HOME » NEWS » Entertainment » PAILWAAN SUDEEP RECEIVED A LOVELY GIFT FROM HIS BEST FRIEND ON FRIENDSHIP DAY AE

Pailwaan Sudeep: ಜೀವದ ಗೆಳತಿಯಿಂದ ಕಿಚ್ಚನಿಗೆ ಸಿಕ್ತು ಸ್ನೇಹದ ಉಡುಗೊರೆ..!

Pailwaan Sudeep: ಕಿಚ್ಚ ಸುದೀಪ್ ಮತ್ತು ಪ್ರಿಯಾ ರಾಧಾಕೃಷ್ಣ, ಇಬ್ಬರದೂ ಒಂದು ಸುಂದರವಾದ ಲವ್‍ಸ್ಟೋರಿ. ಇವರ ಗೆಳೆತನ ಶುರುವಾಗಿದ್ದು ಸುಮಾರು 20 ವರ್ಷಗಳ ಹಿಂದೆ. ಅದು ಪ್ರೀತಿಯಾಗಿ ಬದಲಾಗಿ ಸುಂದರವಾದ ಸಂಸಾರವಾದರೂ ಅವರ ಗೆಳೆತನ ಮಾತ್ರ ಇಂದಿಗೂ ಹಾಗೇ ಇದೆ.

Anitha E | news18
Updated:August 6, 2019, 12:37 PM IST
Pailwaan Sudeep: ಜೀವದ ಗೆಳತಿಯಿಂದ ಕಿಚ್ಚನಿಗೆ ಸಿಕ್ತು ಸ್ನೇಹದ ಉಡುಗೊರೆ..!
ಅಭಿಮಾನಿಗಳಿಗಾಗಿ ಕಿಚ್ಚ ಕ್ರಿಯೇಷನ್ಸ್​ ಯೂಟ್ಯೂಬ್​ ಚಾನಲ್​ ಆರಂಭಿಸಿದ ಕಿಚ್ಚ ಸುದೀಪ್​ ಹಾಗೂ ಪ್ರಿಯಾ ಸುದೀಪ್​
  • News18
  • Last Updated: August 6, 2019, 12:37 PM IST
  • Share this:
ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಇಬ್ಬರದೂ ಸುಮಾರು 20 ವರ್ಷಗಳ ಹಳೆಯ ಫ್ರೆಂಡ್‍ಶಿಪ್. ಪ್ರೀತಿ, ಪ್ರೇಮ ಚಿಗುರೊಡೆದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲೇ ಇವರಿಬ್ಬರೂ ಒಳ್ಳೆಯ ಸ್ನೇಹಿತರು. ಈಗ ಮದುವೆಯಾಗಿ ಸುಮಾರು 2 ದಶಕಗಳೇ ಕಳೆದಿವೆ. ಆದರೆ ಈಗಲೂ ಇಬ್ಬರ ಫ್ರೆಂಡ್‍ಶಿಪ್ ಹಾಗೇ ಇದೆ.

ಕಿಚ್ಚ ಸುದೀಪ್ ಮತ್ತು ಪ್ರಿಯಾ ರಾಧಾಕೃಷ್ಣ, ಇಬ್ಬರದೂ ಒಂದು ಸುಂದರವಾದ ಲವ್‍ಸ್ಟೋರಿ. ಇವರ ಗೆಳೆತನ ಶುರುವಾಗಿದ್ದು ಸುಮಾರು 20 ವರ್ಷಗಳ ಹಿಂದೆ. ಕಿಚ್ಚ ಸುದೀಪ್ ಆಗಿನ್ನೂ ಒಂದೋ, ಎರಡೋ ಸಿನಿಮಾ ಮಾಡಿದ್ದರಷ್ಟೇ. ಆದರೆ ಅದಾಗಲೇ ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು ಪ್ರಿಯಾ, ಆರ್ಥಿಕವಾಗಿ ಸದೃಢರಾಗಿದ್ದರು.

ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ


ಕಿಚ್ಚ ಸುದೀಪ್ ಕೂಡ ಶ್ರೀಮಂತ ಕುಟುಂಬದವರೇ ಆಗಿದ್ದರೂ, ಮನೆಯಲ್ಲಿ ಹೆಚ್ಚು ಹಣ ಕೇಳಲು ಮುಜುಗರ ಪಡುತ್ತಿದ್ದರು. ಹೀಗಾಗಿಯೇ ಪ್ರಿಯಾ, ಕಿಚ್ಚ ಸುದೀಪ್‍ಗೆ ಆಗಾಗ ಧನಸಹಾಯ ಮಾಡಿದ್ದುಂಟು.

ಗೆಳೆತನ ಯಾವಾಗ ಪ್ರೀತಿಯಾಗಿ ಬದಲಾಯಿತೋ ಗೊತ್ತೇ ಆಗಲಿಲ್ಲ'ಹುಚ್ಚ' ಚಿತ್ರದಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ ಕಿಚ್ಚ ಸುದೀಪ್, ಅದಾಗಿ ಮೂರೇ ತಿಂಗಳಲ್ಲಿ ಅಂದರೆ 2001ರಲ್ಲಿ ಪ್ರಿಯಾರನ್ನು ಮದುವೆಯಾದರು. ಹೀಗೆ ಅಂದಿನಿಂದ 15 ವರ್ಷಗಳವರೆಗೆ ಅರ್ಥಾತ್ 2015ರವರೆಗೆ ಸುದೀಪ್ ಮತ್ತು ಪ್ರಿಯಾ ಜೋಡಿ, ಗಂಡ - ಹೆಂಡತಿ ಮಾತ್ರವಲ್ಲ, ಬೆಸ್ಟ್ ಫ್ರೆಂಡ್ಸ್ ಮಾತ್ರ. ಅವರ ಈ ಫ್ರೆಂಡ್‍ಶಿಪ್‍ಗೆ ಬೆಸ್ಟ್ ಉದಾಹರಣೆ ಈಗಲೂ ಕಿಚ್ಚ ಸುದೀಪ್ ಮನೆಯಲ್ಲಿದೆ.

ಆಗ ಪ್ರಿಯಾ ಬಳಿಯಿದ್ದ ಸ್ಕೂಟಿಯಲ್ಲೇ ಇಬ್ಬರೂ ಓಡಾಡುತ್ತಿದ್ದರು. ಹಾಗೂ ಸುದೀಪ್ ಕೂಡ ಆ ಸ್ಕೂಟಿಯಲ್ಲೇ ಅವಕಾಶಕ್ಕಾಗಿ ಅಲೆದಾಡಿರೋದುಂಟು. ಈಗ ಅದೇ ಸ್ಕೂಟಿಯನ್ನು ತಮ್ಮ ಮನೆಯಲ್ಲೇ ಶೋ ಪೀಸ್‍ನಂತೆ ಕಾಪಾಡಿಟ್ಟುಕೊಂಡಿದ್ದಾರೆ ಕಿಚ್ಚ.

ಇದನ್ನೂ ಓದಿ: Roberrt: ಜೂಜಾಟದಿಂದ ಹಣ-ಆಸ್ತಿ ಕಳೆದುಕೊಂಡ್ರಾ ರಾಬರ್ಟ್ ಚಿತ್ರದ ಈ ಸ್ಟಾರ್ ನಟ..!ಸಂಸಾರ ಅಂದ ಮೇಲೆ ಗಂಡ ಹೆಂಡತಿಯ ನಡುವೆ ಸರಸ- ವಿರಸ ಸಾಮಾನ್ಯ. ಅದೇ ರೀತಿ 2015ರಲ್ಲಿ ಕಿಚ್ಚ ಸುದೀಪ್ ಮತ್ತು ಪ್ರಿಯಾ ನಡುವೆಯೂ ವಿರಸ ಉಂಟಾಗಿತ್ತು. ಇಬ್ಬರೂ ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲೂ ಏರಿದ್ದರು. ಆದರೆ ಕೋರ್ಟ್ ನೀಡಿದ ಆರು ತಿಂಗಳ ಕಾಲಾವಕಾಶದಲ್ಲಿ ಇಬ್ಬರ ಮನಸ್ಸು ಬದಲಾಯ್ತು. ಒಬ್ಬರು, ಮತ್ತೊಬ್ಬರನ್ನು ಬಿಟ್ಟಿರಲು ಸಾಧ್ಯವಾಗದು ಅನ್ನೋ ಮನವರಿಕೆಯಾಯ್ತು. ಅದರಂತೆ, ಇನ್ನೂ ಹೆಚ್ಚಿನ ಪ್ರೀತಿ ಜತೆಗೆ ಈ ಜೋಡಿ ಮತ್ತೆ ಒಂದಾಯ್ತು.

ಇಂತಹ ಸುದೀಪ್ ಮತ್ತು ಪ್ರಿಯಾ, ಎಲ್ಲ ಬಗೆಯ ಏಳು ಬೀಳುಗಳನ್ನೂ ಎದುರಿಸಿ, ಗೆದ್ದು ಸಾಗಿದ್ದಾರೆ. ಆ ಮೂಲಕ ಇಬ್ಬರ ಗೆಳೆತನ, ಪ್ರೀತಿ ದಿನಕಳೆದಂತೆ ಗಾಢವಾಗುತ್ತಲೇ ಹೋಗ್ತಿದೆ. ಅದಕ್ಕೆ ಕಾರಣ, ಅವರು ಸ್ನೇಹಿತರ ದಿನದಂದು ಕಿಚ್ಚನಿಗೆ ವಿಶ್ ಮಾಡಿರುವ ರೀತಿ.

Being silly with my friend!!Ever seen your #Pailwan in this avatar ?😂🤣'ಪೈಲ್ವಾನನನ್ನು ಈ ಅವತಾರದಲ್ಲಿ ಎಂದಾದ್ರೂ ನೋಡಿದ್ದೀರಾ? ನನ್ನ ಬೆಸ್ಟ್ ಫ್ರೆಂಡ್‍ಗೆ ಒಂದು ದೊಡ್ಡ ಅಪ್ಪುಗೆ. ಬೀಯಿಂಗ್ ಸಿಲ್ಲಿ ವಿತ್ ಮೈ ಫ್ರೆಂಡ್' ಅಂತ ಟ್ವೀಟಿಸಿ ಫೋಟೋ ಶೇರ್ ಮಾಡಿದ್ದಾರೆ ಪ್ರಿಯಾ. ಅದಕ್ಕೆ ಕಿಚ್ಚ ಸುದೀಪ್​ ಸಹ ಒಬ್ಬ ಸ್ನೇಹಿತನಾಗಿ ಪ್ರತಿಕ್ರಿಯಿಸಿದ್ದಾರೆ.

🙄... Thanksssssssssss.....ಕಿಚ್ಚ ಸುದೀಪ್ ಮತ್ತು ಪ್ರಿಯಾ ಫ್ರೆಂಡ್‍ಶಿಪ್ ಸದಾಕಾಲ ಹೀಗೇ ಇರಲಿ ಅನ್ನೋದು ಅವರ ಅಭಿಮಾನಿಗಳ ಆಶಯ.

 

Rakhi Sawant Honeymoon Pics: ಹನಿಮೂನ್​ ಚಿತ್ರಗಳನ್ನು ಹಂಚಿಕೊಂಡ ವಿವಾದಿತ ನಟಿ ರಾಖಿ ಸಾವಂತ್​..!


  
First published: August 6, 2019, 12:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories