಿ ನಟಿ ರೇಶಮ್‌

 • Share this:
  ಅದೆಷ್ಟೋ ಮಂದಿ ಸೆಲೆಬ್ರಿಟಿಗಳನ್ನೇ (celebrity) ತಮ್ಮ ಜೀವನದ ಆದರ್ಶವೆಂದುಕೊಂಡು ಅವರ ದಾರಿಯನ್ನೇ ಅನುಸರಿಸುತ್ತಾರೆ. ಅವರು ಮಾಡುವುದು ತಪ್ಪೋ ಸರಿಯೋ ಎಂಬುದನ್ನು ಕನಿಷ್ಟ ಪಕ್ಷ ವಿಶ್ಲೇಷಿಸದೆಯೇ ಸೆಲೆಬ್ರಿಟಿಗಳು ನಡೆದದ್ದೇ ದಾರಿ ಎಂಬಂತೆ ಅವರದ್ದೇ ಜೀವನ ಶೈಲಿಯನ್ನು (Lifestyle) ಅನುಕರಿಸುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ಸೆಲೆಬ್ರಿಟಿಗಳು ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳನ್ನೇ ಮಾಡುತ್ತಿರುತ್ತಾರೆ ಮತ್ತು ತಮ್ಮನ್ನು ಹಿಂಬಾಲಿಸುವ ಅದೆಷ್ಟೋ ಅಭಿಮಾನಿ ಬಳಗದವರು ಇರುತ್ತಾರೆ ಎಂಬ ಪ್ರಜ್ಞೆ ಅವರಲ್ಲಿರುತ್ತದೆ. ಆದರೆ ಪಾಕಿಸ್ತಾನಿ ನಟಿ ರೇಶಮ್ (Pakistani actress Resham) ಸಮಾಜಕ್ಕೆ ಮಾದರಿಯಾಗುವುದರ ಬದಲಿಗೆ ತಮ್ಮ ಅಭಿಮಾನಿಗಳ ಮುಂದೆಯೇ ತಲೆತಗ್ಗಿಸುವಂತಹ ಕಾರ್ಯವನ್ನು ನಡೆಸಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈ ನಟಿ ಮಾಡಿದ್ದಾದರೂ ಏನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

  ನದಿಯನ್ನು ಕಲುಶಿತಗೊಳಿಸಿದ ತಾರಾಮಣಿ
  ಪಾಕಿಸ್ತಾನಿ ನಟಿ ರೇಶಮ್‌ ಪ್ಲಾಸ್ಟಿಕ್ ಕೈಚೀಲವೊಂದನ್ನು ನದಿಗೆ ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ನಟಿಗೆ ಸರಿಯಾಗಿ ಕ್ಲಾಸು ತೆಗೆದುಕೊಂಡಿದ್ದಾರೆ. ಜಲಚರ ಪ್ರಾಣಿಗಳಿಗೆ ಆಹಾರ ನೀಡಲು ಬಂದಿರುವುದಾಗಿ ನಟಿ ಹೇಳಿಕೊಂಡಿದ್ದು ನಟಿ ಇಂತಹ ತಪ್ಪೆಸಗುವುದರ ಮೂಲಕ ಸೇವೆಗೆ ಕಳಂಕ ತಂದಂತಾಗಿದೆ.

  ತಾನು ಎಸಗಿರುವ ತಪ್ಪಿನ ಕುರಿತು ಪ್ರಾಯಶ್ಚಿತ್ತರಾಗಿರುವ ನಟಿ ರೇಶಮ್ ಕ್ಷಮೆ ಕೇಳಿದ್ದು ಕೋವಿಡ್‌ ಸಂಬಂಧಿತವಾಗಿ ಮೆದುಳಿಗೆ ಮಂಜು ಕವಿದಂತಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಜಲಮೂಲವನ್ನು ಹಾಳುಗೆಡವುತ್ತಿರುವುದು ಪ್ರಜ್ಞಾವಂತರಾದ ನಿಮಗೆ ಶೋಭೆಯೇ ಎಂದು ನೆಟ್ಟಿಗರು ರೇಶಮ್ ಅವರನ್ನು ಟೀಕಿಸುತ್ತಿದ್ದಾರೆ.

  ಇದನ್ನೂ ಓದಿ: Jacqueline Fernandez: ಸುಕೇಶ್​​ನನ್ನು ಮದುವೆಯಾಗಲು ಬಯಸಿದ್ದೆ ಎಂದ ಜಾಕ್ಲಿನ್!

  ವೈರಲ್ ಆಗಿರುವ ವಿಡಿಯೋದಲ್ಲಿ ರೇಶಮ್ ಕಾರಿನಿಂದ ಹೊರಗಿಳಿದಿದ್ದು ಕಂಡುಬಂದಿದೆ ಅಂತೆಯೇ ಮಾಂಸವಿರುವ ಪ್ಯಾಕೇಟ್ ಒಂದನ್ನು ಹರಿದು ಅದರಿಂದ ಸಣ್ಣ ಸಣ್ಣ ಮಾಂಸದ ತುಂಡುಗಳನ್ನು ನದಿಗೆ ಎಸೆಯುತ್ತಿರುವುದು ನೋಡಬಹುದು. ನಂತರ ಅದೇ ಪ್ಲಾಸ್ಟಿಕ್ ಅನ್ನು ನದಿಗೆ ಎಸೆದಿದ್ದಾರೆ ಇದಾದ ನಂತರ ಕಾರಿನಿಂದ ಬ್ರೆಡ್‌ಗಳಿರುವ ಎರಡು ಪ್ಯಾಕೆಟ್‌ಗಳನ್ನು ಹೊರತೆಗೆದಿದ್ದು ಬ್ರೆಡ್‌ಗಳನ್ನು ಸಣ್ಣ ತುಂಡುಗಳನ್ನಾಗಿಸಿ ನದಿಗೆ ಎಸೆದಿದ್ದು ನಂತರ ಅದೇ ಕವರ್‌ಗಳನ್ನು ನದಿಗೆ ಎಸೆದಿದ್ದಾರೆ.  ನಟಿಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು
  ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಟಿಯ ಕೃತ್ಯವನ್ನು ತರಾಟೆಗೆ ತೆಗೆದುಕೊಂಡಿರುವ ಬಳಕೆದಾರರು, ಪಾಕ್‌ ಈಗಾಗಲೇ ಎದುರಿಸುತ್ತಿರುವ ಪ್ರವಾಹ ಬಿಕ್ಕಟ್ಟಿನ ನಡುವೆ ನಟಿಯು ನಡೆಸಿದ ಹೇಯ ಕೃತ್ಯದ ಕುರಿತು ಕಾಮೆಂಟ್ ಮಾಡಿರುವ ನೆಟ್ಟಿಗರು ತಪ್ಪು ಮಾಡಿರುವುದಲ್ಲದೆ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿರುವಿರಲ್ಲಾ ಎಂದು ನಟಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ.

  ಪಾಕ್ ಗಾಯಕಿಯಿಂದ ಟೀಕೆ
  ಆಕೆಯ ಈ ಕೃತ್ಯಕ್ಕೆ ಟ್ವಿಟ್ಟರ್ ಬಳಕೆದಾರರು ಮಾತ್ರವಲ್ಲದೆ ಹೆಸರಾಂತ ಸೆಲೆಬ್ರಿಟಿಗಳು ಕೂಡ ಕಾಮೆಂಟ್‌ಗಳ ಮಳೆ ಸುರಿಸಿ ಖಂಡಿಸಿದ್ದಾರೆ. ಪಾಕ್‌ನ ಹೆಸರಾಂತ ಗಾಯಕಿ ಮೀಶಾ ಶಫಿ ರೇಶಮ್‌ನ ಕೃತ್ಯವನ್ನು ಖಂಡಿಸಿ ಟ್ವಿಟ್ಟರ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ.

  ದೈತ್ಯ ಹವಾಮಾನ ಬದಲಾವಣೆಯ ವಿಪತ್ತುಗಳಿಂದ ಉಂಟಾದ ಭೀಕರ ಪ್ರವಾಹ ಸಂತ್ರಸ್ತರಿಗೆ ದಿನಸಿ ಹಾಗೂ ಪ್ಲಾಸ್ಟಿಕ್ ಚೀಲಗಳು/ಟ್ರೇಗಳನ್ನು ನದಿಗೆಸೆದ ನಂತರ ಕ್ಯಾಮೆರಾದ ಮುಂದೆ ನೆರವು ನೀಡುವ ನಾಟಕವಾಡುವುದು ಎಂದು ಖಂಡಿಸಿದ್ದಾರೆ.

  ಕ್ಷಮೆ ಕೋರಿ ವಿಡಿಯೋ ಹರಿಬಿಟ್ಟ ರೇಶಮ್
  ನಟಿ ತಮ್ಮ ಕೃತ್ಯಕ್ಕಾಗಿ ಕ್ಷಮೆ ಕೋರುವ ವಿಡಿಯೋವನ್ನು ಇನ್‌ಸ್ಟಾದಲ್ಲಿ ಪ್ರಕಟಿಸಬೇಕೆಂಬ ಒತ್ತಾಯದ ಹಿನ್ನಲೆಯಲ್ಲಿ ರೇಶಮ್ ತಮ್ಮನ್ನು ಮನ್ನಿಸಿ ಎಂದು ಜನತೆಯಲ್ಲಿ ಕೇಳಿಕೊಂಡಿದ್ದಾರೆ. ಏನು ಸಂಭವಿಸಿದೆಯೋ ಆಕೆಯ ಪ್ರಕಾರ, ನಡೆಯಬಾರದ ಘಟನೆಯಾಗಿದೆ ನಾನು ಕೂಡ ಒಬ್ಬ ಮನುಷ್ಯಳೇ ಹಾಗೂ ತಪ್ಪುಗಳನ್ನು ಮಾಡುವುದು ಮನುಷ್ಯರ ಗುಣವಾಗಿದೆ ಎಂದು ರೇಶಮ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: Boyz 3: ಮತ್ತೆ 'ಮಹಾ'ರಾಷ್ಟ್ರ ಕ್ಯಾತೆ, ಮರಾಠಿ ಸಿನಿಮಾದಲ್ಲಿ ಕರ್ನಾಟಕ ಪೊಲೀಸರಿಗೆ ಅಪಮಾನ!

  ಸಂಪೂರ್ಣ ಜನತೆಯನ್ನು ಉಲ್ಲೇಖಿಸಿ ಆಕೆ ಕ್ಷಮೆ ಕೋರಿದ್ದು ಇಂತಹ ತಪ್ಪುಗಳನ್ನು ಇನ್ನು ಮುಂದೆ ಮಾಡುವುದಿಲ್ಲವೆಂದು ಭರವಸೆ ನೀಡಿದ್ದಾರೆ. ನಡೆದಿರುವ ಕೃತ್ಯಕ್ಕೆ ತಾನೇ ಜವಬ್ದಾರಿ ಎಂದು ಕೂಡ ನಟಿ ಹೇಳಿಕೊಂಡಿದ್ದಾರೆ.
  Published by:Ashwini Prabhu
  First published: