ಪದ್ಮಾವತಿಗೆ ತೀರದ ಕಂಟಕ: ಹರಿಯಾಣದಲ್ಲೂ ಚಿತ್ರ ತೆರೆಗೆ ಬ್ಯಾನ್

news18
Updated:January 16, 2018, 5:56 PM IST
ಪದ್ಮಾವತಿಗೆ ತೀರದ ಕಂಟಕ: ಹರಿಯಾಣದಲ್ಲೂ ಚಿತ್ರ ತೆರೆಗೆ ಬ್ಯಾನ್
news18
Updated: January 16, 2018, 5:56 PM IST
ನ್ಯೂಸ್ 18 ಕನ್ನಡ

ಮುಂಬೈ(ಜ.16): ನಿರ್ದೇಶಕ ಸಂಜಯ್​ಲೀಲಾ ಬನ್ಸಾಲಿ ಅವರ ಸಿನಿಮಾ ಪದ್ಮಾವತಿ ಚಿತ್ರೀಕರಣ ನಡೆಯುತ್ತಿದ್ದ ದಿನದಿಂದಲೂ ವಿವಾದದಲ್ಲಿ ಸಿಲುಕಿದೆ. ಚಿತ್ರೀಕರಣ ನಡೆಯುತ್ತಿದ್ದ ವೇಳೆಯೇ ಸಾಕಷ್ಟು ಬಾರಿ ದಾಳಿಯೂ ನಡೆದು, ಚಿತ್ರೀಕರಣ ಸ್ಥಗಿತಗೊಂಡಿತ್ತು. ಇನ್ನೂ ಚಿತ್ರೀಕರಣ ಪೂರ್ಣಗೊಂಡು ಚಿತ್ರ ತೆರೆ ಕಾಣುವ ವೇಳೆಗೂ ಸಾಕಷ್ಟು ಸಮಸ್ಯೆಗಳು ಎದುರಾಗಿ, ಚಿತ್ರದ ಬಿಡುಗಡೆ ದಿನಾಂಕ ಮುಂದುವೆ ಹೋಗುತ್ತಿದೆ.

ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಪದ್ಮಾವತಿ ಚಿತ್ರ ಬ್ಯಾನ್​ ಮಾಡಲಾಗಿದೆ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್​ ವಿಜ್​ ಟ್ವೀಟ್​ ಮಾಡಿದ್ದಾರೆ. ಈ ಚಿತ್ರದಲ್ಲಿ ಇತಿಹಾಸಕ್ಕೆ ಚ್ಯುತಿ ತರಲಾಗಿದೆ ಎಂದು ಆರೋಪಿಸಿ ರಜಪೂತರು ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪದ್ಮಾವತಿ/ಪದ್ಮಾವತ್​ ಚಿತ್ರ ಹರಿಯಾಣದಲ್ಲಿ ಬ್ಯಾನ್​ ಮಾಡಲಾಗಿದೆ ಎಂದು ವಿಜ್​ ಅವರು ಟ್ವೀಟ್ ಮಾಡಿದ್ದಾರೆ. ಹರಿಯಾಣದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಾಗಲೇ ಗುಜರಾತ್​, ಹಿಮಾಚಲ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ ಹಾಗೂ ಉತ್ತರಾಖಂಡ್​ನಲ್ಲೂ ಚಿತ್ರದ ಬಿಡುಗಡೆಯನ್ನು ನಿಷೇಧಿಸಲಾಗಿದ್ದು, 6ನೇ ರಾಜ್ಯವಾಗಿ ಹರಿಯಾಣವೂ ಪದ್ಮಾವತಿ ಚಿತ್ರವನ್ನು ಬ್ಯಾನ್​ ಮಾಡಿದೆ.ಶಾಹಿದ್​ ಕಪೂರ್​, ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರ ಇದೇ 25ಕ್ಕೆ ತೆರೆಕಾಣಲಿದೆ. ಕೇಂದ್ರ ಸೆನ್ಸಾರ್​ ಮಂಡಳಿ ​(ಸಿಬಿಎಫ್​ಸಿ) ಹೇಳಿರುವ ಕೆಲವೊಂದು ಬದಲಾವಣೆಗಳೊಂದಿಗೆ ಸಿನಿಮಾ ತೆರೆಕಾಣುತ್ತಿದೆ.
First published:January 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...