ಕಿಚ್ಚನ ಹುಟ್ಟುಹಬ್ಬಕ್ಕೆ ಅಲ್ಲ: ಪೈಲ್ವಾನ್ ಅಖಾಡಕ್ಕೆ ಧುಮುಕಲು ಹೊಸ ಡೇಟ್ ಫಿಕ್ಸ್?

Pailwaan : ಅಷ್ಟೇ ಅಲ್ಲದೆ ಪೈಲ್ವಾನ್​ಗಾಗಿ ವಿದೇಶದಲ್ಲೂ ಜೀ ಸ್ಟುಡಿಯೋಸ್ ಅಖಾಡವನ್ನು ಸಿದ್ಧಪಡಿಸುತ್ತಿದ್ದು, ಅದರ ಪ್ರಥಮ ಹೆಜ್ಜೆ ಎಂಬಂತೆ ಪಕ್ಕದ ನೇಪಾಳ ಹಾಗೂ ಭೂತಾನ್​ನಲ್ಲಿ ಕಿಚ್ಚ ಸುದೀಪ್ ಅಭಿನಯದ ಚಿತ್ರ ಬಿಡುಗಡೆಯಾಗಲಿದೆ.

zahir | news18
Updated:July 23, 2019, 10:51 PM IST
ಕಿಚ್ಚನ ಹುಟ್ಟುಹಬ್ಬಕ್ಕೆ ಅಲ್ಲ: ಪೈಲ್ವಾನ್ ಅಖಾಡಕ್ಕೆ ಧುಮುಕಲು ಹೊಸ ಡೇಟ್ ಫಿಕ್ಸ್?
pailwaan
  • News18
  • Last Updated: July 23, 2019, 10:51 PM IST
  • Share this:
ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್'​ ಚಿತ್ರದ ಮೇಲಿನ ಕಾತುರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಈ ಕಾತುರಕ್ಕೆ ಕೊನೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಗುತ್ತಿಲ್ಲ. ಏಕೆಂದರೆ ಆಗಸ್ಟ್ 9ಕ್ಕೆ ತೆರೆಗೆ ಬರಬೇಕಿದ್ದ 'ಪೈಲ್ವಾನ್' ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೆ ಇದೆ. ಈ ಹಿಂದೆ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ತರುವುದಾಗಿ ನಿರ್ದೇಶಕರು ತಿಳಿಸಿದ್ದರು. ಬಳಿಕ ಕೆಲ ಕಾರಣಗಳಿಂದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರದ ಸಾರಥಿ ಕೃಷ್ಣ ಹೇಳಿದ್ದರು.

ಇದರ ಬೆನ್ನಲ್ಲೇ ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿತ್ತು. ಸೆಪ್ಟೆಂಬರ್ 2 ರಂದು ಕಿಚ್ಚನಿಗೆ ಬರ್ತ್​ಡೇ ಗಿಫ್ಟ್​ ಆಗಿ 'ಪೈಲ್ವಾನ್'​ರನ್ನು ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ಕಾರಣದಿಂದ ಮತ್ತೊಮ್ಮೆ 'ಪೈಲ್ವಾನ್' ಎಂಟ್ರಿ ತಡವಾಗಲಿದೆ ಎಂದು 'ಹೆಬ್ಬುಲಿ' ನಿರ್ದೇಶಕರು ತಿಳಿಸಿದ್ದರು.

ಈ ಸುದ್ದಿಯಿಂದ ನಿರಾಸೆಗೊಳಗಾಗಿದ್ದ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿಯೊಂದು ಸಿಕ್ಕಿದೆ. ಚಿತ್ರತಂಡದ ಮೂಲಗಳ ಪ್ರಕಾರ 'ಪೈಲ್ವಾನ್' ಸೆಪ್ಟೆಂಬರ್​ ತಿಂಗಳಲಲ್ಲೇ ಬಿಡುಗಡೆಯಾಗಲಿದೆ. ಅಂದರೆ 'ಕಿಚ್ಚೋತ್ಸವ' ಕಳೆದು 10 ದಿನಗಳ ಬಳಿಕ 'ಪೈಲ್ವಾನ್' ತೊಡೆ ತಟ್ಟಲಿದ್ದಾನೆ. ಒಂದು ಮೂಲದ ಮಾಹಿತಿ ಪ್ರಕಾರ ಚಿತ್ರತಂಡ ಸೆಪ್ಟೆಂಬರ್ 12ಕ್ಕೆ ಡೇಟ್​ ಫಿಕ್ಸ್ ಮಾಡಿದ್ದು, ಇದೇ ದಿನ 'ಪೈಲ್ವಾನ್' ಅಖಾಡಕ್ಕಿಳಿಯಲಿದ್ದಾನೆ.

ಚಿತ್ರದ ಅಂತಿಮ ಹಂತದ ಗ್ರಾಫಿಕ್ಸ್ ಕೆಲಸಗಳು ಮಾತ್ರ ಬಾಕಿ ಉಳಿದಿದ್ದು, ಅದು ಮುಗಿಯಲು ಇನ್ನೆರೆಡು ವಾರ ಸಾಕು ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ ಸೆಪ್ಟೆಂಬರ್ 2ನೇ ವಾರದಲ್ಲಿ 'ಪೈಲ್ವಾನ್' ಎಂಟ್ರಿ ಕೊಡುವುದು ಪಕ್ಕಾ ಎನ್ನುತ್ತಿದೆ ಗಾಂಧಿನಗರ ಮೂಲಗಳು.

ಇನ್ನು ಜುಲೈ 27 ರಂದು 'ಪೈಲ್ವಾನ್'​ನ ಹಾಡುಗಳು ಲೋಕಾಪರ್ಣೆ ಆಗಲಿದೆ ಎನ್ನಲಾಗಿದ್ದು, ಅದೇ ದಿನ ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್ ಆಗುವ ಸಾಧ್ಯತೆಯಿದೆ.  ಪಂಚಭಾಷೆಯಲ್ಲಿ ನಿರ್ಮಾಣವಾಗಿರುವ ಪೈಲ್ವಾನ್ ವಿತರಣಾ ಹಕ್ಕನ್ನು ಜೀ ಸ್ಟುಡಿಯೋಸ್ ಪಡೆದುಕೊಂಡಿದ್ದು, ದೇಶದಾದ್ಯಂತ ಚಿತ್ರವನ್ನು ಏಕಕಾಲದಲ್ಲಿ 2500ಕ್ಕಿಂತ ಹೆಚ್ಚಿನ ಚಿತ್ರಮಂದಿರದಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

ಅಷ್ಟೇ ಅಲ್ಲದೆ 'ಪೈಲ್ವಾನ್'​ಗಾಗಿ ವಿದೇಶದಲ್ಲೂ ಜೀ ಸ್ಟುಡಿಯೋಸ್ ಅಖಾಡವನ್ನು ಸಿದ್ಧಪಡಿಸುತ್ತಿದ್ದು, ಅದರ ಪ್ರಥಮ ಹೆಜ್ಜೆ ಎಂಬಂತೆ ಪಕ್ಕದ ನೇಪಾಳ ಹಾಗೂ ಭೂತಾನ್​ನಲ್ಲಿ ಕಿಚ್ಚ ಸುದೀಪ್ ಅಭಿನಯದ ಚಿತ್ರ ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲದೆ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಆಫ್ರಿಕಾ ಹಾಗೂ ಗಲ್ಫ್ ರಾಷ್ಟ್ರಗಳಲ್ಲೂ ಚಿತ್ರವನ್ನು ಒಯ್ಯಲು ಭರ್ಜರಿ ತಯಾರಿಗಳು ನಡೆಯುತ್ತಿದೆ.

ಒಟ್ಟಿನಲ್ಲಿ ಭಾರೀ ಕುತೂಹಲ ಹುಟ್ಟು ಹಾಕಿರುವ 'ಪೈಲ್ವಾನ್'​ ಕುರಿತು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, 'ಕೆ.ಜಿ.ಎಫ್' ಚಿತ್ರದಂತೆ ಸುದೀಪ್ ಸಿನಿಮಾ ಕೂಡ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯೆಬ್ಬಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
First published:July 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ