• Home
  • »
  • News
  • »
  • entertainment
  • »
  • ಸ್ಯಾಂಡಲ್​ವುಡ್​​​ ನಟಿಯ ಫೇಸ್​ಬುಕ್​ ಖಾತೆ ಹ್ಯಾಕ್​!

ಸ್ಯಾಂಡಲ್​ವುಡ್​​​ ನಟಿಯ ಫೇಸ್​ಬುಕ್​ ಖಾತೆ ಹ್ಯಾಕ್​!

ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ

ಟ್ವೀಟ್​​ ಮಾಡಿರುವ ನಟಿ ಊರ್ವಶಿ ರೌಟೇಲಾ, 'ನನ್ನ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿದ್ದು, ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಟ್ವಿಟ್ಟರ್​ನಲ್ಲಿರುವ ಫೇಸ್​​ಬುಕ್​ ಮತ್ತು ಫೇಸ್​ಬುಕ್​ ಆ್ಯಪ್​​ಗೆ​​ ಟ್ಯಾಗ್'​ ಮಾಡಿದ್ದಾರೆ.

  • Share this:

    ಲಾಕ್​​ಡೌನ್​ ಅವಧಿಯಲ್ಲಿ ಹ್ಯಾಕರ್​ಗಳ ಉಪಟಲ ಹೆಚ್ಚಾಗಿದ್ದು, ಇದೀಗ ಐರಾವತ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಊರ್ವಶಿ ರೌಟೇಲಾ ಅವರ ಫೇಸ್​ಬುಕ್​ ಖಾತೆಯನ್ನು ಹ್ಯಾಕರ್​ಗಳು ಹ್ಯಾಕ್​ ಮಾಡಿದ್ದಾರೆ. ಈ ಬಗ್ಗೆ ನಟಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


    ಟ್ವೀಟ್​​ ಮಾಡಿರುವ ನಟಿ ಊರ್ವಶಿ ರೌಟೇಲಾ, 'ನನ್ನ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿದ್ದು, ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಟ್ವಿಟ್ಟರ್​ನಲ್ಲಿರುವ ಫೇಸ್​​ಬುಕ್​ ಮತ್ತು ಫೇಸ್​ಬುಕ್​ ಆ್ಯಪ್​​ಗೆ​​ ಟ್ಯಾಗ್'​ ಮಾಡಿದ್ದಾರೆ.


    ಊರ್ವಶಿ ರೌಟೇಲಾ ಮಾಡಿರುವ ಟ್ವೀಟ್​ಗೆ ಮುಂಬೈ ಪೋಲಿಸರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ದೂರನ್ನು ನಾವು ಸೈಬರ್​ ಪೊಲೀಸ್​ ಠಾಣೆಗೆ ರವಾನಿಸಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ನಟಿ ಧನ್ಯವಾದಗಳು.. ನನ್ನ ಫೇಸ್​ಬುಕ್​ ಖಾತೆಯನ್ನು ಸರಿ ಪಡಿಸಿಕೊಡುತ್ತೀರಾ ಎಂದು ಭಾವಿಸುತ್ತೇನೆ ಎಂದಿದ್ದಾರೆ.



    ಸೆಲೆಬ್ರಿಟಿಗಳ ಮತ್ತು ಸ್ಟಾರ್​ ನಟ-ನಟಿಯರ ಸೋಷಿಯಲ್​ ಮೀಡಿಯಾ ಖಾತೆಗಳು ಹ್ಯಾಕ್​​ ಆಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಅಭಿಷೇಕ್​ ಬಚ್ಚನ್​, ಕರಣ್​ ಜೊಹಾರ್​, ಶ್ರುತಿ ಹಾಸನ್​​ ಸೇರಿಂದತೆ ಅನೇಕರ ಖಾತೆಗಳು ಹ್ಯಾಕ್​ ಆಗಿರುವುದು ಬೆಳಕಿಗೆ ಬಂದಿದೆ. ಇದೀಗ ಲಾಕ್​ಡೌನ್​ ಅವಧಿಯಲ್ಲಿ ಊರ್ವಶಿ ಅವರ ಫೇಸ್​​ಬುಕ್​ ಖಾತೆಯನ್ನು ಹ್ಯಾಕರ್​ಗಳು ಹ್ಯಾಕ್​ ಮಾಡಿದ್ದಾರೆ.


    ಕೊರೋನಾ ಗೆದ್ದು ಬಂದ ‘ಮನಿ ಹೈಸ್ಟ್‘ ನಟಿ!


    ಒಟಿಟಿ ಫ್ಲಾಟ್​ಫಾರ್ಮ್​ ಮೂಲಕ ‘ಲಕ್ಷ್ಮಿ ಬಾಂಬ್‘ ಸ್ಫೋಟಿಸಲಿದ್ದಾರಾ ನಟ ಅಕ್ಷಯ್ ಕುಮಾರ್?

    Published by:Harshith AS
    First published: