News18 India World Cup 2019

Pailwaan Movie: 'ಪೈಲ್ವಾನ್​' ಸಿನಿಮಾದಲ್ಲಿ ಸುನೀಲ್​ ಶೆಟ್ಟಿ ಪಾತ್ರದ ಗುಟ್ಟು ರಟ್ಟು: ಇಂದು ಸಂಜೆ ಬಿಡುಗಡೆಯಾಗಲಿದೆ ಚಿತ್ರದ ಮತ್ತೊಂದು ಪೋಸ್ಟರ್​

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಅದೂ ಸಹ ಅವರ ಬಹು ನಿರೀಕ್ಷಿತ ಸಿನಿಮಾ 'ಪೈಲ್ವಾನ್​' ಕುರಿತಾಗಿ. ಅದೇನು ಅಂತ ತಿಳಿಯೋಕೆ ಮುಂದೆ ಓದಿ.

Anitha E | news18
Updated:May 22, 2019, 3:24 PM IST
Pailwaan Movie: 'ಪೈಲ್ವಾನ್​' ಸಿನಿಮಾದಲ್ಲಿ ಸುನೀಲ್​ ಶೆಟ್ಟಿ ಪಾತ್ರದ ಗುಟ್ಟು ರಟ್ಟು: ಇಂದು ಸಂಜೆ ಬಿಡುಗಡೆಯಾಗಲಿದೆ ಚಿತ್ರದ ಮತ್ತೊಂದು ಪೋಸ್ಟರ್​
ನಟ ಸುದೀಪ್​
Anitha E | news18
Updated: May 22, 2019, 3:24 PM IST
- ಅನಿತಾ ಈ, 

ಕನ್ನಡದ ಕಿಚ್ಚ ಸುದೀಪ್​ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್​ನಲ್ಲ ಬ್ಯಾಡ್ ಬಾಯ್​ ಸಲ್ಮಾನ್​ಖಾನ್​ ಜತೆ ಹಿಂದಿ ಸಿನಿಮಾ 'ದಬಂಗ್​ 3'ನಲ್ಲಿ ಅಭಿನಯಿಸುತ್ತಿದ್ದಾರೆ.

ಮೊನ್ನೆಯಷ್ಟೆ ಮಗಳ ಹುಟ್ಟುಹಬ್ಬಕ್ಕೆಂದು ಮೊದಲ ಹಂತದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಇನ್ನೂ 'ತೆಲುಗಿನ ಸೈರಾ ನರಸಿಂಹರೆಡ್ಡಿ' ಚಿತ್ರದಲ್ಲೂ ಅವರೂ ಕಿಚ್ಚ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇವುಗಳ ಜತೆಗೆ ಪೈಲ್ವಾನ್​ ಸಿನಿಮಾದ ಕೆಲಸಗಳೂ ನಡೆಯುತ್ತಿವೆ. ಹೀಗಿರುವಾಗಲೇ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಅದೂ ಸಹ ಅವರ ಬಹು ನಿರೀಕ್ಷಿತ ಸಿನಿಮಾ 'ಪೈಲ್ವಾನ್​' ಕುರಿತಾಗಿ.

ಇದನ್ನೂ ಓದಿ: ನಿರೀಕ್ಷಿಸಿ ಜಗ್ಗೇಶ್​ರ ಆತ್ಮಕತೆ: 'ನವರಸ ನಾಯಕನ ನಾಲ್ಕು ಹೆಜ್ಜೆ'ಯಾಗಿ ಜಗ್ಗಣ್ಣನ ಜೀವನದ ಕತೆ..!​

ಇಂದು ಸಂಜೆ 6ಕ್ಕೆ 'ಪೈಲ್ವಾನ್​' ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆಯಾಗಲಿದೆ. ಹೌದು, ಹೀಗೆಂದು ಖುದ್ದು ಸುದೀಪ್​ ಕೆಲವೇ ನಿಮಿಷಗಳ ಹಿಂದೆ ಟ್ವೀಟ್​ ಮಾಡಿದ್ದಾರೆ.
Loading...



Happy to tweet the poster of Sarkar... Played by @SunielVShetty Anna in #Pailwaan.. 6pm today.



ಈ ಸಿನಿಮಾದಲ್ಲಿ ಸುದೀಪ್​ ಜತೆಗೆ ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಅಭಿನಯಿಸಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದಲ್ಲಿ ಸುನೀಲ್​ ಶೆಟ್ಟಿ ಅವರು 'ಸರ್ಕಾರ್'​ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪೋಸ್ಟರ್​ ಅನ್ನು ಇಂದು ಸಂಜೆ 6ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಸುದೀಪ್​ ಟ್ವೀಟ್​ ಮೂಲಕ ಪ್ರಕಟಿಸಿದ್ದಾರೆ.



ಈ ಸಿನಿಮಾಗಾಗಿ ಸುದೀಪ್​ ಜಿಮ್​ ಮೆಟ್ಟಿಲು ಹತ್ತಿ ಬೆವರಿಳಿಸಿದ್ದ ಸುದ್ದಿ ಸಖತ್ ಸದ್ದು ಮಾಡಿತ್ತು. ಎಸ್​. ಕೃಷ್ಣ ನಿರ್ದೇಶನದ 'ಪೈಲ್ವಾನ್​' ಸಿನಿಮಾ ಆಗಸ್ಟ್​ನಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರಲಿದೆ.

 

Kingfisher Calendar: 2019ರ ಕಿಂಗ್​ಫಿಶರ್​ ಕ್ಯಾಲೆಂಡರ್​ ಶೂಟ್​ನ ಹಾಟ್​ ಹಾಟ್​ ಫೋಟೊಗಳು ..!


First published:May 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...