HOME » NEWS » Entertainment » PAILWAAN TEAM DID NOT ANNOUNCED THE MOVIE RELEASE DATE AE

Pailwaan: ಸಿಹಿ ಸುದ್ದಿ ಕೊಡುವುದಾಗಿ ಹೇಳಿ ನಿರಾಶೆ ಮಾಡಿದ ಪೈಲ್ವಾನ್​ ನಿರ್ದೇಶಕ ಕೃಷ್ಣ..!

Pailwaan: ಪೈಲ್ವಾನ್​ ಸಿನಿಮಾದ ರಿಲೀಸ್​ ದಿನಾಂಕ ನಿನ್ನೆಯೇ ಪ್ರಕಟವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಇನ್ನೂ ಅದು ಆಗಿಲ್ಲ. ನಿನ್ನೆಯಿಂದ ಸಿಹಿ ಸುದ್ದಿಗಾಗಿ ಕಾಯುತ್ತಿದ್ದ ಸುದೀಪ್​ ಅಭಿಮಾನಿಗಳು ಈಗ ಫುಲ್​ ಗರಂ ಆಗಿದ್ದಾರೆ.

Anitha E | news18
Updated:July 23, 2019, 1:22 PM IST
Pailwaan: ಸಿಹಿ ಸುದ್ದಿ ಕೊಡುವುದಾಗಿ ಹೇಳಿ ನಿರಾಶೆ ಮಾಡಿದ ಪೈಲ್ವಾನ್​ ನಿರ್ದೇಶಕ ಕೃಷ್ಣ..!
ಪೈಲ್ವಾನ್​ ಚಿತ್ರದಲ್ಲಿ ಸುದೀಪ್​
  • News18
  • Last Updated: July 23, 2019, 1:22 PM IST
  • Share this:
- ಅನಿತಾ ಈ, 

'ಪೈಲ್ವಾನ್'​ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಪೋಸ್ಟರ್​, ಟ್ರೈಲರ್​ ಹಾಗೂ ಟೀಸರ್​ಗಳಿಂದಲೇ ಸದ್ದು ಮಾಡುತ್ತಿದ್ದ ಸಿನಿಮಾ ಈಗ ಬೇರೆಯೇ ಕಾರಣಕ್ಕೆ ಸದಾ ಸುದ್ದಿಯಲ್ಲಿದೆ. ಅದಯ ಬಿಡುಗಡೆ ದಿನಾಂಕ ನಿಗದಿ ಕುರಿತಾದ ಕಾರಣದಿಂದ 'ಪೈಲ್ವಾನ್​' ಸದ್ದು ಮಾಡುತ್ತಿದ್ದಾನೆ.

ಮೊನ್ನೆಯಷ್ಟೆ ಸಿನಿಮಾದ ನಿರ್ದೇಶಕ ಕೃಷ್ಣ ಚಿತ್ರದ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿದೆ. ಅಲ್ಲದೆ ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಹ ಮುಂದೂಡಲಾಗಿದ್ದು, ಎರಡರ ದಿನಾಂಕವನ್ನು ನಿನ್ನೆ ಸಂಜೆ 6.30ಕ್ಕೆ ತಿಳಿಸುವುದಾಗಿ ಮೊನ್ನೆ ಅಂದರೆ (ಜು.21ರಂದು) ರಾತ್ರಿ ಟ್ವೀಟ್​ ಮಾಡಿದ್ದರು.


ಮೊದಲು ಸಂಜೆ 6.30ಕ್ಕೆ ಎಂದಿದ್ದ ನಿರ್ದೇಶಕ ಕೃಷ್ಣ ನಂತರ ಮತ್ತೊಂದು ಟ್ವೀಟ್​ ಮಾಡುವ ಮೂಲಕ ಇನ್ನೂ ಚರ್ಚೆ ನಡೆಯುತ್ತಿದೆ. ಕೆಲವೇ ಸಮಯದಲ್ಲಿ ದಿನಾಂಕವನ್ನು ಪ್ರಕಟಿಸುವುದಾಗಿ ಮತ್ತೊಂದು ಟ್ವೀಟ್​ ಮಾಡಿದ್ದರು.ಆದರೆ ಇನ್ನೂ ಪೈಲ್ವಾನ್​ ಬಿಡುಗಡೆಗೆ ಕಾಲ ಕೂಡಿ ಬಂದಿಲ್ಲ ಎನಿಸುತ್ತಿದೆ. ನಿನ್ನೆಯಿಂದ ಕಿಚ್ಚನ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಆದರೂ ಇನ್ನೂ ಚಿತ್ರತಂಡ ಅಧಿಕೃತವಾಗಿ ಸಿನಿಮಾ ಬಿಡುಗಡೆ ದಿನಾಂಕ ಹಾಗೂ ಆಡಿಯೋ ರಿಲೀಸ್​ ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಇದರಿಂದ ಸುದೀಪ್​ ಅಭಿಮಾನಿಗಳು ಗರಂ ಆಗಿದ್ದಾರೆ. ನಿರ್ದೇಶಕ ಕೃಷ್ಣ ಅವರ ಟ್ವೀಟ್​ ನೋಡುವವರೆಗೂ ಮಲಗುವುದಿಲ್ಲ ಎಂದು ಕೆಲವು ಅಭಿಮಾನಿಗಳು ಹೇಳಿದರೆ, ಮತ್ತೆ ಕೆಲವರು ಪ್ರಕಟಿಸೋದಿಲ್ಲ ಅಂತಾನಾದರೂ ಹೇಳಿ ಎಂದೆಲ್ಲ ಸಿಟ್ಟಿನಿಂದ ಟ್ವೀಟ್​ ಮಾಡಿದ್ದಾರೆ. ರಾತ್ರಿ ಕಳೆದು ಬೆಳಗಾದರೂ ಕಿಚ್ಚನ ಅಭಿಮಾನಿಗಳಿಗೆ ಮಾತ್ರ ಇನ್ನೂ ಸಿಹಿ ಸುದ್ದಿ ಸಿಕ್ಕಿಲ್ಲ.

ಇದನ್ನೂ ಓದಿ: Pailwaan Title Track: ನೋಡುಗರ ಮನ ಗೆಲ್ಲುತ್ತಿದ್ದಾನೆ ಪೈಲ್ವಾನ್​: ತೊಡೆ ತಟ್ಟಿದ ಕಿಚ್ಚನಿಗೆ ಅಭಿಮಾನಿಗಳು ಫಿದಾ..!

Rana Daggubati: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಟಾಲಿವುಡ್​ ಹಂಕ್: ಮಗನಿಗಾಗಿ ಮೂತ್ರಪಿಂಡ ದಾನಕ್ಕೆ ಸಿದ್ಧರಾದ ರಾಣಾ ತಾಯಿ..!


First published: July 23, 2019, 11:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories