ಅಸಾಧಾರಣ ಕೆಲಸ ಮಾಡಿರುವ ಹಾಗೂ ಹೆಚ್ಚು ಪ್ರಚಾರಕ್ಕೆ ಬಾರದ ಜನರನ್ನು ಪ್ರತಿಷ್ಟಿತ ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲೂ #PeopleForPadma ಹ್ಯಾಷ್ಟ್ಯಾಗ್ ಅಡಿ ಅಭಿಯಾನ ಆರಂಭವಾಗಿದೆ. ಕನ್ನಡದ ಖ್ಯಾತ ನಟರಾದ ಅನಂತ್ ಅವರಿಗೆ ಈ ವರ್ಷದ ಪದ್ಮ ಪ್ರಶಸ್ತಿ ನೀಡಬೇಕೆಂದು ನೆಟ್ಟಿಗರು ಟ್ವಿಟರ್ನಲ್ಲಿ ಅಭಿಯಾನ ಆರಂಭಿಸಿದ್ದಾರೆ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪ್ರತಿಭಾನವಿತ ಹಿರಿಯ ನಟನಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈಗ ಈ ಅಭಿಯಾನಕ್ಕೆ ಸ್ಯಾಂಡಲ್ವುಡ್ ಮಂದಿ ಸಹ ಕೈ ಜೋಡಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲೂ ನಿರ್ದೇಶಕರು ಹಾಗೂ ನಟರು ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ಸಿಗಬೇಕೆಂದು ಆಗ್ರಹಿಸುತ್ತಿದ್ದಾರೆ.
ದೇಶದ ಅತ್ಯಂತ ಗೌರವಾನ್ವಿತ ನಾಹರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಕೇಂದ್ರ ಸರ್ಕಾರ ಫಿಪಲ್ ಫಾರ್ ಪದ್ಮ ಹೆಸರಿನಡಿ ಪ್ರಕಟಿಸಿದೆ. ಈ ಸಾಲಿನ ಪ್ರಶಸ್ತಿಗಾಗಿ ಕರ್ನಾಟಕದಿಂದ ಕಲಾ ಕ್ಷೇತ್ರ ವಿಭಾಗದಲ್ಲಿ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಹಾಗೂ ಹಿರಿಯ ನಟ ಅನಂತ್ ನಾಗ್ ಅವರ ಹೆಸರು ಸೂಚಿಸುವಂತೆ ಅಭಿಯಾನ ಆರಂಭವಾಗಿದೆ. ತುಂಬಾ ಜನರು ಈ ಇಬ್ಬರ ಹೆಸರನ್ನು ರಾಜ್ಯದಿಂದ ಪದ್ಮ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡುತ್ತಿದ್ದಾರೆ.
![]()
ನಟ ಅನಂತ್ ನಾಗ್
ಈ ಅಭಿಯಾನಕ್ಕೆ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅವರೂ ಕೈ ಜೋಡಿಸಿದ್ದಾರೆ. ಹಿರಿಯ ನಟ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬ ಈ ಪ್ರಯತ್ನದಲ್ಲಿ ನಾವೆಲ್ಲರೂ ಒಂದಾಗಿ ಕೈ ಜೋಡಿಸೋಣ. ಈ ಮಾಹಿತಿಯನ್ನು ಇಂದಿನಿಂದಲೇ ಹೆಚ್ಚೆಚ್ಚು ಜನರಿಗೆ ತಲುಪಿಸೋಣ ಎಂದು ರಿಷಭ್ ಶೆಟ್ಟಿ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Bigg Boss 8 Kannada: ಟಾಸ್ಕ್ನಲ್ಲಿ ರಕ್ತ ಬರುವಂತೆ ಗಾಯಗೊಂಡ ದಿವ್ಯಾ ಉರುಡುಗ..!
ರಿಷಭ್ ಶೆಟ್ಟಿ ಮಾಡಿರುವ ಲೆಟೆಸ್ಟ್ ಟ್ವೀಟ್ ಇಲ್ಲಿದೆ...
ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬ ಈ ಪ್ರಯತ್ನದಲ್ಲಿ ನಾವೆಲ್ಲರೂ ಒಂದಾಗಿ ಕೈ ಜೋಡಿಸೋಣಾ. ಈ ಮಾಹಿತಿಯನ್ನು ಇಂದಿನಿಂದಲೇ ಹೆಚ್ಚೆಚ್ಚು ಜನರಿಗೆ ತಲುಪಿಸೋಣಾ. #AnanthnagforPadma #PeoplesPadma @narendramodi @PMOIndia pic.twitter.com/UZtI6Ajhwh
ರಿಷಭ್ ಶೆಟ್ಟಿ ನಂತರ ನಟ ರಕ್ಷಿತ್ ಶೆಟ್ಟಿ ಅವರೂ ಸಹ ಈ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದಾರೆ.
ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬುದು ನನ್ನ ಹಾಗೂ ಕನ್ನಡಿಗರ ಆಶಯ. ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸೋಣ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರೀಲ್ ಹೀರೋಗಳು ತೆರಿಗೆ ಕಟ್ಟಲು ಹಿಂಜರಿಯುತ್ತಾರೆ ಎಂದು ವಿಜಯ್ಗೆ ಛೀಮಾರಿ ಹಾಕಿದ ಮದ್ರಾಸ್ ಹೈ ಕೋರ್ಟ್
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ