ಬಾಲಿವುಡ್​ಗೆ ಬಾದ್​ಶಾ ಆಗುವ ಸ್ಯಾಂಡಲ್​ವುಡ್​ ಸ್ಟಾರ್ ಯಾರು?; ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

ಬಾಲಿವುಡ್​ಗೆ ಸಿನಿಮಾ ಡಬ್​ ಮಾಡಿ ರಿಲೀಸ್​ ಮಾಡುವ ಪ್ರಯತ್ನದಲ್ಲಿ ಸಂಪೂರ್ಣವಾಗಿ ಯಶಸ್ಸು ಕಂಡ ಖ್ಯಾತಿ ‘ಕೆಜಿಎಫ್​’ ಸಿನಿಮಾದ್ದು. ಈ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳು ಬಾಲಿವುಡ್​ಗೆ ಡಬ್​ ಆಗಿ ತೆರೆಕಾಣುತ್ತಿವೆ.

Rajesh Duggumane | news18-kannada
Updated:September 13, 2019, 4:50 PM IST
ಬಾಲಿವುಡ್​ಗೆ ಬಾದ್​ಶಾ ಆಗುವ ಸ್ಯಾಂಡಲ್​ವುಡ್​ ಸ್ಟಾರ್ ಯಾರು?; ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ
ಸ್ಯಾಂಡಲ್​​ವುಡ್​ ಸ್ಟಾರ್​ ನಟರು
Rajesh Duggumane | news18-kannada
Updated: September 13, 2019, 4:50 PM IST
ಬಾಲಿವುಡ್​ನಲ್ಲಿ ಈಗ ಸ್ಯಾಂಡಲ್​ವುಡ್​ ಹವಾ ಶುರುವಾಗಿದೆ. ಈ ಮೊದಲು ತೆಲುಗು, ತಮಿಳು ಚಿತ್ರಗಳು ಮಾತ್ರ ಹಿಂದಿಗೆ ಡಬ್​ ಆಗಿ ತೆರೆ ಕಾಣುತ್ತಿದ್ದವು. ಆದರೆ, ಈಗ ಕನ್ನಡ ಸಿನಿಮಾಗಳೂ ಬಾಲಿವುಡ್​ನಲ್ಲಿ ಸದ್ದು ಮಾಡಲು ಶುರು ಮಾಡಿವೆ. ಈ ಬೆನ್ನಲ್ಲೇ, ಬಾಲಿವುಡ್​ಗೆ ಬಾದ್​ಶಾ ಆಗುವ ಸ್ಯಾಂಡಲ್​ವುಡ್​ ಸ್ಟಾರ್ ಯಾರು ಎನ್ನುವ ಚರ್ಚೆ ಜೋರಾಗಿದೆ.

ಬಾಲಿವುಡ್​ಗೆ ಡಬ್​ ಮಾಡಿ ರಿಲೀಸ್​ ಮಾಡುವ ಪ್ರಯತ್ನದಲ್ಲಿ ಸಂಪೂರ್ಣವಾಗಿ ಯಶಸ್ಸು ಕಂಡ ಖ್ಯಾತಿ ‘ಕೆಜಿಎಫ್​’ ಸಿನಿಮಾದ್ದು. ಯಶ್​ ನಟನೆಯ ಈ ಚಿತ್ರ ಹಿಂದಿಯಲ್ಲಿ ಕೋಟಿ ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ಕನ್ನಡದಷ್ಟೇ ಹಿಂದಿ ಚಿತ್ರರಂಗದಲ್ಲೂ ಕಮಾಯಿ ಮಾಡಿದ್ದ ಈ ಸಿನಿಮಾ ಅಲ್ಲಿ ಗಳಿಸಿದ್ದು ಬರೋಬ್ಬರಿ 45 ಕೋಟಿ ರೂಪಾಯಿ. ಗಳಿಕೆ ವಿಚಾರದಲ್ಲಿ ‘ಕೆಜಿಎಫ್​’ ಹೊಸ ದಾಖಲೆ ಬರೆದಿತ್ತು. ಇದಾದ ನಂತರದಲ್ಲಿ ಸಾಕಷ್ಟು ಸ್ಯಾಂಡಲ್​ವುಡ್ ಸಿನಿಮಾಗಳು ಹಿಂದಿ ಭಾಷೆಯಲ್ಲಿ ತೆರೆಗೆ ಬರುತ್ತಿವೆ. ಇದೀಗ ಬಾಲಿವುಡ್​ಗೆ ಡಬ್ ಆಗುವ ಸರದಿ ‘ಪೈಲ್ವಾನ್​’ನದ್ದು.

ಸುದೀಪ್​ ನಟನೆಯ ಈ ಚಿತ್ರ ಹಿಂದಿಯಲ್ಲಿ ‘ಪೆಹಲ್ವಾನ್​’ ಹೆಸರಿನಲ್ಲಿ ಇಂದು ಬಿಡುಗಡೆಯಾಗಿದೆ. ಬಾಲಿವುಡ್​ನಲ್ಲಿ ಈ ಚಿತ್ರದ ಹಂಚಿಕೆ ಹಕ್ಕನ್ನು ಪಡೆದಿದ್ದು ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋಸ್​. ಹೀಗಾಗಿ ಸಿನಿಮಾಗೆ ಸಖತ್​ ಮೈಲೇಜ್​ ಸಿಕ್ಕಿದ್ದು, ಬರೋಬ್ಬರಿ 1,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದೆ. ಹಾಗಾಗಿ ಕಿಚ್ಚನ ಸಿನಿಮಾ ‘ಕೆಜಿಎಫ್​’ಗಿಂತ ಉತ್ತಮ ಕಲೆಕ್ಷನ್​ ಮಾಡಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಪೈಲ್ವಾನ್ ಕೆಟ್ಟದಾಗಿದೆ ಎಂದು ಬಿಂಬಿಸುತ್ತಿದ್ದಾರಾ ಡಿ ಬಾಸ್ ಅಭಿಮಾನಿಗಳು?; ಫೇಸ್​ಬುಕ್​​ನಲ್ಲಿ ಆರಂಭವಾಯ್ತು ಸಮರ

ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗಳು ಕೂಡ ಬಾಲಿವುಡ್​​ಗೆ ಡಬ್​ ಆಗಿ ತೆರೆಕಾಣಲಿವೆ. ಈ ಚಿತ್ರಗಳು ಕೂಡ ಒಳ್ಳೆಯ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ.

ಇನ್ನು, ದರ್ಶನ್​ಗೆ ಬಾಕ್ಸ್​ ಆಫೀಸ್​ ಸುಲ್ತಾನ ಎನ್ನುವ ಬಿರುದಿದೆ. ಆದರೆ, ಅವರು ಕನ್ನಡ ಬಿಟ್ಟು ಬೇರೆ ಭಾಷೆಗೆ ಕಾಲಿಡುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ‘ಯಜಮಾನ’ ಸಿನಿಮಾ ತೆರೆಕಾಣುವ ವೇಳೆ ಅವರು, “ಸದ್ಯ ಬೇರೆ ಭಾಷೆಗೆಕಾಲಿಡುವ ಆಲೋಚನೆ ಇಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸುತ್ತೇನೆ” ಎಂದಿದ್ದರು. ಹಾಗಾಗಿ ಮುಂದೊಂದು ದಿನ ಅವರು ಕೂಡ ಹಿಂದಿ ಚಿತ್ರರಂಗಕ್ಕೆ ಕಾಲಿಡುವ ಪ್ರಯತ್ನ ಮಾಡಬಹದು.
Loading...

ಹೀಗಾಗಿ, ಬಾಲಿವುಡ್​ನಲ್ಲಿ ಕನ್ನಡದ ಬಾದ್​ಶಾ ಆಗುವವರು ಯಾರು ಎನ್ನುವ ಬಗ್ಗೆ ಚರ್ಚೆ  ಈಗಾಗಲೇ ಜೋರಾಗಿದೆ.

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...