Pailwaan: ವಿವಾಹದ ನಂತರ ನಾಯಕಿಯಾಗಿ ಮಿಂಚಿದ ಪೈಲ್ವಾನ್​​ ನಟಿ: ಆಕಾಂಕ್ಷಾಗೆ ಸಿಕ್ತು ಕನ್ನಡಿಗರ ಪ್ರೀತಿ​..!

Akanksha Singh: ವಿವಾಹವಾಗಿದ್ದರೂ ಪ್ರತಿಭಾವಂತ ಕಲಾವಿದೆಯಾಗಿರುವ ಆಕಾಂಕ್ಷಾಗೆ ಈಗ ಕನ್ನಡಿಗರು ಜೊತೆಯಾಗಿದ್ದಾರೆ. ಪ್ರತಿಭೆ ಒಂದಿದ್ದರೆ ಸಾಕು ಕನ್ನಡಿಗರು ಅವರನ್ನು ಎಂದೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಆಕಾಂಕ್ಷಾ ಉದಾಹರಣೆ ಎನ್ನಬಹುದು. 

Anitha E | news18-kannada
Updated:September 13, 2019, 12:50 PM IST
Pailwaan: ವಿವಾಹದ ನಂತರ ನಾಯಕಿಯಾಗಿ ಮಿಂಚಿದ ಪೈಲ್ವಾನ್​​ ನಟಿ: ಆಕಾಂಕ್ಷಾಗೆ ಸಿಕ್ತು ಕನ್ನಡಿಗರ ಪ್ರೀತಿ​..!
ಗಂಡ ಕುನಾಲ್​ ಸೇನ್​ ಜೊತೆ ನಟಿ ಆಕಾಂಕ್ಷಾ ಸಿಂಗ್​
Anitha E | news18-kannada
Updated: September 13, 2019, 12:50 PM IST
- ಅನಿತಾ ಈ, 

ಆಕಾಂಕ್ಷಾ ಸಿಂಗ್​... ಈ ಹೆಸರು ನಿನ್ನೆಯವರೆಗೆ ಕನ್ನಡಿಗರಿಗೆ ಎಲ್ಲೋ ಕೇಳಿದ ಹಾಗಿತ್ತು. ಆದರೆ ಈಗ ಅದು ಚಿರಪರಿಚಿತ ಎನ್ನುವಂತಿದೆ. ಹೌದು, ಕಿಚ್ಚನಿಗೆ ರುಕ್ಮಿಣಿಯಾಗಿ 'ಪೈಲ್ವಾನ್' ಸಿನಿಮಾದಲ್ಲಿ ಮುದ್ದು ಮುದ್ದಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮಾಡೆಲಿಂಗ್​ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಹುಡುಗಿಯರಿಗೆ ಮದುವೆಯಾಯಿತು ಎಂದರೆ ಸಾಕು ಅವಕಾಶಗಳೇ ಸಿಗುವುದಿಲ್ಲ. ಇನ್ನು ಮಕ್ಕಳಾದರಂತೂ ಮುಗಿದೇ ಹೋಯಿತು. ಇದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ಈಗ ಸಮಯ ಕೊಂಚ ಬದಲಾಗಿದೆ. ನಟಿಯರು ವಿವಾಹದ ನಂತರವೂ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಆದರೆ ಪೈಲ್ವಾನ್​ ನಾಯಕಿ ಆಕಾಂಕ್ಷಾರ ವಿಷಯ ಕೊಂಚ ವಿಭಿನ್ನವಾಗಿದೆ. ಅವರಿಗೆ ವಿವಾಹದ ನಂತರ ನಾಯಕಿಯಾಗಿ ಅಭಿನಯಿಸೋಕೆ ಅವಕಾಶಗಳು ಅರಸಿ ಬರುತ್ತಿವೆ.

 



 
Loading...





View this post on Instagram




 

Happy karwachauth people❤️


A post shared by Aakanksha Singh (@aakankshasingh30) on






ವಿವಾಹವಾಗಿದ್ದರೂ ಪ್ರತಿಭಾವಂತ ಕಲಾವಿದೆಯಾಗಿರುವ ಆಕಾಂಕ್ಷಾಗೆ ಈಗ ಕನ್ನಡಿಗರು ಜೊತೆಯಾಗಿದ್ದಾರೆ. ಪ್ರತಿಭೆ ಒಂದಿದ್ದರೆ ಸಾಕು ಕನ್ನಡಿಗರು ಅವರನ್ನು ಎಂದೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಆಕಾಂಕ್ಷಾ ಉದಾಹರಣೆ ಎನ್ನಬಹುದು.

ರಾಜಸ್ಥಾನದ ಜೈಪುರದಲ್ಲಿ ಜನಿಸಿದ ಆಕಾಂಕ್ಷಾ ಮಾಡೆಲಿಂಗ್​ ಮಾಡುತ್ತಾ ಮುಂಬೈಗೆ ಬಂದವರು. ಅಲ್ಲಿ 2012ರಿಂದ 2017ರವರೆಗೆ ಕಿರುತೆರೆಯಲ್ಲಿ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಅವರು ಅಭಿನಯಿಸಿದ ಮೊದಲ ಧಾರಾವಾಹಿ ಕಲರ್ಸ್​ ಟಿವಿಯಲ್ಲಿ 'ನಾ ಬೋಲೆ ತುಮ್​ ನಾ ಮೈನೆ ಕುಚ್​ ಕಹಾ'. ಇದರಲ್ಲಿ ಆಕಾಂಕ್ಷಾ ಮೇಘಾ ವ್ಯಾಸ್​ ಎಂಬ ವಿಧವೆಯ ಪಾತ್ರದಲ್ಲಿ ಎರಡು ಮಕ್ಕಳ ತಾಯಿಯಾಗಿ ಅಭಿನಯಿಸಿದ್ದರು.

ನಂತರ ಅದೇ ಧಾರಾವಾಹಿಯ ಸೀಕ್ವೆಲ್​ ಸಹ ಬಂದಿತ್ತು. ಈ ಧಾರವಾಹಿಯ ಯಶಸ್ಸಿನಿಂದಾಗಿ ಆಕಾಂಕ್ಷಾಗೆ ಕಿರುತೆರೆಯಲ್ಲಿ ಸಾಕಷ್ಟು ಅವಕಾಶಗಳು ಅರಸಿ ಬಂದವು. ನಂತರ 2017ರಲ್ಲಿ 'ಬದ್ರಿನಾಥ್​ ಕಿ ದುಲ್ಹನಿಯಾ' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.



 




View this post on Instagram




 

#lovelypeople #crazyteam #somesparetime #badrinathkidulhania ❤️


A post shared by Aakanksha Singh (@aakankshasingh30) on






 

ಇದನ್ನೂ ಓದಿ: Pailwaan: ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​ರ ಜಾಲಿ ಜಾಲಿ ಟಿಕ್​ಟಾಕ್​ ವಿಡಿಯೋ..! ​

ಈ ಮಧ್ಯೆ 2014ರಲ್ಲಿ ಕುನಾಲ್​ ಸೇನ್​ ಜತೆ ಆಕಾಂಕ್ಷಾ ಸಪ್ತಪದಿ ತುಳಿದರು. ನಂತರವೂ ಅವರು ತಮ್ಮ ಅಭಿನಯವನ್ನು ಮುಂದುವರೆಸಿದರು. ಅದಕ್ಕೆ ಅವರಿಗೆ ಒತ್ತಾಸೆಯಾಗಿದ್ದು ಅವರ ಗಂಡ ಕುನಾಲ್​.

 



 




View this post on Instagram




 

#throwback 💑


A post shared by Aakanksha Singh (@aakankshasingh30) on






ಆದರೆ ಅದೇ ವರ್ಷ ಆಕಾಂಕ್ಷಾರ ಅದೃಷ್ಟದ ಬಾಗಿಲು ತೆರೆದಿತ್ತು. ಮೊದಲ ಬಾರಿಗೆ ಟಾಲಿವುಡ್​ನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದರು. 'ಮಳ್ಳಿ ರಾವಾ' ಸಿನಿಮಾದದಲ್ಲಿ ಅಕ್ಕಿನೇನಿ ಕುಟುಂಬದ ಸುಮಂತ್​ ನಾಯಕನಾದರೆ, ಆಕಾಂಕ್ಷಾ ನಾಯಕಿಯಾಗಿದ್ದರು. ನಂತರ 'ದೇವ್​ದಾಸ್​' ಸಿನಿಮಾದಲ್ಲಿ ನಾಗಾರ್ಜುನ ಜತೆ ನಾಯಕಿಯಾಗಿ ನಟಿಸಿದರು.




ಇದಾದ ಕೂಡಲೇ ಆಕಾಂಕ್ಷಾರಿಗೆ ಸಿಕ್ಕಿದ್ದು 'ಪೈಲ್ವಾನ್​'. ಸದ್ಯ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಆಕಾಂಕ್ಷಾ ಅವರಿಗೆ ಈಗ ದಕ್ಷಿಣ ಭಾರತದ ಸಿನಿಮಾಗಳಿಂದ ಅವಕಾಶಗಳು ಅರಸಿ ಬರುತ್ತಿವೆಯಂತೆ.

 

Akanksha Singh: 'ಪೈಲ್ವಾನ್'​ ಬ್ಯೂಟಿ ಆಕಾಂಕ್ಷಾರ ಆಫ್​ಸ್ಕ್ರೀನ್​ ರೊಮ್ಯಾನ್ಸ್​..! ​


First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...