Pailwaan Movie Review: ಪೈಲ್ವಾನ್​ಗೆ ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ: ಸುದೀಪ್​ ಎಂಟ್ರಿಗೆ ಪ್ರೇಕ್ಷಕರು ಫಿದಾ..!

Pailwaan Review: ಸುದೀಪ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಇಂದು ತೆರೆ ಕಂಡಿದೆ. ಕೆಲವು ಕಡೆ ಬೆಳಿಗ್ಗೆ 4.30ಕ್ಕೆ ಮೊದಲ ಪ್ರರ್ದಶನ ಆರಂಭವಾದರೆ, ಮತ್ತೆ ಹಲವೆಡೆಗಳಲ್ಲಿ 5:30ಕ್ಕೆ ಪೈಲ್ವಾನ್​ ಪಟ್ಟು ಹಾಕಿದ್ದಾನೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Anitha E | news18-kannada
Updated:September 12, 2019, 11:19 AM IST
Pailwaan Movie Review: ಪೈಲ್ವಾನ್​ಗೆ ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ: ಸುದೀಪ್​ ಎಂಟ್ರಿಗೆ ಪ್ರೇಕ್ಷಕರು ಫಿದಾ..!
Pailwaan Review: ಸುದೀಪ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಇಂದು ತೆರೆ ಕಂಡಿದೆ. ಕೆಲವು ಕಡೆ ಬೆಳಿಗ್ಗೆ 4.30ಕ್ಕೆ ಮೊದಲ ಪ್ರರ್ದಶನ ಆರಂಭವಾದರೆ, ಮತ್ತೆ ಹಲವೆಡೆಗಳಲ್ಲಿ 5:30ಕ್ಕೆ ಪೈಲ್ವಾನ್​ ಪಟ್ಟು ಹಾಕಿದ್ದಾನೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
  • Share this:
ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಪೈಲ್ವಾನನ ಅಬ್ಬರ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಕಿಚ್ಚ ಪೈಲ್ವಾನ್​ ಆಗಿ ಬಾಕ್ಸಿಂಗ್ ರಿಂಗ್ ಒಳಗೆ ಇಳಿದಿದ್ದಾರೆ. ಇಂದು ಬೆಳಗಿನ ಜಾವದಿಂದಲೇ ​ಹಲವೆಡೆಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿದೆ.

ಕೆಲವು ಕಡೆ ಬೆಳಿಗ್ಗೆ 4.30ಕ್ಕೆ ಮೊದಲ ಪ್ರರ್ದಶನ ಆರಂಭವಾದರೆ, ಮತ್ತೆ ಕೆಲವೆಡೆಗಳಲ್ಲಿ 5:30ಕ್ಕೆ 'ಪೈಲ್ವಾನ್'​ ಪಟ್ಟು ಹಾಕಿದ್ದಾನೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪೈಲ್ವಾನ್​ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಪೈಲ್ವಾನ್ ್ಚಿತ್ರತಂಡದೊಂದಿಗೆ ಸುದೀಪ್​ ಹಾಗೂ ರವಿಚಂದ್ರನ್​


ಈ ಸಿನಿಮಾದಲ್ಲಿ ಸುದೀಪ್​ ಅವರ ಪರಿಶ್ರಮ ಪ್ರತಿ ಫ್ರೇಮ್​ನಲ್ಲೂ ಕಾಣುತ್ತೆ. ಈ ಸಿನಿಮಾದ ನಾಯಕಿ ಆಕಾಂಕ್ಷಾ ಸಿಂಗ್​ ಗ್ಲಾಮರ್​ ಹಾಗೂ ಸಾಂಪ್ರದಾಯಿಕ ಅಂದರೆ ಎರಡೂ ಲುಕ್​ನಲ್ಲೂ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದಾರೆ.

ಇನ್ನು  ಸುನೀಲ್, ಕಬೀರ್ ದುಹಾನ್​ ಸಿಂಗ್​, ಸುಶಾಂತ್​ ಸಿಂಗ್​ ಅವರ​ ಅಭಿನಯ ಸೂಪರ್​ ಎನ್ನುತ್ತಿದ್ದಾರೆ ಪ್ರೇಕ್ಷಕರು.​ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಅವರಿಗೆ ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಒಂದು ಒಳ್ಳೆಯ ಅವಕಾಶ ನೀಡಿದೆ ಎಂದರೆ ತಪ್ಪಾಗದು. ಅಲ್ಲದೆ ಕನ್ನಡಕ್ಕೆ ಮತ್ತೋರ್ವ ಹಾಸ್ಯ ನಟ ವರವಾಗಿ ಸಿಕ್ಕಿದ್ದಾರೆ ಎನ್ನಲಾಗುತ್ತಿದೆ.

ಕಾಮಿಡಿಯನ್​ ಕಾಮಿಡಿ ಕಿಲಾಡಿಗಳಲ್ಲಿ ಮಾಡುತ್ತಿದ್ದ ಒಳ್ಳೆಯ ಹಾಸ್ಯ ನಟನ ಸೆಟ್​ ಕತೆಯ ಫೀಲ್​ಗೆ ತಕ್ಕಂತಿದ್ದ ಕೊನೆಯ 40 ನಿಮಿಷ ಬಾಕ್ಸಿಂಗ್​ ಹಾಗೂ ಕುಸ್ತಿ ಪೋರ್ಷನ್​ ಚೆನ್ನಾಗಿದೆ. ಕಣ್ಮಣಿ ಎನ್ನುವ

ಸಿನಿಮಾ ಚೆನ್ನಾಗಿದೆ... ಸುದೀಪ್​ ಎಂಟ್ರಿ ಸಖತ್ತಾಗಿದೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸಿನಿಮಾ ತುಂಬಾ ನಿಧಾನವಾಗಿ ಸಾಗುತ್ತದೆ ಹಾಗೂ ಚಿತ್ರಕತೆ ಸರಿ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.


 

ಇನ್ನು ಸಿನಿಮಾ ಬಿಡುಗಡೆಗೆ ಮುನ್ನ ಒಂದು ಹೊಸ ಟೀಸರ್ ಅನ್ನೂ ಸಿನಿಮಾ ತಂಡ ಬಿಡುಗಡೆ ಮಾಡಿದೆ.ಬೆಳಗಿನ ಜಾವದ 'ಪೈಲ್ವಾನ್'​ ಸಿನಿಮಾ ಅಭಿಮಾನಿಗಳು ಬೆಳಗಿನಿಂದಲೇ ಚಿತ್ರಮಂದಿರಗಳ ಬಳಿ ಜಮಾಯಿಸಿದ್ದಾರೆ. ಈ ಹಿಂದೆ ಹೇಳಿದಂತೆ ಒಂದು ಕೋಟಿ ವೆಚ್ಚದಲ್ಲಿ ಚಿತ್ರೀಕರಿಸಲಾಗಿದ್ದ ಹೊಡಿತು ಕಣ್ಣು ಚಪ್ಪಾಳೆ ಹಾಡು ಸಿನಿಮಾದಲ್ಲಿ ಮಿಸ್ಸಿಂಗ್​ ಇದೆ. ಒಟ್ಟಾರೆ ಹೇಳುವುದಾದರೆ ಅಭಿಮಾನಿಗಳಿಗೆ 'ಪೈಲ್ವಾನ್​' ಒಂದು ಟ್ರೀಟ್​ ಇದ್ದಂತೆ ಎನ್ನಬಹುದು.

ಇದನ್ನೂ ಓದಿ: Pailwaan: ಸುದೀಪ್​ ಅಭಿನಯದ ಪೈಲ್ವಾನ್​ಗೆ ಶುಭಕೋರಿದ ಸಿನಿ ತಾರೆಯರು​..!

 

ಸಿನಿಮಾಗಾಗಿ ಸಿಕ್ಕಾಪಟ್ಟೆ ಹಾಟ್​ ಆಗಿ ಕಾಣಿಸಿಕೊಂಡ ನಟಿ ನಿವೇತಾ


 

 
First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading