Joyland: ಪ್ರಥಮ ಬಾರಿಗೆ ಕಾನ್ಸ್ ಚಲನಚಿತ್ರೋತ್ಸವ ಪ್ರವೇಶಿಸಿದ ಪಾಕ್, ರೆಡ್ ಕಾರ್ಪೆಟ್‍ನಲ್ಲಿ ಮಿಂಚಿದ ತೃತೀಯ ಲಿಂಗಿ ಅಲೀನಾ ಖಾನ್

ಸಿನಿಮೋದ್ಯಮದ ಶ್ರೀಮಂತ ಇತಿಹಾಸವನ್ನು ಹೊಂದಿರುವ ನಮ್ಮ ದೇಶ ಬಹಳ ವರ್ಷಗಳಿಂದಲೂ ಕಾನ್ಸ್ ನಲ್ಲಿ ಭಾಗಿಯಾಗುವ ಸಂಭ್ರಮವನ್ನು ತನ್ನದಾಗಿಸಿಕೊಳ್ಳುತ್ತಾ ಬಂದಿದೆ. ಈ ಬಾರಿ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೂ ಕೂಡ ಆ ಸಂಭ್ರಮವನ್ನು ಆಚರಿಸುವ ಅವಕಾಶ ಒದಗಿ ಬಂದಿದೆ. ಹೌದು, ಕಾನ್ಸ್ ಚಲನಚಿತ್ರೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ತಾನಿ ಸಿನಿಮಾವೊಂದು ಪ್ರವೇಶ ಪಡೆದಿದೆ.

ಅಲೀನಾ ಖಾನ್

ಅಲೀನಾ ಖಾನ್

  • Share this:
ಕಾನ್ಸ್ ಚಲನಚಿತ್ರೋತ್ಸವ 2022 (Cannes Film Festival 2022) ಹಲವಾರು ಕಾರಣಗಳಿಂದಾಗಿ ಸುದ್ದಿ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಕಾನ್ಸ್ ರೆಡ್ ಕಾರ್ಪೆಟ್ ಸೆಲೆಬ್ರಿಟಿಗಳು (Cannes Red Carpet Celebrity) ಅತ್ಯಧಿಕ ಗಮನ ಸೆಳೆಯುತ್ತಾರೆ. ಪ್ರತೀ ಬಾರಿ ಕಾನ್ಸ್ ಚಲನಚಿತ್ರೋತ್ಸವ ಆರಂಭ ಆಗುವ ಮುನ್ನವೇ, ಅದರ ರೆಡ್ ಕಾರ್ಪೆಟ್‍ನ ಅತಿಥಿಗಳು (Guest of the red carpet) ಮತ್ತು ಅವರು ಧರಿಸಲಿರುವ ಡಿಸೈನರ್ ಬಟ್ಟೆಗಳ (Designer clothes) ಬಗ್ಗೆ ತಿಳಿದುಕೊಳ್ಳಲು ವಿಶ್ವದಾದ್ಯಂತ (Around the World) ಜನರು ಮತ್ತು ಫ್ಯಾಶನ್ ಪ್ರಿಯರು (Fashion lovers) ಕುತೂಹಲದಿಂದ ಕಾಯುತ್ತಿರುತ್ತಾರೆ.

ಭಾರತವನ್ನು ‘ಗೌರವ ರಾಷ್ಟ್ರ’ ಎಂದು ಪರಿಗಣಿಸಿದ ಕಾನ್ಸ್ ಚಲನಚಿತ್ರೋತ್ಸವ
ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಈ ಬಾರಿ ಭಾರತವನ್ನು ‘ಗೌರವ ರಾಷ್ಟ್ರ’ ಎಂದು ಪರಿಗಣಿಸಲಾಗಿದೆ. ಚಿತ್ರರಂಗದ ಪ್ರತಿಯೊಬ್ಬ ಸೆಲೆಬ್ರಿಟಿಗೂ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವುದು ಎಂದರೆ ಒಂದು ಹೆಮ್ಮೆಯ ಸಂಗತಿ.ಸಿನಿಮೋದ್ಯಮದ ಶ್ರೀಮಂತ ಇತಿಹಾಸವನ್ನು ಹೊಂದಿರುವ ನಮ್ಮ ದೇಶ ಬಹಳ ವರ್ಷಗಳಿಂದಲೂ ಕಾನ್ಸ್ ನಲ್ಲಿ ಭಾಗಿಯಾಗುವ ಸಂಭ್ರಮವನ್ನು ತನ್ನದಾಗಿಸಿಕೊಳ್ಳುತ್ತಾ ಬಂದಿದೆ. ಈ ಬಾರಿ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೂ ಕೂಡ ಆ ಸಂಭ್ರಮವನ್ನು ಆಚರಿಸುವ ಅವಕಾಶ ಒದಗಿ ಬಂದಿದೆ. ಹೌದು, ಕಾನ್ಸ್ ಚಲನಚಿತ್ರೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ತಾನಿ ಸಿನಿಮಾವೊಂದು ಪ್ರವೇಶ ಪಡೆದಿದೆ.

ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪಾಕಿಸ್ತಾನದ ‘ಜೋಯ್‍ಲ್ಯಾಂಡ್' ಸಿನಿಮಾ
ಪಾಕಿಸ್ತಾನದ ‘ಜೋಯ್‍ಲ್ಯಾಂಡ್’ ಎಂಬ ಸಿನಿಮಾ, 75 ನೇ ಚಲನಚಿತ್ರೋತ್ಸವದಲ್ಲಿ ಆ ದೇಶವನ್ನು ಪ್ರತಿನಿಧಿಸುತ್ತಿದೆ. ಕಾನ್ಸ್ ನ ರೆಡ್ ಕಾರ್ಪೆಟ್‍ನಲ್ಲಿ ಈ ಸಿನಿಮಾದ ತಂಡ ಪೋಸ್ ನೀಡಿ ಎಲ್ಲರ ಗಮನ ಸೆಳೆಯಿತು. ದೇಶಕ್ಕೆ ಹೆಮ್ಮೆಯನ್ನು ತಂದುಕೊಟ್ಟ ಖುಷಿ ಅವರಲ್ಲಿತ್ತು. ಆದರೆ, ‘ಜೋಯ್‍ಲ್ಯಾಂಡ್’ ತಂಡದ ಸದಸ್ಯರ ಮಧ್ಯೆ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದವರು ಮಾತ್ರ ಅಲೀನಾ ಖಾನ್. ಅವರೆಲ್ಲೇನು ವಿಶೇಷ ಅನ್ನುತ್ತೀರಾ? ಪ್ರಪ್ರಥಮ ಬಾರಿಗೆ ಕಾನ್ಸ್ ನ ರೆಡ್ ಕಾರ್ಪೆಟ್‍ನ ಮೇಲೆ ಕಾಣಿಸಿಕೊಂಡ ಅಲೀನಾ ಖಾನ್ ಒಬ್ಬ ತೃತೀಯ ಲಿಂಗಿ.

ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದ ಅಲೀನಾ ಖಾನ್
ಸಲೀಮ್ ಸಾದಿಕ್ ಅವರು ನಿರ್ದೇಶಿಸಿರುವ ‘ಜೋಯ್‍ಲ್ಯಾಂಡ್’ ಸಿನಿಮಾದಲ್ಲಿ ಅಲೀನಾ ಖಾನ್ ನಟಿಸಿದ್ದಾರೆ. ಕಾನ್ಸ್ ಚಲಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದರೂ, ವಿವಿಧ ಲುಕ್‍ಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅಲೀನಾ ಹಿಂದೆ ಬಿದ್ದಿಲ್ಲ.

ಇದನ್ನೂ ಓದಿ: ಅಂದು ಭಿಕ್ಷುಕಿ, ಇಂದು SSLC ಫಲಿತಾಂಶ ಸಾಧಕಿ! ಹೆತ್ತವರಿಲ್ಲದ ನೋವಿನಲ್ಲಿಯೂ ಸೋನು ಸಾಧನೆ!

ಮೊದಲಿಗೆ, ಫ್ಲೋರಲ್ ಹಳದಿ ಲೆಹೆಂಗಾದ ಮೇಲೆ, ಉದ್ದನೆಯ ತೋಳಿನ ಒಂದು ಸಾಫ್ಟ್ ಪಿಂಕ್ ಟಾಪ್ ಧರಿಸಿ, ಉದ್ದನೆಯ ಚಂಕಿ ಓಲೆಗಳನ್ನು ತೊಟ್ಟು, ಪೋನಿಟೆಲ್ ಹಾಕಿಕೊಂಡು ಮಿಂಚಿದರೆ, ಮತ್ತೊಮ್ಮೆ ತಮ್ಮ ಚೊಚ್ಚಲ ರೆಡ್ ಕಾರ್ಪೆಟ್ ಪ್ರವೇಶದಲ್ಲಿ ಅವರು, ಕಸೂತಿ ಮಾಡಿದ ಬಾರ್ಡರ್ ಉಳ್ಳ ಮರೂನ್ ಸೀರೆ ಉಟ್ಟು, ಅದಕ್ಕೆ ಹೊಂದುವಂತ ಸ್ವೀವ್‍ಲೆಸ್ ಬ್ಲೌಸ್ ಧರಿಸಿ, ಮ್ಯಾಚಿಂಗ್ ಚಂಕಿ ಚೋಕರ್ ಮತ್ತು ಓಲೆಗಳನ್ನು ತೊಟ್ಟು ನೆರೆದವರ ಗಮನ ಸೆಳೆದರು. ಕೂದಲನ್ನು ಇಳಿ ಬಿಟ್ಟುಕೊಂಡು ಆಕರ್ಷಕವಾಗಿ ಕಾಣುತ್ತಿದ್ದ ಅಲೀನಾ ಖಾನ್ ಮೊಗದಲ್ಲಿ ಸುಂದರ ನಗುವಿತ್ತು.

ತೃತೀಯ ಲಿಂಗೀಯರ ಸಂಸ್ಕೃತಿಯನ್ನು ಎತ್ತಿ ತೋರಿಸುವ ಚಿತ್ರ
‘ಜೋಯ್‍ಲ್ಯಾಂಡ್’, ಲಿಂಗ, ಲೈಂಗಿಕತೆ ಮತ್ತು ಪಾಕಿಸ್ತಾನದ ತೃತೀಯ ಲಿಂಗೀಯರ ಸಂಸ್ಕೃತಿಯನ್ನು ಎತ್ತಿ ತೋರಿಸುವ ಚಿತ್ರವಾಗಿದ್ದು, ಕಾನ್ಸ್ ನ ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ಪ್ರಥಮ ಬಾರಿಗೆ ಪ್ರದರ್ಶನ ಕಂಡಿತು. ಅಂತಾರಾಷ್ಟ್ರೀಯ ಮಾಧ್ಯಮಗಳು, ಈ ಚಿತ್ರವನ್ನು “ಧೈರ್ಯಶಾಲಿ” ಸಿನಿಮಾ ಎಂದು ವರ್ಣಿಸಿದ್ದು, ಪೌರುಷವಿಲ್ಲದ ವಿವಾಹಿತ ವ್ಯಕ್ತಿಯೊಬ್ಬ ತೃತೀಯ ಲಿಂಗಿಯೊಬ್ಬಳನ್ನು ಇಷ್ಟ ಪಡುವ ಕಥೆಯನ್ನು ಹೊಂದಿದೆ. ಅದರಿಂದ ಉಂಟಾಗುವ ಉದ್ವೇಗದ ಸಂಗತಿಗಳು, ಆ ವ್ಯಕ್ತಿಯ ಕುಟುಂಬ ಮತ್ತು ಆತನ ಆಯ್ಕೆ ಏನಿರುತ್ತದೆ ಎಂಬುದನ್ನು ಚಿತ್ರದಲ್ಲಿ ಕಾಣಬಹುದು.

ಕಾನ್ಸ್ ಚಲನಚಿತ್ರೋತ್ಸವ 2022 ನಲ್ಲಿ ಅಲೀನಾ ಖಾನ್ ಮಾತ್ರವಲ್ಲದೆ, ಪಾಕಿಸ್ತಾನಿ ಸಿನಿಮಾ ತಾರೆಯರಾದ ಅಲಿ ಜುನೇಜೋ, ರಸ್ತಿ ಫರೂಖ್, ಸರ್ವತ್ ಗಿಲಾನಿ, ಸೊಹಾಲಿ ಸಮೀರ್, ಸಲ್ಮಾನ್ ಫೀರ್‍ಜಾದ ಮತ್ತು ಸಾನಿಯಾ ಸಯೀದ್ ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: Alia Bhatt: ಸಿಹಿ ತಿನ್ನಲ್ವಂತೆ, ಆದ್ರೆ ಚಾಕೊಲೇಟ್ - ಕೂಲ್ ಡ್ರಿಂಕ್ಸ್ ಜಾಹೀರಾತಲ್ಲಿ ಮಾತ್ರ ಬರ್ತಾರಂತೆ! ಇದ್ಯಾವ ನ್ಯಾಯ?

ಭಾರತದಿಂದ ಈ ಬಾರಿ ಕೇವಲ ಬಾಲಿವುಡ್ ಮಾತ್ರವಲ್ಲ, ದಕ್ಷಿಣ ಭಾರತದ ಸಿನಿಮಾ ತಾರೆಯರು ಕೂಡ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು.
Published by:Ashwini Prabhu
First published: