ಪೈಲ್ವಾನ್ ಪೈರಸಿಯಿಂದ ನಿರ್ಮಾಪಕರು ಕಳೆದುಕೊಂಡಿದ್ದು ಅಷ್ಟಿಷ್ಟಲ್ಲ..!

Pailwaan Collections: ಅಭಿನಯ ಚಕ್ರವರ್ತಿ ಅಭಿನಯದ ಈ ಚಿತ್ರವು ಬಿಡುಗಡೆಯಾದ ಎಲ್ಲ ಕಡೆಯು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಗಳಿಕೆಯಿಂದ ನಿರ್ಮಾಪಕಿ ಸ್ವಪ್ನ ಕೃಷ್ಣ ಸೇಫ್ ಆಗಿದ್ದಾರೆ. ನಿರ್ದೇಶಕ ಕೃಷ್ಣ ಲಾಭದ ಲೆಕ್ಕಾಚಾರದಲ್ಲಿದ್ದಾರೆ. ಇದರ ನಡುವೆ ಪೈರಸಿ ಕೃತ್ಯಕ್ಕೆ ನಿರ್ಮಾಪಕರು ಕಳೆದುಕೊಂಡಿದ್ದು ಕೋಟಿಗಳು ಎಂಬ ಸುದ್ದಿ ಬಹಿರಂಗವಾಗಿದೆ.

zahir | news18-kannada
Updated:September 22, 2019, 3:40 PM IST
ಪೈಲ್ವಾನ್ ಪೈರಸಿಯಿಂದ ನಿರ್ಮಾಪಕರು ಕಳೆದುಕೊಂಡಿದ್ದು ಅಷ್ಟಿಷ್ಟಲ್ಲ..!
Kiccha Sudeep
  • Share this:
'ಪೈಲ್ವಾನ್', ಪೈರಸಿ, ಫ್ಯಾನ್ ಫೈಟ್...ಸದ್ಯಕ್ಕಂತು ಸ್ಯಾಂಡಲ್​ವುಡ್​ನಲ್ಲಿ ಈ ವಿಷಯಗಳು ತಣ್ಣಗಾಗುವಂತೆ ಕಾಣುತ್ತಿಲ್ಲ. ಕಿಚ್ಚನ ಕಟುಮಸ್ತಿನ 'ಪೈಲ್ವಾನ್' ಮೋಡಿಗೆ ಬಾಕ್ಸಾಫೀಸ್​ನಲ್ಲಿ ನೂರು ಕೋಟಿ ಹರಿದುಬಂದಿದೆ ಎನ್ನಲಾಗುತ್ತಿದೆ. ಈ ಸುದ್ದಿಯ ಬೆನ್ನಲ್ಲೇ ನಟರಿಬ್ಬರ ಟ್ವೀಟ್​ಗೆ ಎದಿರೇಟು, ಪೈರಸಿ ಲಿಂಕ್ ಹಂಚಿಕೊಂಡವರಿಗೆ ಪೊಲೀಸರ ಲಾಠಿ ಏಟು..ಹೀಗೆ ಮುಂದುವರೆದು ಇದೀಗ 'ಪೈಲ್ವಾನ್' ನಷ್ಟದ ಲೆಕ್ಕಾಚಾರವೊಂದು ಹೊರಬಿದ್ದಿದೆ.

ಅಭಿನಯ ಚಕ್ರವರ್ತಿ ಅಭಿನಯದ ಈ ಚಿತ್ರವು ಬಿಡುಗಡೆಯಾದ ಎಲ್ಲ ಕಡೆಯು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಗಳಿಕೆಯಿಂದ ನಿರ್ಮಾಪಕಿ ಸ್ವಪ್ನ ಕೃಷ್ಣ ಸೇಫ್ ಆಗಿದ್ದಾರೆ. ನಿರ್ದೇಶಕ ಕೃಷ್ಣ ಲಾಭದ ಲೆಕ್ಕಾಚಾರದಲ್ಲಿದ್ದಾರೆ. ಇದರ ನಡುವೆ ಪೈರಸಿ ಕೃತ್ಯಕ್ಕೆ ನಿರ್ಮಾಪಕರು ಕಳೆದುಕೊಂಡಿದ್ದು ಕೋಟಿಗಳು ಎಂಬ ಸುದ್ದಿ ಬಹಿರಂಗವಾಗಿದೆ.

ಬಿಡುಗಡೆಯಾದ ಮರುದಿನವೇ ಪೈರಸಿ ದಾಳಿಗೆ ಒಳಗಾಗಿದ್ದ 'ಪೈಲ್ವಾನ್' ಕಳೆದುಕೊಂಡಿರುವುದು 5 ಕೋಟಿಗೂ ಹೆಚ್ಚು ಎಂಬ ಮಾಹಿತಿ ಸಿಕ್ಕಿದೆ. ಅದರಲ್ಲೂ ಇತರೆ ಕಾಲಿವುಡ್​-ಟಾಲಿವುಡ್​ನಲ್ಲಿ ಚಿತ್ರದ ಕಲೆಕ್ಷನ್​ ಕಡಿಮೆಯಾಗಲು ಪೈರಸಿಯಾಗಿರುವುದೇ ಮುಖ್ಯ ಕಾರಣ ಎನ್ನಲಾಗಿದೆ.

ಈಗಾಗಲೇ ಪೈರಸಿ ಲಿಂಕ್ ಶೇರ್​ ಮಾಡಿರುವ ಕರ್ನಾಟಕದ ಯುವಕನೊಬ್ಬ ಅರೆಸ್ಟ್ ಆಗಿದ್ದು, ಇದರ ಹಿಂದಿರುವ ಇತರೆ ಕಾಣದ ಕೈಗಳ ಹುಡುಕಾಟದಲ್ಲಿದೆ ಚಿತ್ರತಂಡ. ಚಿತ್ರದ ಡೌನ್​ಲೋಡ್ ಲಿಂಕ್​ಗಳು ಪ್ರತಿದಿನವು ಹೊರಬೀಳುತ್ತಿದ್ದು, ಒಂದು ಮಾಹಿತಿ ಪ್ರಕಾರ ಚಿತ್ರತಂಡ ದಿನ ನಿತ್ಯ 100 ಕ್ಕೂ ಹೆಚ್ಚಿನ ಲಿಂಕ್ ಡಿಲೀಟ್ ಮಾಡುವಲ್ಲಿ ನಿರತರಾಗಿದ್ದಾರೆ. ಇದುವರೆಗೂ ಸಾವಿರಕ್ಕಿಂತ ಹೆಚ್ಚಿನ ಪೈರಸಿ ಲಿಂಕ್​ ಡಿಲೀಟ್ ಮಾಡಲಾಗಿದೆ ಎಂದು ಪೈಲ್ವಾನ್ ತಂಡ ಹೇಳಿಕೊಂಡಿದೆ. ಇಷ್ಟೆಲ್ಲಾ ತೊಂದರೆಯ ನಡುವೆ ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿರುವುದು ಸಿನಿಪಂಡಿತರ ಹುಬ್ಬೇರುವಂತೆ ಮಾಡಿದೆ.

ಇದನ್ನೂ ಓದಿ: 1 ಲಕ್ಷದೊಳಗೆ ಖರೀದಿಸಬಹುದಾದ ಅತ್ಯಾಕರ್ಷಕ ಆರು ಬೈಕುಗಳ ಪಟ್ಟಿ ಇಲ್ಲಿದೆ

ಕಿಚ್ಚ ಸುದೀಪ್ ಅವರ ಕೆರಿಯರ್​ನ ಮೊದಲ 100 ಕೋಟಿ ಕಲೆಕ್ಷನ್ ಚಿತ್ರ ಎಂಬ ಹೆಗ್ಗಳಿಕೆ 'ಪೈಲ್ವಾನ್'​ ಪಾಲಾಗಲಿದೆ ಎನ್ನಲಾಗುತ್ತಿದೆ. ಸೋಲು-ಗೆಲುವು ಲೆಕ್ಕಾಚಾರದ ನಡುವೆ  ಪೈರಸಿಯನ್ನು ಮೆಟ್ಟಿನಿಂತ ಅಭಿನಯ ಚಕ್ರವರ್ತಿಯ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:  ಮತ್ತೊಮ್ಮೆ ಮಾದಕ ಮೈಮಾಟದಿಂದ ಪಡ್ಡೆಗಳ ನಿದ್ದೆಗೆಡಿಸಿದ ಸನ್ನಿ ಲಿಯೋನ್

First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading