ಡಬ್ಬಿಂಗ್ ವಿರೋಧಿಸಿದ್ದ ಸುದೀಪ್ ಸೈರಾಗೆ ಡಬ್ ಮಾಡಿದ್ದೇಕೆ?; ಟೀಕೆಗಳಿಗೆ ಸ್ಪಷ್ಟನೆ ನೀಡಿದ ಕಿಚ್ಚ

Kichcha Sudeep: ಈ ಮೊದಲು ಡಬ್ಬಿಂಗ್ ಸಿನಿಮಾ ವಿರೋಧಿಸಿ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಕಿಚ್ಚ ಸುದೀಪ್ ಈಗ ಬೇರೆ ಭಾಷೆಯ ಸಿನಿಮಾಗಳಿಗೆ ತಾವೇ ಡಬ್​ ಮಾಡಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆ ಚರ್ಚೆಗಳಿಗೆ ಖುದ್ದು ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.

Sushma Chakre | news18-kannada
Updated:October 12, 2019, 12:09 PM IST
ಡಬ್ಬಿಂಗ್ ವಿರೋಧಿಸಿದ್ದ ಸುದೀಪ್ ಸೈರಾಗೆ ಡಬ್ ಮಾಡಿದ್ದೇಕೆ?; ಟೀಕೆಗಳಿಗೆ ಸ್ಪಷ್ಟನೆ ನೀಡಿದ ಕಿಚ್ಚ
ದುಡ್ಡು ಪಡೆಯೋವರೆಗೂ ಒಂಥರ, ಆಮೇಲೆ ಒಂಥರ ನಡೆದುಕೊಂಡಿದ್ದರು. ಇದೀಗ ನಮ್ಮ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಇದರಿಂದ ನಮ್ಮ ತಂಡಕ್ಕೆ ಮುಜುಗರ ಉಂಟಾಗಿದೆ ಎಂದು ಸೂರಪ್ಪ ಬಾಬು ಬೇಸರ ವ್ಯಕ್ತಪಡಿಸಿದ್ದರು.
  • Share this:
ಕಿಚ್ಚ ಸುದೀಪ್ ನಟಿಸಿದ್ದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು, ಇದೀಗ ಮತ್ತೆ ಸುದೀಪ್ ಅಭಿನಯದ 'ದಬಾಂಗ್ 3' ಕನ್ನಡದಲ್ಲಿ ರಿಲೀಸ್ ಆಗಲು ಸಿದ್ಧತೆಗಳು ನಡೆದಿವೆ. ಈ ಮೊದಲು ಡಬ್ಬಿಂಗ್ ಸಿನಿಮಾ ವಿರೋಧಿ ಹೋರಾಟಗಳಲ್ಲಿ ಭಾಗವಹಿಸಿದ್ದ ನಟ ಸುದೀಪ್ ಈಗ ಬೇರೆ ಭಾಷೆಯ ಸಿನಿಮಾಗಳಿಗೆ ತಾವೇ ಡಬ್​ ಮಾಡಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆ ಚರ್ಚೆಗಳಿಗೆ ಖುದ್ದು ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಬಗ್ಗೆ ಆಡಿಕೊಳ್ಳುವವರಿಗೆ, ವಿವಾದ ಸೃಷ್ಟಿಸುವವರನ್ನು ನಿರ್ಲಕ್ಷ್ಯ ಮಾಡುವ ಮೂಲಕವೇ ಉತ್ತರ ನೀಡುವ ಕಿಚ್ಚ ಸುದೀಪ್ ಸದ್ಯಕ್ಕೆ 'ಪೈಲ್ವಾನ್' ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಇದರ ಜೊತೆಜೊತೆಗೇ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್​ಬಾಸ್​ ಸೀಸನ್​ 7' ಕೂಡ ನಾಳೆಯಿಂದ ಆರಂಭವಾಗಲಿದೆ. ಈ ಬಾರಿಯ ಬಿಗ್​ಬಾಸ್​ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ ಸಂಜೆ ತೆರೆಬೀಳಲಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಿಚ್ಚ ಸುದೀಪ್ ಅನೇಕ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಡಬ್ಬಿಂಗ್ ವಿರೋಧಿಸಿ ಹೇಳಿಕೆಗಳನ್ನು ನೀಡಿದ್ದ ಸುದೀಪ್ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಜೊತೆ ಡಬ್ಬಿಂಗ್ ವಿರೋಧಿ ಹೋರಾಟಗಳಲ್ಲಿ ಭಾಗವಹಿಸಿದ್ದರು. ಆದರೆ, ಈಗ ಅವರೇ ಡಬ್ಬಿಂಗ್ ಸಿನಿಮಾಗಳಲ್ಲಿ ನಟಿಸುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಿರುವ ಸುದೀಪ್, 'ಆಗಿನ ಪರಿಸ್ಥಿತಿಯಲ್ಲಿ ಡಬ್ಬಿಂಗ್ ಅವಶ್ಯಕತೆಯಿಲ್ಲ ಎನಿಸಿತ್ತು. ಹೀಗಾಗಿ, ವಿರೋಧಿಸಿದ್ದೆ. ಆದರೀಗ ಕಾಲ ಬದಲಾಗಿದೆ. ದೊಡ್ಡ ಬಜೆಟ್​ನ ಸಿನಿಮಾಗಳು ರಿಲೀಸ್ ಆದಾಗ ಅವು ಬೇರೆ ಭಾಷೆಗಳ ಜನರನ್ನೂ ತಲುಪಬೇಕು. ಬಾಹುಬಲಿ, ಕೆಜಿಎಫ್​ ಸಿನಿಮಾಗಳು ಒಂದು ಭಾಷೆಗೆ ಸೀಮಿತವಾಗದೆ ಎಲ್ಲ ಭಾಷಿಗರನ್ನೂ ತಲುಪಿದ್ದು ಡಬ್ಬಿಂಗ್ ಮೂಲಕ' ಎಂದಿದ್ದಾರೆ.

Bigg Boss kannada 7: ಈ ಬಾರಿ ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳುವ 9 ಮಂದಿಯ ಹೆಸರು ಲೀಕ್..?

' ಇಂದು ಚಿತ್ರರಂಗದಲ್ಲಿ ಸ್ಪರ್ಧೆಗಳು ಜಾಸ್ತಿಯಾಗಿದೆ. ಬೇರೆ ಭಾಷೆಯವರಿಗೂ ನಮ್ಮ ತಂತ್ರಜ್ಞರ, ಕಲಾವಿದರ ಪರಿಚಯವಾಗಬೇಕು. 5 ವರ್ಷದ ಹಿಂದೆ ಯಾವ ವಸ್ತುಗಳನ್ನೂ ಮನೆಗೆ ಡೆಲಿವರಿ ಕೊಡುತ್ತಿರಲಿಲ್ಲ. ನಾವೇ ಹೋಗಿ ಕೊಂಡು ತರುತ್ತಿದ್ದೆವು. ಆದರೀಗ ತಿನ್ನೋ ಆಹಾರದಿಂದ ತೊಡುವ ಬಟ್ಟೆ, ಚಪ್ಪಲಿವರೆಗೆ ಎಲ್ಲವೂ ಮನೆಬಾಗಿಲಿಗೆ ಡೆಲಿವರಿಯಾಗುತ್ತಿದೆ. ನಮಗಿದು ಬೇಡ ಎಂದರೆ ನಾವು ಹಿಂದುಳಿದು ಬಿಡುತ್ತೇವೆ. ಡಬ್ಬಿಂಗ್ ವಿಷಯದಲ್ಲೂ ಹೀಗೇ ಆಗಿರೋದು' ಎಂದು ಸುದೀಪ್ ಹೇಳಿದ್ದಾರೆ.ಕನ್ನಡಕ್ಕೆ ಡಬ್ಬಿಂಗ್ ಬೇಕಾ? ಬೇಡವಾ? ಎಂಬ ಬಗೆಗಿನ ಚರ್ಚೆಗಳು ಇಂದು ನಿನ್ನೆಯದಲ್ಲ. ಡಬ್ಬಿಂಗ್​ ಅನ್ನು ಪ್ರೋತ್ಸಾಹಿಸುವುದರಿಂದ ಇಲ್ಲಿನ ತಂತ್ರಜ್ಞರಿಗೆ, ಕಲಾವಿದರಿಗೆ ತೊಂದರೆಯಾಗುತ್ತದೆ ಎಂಬ ವಾದ ಕೆಲವರದಾರರೆ ದೇಶದ ಎಲ್ಲ ಭಾಷೆಯ ಸಿನಿಮಾಗಳನ್ನು ನಮ್ಮದೇ ಭಾಷೆಯಲ್ಲಿ ನೋಡುವ ಅವಕಾಶದಿಂದ ಕನ್ನಡಿಗರು ವಂಚಿತರಾಗುತ್ತಿದ್ದಾರೆ ಎಂಬ ವಾದ ಇನ್ನು ಕೆಲವರದಾಗಿತ್ತು. ಅನೇಕ ಜನರ ವಿರೋಧಧ ನಡುವೆಯೂ ಕೆಲವು ಡಬ್ಬಿಂಗ್ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿದ್ದವು.Bigg Boss: ಬಿಗ್ ಬಾಸ್ ಸ್ಪರ್ಧಿಗಳು ದಂಡಪಿಂಡಗಳು..ಹೇಳಿದ್ದು ಮಾಜಿ ಬಿಗ್ ಬಾಸ್ ಸ್ಪರ್ಧಿ..!

ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ನಟಿಸಿರುವ ಕಿಚ್ಚ ಸುದೀಪ್ ಅವರ ಅಭಿನಯದ ಅನೇಕ ಸಿನಿಮಾಗಳು ತೆಲುಗು, ಹಿಂದಿ ಭಾಷೆಯಲ್ಲಿ ಹೆಸರು ಮಾಡಿದ್ದವು. ಇತ್ತೀಚೆಗೆ ತೆರೆಕಂಡ ತೆಲುಗಿನ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕೂಡ ಕನ್ನಡಕ್ಕೆ ಡಬ್​ ಆಗಿತ್ತು. ಈ ಸಿನಿಮಾದಲ್ಲಿ ಸುದೀಪ್ ಅವರ ಪಾತ್ರಕ್ಕೆ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರೇ ಡಬ್ ಮಾಡಿದ್ದು ವಿಶೇಷವಾಗಿತ್ತು. ಬಾಲಿವುಡ್​ ಬ್ಯಾಡ್​ಬಾಯ್​ ಸಲ್ಮಾನ್​ ಖಾನ್​ ಜೊತೆಗೆ ದಬಾಂಗ್ 3 ಸಿನಿಮಾ ಮಾಡುತ್ತಿರುವ ಸುದೀಪ್ ಅವರ ಫಸ್ಟ್​ ಲುಕ್ ಬಿಡುಗಡೆ ಮಾಡಿದ್ದ ಚಿತ್ರತಂಡ ಕಿಚ್ಚನ ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಿತ್ತು. ದಬಾಂಗ್​ 3 ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಲಿದ್ದು, ಇದರಲ್ಲೂ ಸುದೀಪ್ ಅವರೇ ಡಬ್ ಮಾಡಲಿದ್ದಾರೆ.

First published: October 12, 2019, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading