ಬೆನ್ನ ಮೇಲೆ ಮೂಡಿದ ‘ಪೈಲ್ವಾನ್‘; ಬಿಡುಗಡೆಗೂ ಮುನ್ನ ಅಭಿಮಾನಿಗಳಲ್ಲಿ ಟ್ಯಾಟೂ ಕ್ರೇಜ್

Pailwaan: ಕಿಚ್ಚ ಸುದೀಪ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕರು ಸುದೀಪ್ ಅವರ ಹೇರ್​ ಸ್ಟೈಲ್​, ಧರಿಸುವ ಬಟ್ಟೆ, ಮಾತಿನ ಶೈಲಿಯನ್ನು ಅನುಸರಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಚಂದ್ರು ಎಂಬ ಅಭಿಮಾನಿ ತನ್ನ ಬೆನ್ನ ಮೇಲೆ ಕಿಚ್ಚನ ಟ್ಯಾಟೂ ಹಾಕಿಸಿ ಕೊಂಡಿದ್ದಾರೆ

Harshith AS | news18
Updated:August 10, 2019, 2:03 PM IST
ಬೆನ್ನ ಮೇಲೆ ಮೂಡಿದ ‘ಪೈಲ್ವಾನ್‘; ಬಿಡುಗಡೆಗೂ ಮುನ್ನ ಅಭಿಮಾನಿಗಳಲ್ಲಿ ಟ್ಯಾಟೂ ಕ್ರೇಜ್
ಟ್ಯಾಟೂ
Harshith AS | news18
Updated: August 10, 2019, 2:03 PM IST
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭನಯದ ಪೈಲ್ವಾನ್​ ಸಿನೆಮಾ ಮುಂದಿನ ತಿಂಗಳು ತೆರೆಗೆ ಬರೋಕೆ ರೆಡಿಯಾಗಿದೆ. ಈಗಾಗಲೇ ಗಾಂಧಿ ನಗರದಲ್ಲಿ ಪೈಲ್ವಾನ್​ ಸಡಗರ ಜೋರಾಗಿದ್ದು, ಬಾಕ್ಸ್​ ಆಫೀಸು ಧೂಳಿಪಟ ಮಾಡುವ ನಿರೀಕ್ಷೆಯಲ್ಲಿದೆ. ಚಿತ್ರದ ಹಾಡುಗಳನ್ನು ಯ್ಯೂಟೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಮುಂದಿನ ತಿಂಗಳು ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಕೆಲ ಅಭಿಮಾಗಳು ಮೈಮೇಲೆ ಕಿಚ್ಚನ ಹಚ್ಚೆ ಹಾಕಿಸಿಕೊಂಡು ವಿಶೇಷ ಪ್ರೀತಿ ತೋರಿಸುತ್ತಿದ್ದಾರೆ.

ಕಿಚ್ಚ ಸುದೀಪ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕರು ಸುದೀಪ್ ಅವರ ಹೇರ್​ ಸ್ಟೈಲ್​, ಧರಿಸುವ ಬಟ್ಟೆ, ಮಾತಿನ ಶೈಲಿಯನ್ನು ಅನುಸರಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಚಂದ್ರು ಎಂಬ ಅಭಿಮಾನಿ ತನ್ನ ಬೆನ್ನ ಮೇಲೆ ಕಿಚ್ಚನ ಟ್ಯಾಟೂ ಹಾಕಿಸಿ ಕೊಂಡಿದ್ದಾರೆ. ವಿನೋದ್​ ಎಂಬ ಟ್ಯಾಟೂ ಆರ್ಟಿಸ್ಟ್​​ ಕೈಚಳಕದಲ್ಲಿ ಪೈಲ್ವಾನ್​ ಪೋಸ್​ ಹಚ್ಚೆಯಾಗಿ ಅಭಿಮಾನಿಯ ಬೆನ್ನ ಮೇಲೆ ರಾರಾಜಿಸುತ್ತಿದೆ. ಅಂತೆಯೇ ಈ ಅಭಿಮಾನಿಯ ಪ್ರೀತಿಗೆ ಸುದೀಪ್​ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ

ಟ್ಯಾಟೂ


ಕರ್ನಾಟಕದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕ ಕೆಲ ಭಾಗಗಳು ವರುಣನ ಆರ್ಭಟಕ್ಕೆ ನಲುಗಿ ಹೋಗಿದೆ. ಈ ನಿಟ್ಟಿನಲ್ಲಿ ಆ.9 ರಂದು ನಡೆಯಬೇಕಾಗಿದ್ದ ಪೈಲ್ವಾನ್​ ಚಿತ್ರದ ಆಡಿಯೋ ರಿಲೀಸ್​ ಕಾರ್ಯಕ್ರಮವನ್ನು ಕಿಚ್ಚ ಸುದೀಪ್​ ಮುಂದೂಡಿದ್ದಾರೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹಕ್ಕೆ ನೆರವಿನ ಹಸ್ತ ಚಾಚಿ ಎಂದು ಮನವಿ ಮಾಡಿದ್ದಾರೆ. ಅನೇಕರು ಈ ಮನವಿಯನ್ನು ಚಾಚೂತಪ್ಪದೇ ಪಾಲಿಸಿದ್ದು, ಸುದೀಪ್ ಕೋರಿಕೆಗೆ ಮಿಡಿದ ಅಭಿಮಾನಿ ಬಳಗ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.
First published:August 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...