ಬಾಕ್ಸಾಫೀಸ್​ನಲ್ಲಿ ತೊಡೆ ತಟ್ಟಿದ ಪೈಲ್ವಾನ್: ಮೊದಲ ದಿನದ ಕಲೆಕ್ಷನ್ 15 ಕೋಟಿ?

Pailwaan Box Office Collections: ಕರುನಾಡಿನಲ್ಲಿ ಕಿಚ್ಚನ ಅಭಿಮಾನಿಗಳು ಪೈಲ್ವಾನ್​ ಭವ್ಯ ಸ್ವಾಗತವನ್ನೇ ನೀಡಿದ್ದಾರೆ. ಹಾಗಾಗಿ ಕನ್ನಡದ ಪೈಲ್ವಾನ್ ಮೊದಲ ದಿನವೇ 10 ಕೋಟಿ ಕಮಾಯಿ ಮಾಡಿದೆ ಎಂದು ಹೇಳಲಾಗುತ್ತಿದೆ.

zahir | news18-kannada
Updated:September 13, 2019, 7:59 PM IST
ಬಾಕ್ಸಾಫೀಸ್​ನಲ್ಲಿ ತೊಡೆ ತಟ್ಟಿದ ಪೈಲ್ವಾನ್: ಮೊದಲ ದಿನದ ಕಲೆಕ್ಷನ್ 15 ಕೋಟಿ?
Kiccha
zahir | news18-kannada
Updated: September 13, 2019, 7:59 PM IST
ಸ್ಯಾಂಡಲ್​ವುಡ್​ನ ಬಹುನೀಕ್ಷಿತ 'ಪೈಲ್ವಾನ್' ಅಖಾಡಕ್ಕೆ ಇಳಿದ್ದಾನೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ 'ಪೈಲ್ವಾನ್' ಅಬ್ಬರ ಜೋರಾಗಿದ್ದು, ಕಿಚ್ಚನ ಅಭಿಮಾನಿಗಳು ಅಭಿನಯ ಚಕ್ರವರ್ತಿಯ ಹೊಸ ಅವತಾರವನ್ನು ಮೆಚ್ಚಿಕೊಂಡಿದ್ದಾರೆ.

ಕಟುಮಸ್ತು ದೇಹದೊಂದಿಗೆ ಅಖಾಡದಲ್ಲಿ ಮಾತ್ರವಲ್ಲ ಬಾಕ್ಸಾಫೀಸ್​ನಲ್ಲೂ 'ಪೈಲ್ವಾನ್' ಧೂಳೆಬ್ಬಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಚಿತ್ರದ ಮೊದಲ ದಿನದ ಗಳಿಕೆಯ ಮೇಲೆ ಗಾಂಧಿನಗರ ಕಣ್ಣಿಟ್ಟಿದ್ದು, ಇದೀಗ ಕೇಳಿ ಬರುತ್ತಿರುವ ಸುದ್ದಿಯು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಸ್ವಪ್ನ ಕೃಷ್ಣ ನಿರ್ಮಾಣದ ಈ ಬಹುಭಾಷಾ ಚಿತ್ರವು 3 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಿದ್ದು, ಅದೇ ರೀತಿ ಕರ್ನಾಟಕದಲ್ಲೇ 400ಕ್ಕೂ ಅಧಿಕ ಪರದೆ ಮೇಲೆ ರಾರಾಜಿಸಿದೆ. ಕರುನಾಡಿನಲ್ಲಿ ಕಿಚ್ಚನ ಅಭಿಮಾನಿಗಳು 'ಪೈಲ್ವಾನ್'​ ಭವ್ಯ ಸ್ವಾಗತವನ್ನೇ ನೀಡಿದ್ದಾರೆ. ಹಾಗಾಗಿ ಕನ್ನಡದ 'ಪೈಲ್ವಾನ್' ಮೊದಲ ದಿನವೇ 10 ಕೋಟಿ ಕಮಾಯಿ ಮಾಡಿದೆ ಎಂದು ಹೇಳಲಾಗುತ್ತಿದೆ.


Loading...



ಇನ್ನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲೂ ಕಿಚ್ಚನ ರಿಂಗ್ ಖದರ್​ನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಪರಿಣಾಮ 'ಪೈಲ್ವಾನ್' ಚಿತ್ರದ ಫಸ್ಟ್​ ಡೇ ಕಲೆಕ್ಷನ್ 15 ಕೋಟಿ ದಾಟಿದೆ ಬಾಕ್ಸಾಫೀಸ್ ಕಲೆಕ್ಷನ್ ಡಾಟ್ ಇನ್ ವರದಿ ಮಾಡಿದೆ.



ಭಾರತದ ಗಲ್ಲಾಪೆಟ್ಟಿಗೆಯಲ್ಲಿ 'ಪೈಲ್ವಾನ್' ಪವರ್ ತೋರಿಸಿದ್ದು, ಮೊದಲ ದಿನವೇ 11.60 ಕೋಟಿ ವ್ಯವಹಾರ ಮಾಡಿದೆ. ಇನ್ನು 10ಕ್ಕೂ ಹೆಚ್ಚಿನ ದೇಶಗಳಲ್ಲಿ ಸ್ಯಾಂಡಲ್​ವುಡ್​ ಪೈಲ್ವಾನ್​ನನ್ನು ಸ್ಟುಡಿಯೋಸ್ ಸಂಸ್ಥೆ ಅಖಾಡಕ್ಕೆ ಇಳಿಸಿದೆ. ಅಲ್ಲೂ ಕೂಡ ಓಪನಿಂಗ್ ಡೇ ಸಿನಿಪ್ರಿಯರು ಹರಿದುಬಂದಿದ್ದು, ಸಾಗರೋತ್ತರ ಕಲೆಕ್ಷನ್ ಮೊದಲ ದಿನ 4 ಕೋಟಿ ದಾಟಿದೆ ಎಂದು ಬಿಸಿಇ ತಿಳಿಸಿದೆ.



ಬಾಕ್ಸಾಫೀಸ್ ಕಲೆಕ್ಷನ್ ಡಾಟ್ ಇನ್ ವರದಿ ತಿಳಿಸಿರುವಂತೆ 'ಪೈಲ್ವಾನ್' ಮೊದಲ ದಿನದ ಒಟ್ಟು ಗಳಿಕೆಯು 15.60 ಕೋಟಿ ಆಗಿದ್ದು, ಹಿಂದಿ ವರ್ಷನ್ ಬಿಡುಗಡೆ ಬಳಿಕ ಚಿತ್ರದ ಕಲೆಕ್ಷನ್​ನಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಅದೇ ರೀತಿ ಎಲ್ಲಾ ಇಂಡಸ್ಟ್ರಿಯಲ್ಲೂ ಚಿತ್ರಕ್ಕೆ ಸಕರಾತ್ಮಕ ವಿಮರ್ಶೆಗಳು ಕೇಳಿ ಬಂದಿರುವುದು ವಿಕೆಂಡ್​ನಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಕೋಟಿ ಹೆಚ್ಚಾಗಲಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ ಬಗ್ಗೆ ಇನ್ನೂ ಕೂಡ ನಿರ್ಮಾಪಕ-ನಿರ್ದೇಶಕ ಕೃಷ್ಣ ಅವರು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಹೀಗಾಗಿ ವೀಕೆಂಡ್ ಬಳಿಕ ಪೈಲ್ವಾನ್​ನ ಒಟ್ಟು ಗಳಿಕೆಯ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...