HOME » NEWS » Entertainment » PAILWAAN MOVIE COLLECTION PAILWAAN COLLECTS 15 CRORE FOR THE SECOND DAY RMD

Pailwaan Collection: ಬಾಕ್ಸ್ ಆಫೀಸ್​ನಲ್ಲಿ ಪೈಲ್ವಾನ್ ಹವಾ; ಎರಡು ದಿನಕ್ಕೆ ಸುದೀಪ್ ಸಿನಿಮಾ ಗಳಿಸಿದ್ದೆಷ್ಟು ಗೊತ್ತಾ?

Pailwaan Collection: ಇಂದು-ನಾಳೆ ಸಿನಿಮಾ ಕಲೆಕ್ಷನ್​ ಹೆಚ್ಚುವ ಸಾಧ್ಯತೆ ಇದೆ. ವೀಕೆಂಡ್​ ಆದ್ದರಿಂದ ಸಹಜವಾಗಿಯೇ ಸಿನಿಮಾದಲ್ಲಿ ಗಳಿಕೆಯಲ್ಲಿ ಏರಿಕೆ ಕಾಣಲಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.

Rajesh Duggumane | news18-kannada
Updated:September 14, 2019, 4:44 PM IST
Pailwaan Collection: ಬಾಕ್ಸ್ ಆಫೀಸ್​ನಲ್ಲಿ ಪೈಲ್ವಾನ್ ಹವಾ; ಎರಡು ದಿನಕ್ಕೆ ಸುದೀಪ್ ಸಿನಿಮಾ ಗಳಿಸಿದ್ದೆಷ್ಟು ಗೊತ್ತಾ?
Pailwaan Collection: ಇಂದು-ನಾಳೆ ಸಿನಿಮಾ ಕಲೆಕ್ಷನ್​ ಹೆಚ್ಚುವ ಸಾಧ್ಯತೆ ಇದೆ. ವೀಕೆಂಡ್​ ಆದ್ದರಿಂದ ಸಹಜವಾಗಿಯೇ ಸಿನಿಮಾದಲ್ಲಿ ಗಳಿಕೆಯಲ್ಲಿ ಏರಿಕೆ ಕಾಣಲಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.
  • Share this:
ಗಾಂಧಿ ನಗರದ ಅಂಗಳದಲ್ಲಿ ಸದ್ಯ ಸುದೀಪ್​ ನಟನೆಯ ‘ಪೈಲ್ವಾನ್​​’ ಚಿತ್ರದ್ದೇ ಹವಾ. ಕನ್ನಡ, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಕಂಡಿರುವ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರಿಣಾಮ, ಬಾಕ್ಸ್​ ಆಫೀಸ್ ಕಲೆಕ್ಷನ್​ನಲ್ಲಿ ಒಳ್ಳೆಯ ಗಳಿಕೆಯಾಗುತ್ತಿದೆ.

‘ಪೈಲ್ವಾನ್​’ ಕನ್ನಡದಲ್ಲಿ ಗುರುವಾರ ತೆರೆಗೆ ಬಂದಿದ್ದರೆ, ಹಿಂದಿಯಲ್ಲಿ ಶುಕ್ರವಾರ ರಿಲೀಸ್​ ಆಗಿತ್ತು. ಮೊದಲ ದಿನ ಸಿನಿಮಾ ಕನ್ನಡ ಭಾಷೆ ಒಂದರಲ್ಲೇ ಸುಮಾರು 10-15 ಕೋಟಿ ರೂ. ಗಳಿಕೆ ಮಾಡಿದೆ ಎಂಬುದು ಬಾಲಿವುಡ್​ ಪಂಡಿತರ ಲೆಕ್ಕಾಚಾರ.

ಎರಡನೇ ದಿನಕ್ಕೆ ‘ಪೈಲ್ವಾನ್​’ ನಿರ್ಮಾಪಕರು 15 ಕೋಟಿ ಜೇಬಿಗೆ ಇಳಿಸಿಕೊಂಡಿದ್ದಾರೆ. ಕನ್ನಡದಲ್ಲಿ 9 ಕೋಟಿ ರೂ, ತೆಲುಗಿನಲ್ಲಿ 1 ಕೋಟಿ ರೂ., ಹಿಂದಿಯಲ್ಲಿ 3 ಕೋಟಿ ರೂ., ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ 1.5-2 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ‘ಪೈಲ್ವಾನ್’ ತೆಗಳುವ ಭರದಲ್ಲಿ ತನ್ನ ಸಿನಿಮಾಗೇ ಬೈದ ಐ ಲವ್ ಯು ಸಂಗೀತ ನಿರ್ದೇಶಕ!

ಕನ್ನಡದಲ್ಲಿ ‘ಪೈಲ್ವಾನ್​’ಗೆ ಸೆಡ್ಡು ಹೊಡೆಯಲು ಯಾವುದೇ ಸಿನಿಮಾ ತೆರೆಕಂಡಿಲ್ಲ. ಹೀಗಾಗಿ ಸ್ಯಾಂಡಲ್​ವುಡ್​ ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಯಾವುದೇ ತೊಂದರೆ ಉಂಟಾಗದು. ಆದರೆ, ಬಾಲಿವುಡ್​ನಲ್ಲಿ ‘ಡಿಯರ್​ ಗರ್ಲ್​’ ಹಾಗೂ ‘ಸೆಕ್ಷನ್​ 375’ ರಿಲೀಸ್​ ಆಗಿದೆ. ಇದು ‘ಪೈಲ್ವಾನ್’​ ಹಿಂದಿ ಅವತರಣಿಕೆಗೆ ಕೊಂಚ ಹಿನ್ನಡೆ ಉಂಟು ಆಗುವ ಸಾಧ್ಯತೆ ಇದೆ. ತೆಲುಗಿನಲ್ಲಿ ನಾಣಿ ಅಭಿನಯದ ‘ಗ್ಯಾಂಗ್​ ಲೀಡರ್​’ ಚಿತ್ರ ರಿಲೀಸ್​ ಆಗಿದೆ. ಇದು ಕೂಡ ‘ಪೈಲ್ವಾನ್​’ ಕಲೆಕ್ಷನ್​ಗೆ ಹೊಡೆತ ನೀಡುವ ಸಾಧ್ಯತೆ ಇದೆಯಂತೆ.

ಇಂದು-ನಾಳೆ ಸಿನಿಮಾ ಕಲೆಕ್ಷನ್​ ಹೆಚ್ಚುವ ಸಾಧ್ಯತೆ ಇದೆ. ವೀಕೆಂಡ್​ ಆದ್ದರಿಂದ ಸಹಜವಾಗಿಯೇ ಸಿನಿಮಾದಲ್ಲಿ ಗಳಿಕೆಯಲ್ಲಿ ಏರಿಕೆ ಕಾಣಲಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ. ‘ಪೈಲ್ವಾನ್​’ ಚಿತ್ರದಲ್ಲಿ ಸುದೀಪ್​ಗೆ ಜೊತೆಯಾಗಿ ಆಕಾಂಕ್ಷಾ ಸಿಂಗ್​ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ  ಸುನೀಲ್​ ಶೆಟ್ಟಿ, ಕಬೀರ್​ ದುಹಾನ್​ ಸಿಂಗ್​ ಹಾಗೂ ಸುಶಾಂತ್​ ಸಿಂಗ್​ ಬಣ್ಣ ಹಚ್ಚಿದ್ದಾರೆ. ಕೃಷ್ಣ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​  ಹೇಳಿದ್ದಾರೆ.

First published: September 14, 2019, 4:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories