HOME » NEWS » Entertainment » PAEINEETI CHOPRA STARRER SAINA NEHWALS BIOPIC SAINA TO RELEASE ON MARCH 26TH AE

Saina Nehwal Biopic: ಪರಿಣೀತಿ ಚೋಪ್ರಾ ಅಭಿನಯದ ಸೈನಾ ಬಯೋಪಿಕ್​ ರಿಲೀಸ್​ಗೆ ದಿನಾಂಕ ನಿಗದಿ..!

ಬಹಳ ಶ್ರಮಪಟ್ಟು ಈ ಪಾತ್ರಕ್ಕಾಗಿ ಸಿದ್ಧರಾಗಿರುವ ಪರಿಣೀತಿ ಚೋಪ್ರಾ , ಈಗ ಸೈನಾ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟಿಸಿದ್ದಾರೆ. ಅದರ ಜೊತೆಗೆ ಸಿನಿಮಾದ ಕೆಲವು ತುಣುಕುಗಳಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

Anitha E | news18-kannada
Updated:March 3, 2021, 9:28 AM IST
Saina Nehwal Biopic: ಪರಿಣೀತಿ ಚೋಪ್ರಾ ಅಭಿನಯದ ಸೈನಾ ಬಯೋಪಿಕ್​ ರಿಲೀಸ್​ಗೆ ದಿನಾಂಕ ನಿಗದಿ..!
ಸೈನಾ ನೆಹ್ವಾಲ್​ ಜೊತೆ ಪರಿಣೀತಿ ಚೋಪ್ರಾ
  • Share this:
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ಬಾಲಿವುಡ್​ನಲ್ಲಿ ಸೆಟ್ಟೇರಿರುವ ವಿಷಯ ಹೊಸದೇನಲ್ಲ. ಈ ಮೊದಲು ಸೈನಾ ನೆಹ್ವಾಲ್ ಪಾತ್ರಕ್ಕೆ ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದರು. ಸೈನಾ ನೆಹ್ವಾಲ್ ಪಾತ್ರದಲ್ಲಿ ಶ್ರದ್ಧಾ ಕಪೂರ್ ಮಾಡಿಸಿಕೊಂಡಿದ್ದ ಫೋಟೋಶೂಟ್​ನ ಫೋಟೋ ಸಹ ಮೆಚ್ಚುಗೆ ಗಳಿಸಿತ್ತು. ಸಿನಿಮಾಗಾಗಿ ಶ್ರದ್ಧಾ ಕಪೂರ್​ ಬ್ಯಾಡ್ಮಿಂಟನ್​ ತರಬೇತಿ ಸಹ ಪಡೆದಿದ್ದರು. ಆದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಶ್ರದ್ಧಾ ಕಪೂರ್ ಡೇಟ್​ ಸಮಸ್ಯೆಯಿಂದಾಗಿ ಈ ಸಿನಿಮಾದಿಂದ ಹೊರ ನಡೆದರು. ನಂತರ ಶ್ರದ್ಧಾ ಜಾಗವನ್ನು ತುಂಬಿದ್ದು ನಟಿ ಪರಿಣೀತಿ ಚೋಪ್ರಾ.  ಪರಿಣೀತಿ ಚೋಪ್ರಾ ಸೈನಾ ಬಯೋಪಿಕ್​ ಒಪ್ಪಿಕೊಂಡ ನಂತರ  ಶ್ರದ್ಧಾ ಕಪೂರ್ ಅವರನ್ನು ಭೇಟಿಯಾಗಿ ಕೆಲವು ಸಲಹೆಗಳನ್ನೂ ಕೇಳಿದ್ದರು. ಈ ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾರಂಭಿಸಿದ್ದ ಪರಿಣೀತಿ ಚೋಪ್ರಾ ಬ್ಯಾಡ್ಮಿಂಟನ್ ತರಬೇತಿಯನ್ನೂ ಪಡೆದರು. ಬ್ಯಾಡ್ಮಿಂಟನ್ ಮೈದಾನದಲ್ಲಿ ಬೆವರಿಳಿಸುತ್ತಿರುವ ಪರಿಣೀತಿ ಚೋಪ್ರಾ ಫೋಟೋಗಳು ಈ ಹಿಂದೆ ವೈರಲ್​ ಆಗಿದ್ದವು. 

ನಟಿ ಪರಿಣೀತಿ ಚೋಪ್ರಾ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​  ಅವರ ಬಯೋಪಿಕ್​ ಸೈನಾ ಶೂಟಿಂಗ್​ ಆರಂಭವಾಗುವ ಮುನ್ನ ಸೈನಾರನ್ನು ಭೇಟಿ ಮಾಡಿದ್ದು, ಅಗತ್ಯ ಮಾಹಿತಿ ಪಡೆದುಕೊಂಡಿದ್ದರು. ಈ ಸಿನಿಮಾದ ಚಿತ್ರೀಕರಣ ಇನ್ನೇನು 30 ದಿನಗಳಲ್ಲಿ ಆರಂಭವಾಗುವ ಮೊದಲು ಸೈನಾರನ್ನು ಭೇಟಿಯಾಗಿದ್ದ ನಟಿ, ಸೈನಾರನ್ನು ಕೇಳಲು ನೂರು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು.





ಬಹಳ ಶ್ರಮಪಟ್ಟು ಈ ಪಾತ್ರಕ್ಕಾಗಿ ಸಿದ್ಧರಾಗಿರುವ ಪರಿಣೀತಿ ಚೋಪ್ರಾ , ಈಗ ಸೈನಾ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟಿಸಿದ್ದಾರೆ. ಅದರ ಜೊತೆಗೆ ಸಿನಿಮಾದ ಕೆಲವು ತುಣುಕುಗಳಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.




ಅಮೋಲ್​ ಗುಪ್ತೆ ನಿರ್ದೇಶನದ ಈ ಸಿನಿಮಾ ಇದೇ ತಿಂಗಳು ಅಂದರೆ ಮಾ.26ಕ್ಕೆ ರಿಲೀಸ್​ ಆಗಲಿದೆ. ಈ ಪಾತ್ರಕ್ಕಾಗಿ ಹಗಲಿರುಳೆನ್ನದೆ ಪರಿಣೀತಿ ಥಾನೆ ಬ್ಯಾಡ್ಮಿಂಟನ್​ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ.ನಿತ್ಯ 4ಕ್ಕೂ ಹೆಚ್ಚು ಗಂಟೆ ಅವರು ಬ್ಯಾಡ್ಮಿಂಟನ್​ ತರಬೇತಿ ಹಾಗೂ ಅಭ್ಯಾಸದಲ್ಲೇ ಕಳೆಯುತ್ತಿದ್ದರು.

ಇದನ್ನೂ ಓದಿ: ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಂತ ಕೃಷ್ಣ ಸುಂದರಿ ಬಿಪಾಶಾ ಬಸು..!

ಕ್ರೀಡಾಪಟುವೊಬ್ಬರ ಜೀವನವನ್ನು ಆಧರಿಸಿದ ಸಿನಿಮಾದಲ್ಲಿ ನಟಿಸುವುದೆಂದರೆ ತಮಾಷೆಯ ಮಾತಲ್ಲ. ಅದಕ್ಕಾಗಿ ಕಠಿಣ ಪರಿಶ್ರಮವೂ ಬೇಕಾಗುತ್ತದೆ, ಸಿದ್ಧತೆಗಳೂ ಬೇಕಾಗುತ್ತವೆ. ಆ ನಿಟ್ಟಿನಲ್ಲಿ ಪರಿಣೀತಿ ಚೋಪ್ರಾ ಖುದ್ದು ಸೈನಾ ನೆಹ್ವಾಲ್ ಅವರಿಂದಲೇ ಶಹಬ್ಬಾಸ್​ಗಿರಿ ಪಡೆದುಕೊಂಡಿದ್ದಾರೆ. ಹೌದು, ಸೈನಾ ನೆಹ್ವಾಲ್​ ಪಾತ್ರದ ತಮ್ಮ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದ ಪರಿಣೀತಿ ಚೋಪ್ರಾ 'ನನ್ನ ಸದ್ಯದ ದಿನಚರಿ' ಎಂದು ಶೀರ್ಷಿಕೆ ನೀಡಿದ್ದರು.

saina biopic,Parineeti Chopra-starrer Saina Nehwal biopic release date, saina biopic release date, saina biopic to release on March 26th, Parineeti Chopra in saina biopic, ಸೈನಾ ಬಯೋಪಿಕ್, ಸೈನಾ ಬಯೋಪಿಕ್ ರಿಲೀಸ್ ಡೇಟ್ ಔಟ್, ಪರಿಣೀತಿ ಚೋಪ್ರಾ, ಸೈನಾ ಪಾತ್ರದಲ್ಲಿ ಪರಿಣೀತಿ ನಟನೆ, ಸೈನಾ ಬಯೋಪಿಕ್ ಮಾರ್ಚ್ 26ಕ್ಕೆ ರಿಲೀಸ್, Parineeti Chopra, Saina Nehwal Biopic, Saina Nehwal, Hyderabad, Thane Badminton Academy, Ajay Devgn, ammy virk, Bhuj The Pride Of India, Jabariya Jodi, Parineeti Chopra, Sanjay Dutt, sonakshi sinha
ಸೈನಾ ನೆಹ್ವಾಲ್​ ಜೊತೆ ಪರಿಣೀತಿ ಚೋಪ್ರಾ ಮಾಡಿರುವ ಇನ್​ಸ್ಟಾ ಚಾಟ್​


ಪರಿಣೀತಿ ಪ್ರತಿಕ್ರಿಯೆ ನೀಡಿದ್ದ ಸೈನಾ ನೆಹ್ವಾಲ್​ 'ಬಹಳ ಚೆನ್ನಾಗಿ ಕಾಣುತ್ತಿದ್ದೀರಿ' ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಪರಿಣೀತಿ ಚೋಪ್ರಾ, 'ನೀವ್ಯಾಕೆ ಅದ್ಭುತವಾಗಿ ಆಟವಾಡುತ್ತೀರಿ? ನಿಮ್ಮ ಆಟವನ್ನು ಕಲಿಯಲು ಹೋಗಿ ಸರಿಯಾಗೇ ಅನುಭವಿಸುತ್ತಿದ್ದೇನೆ' ಎಂದು ಸ್ಯಾಡ್​ ಇಮೋಜಿಯನ್ನು ಹಾಕಿದ್ದರು.

ಅದಕ್ಕೆ ನಗುತ್ತಲೇ ಉತ್ತರಿಸಿರುವ ಸೈನಾ ನೆಹ್ವಾಲ್, 'ಬೆಸ್ಟ್​ ಅಥ್ಲೀಟ್ ಆಗಿ ನಿಮ್ಮನ್ನು ತೆರೆಯ ಮೇಲೆ ನೋಡಲು ನಾವೆಲ್ಲರೂ ಕಾತುರದಿಂದ ಕಾಯುತ್ತಿದ್ದೇವೆ. ನೀವು ಸರಿಯಾದ ರೀತಿಯಲ್ಲಿ ತರಬೇತಿ ಪಡೆದು ಜನರ ಮೆಚ್ಚುಗೆ ಗಳಿಸುತ್ತೀರಿ ಎಂಬ ನಂಬಿಕೆ ನನಗಿದೆ' ಎಂದು ಹೇಳಿದ್ದರು.

ಇದನ್ನೂ ಓದಿ: Bigg Boss Kannada 8: ಪ್ರಶಾಂತ್​ ಸಂಬರಗಿ-ದಿವ್ಯಾ ನಡುವೆ ನಡೆಯುತ್ತಿರುವುದು ಏನು: ಏನಂತಿದ್ದಾರೆ ನೆಟ್ಟಿಗರು..!

ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಪರಿಣೀತಿ ಚೋಪ್ರಾ ಸೈನಾ ಸಿನಿಮಾ ಜೊತೆಗೆ 'ಗರ್ಲ್​ ಆನ್​ ದ ಟ್ರೈನ್​' ಸಿನಿಮಾದ ರಿಮೇಕ್​ನಲ್ಲೂ ಅಭಿನಯಿಸುತ್ತಿದ್ದರು. ಇದರಿಂದಾಗಿಯೇ ಆಗ ಡೇಟ್ಸ್​ ಸಮಸ್ಯೆಯಿಂದಾಗಿ ಪರಿಣೀತಿ, ಅಜಯ್​ ದೇವಗನ್​ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ 'ಭುಜ್​- ತಹೆ ಪ್ರೈಡ್​​ ಆಫ್​ ಇಂಡಿಯಾ' ಸಿನಿಮಾದಿಂದ ಹೊರ ಬರಬೇಕಾಯಿತು.
Published by: Anitha E
First published: March 3, 2021, 9:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories