HOME » NEWS » Entertainment » PAILWAAN KICHCHA SUDEEP SHARES HIS EXPERIENCE WITH THE STAR DIRECTOR AE

Pailwaan: ಕಿಚ್ಚ ಸುದೀಪ್​ ಜೀವನ ಪರ್ಯಂತ ಮರೆಯೋದಿಲ್ಲ ಎಂದಿದ್ದು ಯಾರನ್ನ ಗೊತ್ತಾ?

Pailwaan: ಇಂದು ಕನ್ನಡದ ಕಿಚ್ಚ ಸುದೀಪ್ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿದ್ದಾರೆ. ಕನ್ನಡ ಅಲ್ಲದೆ, ತೆಲುಗು, ತಮಿಳಿನಲ್ಲೂ ಕಿಚ್ಚ ಸುದೀಪ್‍ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಹಾಗಂತ ಇಂತಹದೊಂದು ಕ್ರೇಜ್​... ಈ ಮಟ್ಟದ ಸ್ಟಾರ್ ಪಟ್ಟ ಸುದೀಪ್‍ಗೆ ಸುಖಾಸುಮ್ಮನೆ ಒಲಿದಿದ್ದಲ್ಲ. ಅದರಲ್ಲಿ ಸುದೀಪ್ ಅವರ ಸಾಕಷ್ಟು ವರ್ಷಗಳ ಪರಿಶ್ರಮ ಅಡಗಿದೆ. ಇನ್ನು ಸುದೀಪ್ ಅವರ ಪರಿಶ್ರಮ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದು ಮಾತ್ರ ಓರ್ವ ಸ್ಟಾರ್​ ನಿರ್ದೇಶಕ.

Anitha E | news18-kannada
Updated:September 9, 2019, 9:02 AM IST
Pailwaan: ಕಿಚ್ಚ ಸುದೀಪ್​ ಜೀವನ ಪರ್ಯಂತ ಮರೆಯೋದಿಲ್ಲ ಎಂದಿದ್ದು ಯಾರನ್ನ ಗೊತ್ತಾ?
ಪೈಲ್ವಾನ ಸಿನಿಮಾದಲ್ಲಿ ಕಿಚ್ಚ ಸುದೀಪ್​
  • Share this:
ಕನ್ನಡದ ಕಿಚ್ಚ ಸುದೀಪ್ ಇಂದು ಸ್ಯಾಂಡಲ್​ವುಡ್​ನ ಆಚೆಗೂ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕರುನಾಡ 'ಸ್ವಾತಿಮುತ್ತು', ಸೌತ್ ಸಿನಿಮಾದ ಸ್ವತ್ತಾಗಿದೆ. ಇದಕ್ಕೆಲ್ಲ ಕಾರಣವೇ ಆ ಒಬ್ಬರು ವ್ಯಕ್ತಿ. ಹೀಗಾಗಿ ಸುದೀಪ್ ಅವರನ್ನು ಜೀವನ ಪರ್ಯಂತ ನೆನಪಿಸಿಕೊಳ್ತಾರಂತೆ.

ಇಂದು ಕನ್ನಡದ ಕಿಚ್ಚ ಸುದೀಪ್ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿದ್ದಾರೆ. ಕನ್ನಡ ಅಲ್ಲದೆ, ತೆಲುಗು, ತಮಿಳಿನಲ್ಲೂ ಕಿಚ್ಚ ಸುದೀಪ್‍ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಹಾಗಂತ ಇಂತಹದೊಂದು ಕ್ರೇಜ್​... ಈ ಮಟ್ಟದ ಸ್ಟಾರ್ ಪಟ್ಟ ಸುದೀಪ್‍ಗೆ ಸುಖಾಸುಮ್ಮನೆ ಒಲಿದಿದ್ದಲ್ಲ. ಅದರಲ್ಲಿ ಸುದೀಪ್ ಅವರ ಸಾಕಷ್ಟು ವರ್ಷಗಳ ಪರಿಶ್ರಮ ಅಡಗಿದೆ. ಇನ್ನು ಸುದೀಪ್ ಅವರ ಪರಿಶ್ರಮ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದು ಮಾತ್ರ ಓರ್ವ ಸ್ಟಾರ್​ ನಿರ್ದೇಶಕ. ಆ ಕೀರ್ತಿ ಅವರಿಗೂ ಕೊಡಲೇಬೇಕು. ಅದು ಬೇರಾರು ಅಲ್ಲ. ದಿ ಗ್ರೇಟ್ ಡೈರೆಕ್ಟರ್, ರಾಜಮೌಳಿ.

Youtube Video

(1:55 ನಿಮಿಷದಿಂದ ರಾಜಮೌಳಿ ಹಾಗೂ ಈಗ ಸಿನಿಮಾ ಕುರಿತ ಮಾತುಗಳಿವೆ)

ಹೌದು, ರಾಜಮೌಳಿ ನಿರ್ದೇಶನದ `ಈಗ' ಸಿನಿಮಾದಿಂದಲೇ ಕನ್ನಡದ 'ಸ್ವಾತಿಮುತ್ತು', ಸೌತ್ ಇಂಡಿಯಾದ ಸ್ವತ್ತಾಗಿದ್ದು. ಕನ್ನಡದ ನಟನ ಅಭಿನಯ ಸಾಮರ್ಥ್ಯ ಕರುನಾಡಿನ ಆಚೆಗೂ ಗೊತ್ತಾಗುವಂತೆ ಆಗಿದ್ದು. ಇದೇ ಕಾರಣಕ್ಕೆ `ಈಗ' ಸಿನಿಮಾ ಹಾಗೂ ಚಿತ್ರದ ನಿರ್ದೇಶಕ ರಾಜಮೌಳಿಯನ್ನ ತಾನು ಜೀವನ ಪರ್ಯಂತ ಮರೆಯಲಾರೆ ಅಂದಿದ್ದಾರೆ ಕಿಚ್ಚ ಸುದೀಪ್.

Youtube Video


ಅಂದಹಾಗೆ ಈ ಮಾತನ್ನ ಸುದೀಪ್ ಹೇಳಿದ್ದು 'ಪೈಲ್ವಾನ್' ಪ್ರೀ ರಿಲೀಸ್ ಈವೆಂಟ್‍ನಲ್ಲಿ. ಹೈದರಾಬಾದ್‍ನಲ್ಲಿ ಸೆಪ್ಟೆಂಬರ್ 6 ರಂದು ಅದ್ಧೂರಿಯಾಗಿ ಈ ಕಾರ್ಯಕ್ರಮ ನೆರವೇರಿತು. ಕನ್ನಡದ ಚಿನ್ನದಂತಹ ಸಿನಿಮಾವಾಗುತ್ತೆ ಅಂತ ಹೇಳಲಾಗ್ತಿರೋ 'ಪೈಲ್ವಾನ್' ಸಿನಿಮಾದ ಈವೆಂಟ್‍ನಲ್ಲಿ, ಗೋಲ್ಡನ್ ಗರ್ಲ್, ದೇಶದ ಹೆಮ್ಮೆಯ ಕ್ರೀಡಾಪಟು ಪಿವಿ ಸಿಂಧು ಭಾಗವಹಿಸಿದ್ದರು. 'ಪೈಲ್ವಾನ'ನಿಗೆ ಶುಭ ಹಾರೈಸಿದ್ರು. ತೆಲುಗು ಸಿನಿಮಾಗಳಿಗೆ ಕನ್ನಡ ನೆಲದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಕನ್ನಡಿಗರು ತೆಲುಗು ಸಿನಿಮಾಗಳನ್ನ ತಮ್ಮದೇ ಸಿನಿಮಾಗಳು ಎಂಬಂತೆ ನೋಡ್ತಾರೆ ಹಾಗೂ ಪ್ರೀತಿಸ್ತಾರೆ. ತೆಲುಗು ಪ್ರೇಕ್ಷಕರೂ ಸಹ ಅದೇ ಪ್ರೀತಿ ವಿಶ್ವಾಸವನ್ನ ತೋರಿಸಬೇಕು. ತೋರಿಸ್ತಾರೆ ಕೂಡ, ಅದಕ್ಕೆ ಉದಾಹರಣೆ 'ಕೆ.ಜಿ.ಎಫ್' ಸಿನಿಮಾದ ಗೆಲುವು ಎಂದರು ನಿರ್ದೇಶಕ ಬಯೋಪಾಟಿ ಶೀನು.ಕನ್ನಡದ 'ಪೈಲ್ವಾನ'ನ ಪ್ರಚಾರ ತೆಲುಗು ನೆಲದಲ್ಲಿಯೂ ಭರ್ಜರಿಯಾಗಿ ನಡೀತಾ ಇದೆ. ಆಂಧ್ರ-ತೆಲಂಗಾಣದ ಪ್ರತಿ ಊರುಗಳಿಗೂ 'ಪೈಲ್ವಾನ' ಸಿನಿಮಾವನ್ನು ಮುಟ್ಟಿಸೋ ಕೆಲಸ ಮಾಡಲಾಗಿದೆ. ಕಾಲೇಜು, ರೈಲ್ವೆ ನಿಲ್ದಾಣ ಹೀಗೆ ನಾನಾ ಕಡೆ ಚಿತ್ರಪ್ರೇಮಿಗಳನ್ನ ತಲುಪೋ ಪ್ರಯತ್ನ ಮಾಡಲಾಗಿದೆ.

Shanvi Srivastava: ಹಾಟ್​ ಫೋಟೋಶೂಟ್​ಗೆ ಕ್ಯೂಟ್​ ಆಗಿ ಪೋಸ್​ ಕೊಟ್ಟ ಶಾನ್ವಿ..!


 
First published: September 8, 2019, 11:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories