ಸುದೀಪ್​ರ ಕಟ್ಟುಮಸ್ತಾದ ದೇಹದ ಬಗ್ಗೆ ಆಡಿಕೊಂಡಿದ್ದವರ ಬಾಯಿ ಮುಚ್ಚಿಸಿದ ನಿರ್ದೇಶಕ ಕೃಷ್ಣ..!

Anitha E | news18
Updated:December 8, 2018, 4:46 PM IST
ಸುದೀಪ್​ರ ಕಟ್ಟುಮಸ್ತಾದ ದೇಹದ ಬಗ್ಗೆ ಆಡಿಕೊಂಡಿದ್ದವರ ಬಾಯಿ ಮುಚ್ಚಿಸಿದ ನಿರ್ದೇಶಕ ಕೃಷ್ಣ..!
Anitha E | news18
Updated: December 8, 2018, 4:46 PM IST
ಸುದೀಪ್​ ಅಭಿನಯದ ಪೈಲ್ವಾನ್​ ಸಿನಿಮಾ ಆರಂಭದಿಂದಲೂ ಸಖತ್​ ಸದ್ದು ಮಾಡುತ್ತಿದೆ. ಅದರಲ್ಲೂ ಜೀವನದಲ್ಲೇ ಜಿಮ್​ನತ್ತ ಮುಖ ಮಾಡದ ಕಿಚ್ಚ ಈ ಸಿನಿಮಾಗಾಗಿ ಬೆವರಿಳಿಸಿದ್ದರು.

ಇದನ್ನೂ ಓದಿ: ಬಾಲಿವುಡ್​ ಸಿನಿಮಾದಲ್ಲಿ ಕಿಚ್ಚ-ಅಮಿತಾಭ್ ಜೋಡಿ: ಸಿನಿಮಾಕ್ಕೆ ಕತೆ ಬರೆಯಲು ಆರಂಭಿಸಿದ ರಿಷಭ್​

ಜಿಮ್​ನಲ್ಲಿ ಸತತ ಪರಿಶ್ರಮದಿಂದಾಗಿ ಒಳ್ಳೆ ಬಾಡಿ ಬಿಲ್ಡ್​ ಮಾಡಿ ಕುಸ್ತಿಪಟುವಿನಂತಾದರು. ಈ ಸಿನಿಮಾದಲ್ಲಿ ಸುದೀಪ್​ ಅವರ ಪೋಸ್ಟರ್​ ಬಿಡುಗಡೆಯಾಗಿತ್ತು. ಆಗ ಆರಂಭವಾಯಿತು ನೋಡಿ... ಸುದೀಪ್​ರ ಬಾಡಿ ನಿಜವಾಗಿಯೂ ಹಾಗಿಲ್ಲ, ಎಲ್ಲ ಗ್ರಾಫಿಕ್ಸ್​ ಎಂದೆಲ್ಲ ವ್ಯಂಗ್ಯವಾಡಿದ್ದರು. ಆದರೆ ಕೆಲವರು ಸುದೀಪ್​ ನಿಜಕ್ಕೂ ಜಿಮ್​ನಲ್ಲಿ ಬೆವರಿಳಿಸಿದ್ದಾರೆ ಎಂದು ಕಿಚ್ಚನ ಬೆಂಬಲಕ್ಕೆ ನಿಂತರು.

ಇದನ್ನೂ ಓದಿ: ನೆನಪಿನ ಬುತ್ತಿಯಿಂದ: ಅಂಬಿ ಮಾಮನ ಅಗಲಿಕೆಯ ನೋವಿನಿಂದ ಇನ್ನೂ ಹೊರ ಬರದ ಕಿಚ್ಚ

ಸಾಮಾಜಿಕ ಜಾಲತಾಣದಲ್ಲಿ ಸುದೀಪ್​ ಅವರ ಕಟ್ಟುಮಸ್ತಾದ ದೇಹದ ಕುರಿತು ನಡೆಯುತ್ತಿದ್ದರೂ ಸುದೀಪ್​ ಈ ಬಗ್ಗೆ ಏನನ್ನೂ ಮಾತನಾಡಿರಲಿಲ್ಲ. ಆದರೆ ಈಗ 'ಪೈಲ್ವಾನ್​' ಸಿನಿಮಾದ ನಿರ್ದೇಶಕ ಕೃಷ್ಣ ಸುದೀಪ್​ ಅವರ ಒಂದು ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

'ಪೈಲ್ವಾನ್​'ನಲ್ಲಿ ಸುದೀಪ್​....

Loading...

ಸುದೀಪ್​ ಈಜುಕೊಳದಲ್ಲಿ ಬೆನ್ನು ತೋರಿಸುತ್ತಾ ನಿಂತಿರುವ ಚಿತ್ರ ಇದಾಗಿದೆ. ಈ ಚಿತ್ರದ ಜೊತೆಗೆ ಕೃಷ್ಣಾ ಹೀಗೆ ಬರೆದುಕೊಂಡಿದ್ದಾರೆ. 'ಸುದೀಪ್​ ಅವರಲ್ಲಿ ಆಗಿರುವ ಬದಲಾವಣೆಯಿಂದ ನನಗೆ ತುಂಬಾ ಖುಷಿಯಾಗಿದೆ. ಅವರಿಗಿರುವ ಅಮರ್ಪಣಾ ಮನೋಭಾವಕ್ಕೆ ನಾನು ಫಿದಾ ಆಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

 ಮತ್ತೊಂದು ಟ್ವೀಟ್​ನಲ್ಲಿ 'ಕೆಲವರು ಹೇಳುವ ಹಾಗೆ ಇದರಲ್ಲಿ ಯಾವ ಗ್ರಾಫಿಕ್ಸ್​ ಬಳಸಲಾಗಿಲ್ಲ. ಇದು ಪಕ್ಕಾ ಓರಿಜಿನಲ್' ಎಂದು ಈ ಹಿಂದೆ ಸುದೀಪ್​ ಪೋಸ್ಟ್​ರ್​ ನೋಡಿ ಕಾಲೆಳೆದಿದ್ದವರಿಗೆ ಮುಟ್ಟಿ ನೋಡಿಕೊಳ್ಳುವವರಂತೆ ಮಾಡಿದ್ದಾರೆ.

ಸುದೀಪ್​ ಅಭಿನಯದ ಬಹು ನಿರೀಕ್ಷಿತ 'ಪೈಲ್ವಾನ್​' ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626