ಬಿಡುಗಡೆಗೂ ಮೊದಲೇ ದಾಖಲೆ ಬರೆದ ‘ಕಿಚ್ಚ’ ಸುದೀಪ್​ ನಟನೆಯ ‘ಪೈಲ್ವಾನ್​’

ಸಲ್ಮಾನ್​ ಖಾನ್ ನಟನೆಯ ‘ದಬಂಗ್​ 3’ ಚಿತ್ರಕ್ಕೆ ಸುದೀಪ್​ ವಿಲನ್​. ಹಾಗಾಗಿ, ಹಿಂದಿ ಚಿತ್ರರಂಗಕ್ಕೆ ಸುದೀಪ್​ ಪರಿಚಯವಿದೆ. ಈ ಕಾರಣಕ್ಕೆ ಸುದೀಪ್​ ನಟನೆಯ ಸಿನಿಮಾಕ್ಕೆ ಬಾಲಿವುಡ್​ ಅಂಗಳದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ.

Rajesh Duggumane | news18
Updated:May 25, 2019, 4:01 PM IST
ಬಿಡುಗಡೆಗೂ ಮೊದಲೇ ದಾಖಲೆ ಬರೆದ ‘ಕಿಚ್ಚ’ ಸುದೀಪ್​ ನಟನೆಯ ‘ಪೈಲ್ವಾನ್​’
ಪೈಲ್ವಾನ್​ ಚಿತ್ರದಲ್ಲಿ ಸುದೀಪ್​
Rajesh Duggumane | news18
Updated: May 25, 2019, 4:01 PM IST
‘ಕಿಚ್ಚ’ ಸುದೀಪ್​ ನಟನೆಯ ಪೈಲ್ವಾನ್​ ಸಿನಿಮಾ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಸುದೀಪ್​ ಸಿನಿಮಾದಲ್ಲಿ ಕುಸ್ತಿ ಪಟು ಆಗಿ ಕಾಣಿಸಿಕೊಂಡಿದ್ದು, ಭಿನ್ನ ಶೈಲಿಯಲ್ಲಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ಬಿಡುಡೆಗೂ ಮೊದಲೇ ಹೊಸ ದಾಖಲೆ ಬರೆಯುತ್ತಿದೆ.

ಅಷ್ಟಕ್ಕೂ ‘ಪೈಲ್ವಾನ್​’ ಮಾಡಿದ ದಾಖಲೆಯಾದರೂ ಏನು? ‘ಪೈಲ್ವಾನ್​’ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಸುದೀಪ್​ ಬಾಲಿವುಡ್​ನಲ್ಲೂ ಗುರುತಿಸಿಕೊಂಡಿರುವುದರಿಂದ ಈ ಚಿತ್ರದ ಹಿಂದಿ ಡಬ್ಬಿಂಗ್​ ರೈಟ್ಸ್​​ ದೊಡ್ಡ ಮೊತ್ತದ ಬೇಡಿಕೆ ಸೃಷ್ಟಿಯಾಗಿದೆ. ಮೂಲಗಳ ಪ್ರಕಾರ 14 ಕೋಟಿ ರೂ.ಗೆ ‘ಪೈಲ್ವಾನ್​’ ಹಿಂದಿ ಡಬ್ಬಿಂಗ್​ ಹಕ್ಕುಗಳು ಬಿಕರಿಯಾಗಿವೆ.

ಸುದೀಪ್​ ಈ ಮೊದಲು ಬಾಲಿವುಡ್​ ಚಿತ್ರಗಳಲ್ಲಿ ನಟಿಸಿದ್ದರು. ಈಗ ಸಲ್ಮಾನ್​ ಖಾನ್ ನಟನೆಯ ‘ದಬಂಗ್​ 3’ ಚಿತ್ರಕ್ಕೆ ಸುದೀಪ್​ ವಿಲನ್​. ಹಾಗಾಗಿ, ಹಿಂದಿ ಚಿತ್ರರಂಗಕ್ಕೆ ಸುದೀಪ್​ ಪರಿಚಯವಿದೆ. ಈ ಕಾರಣಕ್ಕೆ ಸುದೀಪ್​ ನಟನೆಯ ಸಿನಿಮಾಕ್ಕೆ ಬಾಲಿವುಡ್​ ಅಂಗಳದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ. ಹಾಗಾಗಿ ಹಿಂದಿ ವಿತರಕರು ‘ಪೈಲ್ವಾನ್​’ ಡಬ್ಬಿಂಗ್​ ಹಕ್ಕನ್ನು ದೊಡ್ಡ ಮೊತ್ತ ನೀಡಿ ಖರೀದಿಸಿದ್ದಾರೆ. ಇನ್ನು ಬಾಲಿವುಡ್​ನ ಕಬೀರ್​ ದುಹಾನ್​ ಸಿಂಗ್​, ಸುನೀಲ್​ ಶೆಟ್ಟಿ ಬಣ್ಣ ಹಚ್ಚಿರುವುದು ಬಾಲಿವುಡ್​ನಲ್ಲಿ ಈ ಚಿತ್ರಕ್ಕೆ ಬೇಡಿಕೆ ಹುಟ್ಟಲು ಮತ್ತೊಂದು ಕಾರಣ.

ಇದನ್ನೂ ಓದಿ: ‘ಪೈಲ್ವಾನ್’ ಟೀಸರ್ ನೋಡಿದ ಪ್ರೇಕ್ಷಕರು ‘ಸುಲ್ತಾನ್’ ಚಿತ್ರದ ಬಗ್ಗೆ ಮಾತನಾಡ್ತಿರೋದೇಕೆ?

ಈ ಚಿತ್ರಕ್ಕೆ ಸುದೀಪ್​ಗೆ ಜೊತೆಯಾಗಿ ಆಕಾಂಕ್ಷಾ ಸಿಂಗ್​ ಕಾಣಿಸಿಕೊಂಡಿದ್ದಾರೆ. ಎಸ್​. ಕೃಷ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಿನಿಮಾ ಆ.9ರಂದು ತೆರೆಗೆ ಬರುತ್ತಿದೆ. ಇದೇ ದಿನ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ದರ್ಶನ್​ ಸೇರಿ ಅನೇಕರು ಬಣ್ಣ ಹಚ್ಚಿದ್ದಾರೆ. ಹಾಗಾಗಿ, ಎರಡು ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಮುಖಾಮುಖಿಯಾಗುತ್ತಿವೆ.
Loading...

ಇದನ್ನೂ ಓದಿ: ಕುಂಬಳಕಾಯಿ ಒಡೆಯುವ ಸಂಭ್ರಮದಲ್ಲಿ ‘ಪೈಲ್ವಾನ್’ ತಂಡ; ಕೆಲವೇ ತಿಂಗಳಲ್ಲಿ ತೆರೆಮೇಲೆ ಬರಲಿದೆ ಸುದೀಪ್​ ಚಿತ್ರ

ಇತ್ತೀಚೆಗೆ ಪೈಲ್ವಾನ್​ ಟೀಸರ್​ ಭಾರಿ ಸದ್ದು ಮಾಡಿತ್ತು.  ‘ಪೈಲ್ವಾನ್​’ ಟೀಸರ್​ ನೋಡಿದರೆ ಒಮ್ಮೆ ‘ಸುಲ್ತಾನ್​’ ಟೀಸರ್​ ನೆನಪಾಗದೇ ಇರದು ಎಂದು ಅನೇಕರು ಬರೆದುಕೊಂಡಿದ್ದರು. ‘ಪೈಲ್ವಾನ್​’ ಹಾಗೂ ‘ಸುಲ್ತಾನ್​’ ಎರಡರಲ್ಲೂ ಟೀಸರ್​ನಲ್ಲಿ ಹೆಸರು ತೋರಿಸುವಾಗ ಬಳಕೆ ಮಾಡಿಕೊಂಡ ಬ್ಯಾಗ್ರೌಂಡ್​ ಬಣ್ಣ ಒಂದೇ ತೆರನಾದದ್ದು. ಸುದೀಪ್​ ಸ್ಟೈಲ್​, ಎದುರಾಳಿಯನ್ನು ನೆಲಕ್ಕೆ ಬೀಳಿಸುವ ಶೈಲಿ, ಕುಸ್ತಿ ನಡೆವ ಅಖಾಡ ಹೀಗೆ ಎಲ್ಲವೂ ‘ಸುಲ್ತಾನ್​’ ಟೀಸರ್​​ಅನ್ನು ಒಮ್ಮೆ ನೆನಪಿಸುತ್ತದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. 


First published:May 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...