HOME » NEWS » Entertainment » PAILWAAN MOVIE PRE RELEASE EVENT TOMORROW AE

Pailwaan: ನಾಳೆ ಸಂಜೆ ಅದ್ಧೂರಿಯಾಗಿ ನಡೆಯಲಿದೆ ಪೈಲ್ವಾನ್​ ಸಿನಿಮಾದ ಪ್ರಿ-ರಿಲೀಸ್​ ಕಾರ್ಯಕ್ರಮ..!

Pailwaan: ಕಿಚ್ಚ ಸುದೀಪ್​ ಅಭಿನಯದ ಪೈಲ್ವಾನ್​ ಸಿನಿಮಾ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಅದಕ್ಕಾಗಿ ಸಿನಿಮಾದ ಪ್ರಿ ರಿಲೀಸ್​ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ.

Anitha E | news18-kannada
Updated:September 5, 2019, 2:49 PM IST
Pailwaan: ನಾಳೆ ಸಂಜೆ ಅದ್ಧೂರಿಯಾಗಿ ನಡೆಯಲಿದೆ ಪೈಲ್ವಾನ್​ ಸಿನಿಮಾದ ಪ್ರಿ-ರಿಲೀಸ್​ ಕಾರ್ಯಕ್ರಮ..!
ಪೈಲ್ವಾನ್​ ಸಿನಿಮಾದ ಪೋಸ್ಟರ್​
  • Share this:
ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್​ ಒಂದು ರೀತಿ ನ್ಯಾಷನಲ್​ ಸ್ಟಾರ್​ ಇದ್ದಂತೆ. ಕನ್ನಡದ ಜತೆ ಜತೆಗೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲೂ ಚಿರಪರಿಚಿತರು. ಎಲ್ಲ ದಕ್ಷಿಣ ಭಾರತದ ಸಿನಿ ರಂಗವಲ್ಲದೇ ಬಾಲಿವುಡ್​ನಲ್ಲೂ ಕಿಚ್ಚನಿಗೆ ಅಭಿಮಾನಿಗಳ ಬಳಗವಿದೆ. 

ಇಂತಹ ನಟ ಅಭಿನಯಿಸಿರುವ ಹೊಸ ಸಿನಿಮಾ 'ಪೈಲ್ವಾನ್​' ರಿಲೀಸ್​ಗೆ ದಿನ ಗಣನೆ ಆರಂಭವಾಗಿದೆ. ಸೆ. 12ಕ್ಕೆ ವಿಶ್ವದಾದ್ಯಂತ ತೆರೆ ಕಾಣಲಿರುವ ಈ ಸಿನಿಮಾದಲ್ಲಿ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಅಭಿನಯಿಸಿದ್ದಾರೆ.

#Pehlwaan Pre-Release event on Sept 6th from 6PM at JRC Conventions, HYD'ಪೈಲ್ವಾನ್'​ ಎಲ್ಲೆಡೆ ತನ್ನ ಪಂಚ್​ ಕೊಡಲು ಸಿದ್ಧನಾಗಿದ್ದು, ಈ ಚಿತ್ರ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿಯೂ ಸಿನಿಮಾದ ಪ್ರಮೋಷನ್​ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಕನ್ನಡ ಹಾಗೂ ಬಾಲಿವುಡ್​ನಲ್ಲಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕಿಚ್ಚ ಹಾಗೂ ಅವರ ತಂಡ ಈಗ ಟಾಲಿವುಡ್​ನತ್ತ ಮುಖ ಮಾಡಿದೆ.ಇದನ್ನೂ ಓದಿ: ಕ್ಷಮೆಯಾಚಿಸಿದ ಅಮೀರ್​ ಖಾನ್​: ಹಣ ವಾಪಸ್​ ಕೇಳಿದ ಜನರು..!

ಹೌದು, ನಾಳೆ 'ಪೈಲ್ವಾನ್​' ಚಿತ್ರದ ಪ್ರಿ-ರಿಲೀಸ್​ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಿಚ್ಚನಿಗೆ ಟಾಲಿವುಡ್​ನಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದ್ದು, ಅವರಿಗಾಗಿ ನಾಳೆ ಹೈದರಾಬಾದಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಕಿಚ್ಚ, ಸುನೀಲ್​ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡವೇ ಭಾಗವಹಿಸಲಿದೆಯಂತೆ.

ಹೈದರಾಬಾದಿನಲ್ಲಿ ಜೆಆರ್​ಸಿ ಕನ್ವೆಂಷನ್​ಹಾಲ್​ನಲ್ಲಿ ನಾಳೆ (ಸೆ.6) ಸಂಜೆ 6ಕ್ಕೆ ಸಿನಿಮಾದ ಪ್ರಿ-ರಿಲೀಸ್​ ಕಾರ್ಯಕ್ರಮ ನಡೆಯಲಿದ್ದು, ಇದರ ನೇರ ಪ್ರಸಾರವನ್ನು ಯೂಟ್ಯೂಬ್​ನಲ್ಲಿ ಮಾಡಲಾಗುತ್ತಿದೆಯಂತೆ.

ಇದನ್ನೂ ಓದಿ: ಬಾಲಿವುಡ್​ ಅಂಗಳಕ್ಕೆ ಕಾಲಿಡಲಿದ್ದಾರೆ ಲಿಲ್ಲಿ ರಶ್ಮಿಕಾ ಮಂದಣ್ಣ..!

ಇನ್ನೂ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯಾರು ಬರಲಿದ್ದಾರೆ ಎನ್ನುವ ವಿಷಯ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಈ ಹಿಂದೆ ಪುನೀತ್ ಅವರು ಈ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದರು.

ಕೃಷ್ಣ ನಿರ್ದೇಶನದ ಈ ಸಿನಿಮಾವನ್ನು 3 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್​ ಮಾಡುವ ಆಲೋಚನೆ ಚಿತ್ರತಂಡದ್ದು. ಕಿಚ್ಚನಿಗೆ ನಾಯಕಿಯಾಗಿ ಆಕಾಂಕ್ಷಾ ಸಿಂಗ್​ ಅಭಿನಯಿಸಿದ್ದಾರೆ. ಈಕೆ ತೆಲುಗು ಹಾಗೂ ಹಿಂದಿ ಪ್ರೇಕ್ಷಕರಿಗೆ ಚಿರಪರಿಚಿತವಾದವರು.

Rashmi Gautham: ಕಣ್ಣೋಟದಿಂದಲೇ ಪಡ್ಡೆಗಳ ನಿದ್ದೆ ಕದ್ದಿರುವ ರಶ್ಮಿ ಗೌತಮ್​..!

First published: September 5, 2019, 2:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories