ತೆಲುಗು ಚಿತ್ರೋದ್ಯಮದ ಆರ್‌ಆರ್‌ಆರ್ ಚಿತ್ರ (RRR Movie) ಬಿಡುಗಡೆಗೊಂಡಾಗ ಎಷ್ಟರ ಮಟ್ಟಿಗೆ ಹವಾ ಮಾಡಿತ್ತೆಂದರೆ, ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೆ ಬೇರೆ ದೇಶಗಳಲ್ಲಿಯೂ ಸಹ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಕಲೆಕ್ಷನ್ (Collection) ಮಾಡಿತ್ತು. ಈ ಚಿತ್ರದಲ್ಲಿ ಇದ್ದಂತಹ ವಿಶೇಷತೆಗಳು ಒಂದೆರಡಲ್ಲ ಬಿಡಿ, ಅನೇಕ ವಿಶೇಷತೆಗಳನ್ನು ಒಳಗೊಂಡಿತ್ತು ಈ ಸೂಪರ್ ಹಿಟ್ ಚಿತ್ರ ಅಂತ ಹೇಳಬಹುದು. ಇದರಲ್ಲಿ ತೆಲುಗು ಚಿತ್ರೋದ್ಯಮದ ಮೆಗಾಸ್ಟಾರ್ ಚಿರಂಜೀವಿ ಅವರ ಸುಪುತ್ರ ಮತ್ತು ನಟ ರಾಮ್ ಚರಣ್ (Ram Charan) ಮತ್ತು ಜ್ಯೂನಿಯರ್ ಎನ್‌ಟಿಆರ್ (Junior NTR) ನಟಿಸಿದ್ದರು.
ಅಷ್ಟೇ ಅಲ್ಲದೆ ಚಿತ್ರದ ಕಥೆಯು ಬ್ರಿಟಿಷರ ಮತ್ತು ಭಾರತೀಯರ ನಡುವಿನ ಒಂದು ಹೋರಾಟವನ್ನು ಒಳಗೊಂಡಿತ್ತು. ಇದೆಲ್ಲದಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಈ ಚಿತ್ರದ ‘ನಾಟು ನಾಟು’ ಹಾಡು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಹಾಡಿಗೆ ಇಬ್ಬರು ನಟರು ಮೈ ಚಳಿ ಬಿಟ್ಟು ಅತ್ಯಂತ ವೇಗವಾಗಿ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ಹಾಕಿದ್ದು, ಇತ್ತೀಚೆಗೆ ಅತ್ಯುತ್ತಮವಾದ ಮೂಲ ಗೀತೆ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ಹೊಸ ದಾಖಲೆಯನ್ನೇ ಬರೆದಿದೆ.
View this post on Instagram
ಎಸ್.ಎಸ್. ರಾಜಮೌಳಿ ಅವರು ಆರ್‌ಆರ್‌ಆರ್ ಚಿತ್ರದ ನಾಟು ನಾಟು ಎಂಬ ಅದ್ಭುತ ಹಾಡನ್ನು ನೀಡಿ ಎಲ್ಲರನ್ನೂ, ಅಕ್ಷರಶಃ ತಮ್ಮ ಚಿತ್ರದ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಅದು ಹುಕ್ ಸ್ಟೆಪ್ಸ್ ಆಗಿರಲಿ ಅಥವಾ ಪೆಪ್ಪಿ ಬೀಟ್ ಆಗಿರಲಿ, ಈ ಟ್ರ್ಯಾಕ್ ವಿಶ್ವದಾದ್ಯಂತದ ಅಭಿಮಾನಿಗಳಿಂದ ಹೆಚ್ಚಿನ ಪ್ರೀತಿ ಮತ್ತು ಗಮನವನ್ನು ಪಡೆಯುತ್ತಿದೆ.
ನಾಟು ನಾಟು ಹಾಡು ಮತ್ತು ಡ್ಯಾನ್ಸ್ ಬರೀ ನಮ್ಮ ದೇಶದಲ್ಲಿ ಅಷ್ಟೇ ತನ್ನ ಹವಾ ಸೃಷ್ಟಿಸಿಲ್ಲ, ನೆರೆಯ ದೇಶ ಪಾಕಿಸ್ತಾನದಲ್ಲಿಯೂ ಸಹ ಈ ಹಾಡಿಗೆ ಫ್ಯಾನ್ಸ್ ಫಿದಾ ಆಗಿ ಸ್ಟೆಪ್ ಹಾಕಿದ್ದಾರೆ.
ಮದುವೆಯಲ್ಲಿ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿದ ಪಾಕ್ ನಟಿ
ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಕೂಡ ಈ ಹಾಡಿಗೆ ಮತ್ತು ಡ್ಯಾನ್ಸ್ ಗೆ ದೊಡ್ಡ ಫ್ಯಾನ್ ಅಂತ ಹೇಳಬಹುದು. ಇದು ನಿಮಗೆ ಹೇಗೆ ಗೊತ್ತು ಅಂತ ನೀವು ಕೇಳಬಹುದು. ಮದುವೆ ಸಮಾರಂಭವೊಂದರಲ್ಲಿ ನಟಿ ‘ನಾಟು ನಾಟು’ ಹಾಡಿಗೆ ಸಖತ್ತಾಗಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಆನ್ಲೈನ್ ನಲ್ಲಿ ಕಾಣಿಸಿಕೊಂಡಿದೆ.
ಚಿನ್ನದ ಮಿನುಗುವ ಶರಾರಾ ಸೆಟ್ ಧರಿಸಿದ ಹನಿಯಾ ‘ನಾಟು ನಾಟು’ ಟ್ರ್ಯಾಕ್ ಗೆ ಡ್ಯಾನ್ಸ್ ಮಾಡಿದ್ದಾರೆ. ಹುಡುಗ ಮತ್ತು ಅವಳು ಇಬ್ಬರು ಅದ್ಭುತವಾಗಿ ಕಾಣುತ್ತಿದ್ದಾರೆ ಮತ್ತು ಅವರ ಹುಕ್ ಸ್ಟೆಪ್ ನೋಡಿ ಹೇಗಿದೆ ಎಂದು ಹೇಳಿದ್ದಾರೆ. ತುಂಬಾ ಒಳ್ಳೆಯ ಡ್ಯಾನ್ಸ್ ಹನಿಯಾ ಎಂದು ಶೀರ್ಷಿಕೆಯನ್ನು ಬರೆದು ಈ ಕ್ಲಿಪ್ ಅನ್ನು ‘ದಿ ವೆಡ್ಡಿಂಗ್ ಬ್ರಿಡ್ಜ್’ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ.
ವೈರಲ್ ಆಗುತ್ತಿದೆ ಈ ಡ್ಯಾನ್ಸ್ ವೀಡಿಯೋ
ಈ ವೀಡಿಯೋವನ್ನು ಒಂದು ದಿನದ ಹಿಂದೆಯಷ್ಟೆ ಹಂಚಿಕೊಂಡಿದ್ದು, ಇದುವರೆಗೂ 3,900 ಕ್ಕಿಂತಲೂ ಹೆಚ್ಚು ಲೈಕ್ ಗಳು ಬಂದಿವೆ. ಇದನ್ನು ನೋಡಿದ ನೆಟ್ಟಿಗರು ತಾ ಮುಂದು ನಾ ಮುಂದು ಅಂತ ಕಾಮೆಂಟ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಅಂತ ಹೇಳಬಹುದು.
ಈ ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದ ಇಬ್ಬರು ನಾಯಕರ ಡ್ಯಾನ್ಸ್ ಹಾಡಿಗೆ ಮತ್ತಷ್ಟು ರಂಗು ನೀಡಿದೆ. ಈ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಾಮ್ ಚರಣ್ “ಮೊದಲ ಬಾರಿಗೆ, ನಾವು ಅಕಾಡೆಮಿಯಲ್ಲಿ ನಾಮನಿರ್ದೇಶನಗೊಂಡಿದ್ದೇವೆ ಮತ್ತು ಪ್ರಶಂಸಿಸಲ್ಪಡುತ್ತಿದ್ದೇವೆ. ಇದು ನಮ್ಮ ಯಶಸ್ಸು ಎಂದು ನಾನು ಭಾವಿಸುವುದಿಲ್ಲ, ಇದು ಇಡೀ ಭಾರತೀಯ ಚಲನಚಿತ್ರೋದ್ಯಮದ ಯಶಸ್ಸು” ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ