Pailwaan Collection: ಪೈಲ್ವಾನ್​ ಮೊದಲ ದಿನದ ಗಳಿಕೆ: ಸಿನಿಮಾ ಮೆಚ್ಚಿ ಟ್ವೀಟ್​ ಮಾಡಿದ ಸಲ್ಮಾನ್​ ಖಾನ್​..!

Pailwaan Collection: ರಾಜ್ಯದಲ್ಲಿ 450 ಸ್ಕ್ರೀನ್‍ಗಳಲ್ಲಿ, ಅಮೆರಿಕದಲ್ಲಿ 50ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ, ಕೊಲ್ಲಿಯ ಐದು ದೇಶಗಳು, ಆಫ್ರಿಕಾದ ಏಳು ದೇಶಗಳು ಸೇರಿದಂತೆ ವಿಶ್ವದಾದ್ಯಂತ ಬರೋಬ್ಬರಿ ಮೂರು ಸಾವಿರ ಸ್ಕ್ರೀನ್‍ಗಳಲ್ಲಿ ಪೈಲ್ವಾನ್ ತೆರೆ ಕಂಡಿದೆ. ಈ ಸಿನಿಮಾ ನೋಡಿದ ಸಲ್ಮಾನ್​ ಖಾನ್​ ಸಹ

Anitha E | news18-kannada
Updated:September 13, 2019, 2:11 PM IST
Pailwaan Collection: ಪೈಲ್ವಾನ್​ ಮೊದಲ ದಿನದ ಗಳಿಕೆ: ಸಿನಿಮಾ ಮೆಚ್ಚಿ ಟ್ವೀಟ್​ ಮಾಡಿದ ಸಲ್ಮಾನ್​ ಖಾನ್​..!
ಸಲ್ಮಾನ್ ಖಾನ್- ಸುದೀಪ್
Anitha E | news18-kannada
Updated: September 13, 2019, 2:11 PM IST
ನಿನ್ನೆಯಿಂದ 'ಪೈಲ್ವಾನ್' ಕಿಚ್ಚನ ಆಟ ಶುರುವಾಗಿದೆ. 'ಪೈಲ್ವಾನ'ನ ಪಟ್ಟು ನೋಡಿ ಪ್ರೇಕ್ಷಕರೂ ಸಾಹೋ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಪೈಲ್ವಾನನ ಆರ್ಭಟ ಜೋರಾಗಿದೆ. ವಿದೇಶಗಳಲ್ಲೂ ಕನ್ನಡದ 'ಪೈಲ್ವಾನ್‍'ನ ಮೇಲೆ ಪಂದ್ಯಗಳು ನಡೀತಿವೆ. ಕಿಚ್ಚನ ಪಂಚ್‍ಗೆ ಬಾಕ್ಸಾಫಿಸ್​ ಧೂಳೀಪಟವಾಗಿದೆ.

'ಪೈಲ್ವಾನ್' ಮೊದಲ ದಿನದ ಗಳಿಕೆ ಎಲ್ಲ ನಿರೀಕ್ಷೆಗಳನ್ನೂ ಮೀರಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ 'ಪೈಲ್ವಾನ್' ರಿಲೀಸ್ ಆಗಿದ್ದು ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Actress Akanksha Singh
ನಟಿ ಆಕಾಂಕ್ಷಾ ಸಿಂಗ್​


ರಾಜ್ಯದಲ್ಲಿ 450 ಸ್ಕ್ರೀನ್‍ಗಳಲ್ಲಿ, ಅಮೆರಿಕದಲ್ಲಿ 50ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ, ಕೊಲ್ಲಿಯ ಐದು ದೇಶಗಳು, ಆಫ್ರಿಕಾದ ಏಳು ದೇಶಗಳು ಸೇರಿದಂತೆ ವಿಶ್ವದಾದ್ಯಂತ ಬರೋಬ್ಬರಿ ಮೂರು ಸಾವಿರ ಸ್ಕ್ರೀನ್‍ಗಳಲ್ಲಿ 'ಪೈಲ್ವಾನ್' ತೆರೆ ಕಂಡಿದೆ.

ಇದನ್ನೂ ಓದಿ: ವಿವಾಹದ ನಂತರ ನಾಯಕಿಯಾಗಿ ಮಿಂಚಿದ 'ಪೈಲ್ವಾನ್'​​ ನಟಿ: ಆಕಾಂಕ್ಷಾಗೆ ಸಿಕ್ತು ಕನ್ನಡಿಗರ ಪ್ರೀತಿ​..!

ಪೈಲ್ವಾನ್​ನನ್ನು​ ಮೆಚ್ಚಿಕೊಂಡ ಸುಲ್ತಾನ್​ 

ಈ ಸಿನಿಮಾವನ್ನು ನೋಡಿರುವ ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​​ ಖುಷಿಯಿಂದ ಟ್ವೀಟ್​ ಮಾಡಿದ್ದಾರೆ. 'ಪೈಲ್ವಾನ್​ ಭಾವನೆ, ಹಾಸ್ಯ ಹಾಗೂ ಆ್ಯಕ್ಷನ್​ನ ಮಿಶ್ರಣ' ಎಂದು ಪತ್ರಿಕೆಯೊಂದರಲ್ಲಿ ಮುದ್ರಣವಾಗಿರುವುದರ ಫೋಟೋತೆಗೆದು ಸಲ್ಮಾನ್​ ಟ್ವೀಟ್​ ಮಾಡಿದ್ದಾರೆ.
Loading...

Yeh do pehlwaan Sahi bol rahe hai.. @SunielVShetty @KicchaSudeep pic.twitter.com/YqZKL4o7Z6ನಿನ್ನೆ ಬೆಳಗಿನ ಜಾವದಿಂದಲೇ 'ಪೈಲ್ವಾನ'ನ ಆಟ ಆರಂಭವಾಗಿದ್ದು,  ಈ ಸಿನಿಮಾಗಾಗಿ ಶೋಗಳನ್ನೂ ಹೆಚ್ಚಿಸಲಾಗಿದೆ.  ಸಿನಿ ಪಂಡಿತರ ಪ್ರಕಾರ 'ಪೈಲ್ವಾನ್' ಮೊದಲ ದಿನವೇ ಕನ್ನಡ ಒಂದು ಭಾಷೆಯಿಂದಲೇ 8ರಿಂದ 10 ಕೋಟಿ ರೂಪಾಯಿ ಬಾಚಿಕೊಂಡಿದ್ದಾನೆ ಎನ್ನಲಾಗಿದೆ. ಇದು ಸ್ಯಾಂಡಲ್‍ವುಡ್ ಮಟ್ಟಿಗೆ ಉತ್ತಮ ಗಳಿಕೆ ಎನ್ನಬಹುದು.

ಇದನ್ನೂ ಓದಿ: Pailwaan: ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​ರ ಜಾಲಿ ಜಾಲಿ ಟಿಕ್​ಟಾಕ್​ ವಿಡಿಯೋ..! ​

ಸಾಮಾನ್ಯವಾಗಿ ಸಿನಿಮಾಗಳನ್ನು ಪ್ರತಿ ಶುಕ್ರವಾರ ರಿಲೀಸ್ ಮಾಡಲಾಗುತ್ತೆ. ಆದರೆ ಬಾಲಿವುಡ್​ ಸಿನಿಮಾಗಳಲ್ಲಿ ಹಲವು ಚಿತ್ರಗಳು ಗುರುವಾರವೇ ಬಿಡುಗಡೆಯಾಗುತ್ತವೆ. ಅದರಂತೆ ಈ ಸಲ ಕಿಚ್ಚನ 'ಪೈಲ್ವಾನ' ಒಂದು ದಿನ ಮೊದಲೇ ತೆರೆಗಪ್ಪಳಿಸಿದೆ.

45 ಕೋಟಿ ಬಜೆಟ್‍ನಲ್ಲಿ ನಿರ್ಮಾಣವಾಗಿರುವ 'ಪೈಲ್ವಾನ್' ಚಿತ್ರ, ಬೇರೆ ಭಾಷೆಗಳಲ್ಲಿ ಎಷ್ಟು ಗಳಿಕೆ ಮಾಡಿದೆ ಅನ್ನೋ ಮಾಹಿತಿ ಇನ್ನೂ ಸಿನಿ ತಂಡ ಅಧಿಕೃವಾಗಿ ಪ್ರಕಟಿಸಿಲ್ಲ. ಅಲ್ಲದೆ ಒಂದೇ ದಿನಕ್ಕೆ ಹತ್ತು ಕೋಟಿ ಗಳಿಸಿದೆ ಎನ್ನಲಾಗುತ್ತಿರುವ 'ಪೈಲ್ವಾನ್​' ವಾರಾಂತ್ಯಕ್ಕೆ ಇನ್ನೆಷ್ಟು ಗಳಿಸಬಹುದು.

 

 

Akanksha Singh: 'ಪೈಲ್ವಾನ್'​ ಬ್ಯೂಟಿ ಆಕಾಂಕ್ಷಾರ ಆಫ್​ಸ್ಕ್ರೀನ್​ ರೊಮ್ಯಾನ್ಸ್​..! ​
 

 

 
First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...